ಯುರೋಪಿಯನ್ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್.. ಭಾರತಕ್ಕೂ ಅಪಾಯದ ಮುನ್ಸೂಚನೆ..!  

ಟೀಮ್ ವೈ.ಎಸ್.ಕನ್ನಡ 

0

ಬರ್ಲಿನ್ ಗೋಡೆಯ ಪತನದ ನಂತರ ಅತ್ಯಂತ ದುರಂತ ಘಟನೆ ಸಂಭವಿಸಿದೆ. ಯುರೋಪಿಯನ್ ಯೂನಿಯನ್​ನಿಂದ ಹೊರಬರಲು ಗ್ರೇಟ್ ಬ್ರಿಟನ್ ರಾಷ್ಟ್ರವ್ಯಾಪಿ ಜನಾಭಿಪ್ರಾಯ ಸಂಗ್ರಹಿಸುತ್ತಿದೆ. ಇದೊಂದು ಭರ್ಜರಿ ವಿಜಯವೇ ಆಗಿದ್ದರೂ ಬ್ರಿಟನ್ ಮತ್ತದೇ ಸ್ಥಾನ ಗಿಟ್ಟಿಸಲು ಸಾಧ್ಯವಿಲ್ಲ. ಜಾಗತಿಕ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರುವುದು ಖಚಿತ. ಅಷ್ಟೇ ಅಲ್ಲ ರಿಸೆಶನ್ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಇಡೀ ಜಗತ್ತು ಬ್ರಿಟನ್ ನಿರ್ಣಯದಿಂದ ಆಘಾತ ಮತ್ತು ವಿಸ್ಮಯ ಅನುಭವಿಸಿದೆ, ತಜ್ಞರು ಭವಿಷ್ಯದ ಕುಸಿತದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಭವಿಷ್ಯ ಕಠೋರ ಮತ್ತು ಅನಿಶ್ಚಿತತೆಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ. ಇದಕ್ಕಿಂದ ಕೆಟ್ಟ ಸಮಯ ಇನ್ನೊಂದಿರಲಿಕ್ಕಿಲ್ಲ. ಮೂರು ದಶಕಗಳ ನಂತರ ಚೀನಾದ ಆರ್ಥಿಕತೆಯಲ್ಲಿ ಇಳಿಕೆ ಕಾಣಿಸುತ್ತಿದೆ, ಬ್ರೆಜಿಲ್ನಲ್ಲಿ ಗಂಭೀರ ರಾಜಕೀಯ ಅಸ್ಥಿರತೆಯಿದ್ದು ಭಾರತ ಹೇಳಿಕೊಂಡರೂ ಧನಾತ್ಮಕ ಬೆಳವಣಿಗೆ ಸಾಧಿಸಲು ಸಾಧ್ಯವಾಗಿಲ್ಲ.

ಈ ಜನಾಭಿಪ್ರಾಯ ರಾಜಕೀಯ ಕಾರಣಗಳಿಂದ ಹೆಚ್ಚು ಸೂಚಕವೆನಿಸುತ್ತವೆ. ಇಲ್ಲಿ ಮೂರು ಅಂಶಗಳನ್ನು ಗಮನಿಸಬಹುದು. 1. ಜಾಗತಿಕ ವಲಸೆ ಗಂಭೀರ ವಿಷಯ ಮತ್ತು ಅತ್ಯಂತ ವಿಕಸಿತ ಸಮಾಜಗಳು ಕೂಡ ಅಂದುಕೊಂಡಂತಿಲ್ಲ. 2. ಕೆಳವರ್ಗ ಮತ್ತು ಶ್ರೀಮಂತರ ನಡುವೆ ಸ್ಪಷ್ಟ ವಿಭಜನೆಯಿದೆ. ಲಂಡನ್ನಲ್ಲಿ ಆರ್ಥಿಕವಾಗಿ ಅಭಿವೃದ್ಧಿಗೊಳ್ಳದ ಮತ್ತು ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಪ್ರದೇಶಗಳಿಗೆ ಭವಿಷ್ಯವಿಲ್ಲದಂತೆ ಭಾಸವಾಗುತ್ತದೆ. 3. ರಾಷ್ಟ್ರೀಯತೆಯ ರಾಜಕೀಯ ಆಜ್ಞಾರ್ಥ ಜಾಗತೀಕರಣಕ್ಕಿಂತ ಹೆಚ್ಚು ಭೇದಕವನ್ನು ಹೊಂದಿದೆ. ಆರ್ಥಿಕ ಭರವಸೆಯನ್ನು ಗಮನಿಸಿದರೆ ಕೃತಕವಾಗಿ ಸೃಷ್ಟಿಸಿದ ಸುಪ್ರಾ ನ್ಯಾಶನಲಿಸಮ್ ಆಕರ್ಷಕ ರೀತಿಯಲ್ಲಿಲ್ಲ. ಇದರಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿರುವ ಭಾರತದ ಮೇಲೆ ಪರಿಣಾಮ ಬೀರುವುದು ಖಚಿತ. ಇನ್ನೊಂದು ಅವಧಿಗೆ ಮುಂದುವರಿಯುವುದಿಲ್ಲ ಮತ್ತು ಕಲ್ಪನೆಗಳ ಕ್ಷೇತ್ರದಲ್ಲಿ ಮತ್ತೊಮ್ಮೆ ಮುಳುಗಲು ಉತ್ಸುಕರಾಗಿದ್ದೇನೆ ಎಂದು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದಾಗಲೇ ಇದು ಖಚಿತವಾಗಿತ್ತು. ರಘುರಾಮ್ ರಾಜನ್ ಅತ್ಯುನ್ನತ ಬ್ಯಾಂಕಿಂಗ್ ಹುದ್ದೆ ತ್ಯಜಿಸುತ್ತಿರುವುದು ಒಳ್ಳೆಯ ಸುದ್ದಿಯೇನಲ್ಲ. ನನ್ನ ಪ್ರಕಾರ ಭಾರತ ಇದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕು. ಇದು ಭಾರತದ ಆಡಳಿತದ ತಪ್ಪು ಹೆಜ್ಜೆಗಳನ್ನು ಸೂಚಿಸುತ್ತದೆ.

ಯುರೋಪಿಯನ್ ಯೂನಿಯನ್ನಿಂದ ಹೊರಬರುತ್ತಿರುವ ಬ್ರಿಟನ್ನ ಈ ನಡೆ ಒಂದು ಸಾಮಾಜಿಕ ವಿದ್ಯಮಾನವಾಗಿ ಭಾರತದ ಮೇಲೆ ಆರ್ಥಿಕ ಪರಿಣಾಮ ಬೀರಲಿದೆ ಮತ್ತು ಅಪಾಯಗಳನ್ನು ತಂದೊಡ್ಡಲಿದೆ. ಇದೊಂದು ಅನ್ಯದ್ವೇಷದ ಮತ್ತು ಅತಿರಿಕ್ತ ರಾಷ್ಟ್ರೀಯತೆಯೆಂದು ಬಣ್ಣಿಸುತ್ತಿರುವ ತಜ್ಞರ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇದು ಬಹಳ ಸಂಕೀರ್ಣವಾದ ಸಾಮಾಜಿಕ-ರಾಜಕೀಯ ವಿಷಯದ ಅತ್ಯಂತ ಸರಳ ವ್ಯಾಖ್ಯಾನ. ಇದು ಸ್ವಭಾವದಲ್ಲಿ ತೀವ್ರವಾದುದು ಮಾತ್ರವಲ್ಲ, ಇಡೀ ವಿಶ್ವವೇ ಎದುರಿಸುತ್ತಿರುವ ಕಟು ವಾಸ್ತವತೆಯ ನಕಾರದ ಪ್ರತಿಬಿಂಬ. ಬ್ರಿಟನ್ ನಿರ್ಗಮನ ಆಳವಾದ ದೇಹಾಲಸ್ಯದ ಪ್ರತ್ಯೇಕ ಉದಾಹರಣೆಯೇನಲ್ಲ. ರಿಪಬ್ಲಿಕನ್ ಪಕ್ಷದ ವರಿಷ್ಠರ ವಿರೋಧದ ನಡುವೆಯೂ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಇದೇ ರೀತಿಯ ವಿದ್ಯಮಾನ. ಅತ್ತ ಫ್ರಾನ್ಸ್ನಲ್ಲಿ ಬಲಪಂಥೀಯರಾದ ಮರೈನ್ ಲೆ-ಪೆನ್ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ. ಅದೃಷ್ಟ ಜೊತೆಗಿದ್ದರೆ ಅವರೇ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಭಾರತವನ್ನು ಬಲಪಂಥೀಯರ ಪಡೆ ಆರ್ಎಸ್ಎಸ್ ಮುನ್ನಡೆಸುತ್ತಿದೆ, ಹಿಂದೂ ರಾಷ್ಟ್ರವನ್ನು ಸೃಷ್ಟಿಸಬೇಕೆಂಬುದೇ ಅವರ ಗುರಿ. ಐಸಿಸ್ನ ಮತಾಂಧ ಪ್ರಯೋಗ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅನುಕರಣೆಗಳಿಂದ ಇಡೀ ವಿಶ್ವ ಗಾಯಗೊಂಡಿದೆ. ಯಾವ ದೇಶ ಹಾಗೂ ಯಾವೊಬ್ಬ ನಾಗರೀಕರೂ ಸುರಕ್ಷಿತವಾಗಿಲ್ಲ. ಎಲ್ಲರೂ ವೈವಿಧ್ಯತೆ-ಬಹುಸಂಸ್ಕøತಿಯನ್ನು ಧೃಡೀಕರಿಸುತ್ತಿದ್ದಾರೆ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ 20ನೇ ಶತಮಾನದ ಜಗತ್ತಿನ ಮುದ್ರೆಗಳೆಂದೇ ವ್ಯಾಖ್ಯಾನಿಸಲಾಗಿದೆ.

ವಲಸೆ ಮಾನವರ ವ್ಯಕ್ತಿತ್ವ ವಿಕಸನದ ಎಂಜಿನ್ ಇದ್ದಂತೆ. ಕೇವಲ ಅಗ್ಗದ ಕಾರ್ಮಿಕರ ಲಭ್ಯತೆ ಮಾತ್ರವಲ್ಲ ವಿಶ್ವದ ವಿವಿಧ ಭಾಗಗಳ ಹೊಸ ಹೊಸ ಪರಿಕಲ್ಪನೆ ಒಟ್ಟುಗೂಡಿದ್ದು ಕೂಡ ವಲಸೆಯಿಂದ. ಹೊಸ ಚಿಂತನೆಗಳು ಹೊಸದಾದ ಹುರುಪನ್ನು ಹುಟ್ಟುಹಾಕಿವೆ. ಹೊಸ ಕಲ್ಪನೆಗಳಿಂದಾಗಿ ಹೊಸ ಜನ್ಮವೇ ಸಿಕ್ಕಂತಾಗಿದೆ, ಇದರಿಂದ ಸ್ಪರ್ಧಾತ್ಮಕ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಸಮಾಜ ಸಜ್ಜುಗೊಂಡಿದೆ. ವಲಸೆಯಲ್ಲೂ ಎರಡು ವಿಧ - ಆಂತರಿಕ ವಲಸೆ ಮತ್ತು ಹೊರ ವಲಸೆ. ಹೊಸ ಗಡಿ ಮತ್ತು ಹಸಿರು ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಭಾರತೀಯರು ತಮ್ಮ ಸುರಕ್ಷಿತ ವಲಯದಿಂದ ಹೊರಬಂದಿದ್ದಾರೆ. ಉತ್ತರಪ್ರದೇಶ ಮತ್ತು ಬಿಹಾರದ ಜನರು ಪಾಟ್ನಾ, ಲಖ್ನೋನಲ್ಲಿ ಮಾತ್ರವಲ್ಲ ಕೇರಳದ ಹಿನ್ನೀರು ಹಾಗೂ ಬೆಂಗಳೂರಿನ ರಸ್ತೆಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈ ಹಾಗೂ ದೆಹಲಿಗೂ ವಲಸೆ ಹೋಗಿದ್ದಾರೆ. ಅದೇ ರೀತಿ ತಮಿಳುನಾಡಿನ ಜನ ದೆಹಲಿ ಮತ್ತು ಮುಂಬೈಗೆ ಬಂದು ನೆಲೆಸುತ್ತಿದ್ದಾರೆ. ಸತ್ಯ ನಾಡೆಲ್ಲಾ ಹಾಗೂ ಸುಂದರ್ ಪಿಚೈ ಈಗ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಮುನ್ನಡೆಸುತ್ತಿದ್ದಾರೆ. ಇಂದಿರಾ ನೂಯಿ ಪೆಪ್ಸಿ ಕಂಪನಿಯ ಹೊಣೆ ಹೊತ್ತಿದ್ದಾರೆ. ನಿಕೇಶ್ ಅರೋರಾ ಕೂಡ ಜಪಾನ್ ಕಂಪನಿಯೊಂದರ ಚಿನ್ನದ ಹುಡುಗ ಎನಿಸಿಕೊಂಡಿದ್ದರು. ಇದೆಲ್ಲ ಸಾಧ್ಯವಾಗಿದ್ದು ವಲಸೆಯಿಂದ. ಈ ಬೆರೆಯುವಿಕೆಯಿಂದ ಪೂರ್ವ ಹಾಗೂ ಪಶ್ಚಿಮ ಎರಡೂ ಕಡೆಯವರಿಗೆ ಲಾಭವಾಗಿದೆ. ಕಳೆದ ಶತಮಾನವನ್ನು ಅಮೆರಿಕ ಆಳಿದೆ. ಅದು ಕೂಡ ವಲಸಿಗರ ನಾಡು. ಈಗ ಬ್ರಿಟನ್ ನಿರ್ಗಮನ ಹೊಸ ಕಥೆಯನ್ನೇ ಹೆಣೆಯುತ್ತಿದೆ. ವಲಸೆ ಒಳ್ಳೆಯದಲ್ಲ, ವಲಸಿಗರಿಗೆ ಸ್ವಾಗತವಿಲ್ಲ ಎಂಬುದನ್ನು ಅದು ಜಗತ್ತಿಗೆ ಸಾರಿ ಹೇಳುತ್ತಿದೆ. ಲಂಡನ್ ಮೇಯರ್ ಆಗಿ ಮುಸ್ಲಿಮ್ ಒಬ್ಬ ಆಯ್ಕೆಯಾಗಿದ್ದನ್ನು ಎಲ್ಲರೂ ಕೊಂಡಾಡುತ್ತಿದ್ರೆ ಸಮಾಜದ ಇನ್ನೊಂದು ವಿಭಾಗ ಒಳಗೊಳಗೆ ಅಸಮಾಧಾನಗೊಂಡಿದೆ.

ಹಲವು ವರ್ಷಗಳಿಂದ ಶಿವಸೇನೆ ಹಾಗೂ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಡೆಸಿಕೊಂಡುವ ಬಂದಿರುವ ಕಥೆಯಂತಿದೆ ಇದು. 60-70ನೇ ದಶಕದಲ್ಲಿ ಬಾಳಾ ಸಾಹೇಬ್ ಠಾಕ್ರೆ ದಕ್ಷಿಣ ಭಾರತೀಯರನ್ನು ವಿಡಂಬನೆ ಮಾಡುತ್ತಿದ್ರು ನಂತರ ಉತ್ತರ ಭಾರತೀಯರನ್ನು ಟಾರ್ಗೆಟ್ ಮಾಡಿದ್ರು. ರಾಕ್ ಠಾಕ್ರೆ ಮತ್ತವರ ಬೆಂಬಲಿಗರು ಬಹಿರಂಗವಾಗಿಯೇ ಭೀಕರ ಹಿಂಸಾಕೃತ್ಯಗಳನ್ನೆಸಗಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ದೇಶದ ಎಲ್ಲೆಡೆ ಸಂಚರಿಸುವ ಹಕ್ಕು ಎಲ್ಲರಿಗೂ ಇದೆ. ಅವರು ಯಾವ ಪ್ರದೇಶದಲ್ಲಾದರೂ ಉಳಿದುಕೊಳ್ಳಬಹುದು. ಆದ್ರೂ ಇಂತಹ ವರ್ತನೆ ಮಾತ್ರ ಕಡಿಮೆಯಾಗಿಲ್ಲ. ಕಾನೂನು ವ್ಯವಸ್ಥೆ ಹದಗೆಡುತ್ತಿದೆ ಎಂಬ ಕಾರಣಕ್ಕೆ ದೆಹಲಿಯಲ್ಲಿ ಉತ್ತರ ಭಾರತೀಯರ ಮೇಲೆ ಆರೋಪ ಹೊರಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ನಾಗರೀಕರು ಹಾಗೂ ಭಾರತದ ಉಳಿದ ಸ್ಥಳೀಯರ ನಡುವಣ ಸಂಘರ್ಷ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದೆ. ನಾವು ಇದನ್ನೆಲ್ಲ ಬದಿಗಿಟ್ಟು ಮುನ್ನಡೆಯಬಹುದು, ಆದ್ರೆ ಗಂಡಾಂತರವನ್ನು ಆಹ್ವಾನಿಸುತ್ತಿದ್ದೇವೆ. ಜಾಗತಿಕ ಗ್ರಾಮದ ಯುಗದಲ್ಲಿ ``ಭೂಮಿ ಪ್ರೀತಿ ಮತ್ತು ನಿವಾಸಿಗಳ ಮೇಲೆ ಗೌರವ'' ಅನ್ನೋ ಗುರುತು ಇಂದುಗೂ ಮನುಷ್ಯರ ಏಕೈಕ ಲಕ್ಷಣವಾಗಿದೆ. ಬೆರೆಯುವಿಕೆ ನಿರ್ದಿಷ್ಟವಾದ ದೊಡ್ಡ ಮತ್ತು ವೈಯಕ್ತಿಕ ಸಮಾಜದ ಸಾಮೂಹಿಕ ವ್ಯಕ್ತಿತ್ವಕ್ಕೆ ಇರುವ ಬೆದರಿಕೆಯಲ್ಲ ಅನ್ನೋದು ಸ್ವೀಕಾರಾರ್ಹ. ಕಠಿಣ ಆರ್ಥಿಕ ಸತ್ಯಗಳು ಅಸಮಾಧಾನ ಪ್ರಕ್ರಿಯೆಯನ್ನು ಎದ್ದು ತೋರಿಸುತ್ತವೆ. ವೈವಿಧ್ಯತೆ ಇದ್ದಕ್ಕಿದ್ದಂತೆ ಅನಾನುಕೂಲತೆ ಎನಿಸಿಕೊಂಡುಬಿಡುತ್ತದೆ. ಬಹುಸಂಸ್ಕøತಿ ಅತ್ಯಂತ ವಿಕಸಿತ ಸಮಾಜಕ್ಕೆ ಕೇಡು ಎಂಬ ಭಾವನೆ ಬೆಳೆಯುತ್ತದೆ. ವೈವಿಧ್ಯತೆ ಭಾರತದ ಅತ್ಯಂತ ದೊಡ್ಡ ಶಕ್ತಿ. ರಾಜಕೀಯ ಮತ್ತು ಮಾನಸಿಕ ಕಾರಣಗಳಿಂದ ಗುರುತಿಸಿಕೊಳ್ಳಬೇಕೆಂಬ ಹಂಬಲ, ಪ್ರಯತ್ನ ನಿಜಕ್ಕೂ ಶಾಪವಿದ್ದಂತೆ. ಒಂದು ರಾಷ್ಟ್ರವಾಗಿ ಬ್ರಿಟನ್ ನಿರ್ಗಮನದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರಿಂದಾಗುವ ಪರಿಣಾಮಗಳ ವಿರುದ್ಧ ಹೋರಾಡಲು ಪ್ರಯತ್ನಿಸೋಣ. 

ಇದನ್ನೂ ಓದಿ...

68ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ - ನೇಪಾಳದ ಹಿರಿಯ ವಿದ್ಯಾರ್ಥಿ ದುರ್ಗಾ ಕಮಿ 

ಯುವ ನಟರಿಗೆ ಹಾಟ್ ಫೇವರಿಟ್ ಆದ ಫಿಟ್ನೆಸ್ ಗುರು ಸೀನು ಮಾಸ್ಟರ್

Related Stories

Stories by YourStory Kannada