ನಾಲ್ಕು ವರ್ಷಗಳಲ್ಲಿ ಶೇ.200ರಷ್ಟು ಪ್ರಗತಿ - ಗ್ರಾಹಕರ ಹಾಟ್ ಫೇವರಿಟ್ `ಡೈನ್‍ಔಟ್'

ಟೀಮ್​ ವೈ.ಎಸ್​. ಕನ್ನಡ

ನಾಲ್ಕು ವರ್ಷಗಳಲ್ಲಿ ಶೇ.200ರಷ್ಟು ಪ್ರಗತಿ - ಗ್ರಾಹಕರ ಹಾಟ್ ಫೇವರಿಟ್ `ಡೈನ್‍ಔಟ್'

Saturday March 12, 2016,

3 min Read

ಅಂಕಿತ್ ಮೆಹ್ರೋತ್ರಾ, ಸಾಹಿಲ್ ಜೈನ್, ನಿಖಿಲ್ ಬಕ್ಷಿ, ವಿವೇಕ್ ಕಪೂರ್ `ಡೈನ್‍ಔಟ್'ನ ಸಾರಥಿಗಳು. ಇದೊಂದು ಟೇಬಲ್ ರಿಸರ್ವೇಶನ್ ವೇದಿಕೆ. ಮೇಲಿಂದ ಮೇಲೆ ಕರೆಗಳ ಕಿರಿಕಿರಿ, 2000 ರೂಪಾಯಿ ಚೆಕ್‍ಗಾಗಿ ಲಾಬಿಯಲ್ಲಿ ಕುಳಿತು ಗಂಟೆಗಟ್ಟಲೆ ಕಾಯುವುದು, ರಜೆಗಳೇ ಇಲ್ಲದೆ ಹಗಲಿರುಳು ಕೆಸಲ ಅನ್ನೋ ಯಾವ ತಲೆನೋವೂ ಇಲ್ಲಿಲ್ಲ. ``ಹಣವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಹೇಗೆ, ಸಮಯಕ್ಕೆ ತಕ್ಕಂತೆ ಉಳಿಸಿಕೊಳ್ಳುವುದು ಹೇಗೆ - ಅನ್ನೋ ತತ್ವದ ಮೇಲೆ ನಾವು ಪ್ರತಿ ಇಲಾಖೆಯ ನಿರ್ವಹಣೆ ಮಾಡುತ್ತೇವೆ. ಇದೇ ಕಾರಣಕ್ಕೆ ಅತ್ಯಂತ ನೇರವಾದ, ಲಾಭದಾಯಕ ಹಾಗೂ ದೀರ್ಘಾವಧಿವರೆಗೆ ಸಾಗಬಲ್ಲ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಯ್ತು'' ಎನ್ನುತ್ತಾರೆ 31ರ ಹರೆಯದ ಅಂಕಿತ್.

image


ಡೈನ್‍ಔಟ್ ಆರಂಭವಾಗಿ 4 ವರ್ಷಗಳಾಗಿವೆ. ನಾಲ್ಕು ವರ್ಷಗಳಲ್ಲಿ ಸಂಸ್ಥೆ ಅಪಾರ ಯಶಸ್ಸನ್ನು ಗಳಿಸಿದೆ. ಡೈನ್‍ಔಟ್ ಕಾರ್ಯಾರಂಭ ಮಾಡಿ 6 ತಿಂಗಳುಗಳಲ್ಲಿ ಭಾರೀ ಜನಪ್ರಿಯವಾಗಿತ್ತು. ದೆಹಲಿಯಲ್ಲಿ ಪ್ರತಿ ತಿಂಗಳು ಸುಮಾರು 8000-10000 ಟೇಬಲ್ ರಿಸರ್ವೇಶನ್‍ಗಳನ್ನು ಗಿಟ್ಟಿಸಿಕೊಳ್ತಾ ಇತ್ತು. ವರ್ಷ ಪೂರೈಸ್ತಾ ಇದ್ದಂತೆ 10 ಮಿಲಿಯನ್ ಡಾಲರ್‍ಗೆ ಟೈಮ್ಸ್ ಇಂಟರ್ನೆಟ್ ಲಮಿಟೆಡ್ ಕಂಪನಿ, ಡೈನ್‍ಔಟ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಕಳೆದ 2 ವರ್ಷಗಳಲ್ಲಿ 200 ಪಟ್ಟು ಪ್ರಗತಿ ಸಾಧಿಸಿರುವುದಾಗಿ ಡೈನ್‍ಔಟ್ ತಂಡ ಹೇಳಿಕೊಂಡಿದೆ. 8 ನಗರಗಳಲ್ಲಿ ಡೈನ್‍ಔಟ್‍ನ 2500 ರಿಸರ್ವೇಶನ್ ಸಾಮಥ್ರ್ಯದ ಔಟ್‍ಲೆಟ್‍ಗಳಿವೆ. ಕಳೆದ ವರ್ಷ ಸಪ್ಟೆಂಬರ್‍ನಲ್ಲಿ ಡೈನ್‍ಔಟ್, ಪ್ಲಗ್&ಪ್ಲೇ ರೆಸ್ಟೋರೆಂಟ್ ನಿರ್ವಹಣಾ ವೇದಿಕೆ `ಇನ್‍ರೆಸ್ಟೋ'ವನ್ನು ಸ್ವಾಧೀನಪಡಿಸಿಕೊಂಡಿದೆ.

ಇದನ್ನು ಓದಿ: ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!


ಬದಲಾಯಿಸುತ್ತಿರುವ ನಡವಳಿಕೆ...

ಗ್ರಾಹಕರಿಗೆ ಅತ್ಯುತ್ತಮ ಅನುಭವಗಳನ್ನು ಒದಗಿಸಬೇಕು ಅನ್ನೋದೇ ಡೈನ್‍ಔಟ್‍ನ ಪ್ರಮುಖ ಗುರಿ. ಜನರ ನಡವಳಿಕೆಗಳಲ್ಲಿನ ಬದಲಾವಣೆಯೇ ಅತಿ ದೊಡ್ಡ ಸವಾಲು ಅನ್ನೋದು ಅಂಕಿತ್ ಅವರ ಅಭಿಪ್ರಾಯ. ``ವಹಿವಾಟು ನಿಧಾನವಾಗಿಯೇ ಆದ್ರೂ ಚುರುಕು ಪಡೆದುಕೊಳ್ತಾ ಇದೆ. ಎಲ್ಲವೂ ಒಂದು ಹಂತಕ್ಕೆ ಬರಲು ಸಮಯ ಬೇಕು. ಸ್ಮಾರ್ಟ್ ಡೈನರ್‍ಗಳು, ಆ್ಯಪ್ ಹಾಗೂ ವೆಬ್‍ಸೈಟ್ ಮೂಲಕ ನಮ್ಮ ಸೇವೆಯನ್ನು ಅಪ್ಪಿಕೊಳ್ಳುತ್ತಿದ್ದಾರೆ'' ಎನ್ನುತ್ತಾರೆ ಅಂಕಿತ್. ರೆಸ್ಟೋರೆಂಟ್‍ಗಳು ಇನ್ನಷ್ಟು ಗ್ರಾಹಕರ ಗಮನ ಸೆಳೆಯುವಂತೆ ಮಾಡಲು ನಿರಂತರವಾಗಿ ಹೂಡಿಕೆ ಮಾಡುವುದು ಮತ್ತೊಂದು ಸವಾಲು.

ಡೇಟಾ ಮತ್ತು ಪುನರಾವರ್ತನೆ...

ವಿಸ್ತಾರವಾದ ನೆಟ್‍ವರ್ಕ್‍ಗಳನ್ನು ತಲುಪಲು ಬಹಳಷ್ಟು ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ಡೈನ್‍ಔಟ್ ತಂಡ ವ್ಯಯಿಸುತ್ತಿದೆ. ಮಾಹಿತಿ ಆಧಾರದ ಮೇಲೆ ನಿರ್ಧಾರ ತಗೆದುಕೊಳ್ಳಲು ನೆರವಾಗುವಂತೆ ಅಂಕಿ ಅಂಶಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಂಕಿಅಂಶಗಳು ಮತ್ತು ಒಳನೋಟಗಳು ಗ್ರಾಹಕ ಕೇಂದ್ರಿತ ಪ್ರಕ್ರಿಯೆ ಮೂಲಕ ವಹಿವಾಟನ್ನು ಅಭಿವೃದ್ಧಿಪಡಿಸಲಿವೆ ಅನ್ನೋ ವಿಶ್ವಾಸ ಅಂಕಿತ್ ಅವರದ್ದು. ಡೈನ್‍ಔಟ್‍ನಲ್ಲಿ ರಿಪೀಟ್ ಗ್ರಾಹಕರ ದರ ಅತ್ಯುತ್ತಮವಾಗಿದೆ. ಸಮಯ ಮತ್ತು ಹಣ ಉಳಿತಾಯ ಮಾಡಲು ಡೈನ್‍ಔಟ್ ಬೆಸ್ಟ್ ಅನ್ನೋದನ್ನು ಗ್ರಾಹಕರು ಸಾಬೀತುಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತಮ್ಮೆಲ್ಲಾ ಬುಕ್ಕಿಂಗ್‍ಗಳಿಗೆ ಡೈನ್‍ಔಟ್ ಅನ್ನೇ ಬಳಸುತ್ತಿರುವ ಸೌಮ್ಯ ಖಂಡೇವಾಲ್, ಇಲ್ಲಿ ಕಲಹ ಮುಕ್ತ ಮತ್ತು ತಡೆರಹಿತ ಸೇವೆ ದೊರೆಯುತ್ತಿದೆ ಎನ್ನುತ್ತಾರೆ.

"ಗಮನಾರ್ಹ ಆವಿಷ್ಕಾರ ವೇದಿಕೆ ಎನಿಸಿಕೊಂಡಿರುವ ಡೈನ್‍ಔಟ್‍ನಲ್ಲಿ ಎಲ್ಲರೂ ಹೆಚ್ಚು ಪ್ರತಿಕ್ರಿಯಾಶೀಲರಾಗಿದ್ದಾರೆ. ತೆರೆದ ಬಾಹುಗಳಿಂದ ಅವರು ನಮಗೆ ನೆರವಾಗುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಂದಿರುವ ಗ್ರಾಹಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ. ರೆಸ್ಟೋರೆಂಟ್‍ಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಿದ್ರೆ, ಸರಿಯಾದ ಅನುಭವ ಪಡೆಯುವತ್ತ ಡೈನರ್‍ಗಳು ಕೂಡ ಗಮನಹರಿಸುತ್ತಿದ್ದಾರೆ. ಸ್ಮಾರ್ಟ್ ಡೈನರ್‍ಗಳನ್ನು ಸಂಪರ್ಕಿಸಲು ಬಯಸುವ ಅದ್ಭುತ ರೆಸ್ಟೋರೆಂಟ್‍ಗಳಿಗೆ ನಾವು ಸೇತುವೆಯಾಗಿದ್ದೇವೆ'' 
                        -ಅಂಕಿತ್ 


ಬುಕ್ಕಿಂಗ್ ಕ್ಷೇತ್ರ...

``ಬಳಕೆದಾರರ ಲೈಫ್‍ಸೈಕಲ್ ಪಯಣದ ಬಹುದೊಡ್ಡ ಸಮಸ್ಯೆಯನ್ನು ಡೈನ್‍ಔಟ್ ಪರಿಹರಿಸುತ್ತಿದೆ. ಯಾವ ರೆಸ್ಟೋರೆಂಟ್ ಸೂಕ್ತ ಎಂಬ ಅವರ ಹುಡುಕಾಟಕ್ಕೆ ತೆರೆ ಎಳೆದಿದೆ. ಡೈನ್‍ಔಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ವಹಿವಾಟು ಮಾತ್ರವಲ್ಲ, ತಂಡ ಕೂಡ ಪ್ರಮುಖ ಕಾರಣ. ಕಳೆದ 18 ತಿಂಗಳುಗಳಲ್ಲಿ ಡೈನ್‍ಔಟ್ ಭಾರೀ ಯಶಸ್ಸು ಗಳಿಸಿದೆ. 8 ನಗರಗಳಲ್ಲಿ 2500 ರೆಸ್ಟೋರೆಂಟ್‍ಗಳಿಂದ ಪ್ರತಿ ತಿಂಗಳು ಒಂದು ಲಕ್ಷಕ್ಕೂ ಅಧಿಕ ರಿಸವೇಶನ್‍ಗಳು ಸಿಗುತ್ತಿವೆ'' ಎನ್ನುತ್ತಾರೆ ಟೈಮ್ಸ್ ಇಂಟರ್ನೆಟ್ ಲಿಮಿಟೆಡ್‍ನ ಮಿತೇನ್ ಸಂಪತ್. ಇನ್‍ರೆಸ್ಟೋ ಸ್ವಾಧೀನದಿಂದ ರೆಸ್ಟೋರೆಂಟ್‍ಗಳಿಗೆ ಟೆಕ್ ಸ್ಟಾಕ್ ಒದಗಿಸಲು ಸಾಧ್ಯವಾಗ್ತಿದೆ, ಇದು ಪ್ರಗತಿಗೆ ಇಂಧನದಂತೆ. ಪ್ರೀಮಿಯಂ ಡೈನಿಂಗ್ ಸೆಕ್ಷನ್‍ನಲ್ಲಿ `ಡೈನ್‍ಔಟ್ ಪ್ಲಸ್' ಬಿಡುಗಡೆ ಕೂಡ ಒಂದು ಮಹತ್ವದ ಮೈಲುಗಲ್ಲು ಅನ್ನೋದು ಅವರ ಅಭಿಪ್ರಾಯ.

ಕಳೆದ ಒಂದು ವರ್ಷದಿಂದ ರೆಸ್ಟೋರೆಂಟ್ ಹಾಗೂ ಟೇಬಲ್ ಬುಕ್ಕಿಂಗ್ ಕ್ಷೇತ್ರ ಮುಂಚೂಣಿಯಲ್ಲಿದೆ. ಅಮೆರಿಕ ಮೂಲದ ನೆಕ್ಸ್‍ಟೇಬಲ್ ಸ್ವಾಧೀನದೊಂದಿಗೆ ಝೊಮ್ಯಾಟೋ ಕೂಡ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಈ ಸೇವೆಯನ್ನೀಗ ಝೊಮ್ಯಾಟೋ ಬುಕ್ ಎಂದು ಕರೆಯಲಾಗುತ್ತೆ. ಇತ್ತೀಚೆಗಷ್ಟೆ ಸಿರೀಸ್-ಎ ಫಂಡಿಂಗ್‍ನಲ್ಲಿ ಡಿಎಸ್‍ಜಿ ಕನ್ಸ್ಯೂಮರ್ ಪಾರ್ಟ್‍ನರ್ ಮತ್ತು ಸಾಮಾ ಕ್ಯಾಪಿಟಲ್‍ನಿಂದ ಈಸಿ ಡೈನರ್ 3 ಮಿಲಿಯನ್ ಬಂಡವಾಳ ಗಿಟ್ಟಿಸಿಕೊಂಡಿದೆ.

ಫೋಬ್ರ್ಸ್ ವರದಿಯ ಪ್ರಕಾರ ಅಮೆರಿಕದಲ್ಲಿ ರೆಸ್ಟೋರೆಂಟ್ ಬುಕ್ಕಿಂಗ್ ಪ್ರಮಾಣ ಶೇ.20ರಷ್ಟಿದ್ದು, ಉಳಿದೆಡೆ ತೀರಾ ಕಡಿಮೆ ಇದೆ. ಆದ್ರೆ ಈ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಡಚ್ ಮೂಲದ ಐಇಎನ್‍ಎಸ್ ಅನ್ನು ಸ್ವಾಧೀನಪಡಿಸಿಕೊಂಡಿರುವ ಟ್ರಿಪ್ ಅಡ್ವೈಸರ್ ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಟ್ರಾವೆಲ್ ಬುಕ್ಕಿಂಗ್ ಕ್ಷೇತ್ರದಂತೆ ಆನ್‍ಲೈನ್ ರೆಸ್ಟೋರೆಂಟ್ ಬುಕ್ಕಿಂಗ್ ಕ್ಷೇತ್ರ ಕೂಡ ಅದೇ ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ರೆಸ್ಟೋರೆಂಟ್‍ಗಳು ಆನ್‍ಲೈನ್ ಬುಕ್ಕಿಂಗ್ ಮೊರೆಹೋಗಿರುವುದಂತೂ ಸುಳ್ಳಲ್ಲ.

ಲೇಖಕರು: ಸಿಂಧು ಕಶ್ಯಪ್

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ಬೆಂಗಳೂರಿನಲ್ಲೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ...

2. ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು

3. ಮಾರುಕಟ್ಟೆಗೆ ಬಂದಿದೆ ವುಡನ್ ವಾಚ್ ಗಳು...