ಉದ್ಯಮಿಗಳೇಕೆ ಯೋಗ ಮಾಡಬೇಕು..?

ಟೀಮ್ ವೈ.ಎಸ್.ಕನ್ನಡ 

0

ಯೋಗಾಸನದ ದೈಹಿಕ ಪ್ರಯೋಜನಗಳ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ. ಎಲ್ಲೆಡೆ ಯೋಗದ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿದೆ. ಆದ್ರೆ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷಿ ಯುವ ಜನತೆಯ ಹತ್ತಾರು ಸಮಸ್ಯೆಗಳಿಗೆ ಕೂಡ ಯೋಗ ಪರಿಹಾರವಾಗಿದೆ. ಮಾಹಿತಿ ಸಂಗ್ರಹಿಸುವ ಶಕ್ತಿಯನ್ನು ಯೋಗ ಹೆಚ್ಚಿಸುತ್ತದೆ. ಸೃಜನಶೀಲತೆ ಮತ್ತು ಉತ್ಪಾದಕತೆ, ಒತ್ತಡವನ್ನು ಸೋಲಿಸುವ ಬಲವಾದ ಅಸ್ತ್ರ ಹಾಗೂ ಚೇತರಿಸಿಕೊಳ್ಳುವ ಮನಸ್ಥಿತಿಗೆ ಕೂಡ ಯೋಗಾಸನ ಪೂರಕವಾಗಿದೆ. ಅರಿವು ಮೂಡಿಸುವಲ್ಲಿ, ಮಾನಸಿಕ ಮತ್ತು ನರಗಳ ಬಲ ಹೆಚ್ಚಿಸುವಲ್ಲಿ ಯೋಗದ ಪ್ರಯೋಜನಗಳು ಅನಂತವಾದವು. ಈ ಪ್ರಾಚೀನ ಕಲೆಯನ್ನು ತಜ್ಞರೊಬ್ಬರು ಪ್ರತಿದಿನ ಅಭ್ಯಾಸ ಮಾಡುತ್ತಿದ್ದಾರೆ ಅಂತಾದ್ರೆ ಅವರ ದೇಹ ಮತ್ತು ಮನಸ್ಸು ಸಂಪನ್ಮೂಲಗಳ ಶಕ್ತಿಯಾಗಿ ಬದಲಾಗುವುದರಲ್ಲಿ ಅನುಮಾನವಿಲ್ಲ.

ಮಾನಸಿಕ ಪ್ರಯೋಜನಗಳು..

ಚಿಕಿತ್ಸಕರು ಯೋಗಾಸನವನ್ನು ಭ್ರಾಂತಿಯಂತಹ ನಿರ್ಬಂಧದ ಅಸ್ವಸ್ಥತೆ ಮತ್ತು ಅಟೆನ್ಶನ್ ಡೆಫಿಸಿಟ್ ಡಿಸಾರ್ಡರ್ನಂತಹ ಖಾಯಿಲೆಗಳನ್ನು ಗುಣಪಡಿಸಲು ಅನುಬಂಧವಾಗಿ ಬಳಸುತ್ತಾರೆ. ಯೋಗಾ ಮೆದುಳಿಗೆ ಆಮ್ಲಜನಕ ಪೂರೈಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಖಿನ್ನತೆಯನ್ನು ಕೊಲ್ಲುತ್ತದೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ. ದೈಹಿಕ ಕಸರತ್ತು ಮಾಡುತ್ತಿದ್ದಂತೆ ನೀವು ಯೋಗಾಸನದ ಮೇಲೆ ಎಷ್ಟು ಅವಲಂಬಿತರಾಗಿದ್ದೀರೋ ಅಷ್ಟು ಮಾನಸಿಕ ತೃಪ್ತಿ ನಿಮಗೆ ದೊರೆಯುತ್ತದೆ. ಯೋಗ ಮಾಡಿದ ಬಳಿಕ ನಿಮ್ಮೊಳಗಿನ ಕಲ್ಮಶವೆಲ್ಲ ಸ್ವಚ್ಛವಾದಂತೆ ನಿಮಗನಿಸುತ್ತದೆ, ಜೀವನವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುತ್ತದೆ.

ಬಹುತೇಕ ಉದ್ಯಮಿಗಳೆಲ್ಲ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ, ಆದ್ರೆ ಮಾನಸಿಕ ಆರೋಗ್ಯಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡುವುದಿಲ್ಲ. ಇದು ನಿಜಕ್ಕೂ ದುರದೃಷ್ಟಕರ, ಯಾಕೆಂದರೆ ಉದ್ಯಮದ ಒತ್ತಡ ಉತ್ಸಾಹವನ್ನೇ ಭಸ್ಮ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಂತಹ ಜೀವನಕ್ರಮ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.

ಒತ್ತಡ ನಿಯಂತ್ರಿಸಲು ಸಹಕಾರಿ..

ಒತ್ತಡ ಸೃಷ್ಟಿಸುವುದು ದೇಹಕ್ಕೆ ಯಾವಾಗಲೂ ಹಾನಿಕಾರಕವಲ್ಲ. ಆರಂಭದಲ್ಲಿ ಒತ್ತಡ ಬದುಕುಳಿಯುವ ನಿರ್ಣಾಯಕ ತಂತ್ರವೂ ಆಗಿತ್ತು. ಇತಿಹಾಸಪೂರ್ವ ಕಾಲದಲ್ಲಿ ಸರ್ವೇಸಾಮಾನ್ಯವಾಗಿದ್ದ ಹಿಂಸಾತ್ಮಕ ಪ್ರಕೃತಿ ವಿಕೋಪ, ಸಹ ಶತ್ರುಗಳು ಮತ್ತು ಪರಭಕ್ಷಕರ ನಡುವೆಯೂ ಜೀವಂತವಾಗಿ ಉಳಿಯಲು ಸಹಕಾರಿಯಾಗಿತ್ತು. ಒತ್ತಡ ನಮ್ಮ ವಂಶವಾಹಿಗಳಲ್ಲಿ ಅಡಗಿರುವುದಕ್ಕೆ ನಾವು ನಮ್ಮ ಪೂರ್ವಜರಿಗೆ ಧನ್ಯವಾದ ಹೇಳಬೇಕು. ಎಲ್ಲ ಉದ್ಯಮಿಗಳಿಗೂ ಇಂತಹ ಆಭಾಸ ಸರ್ವೇಸಾಮಾನ್ಯ. ನಿಮ್ಮ ಉದ್ಯಮವನ್ನು ಮುನ್ನಡೆಸಲು ನೀವು ಶ್ರಮಪಟ್ಟಾಗ ಅದರ ಮೊದಲ ಏಟು ತಗುಲುವುದು ನಿಮ್ಮ ದೇಹಕ್ಕೆ. ಶಕ್ತಿಗುಂದಿಸುವಂತಹ ವೇಳಾಪಟ್ಟಿ ಮತ್ತು ಕ್ರೂರ ಗಡುವುಗಳು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತವೆ. ಒತ್ತಡ ಉತ್ಪಾದನೆ ದೇಹಕ್ಕೆ ಹಾನಿಕಾರಕವಲ್ಲ, ಆದ್ರೆ ಒತ್ತಡ ಬಿಟ್ಟು ಹೋಗಲು ನಿರಾಕರಿಸಿದ್ರೆ ನಿಜಕ್ಕೂ ಅದು ಮಾರಕವಾಗುತ್ತದೆ. ಅದು ಆ್ಯಸಿಡ್ ಮೂಲಕ ನಿಮ್ಮ ಅಂಗಗಳನ್ನು ತಳ್ಳುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡು ಕಚೇರಿಗೆ ವಿಳಂಬವಾದ ಸಮಯದಲ್ಲಿ ಮನುಷ್ಯರಿಗೆ ಯಾವ ರೀತಿಯ ಒತ್ತಡವಿರುತ್ತದೆಯೋ, ಸಿಂಹಗಳು ಅಟ್ಟಿಸಿಕೊಂಡು ಬಂದಾಗ ಜೀಬ್ರಾಗಳಲ್ಲೂ ಅಂಥದ್ದೇ ಒತ್ತಡವಿರುತ್ತದೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ.

ಮೊದಲ ಬಾರಿ ಯೋಗ ಮಾಡಿದಾಗ ಬಹುತೇಕ ಎಲ್ಲರಲ್ಲೂ ಶಾಂತ ಹಾಗೂ ಆರಾಮದಾಯಕ ಅನುಭವವಾಗಿರುತ್ತದೆ. ಕೆಲ ಕಾಲ ಅದನ್ನೇ ಮುಂದುವರಿಸಿದರೆ ಒತ್ತಡ ಮಾಯವಾಗುತ್ತದೆ. ಒತ್ತಡಕ್ಕೆ ಕಾರಣವಾಗುವ ಮಾನವನ ಮನಸ್ಸಿನ ಸ್ಥಿರವಾದ ಚಲನೆಯನ್ನು ಶಾಂತಗೊಳಿಸುವ ತಂತ್ರಗಳು ಯೋಗದಲ್ಲಿವೆ. ನೋಡಲು ಅದು ಸರಳ ಎನಿಸಬಹುದು, ಆದ್ರೆ ಏನನ್ನೂ ಯೋಚಿಸದೇ ಇರುವುದು ನಿಜಕ್ಕೂ ಸುಲಭವಲ್ಲ. ಯೋಗ ಮನಸ್ಸನ್ನು ಶಾಂತಗೊಳಿಸುತ್ತದೆ ಜೊತೆಗೆ ವಿಶ್ರಾಂತಿಗೆ ವೇದಿಕೆ ಕಲ್ಪಿಸುತ್ತದೆ. ನಂಬಿಕೆಯನ್ನೂ ಮೀರಿ ಶರೀರ ಮತ್ತು ಮನಸ್ಸಿನ ಮಧ್ಯೆ ಸಾಮರಸ್ಯ ಉಂಟುಮಾಡುತ್ತದೆ.

ನರವೈಜ್ಞಾನಿಕ ಪ್ರಯೋಜನಗಳು...

ನಾವು ಯೋಗಾಭ್ಯಾಸ ಮಾಡಿದಾಗ ಸಂವಹನದ ದೈಹಿಕ ಮತ್ತು ನರಶಾಸ್ತ್ರೀಯ ಬಿಂದುಗಳ ನಡುವೆ ಪುನಃ ಸಮತೋಲನ ಏರ್ಪಡುತ್ತದೆ ಮತ್ತು ಸಮಗ್ರ ಶಕ್ತಿಯ ಅನಿರ್ಬಂಧಿತ ಹರಿವು ಮನಸ್ಸು, ಮೆದುಳು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. ಯೋಗ ಜ್ಞಾಪಕಶಕ್ತಿಯನ್ನು ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅರಿವಿನ ಸಾಮಥ್ರ್ಯವನ್ನು, ದೃಷ್ಟಿಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಸಮನ್ವಯ ಮತ್ತು ಆಳವಾದ ಗ್ರಹಿಕೆಗೂ ಯೋಗ ಸಹಕಾರಿ.

ಸೃಜನಶೀಲತೆ ಮತ್ತು ಅಂತಃಪ್ರಜ್ಞೆ...

ಈ ಯುಗದಲ್ಲಿ ಉತ್ಪಾದಕತೆಯ ಪೂಜೆ ಮತ್ತು ಆಲೋಚನೆಯ ಅನ್ವೇಷಣೆ ನಿರಂತರ. ಅತ್ಯುತ್ತಮ ಪರಿಕಲ್ಪನೆಗಳು ನಮ್ಮೊಳಗಿನಿಂದಲೇ ಹುಟ್ಟಿಕೊಂಡಲ್ಲಿ ನಿಜಕ್ಕೂ ಅದು ಅತ್ಯಂತ ಮೌಲ್ಯಯುತವೆನಿಸುತ್ತದೆ. ಯೋಗ ಆತ್ಮದ ಜೊತೆ ಸಂಪರ್ಕ ಏರ್ಪಡಿಸುತ್ತದೆ. ಉದ್ಯಮಿಗಳ ಆಸೆ ಮತ್ತು ಸೃಜನಶೀಲತೆಗೆ ಸಾಣೆ ಹಿಡಿಯುತ್ತದೆ. ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವುದರ ಜೊತೆಗೆ ಯೋಗ ಸ್ವಯಂ ಅನುಮಾನವನ್ನು ಕೊಲ್ಲುತ್ತದೆ. ದೈಹಿಕ ಮತ್ತು ಸ್ನಾಯು ಸಂವೇದಿ ಜಾಗೃತಿಯನ್ನು ಹೆಚ್ಚಿಸುತ್ತದೆ. ಪರಿಣಾಮ ಆತ್ಮ ಅಂಗೀಕಾರ ಮತ್ತು ವಾಸ್ತವೀಕರಣ ನಾವು ಸಾಧಿಸಬಹುದಾದ ಗಡಿಯೊಳಗಿರುತ್ತವೆ. ನಮ್ಮೊಳಗಿರುವ ಅನನ್ಯ ಸೃಜನಶೀಲತೆಯನ್ನೂ ಗುರುತಿಸಲು ಸಹಾಯ ಮಾಡುತ್ತದೆ. ಹಗೆತನದ ಮಟ್ಟ ತಿರಸ್ಕರಿಸಲ್ಪಟ್ಟರೆ, ಸಾಮಾಜಿಕ ಕೌಶಲ್ಯ, ಯೋಗಕ್ಷೇಮ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಮನಸ್ಸು ಮತ್ತು ದೇಹದ ಒತ್ತಡ ದೂರವಾಗುತ್ತದೆ. ಯೋಗದಿಂದ ಮಾನವರ ಟೊಳ್ಳಾದ ಚಿಪ್ಪುಗಳನ್ನು ಬಿಟ್ಟು, ಸಂತಸ ಮತ್ತು ರೋಮಾಂಚಕರ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು. ಯೋಗ ಒತ್ತಡ ಮತ್ತು ಆತಂಕವನ್ನು ತೊಡೆದು ಹಾಕುತ್ತದೆ. ಈ ಮೂಲಕ ಗ್ರಹಿಕೆ ಮತ್ತು ಅಂತರ್ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ.  

ಇದನ್ನೂ ಓದಿ...

'ಖಾಂದಾನಿ ರಾಜಧಾನಿ'ಯಲ್ಲಿ ಟೇಸ್ಟ್​ ಮಾಡಿ ನೋಡಿ ಸ್ಪೆಷಲ್ ಅಡುಗೆ..!​​ 

ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!

Related Stories

Stories by YourStory Kannada