ಸ್ಮಾರ್ಟ್ ಫೋನ್‌ಗಳಿಗೆ ಅಪ್ಲಿಕೇಷನ್

ಶ್ರುತಿ

0

ಸಾಮಾನ್ಯವಾಗಿ ಸ್ಮಾರ್ಟಪೋನ್ ಗಳನ್ನು ಫೋಟೋ ಕ್ಲಿಕ್ಕಿಸಲು ಮತ್ತು ವೀಡಿಯೋ ಚಿತ್ರೀಕರಣ ಮಾಡಲು ಮೊದಲ ಹಂತವಾಗಿ ಜನರು ಬಳಸಿಕೊಳ್ಳುತ್ತಾರೆ. ಎಲ್ಲ ಸ್ಮಾರ್ಟಪೋನ್ ಗಳು ಕ್ಯಾಮೆರಾ ಅಪ್ಲೀಕೇಷನ್‌ಗಳನ್ನು ಹೊಂದಿವೆ. ಕೆಲವು ಬಳಕೆದಾರರಿಗೆ ಇನ್ನೂ ಹೆಚ್ಚಿನ ಆಯ್ಕೆಗಳು ಬೇಕಾಗಿರುತ್ತದೆ. ಇತ್ತೀಚಿಗೆ ಆ್ಯಪಲ್ ಕಂಪನಿ ತನ್ನ i Tune ನಲ್ಲಿ ಮೆಡ್ ಇನ್ ಇಂಡಿಯಾ ಎಂಬ ಆಯ್ಕೆಯಲ್ಲಿ CAMERA PLUS BY GLOBLE DELIGHT ಅಪ್ಲಿಕೇಶನ್ ಸಿದ್ಧಪಡಿಸಿದೆ. ಇದನ್ನು ಡೌನ್​ಲೋಡ್ ಮಾಡಿಕೊಳ್ಳಲು ಆ್ಯಪಲ್ ಕಂಪನಿಯೂ ಭಾರತದ ಬಳಕೆದಾರರಿಗೆ ಸೀಮಿತ ಅವಧಿಗೆ 10 ರೂ.ಗಳ ಶುಲ್ಕ ವಿಧಿಸಿದೆ.

ಏನಿದು...?

ಈ ಅಪ್ಲಿಕೇಷನನ್ನು ಉಡುಪಿ ಮೂಲದ ಕಂಪನಿಯಾದ ಗ್ಲೋಬಲ್ ಡಿಲೈಟ್ ಆರಂಭಿಸಿದೆ. ಕ್ಯಾಮೆರಾ ಪ್ಲಸ್ ಸ್ವಯಂಚಾಲಿತವಾಗಿ ಪರಿವರ್ತನೆಗೊಂಡು ತನ್ನ ಸ್ಥಾನವನ್ನು ಬದಲಿ ಮಾಡಿಕೊಳ್ಳುವ ಕ್ಯಾಮೆರಾ ಅಪ್ಲಿಕೇಶನ್ ಇದಾಗಿದೆ. ಅಕ್ಟೋಬರ್ 2009 ರಲ್ಲಿ ಇದರ ಮೊದಲನೆಯ ಆವೃತಿಯೂ ಬಿಡುಗಡೆಗೊಂಡಿತ್ತು. 40 ದಿನಗಳಲ್ಲಿ ದಶಲಕ್ಷ ಗ್ರಾಹಕರು ಇದನ್ನು ಡೌನಲೋಡ್ ಮಾಡಿಕೊಂಡಿದ್ದರು ಹಾಗೂ ಸೆಪ್ಟೆಂಬರ್ 2013 ವರೆಗೂ ಇದು ಉಚಿತವಾಗಿತ್ತು. ಅಕ್ಟೋಬರ್ 2013 ರಲ್ಲಿ ಕಂಪನಿಯೂ v3.0 at USD 1.99 ಜೊತೆಗೆ ಮೈಕ್ರೋ ಪೋಟೊಗ್ರಾಫಿಯ ವಿಶಿಷ್ಟತೆಗಳ ಜೊತೆಗೆ ಒನ್-ಟ್ಯಾಪ್ ಸೋಲ್ಯುಶನ್ ಸೌಲ್ಯಭ ನೀಡುತಕ್ತಿದೆ.

2014ರ ಸೆಪ್ಟೆಂಬರ್ 2014ರಲ್ಲಿ ಏರ್ ಸ್ನಾಪ್‌ನ್ನು ಪರಿಚಯ ಮಾಡಿದ್ದೇವು. ಆ್ಯಪಲ್ ವಾಚ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕ್ಯಾಮೆರಾ ಪ್ಲಸ್‌ನ್ನು ಏಪ್ರೀಲ್ 2015 ರಲ್ಲಿ ಬಿಡುಗಡೆಗೊಳಿಸಿವೆ ಎಂದು ಗ್ಲೋಬಲ್ ಡೀಲೈಟ್ ನ ಮಾರ್ಕೆಟಿಂಗ್ ನಿರ್ದೇಶಕ, ಗುರುಪ್ರಸಾದ ಕಾಮತ್ ಸಾಧನೆಯ ವಿವರವನ್ನು ಮುಂದಿಡುತ್ತಾರೆ.

ಗ್ಲೋಬಲ್ ಡಿಲೈಟ್ ಹಿನ್ನಲೆ

ಗ್ಲೋಬಲ್ ಡಿಲೈಟ್, ರೋಬೋಸಾಪ್ಟ್ ಟೆಕ್ನೋಲಜಿಯ ಅಂಗಸಂಸ್ಥೆಯಾಗಿದ್ದು 2008ರಲ್ಲಿ ರೋಹಿತ್​ ಭಟ್‌ರಿಂದ ಸ್ಥಾಪಿಸಲಾಯಿತು. ಏಪ್ರಿಲ್ 2015ರ ಕಲಾರಿ ರಾಜಧಾನಿಯಲ್ಲಿ ಹೂಡಿಕೆದಾರರ ಹಣಕಾಸು ಬಂಡವಾಳವು ಸಿರೀಜ್-Bನಲ್ಲಿ ಬೆಳೆಯಿತು. ಗ್ಲೋಬಲ್ ಡಿಲೈಟ್ ಹಣಕಾಸು ವಿಚಾರದಲ್ಲಿ ಗಮನಹರಿಸುವಲ್ಲಿ ಮತ್ತು ಅಭಿವೃದ್ಧಿಗೊಳ್ಳುವ ಹಿನ್ನಲೆಯಲ್ಲಿ 99 ಗೇಮ್ಸ್ ಜೊತೆಗೆ ಕೈ ಜೊಡಿಸಿತು.

ರಾಮಚಂದ್ರ ಆಚಾರ್ಯರು ಗ್ಲೋಬಲ್ ಡಿಲೈಟ್ ನಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದರು. 2000ದಿಂದ ಅವರು ರೋಬೋಸಾಪ್ಟ್ ನಲ್ಲಿ ಡೆಸ್ಕಟಾಪ್ ಮತ್ತು ಮೊಬೈಲ್ ತಂತ್ರಜ್ಞಾನ ವಿಭಾಗದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು ನಿವೃತ್ತ ಪ್ರೋಪೆಸರ್, ಹಲವಾರು ವರ್ಷಗಳಿಂದ ಗೇಮನ ಬೆಳವಣಿಗೆಯಲ್ಲಿ ಕೆಲಸ ಮಾಡಿದ್ದು ಗ್ಲೋಬಲ್ ಡಿಲೈಟ್ ನಲ್ಲಿ ಉತ್ಪನ್ನಗಳ ಅಭಿವೃದ್ಧಿಯ ವಿಭಾಗದಲ್ಲಿ ಕೆಲಸ ಮಾಡಲು ಕಾರಣವಾಯಿತು.

ಶ್ರೀನಿವಾಸ ಪ್ರಭು, ಕಂಪೂಟರ್ ಸೈನ್ಸ್ ಇಂಜೀನಿಯರ್. ಇವರು ಗ್ಲೋಬಲ್ ಡಿಲೈಟ್ ನ ವಿವಿಧ ಉತ್ಪನ್ನಗಳ ಮೇಲೆ ಕೆಲಸ ಮಾಡಿದ್ದಾರೆ. ಅದೇ ರೀತಿ ಬೂಮ್, ಕ್ಯಾಮೆರಾ ಪ್ಲಸ್, ಕ್ಯಾಮೆರಾ ಪ್ಲಸ್ ಪ್ರೋ, ನಲ್ಲಿಯೂ ಸಹ ತಮ್ಮ ಕೈಚಳಕವನ್ನು ತೋರಿಸಿದ್ದಾರೆ. “ ಆರಂಭಿಕ ದಿನಗಳಲ್ಲಿ ನನ್ನ ಮೊದಲನೆಯ ಪ್ರಾಜೆಕ್ಟ್​ ಭಾಗವಾಗಿದ್ದೆ. ನಂತರ ಅಮೆರಿಕಾ ಕಂಪನಿಯಲ್ಲಿ ಕೆಲಸ ಮಾಡಲು ಅವಕಾಶ ದೊರೆಯಿತು. ಅಲ್ಲಿ ನನ್ನ ಕೆಲಸ ಕಂಡಿದ್ದ ರೋಹಿತ ಭಟ್​​​, ನನ್ನನ್ನು ಅವರ ತಂಡದಲ್ಲಿ ಸೇರಿಸಿಕೊಂಡರು ಅಂತ ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತಾರೆ.

ಗ್ಲೋಬಲ್ ಡಿಲೈಟ್ ತನ್ನ ತಂಡದಲ್ಲಿ ಮೂರು ಡೆವಲಪರ್ಸ್‌ಗಳ ಜೊತೆಗೆ ಗ್ರಾಫಿಕ್ ಮತ್ತು UX ಡಿಸೈನರ್​​​ಗಳು ಕ್ಯಾಮೆರಾ ಪ್ಲಸ್ ದಲ್ಲಿ ಕೆಲಸ ಮಾಡುತ್ತಾರೆ. ಆಪಲ್ ತನ್ನ ಮೊದಲನೆಯ ಉತ್ಪನ್ನ ಬಿಡುಗಡೆ ಮಾಡಿದ ಸಮಯದಲ್ಲಿ ಗ್ಲೋಬಲ್ ಡಿಲೈಟ್ ಮೂರು ಇನಬಿಲ್ಟ್ ಕ್ಯಾಮೆರಾಗಳನ್ನು ಸಂಪೂರ್ಣ ಸಾಮರ್ಥ್ಯ ಬಳಸಿ ಜನರಿಗೆ ನೀಡಲಾಯಿತು. ಹೀಗಾಗಿ ಕ್ಯಾಮೆರಾ ಪ್ಲಸ್ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ಕಡಿಮೆ ಬೆಳಕಿರುವ ಸಮಯದಲ್ಲಿಯೂ ಸಹ ನಾವು ಪೋಟೋಗಳನ್ನು ತೆಗೆದುಕೊಳ್ಳಬಹುದಾಗಿದೆ. ಹಾಗೂ ಇದರ ಜೊತೆಗೆ ಎಡಿಟಿಂಗ್ ಟೂಲ್ಸ್​ಗಳನ್ನು ಸಹ ನೀಡಲಾಗಿದೆ ಎಂದು ರಾಮಚಂದ್ರ ಹೇಳುತ್ತಾರೆ.

ರಿಮೋಟ್ ಬಳಸಿ ಪೋಟೋ ತೆಗೆದುಕೊಳ್ಳಿ

ಯಾವುದಾದ್ರೂ ಎರಡು ಆಪಲ್ ಉತ್ಪನ್ನಗಳನ್ನು ತೆಗೆದುಕೊಂಡು, ಅವುಗಳನ್ನು ವೈಫೈ ಅಥವಾ ಬ್ಲೂ ಟೂಥ್ ಗಳನ್ನು ಉಪಯೋಗಿಸಿಕೊಂಡು ಸೆಲ್ಫಿ, ವೀಡಿಯೋ ಹಾಗೂ ಪೋಟೋಗಳನ್ನು ಸಹ ತೆಗೆದುಕೊಳ್ಳಬಹುದಾಗಿದೆ. ಈ ಕ್ರಿಯೆಯಲ್ಲಿ ಒಂದು ಪೋನ್ ಅಥವಾ ಸಾಧನ ರಿಮೋಟ್ ನಂತೆ ಕೆಲಸ ಮಾಡಿದರೆ ಇನ್ನೊಂದು ಕ್ಯಾಮೆರಾ ಆಗಿ ಉಪಯೋಗವಾಗುತ್ತದೆ.

ಮೈಕ್ರೋ ಪೋಟೋಗ್ರಾಫಿ

ಇದರಲ್ಲಿ ಮೈಕ್ರೋ ಪೋಕಸ್ ವಿಶಿಷ್ಟತೆ ಇರುವುದರಿಂದ ಚಿಕ್ಕ ಚಿಕ್ಕ ವಸ್ತುಗಳನ್ನು ಸಹ ನಾವು ಪ್ರೋ ಬಳಸಿಕೊಂಡು ಚಿತ್ರವನ್ನು ಸೆರೆಹಿಡಿಯಬಹುದು. ಕ್ಯಾಮೆರಾ ಪ್ಲಸ್ ಇನ್ನೋದು ವೈಶಿಷ್ಟ್ಯತೆಯನ್ನು ಹೊಂದಿದೆ, ಅದು ದೂರದ ವಸ್ತುಗಳನ್ನು ತುಂಬಾ ಚೆನ್ನಾಗಿ ಸೆರೆಹಿಡಿಯಬಹುದು. ಉದಾಹರಣೆಗೆ ಬೆಟ್ಟ-ಗುಡ್ಡಗಳು ಇತ್ಯಾದಿ.

ಫೋಕಸ್ ಶಿಪ್ಟ್

ನಾವು ವೀಡಿಯೋಗಳನ್ನು ತೆಗೆದುಕೊಳ್ಳುವಾಗ ಸಿನಿಮಾದಲ್ಲಿ ಮತ್ತು ನಾಟಕೀಯವಾಗಿ ಬಳಸುವಂತೆ ಮಾಡಬಹುದಾಗುದೆ. ಇದರಿಂದ ಫೋಟೊಗಳು ನೋಡಲು ಚೆನ್ನಾಗಿರುತ್ತವೆ. ಅದೇ ರೀತಿ ಕ್ಯಾಮೆರಾ ಪ್ಲಸ್ ಉಪಯೋಗಿಸಿಕೊಂಡು 480 ಪ್ರೇಮ್ಸ್ ನಲ್ಲಿ ಮತ್ತು 720 ಪ್ರೇಮ್ಸ ನಲ್ಲಿಯೂ ಸಹ ವೀಡಿಯೋಗಳನ್ನು ಚಿತ್ರೀಕರಣ ಮಾಡಬಹುದು.

ಇನ್ನೀತರ ವಿಶಿಷ್ಟಗಳು: ಕ್ಯಾಮೆರಾ ಪ್ಲಸ್ ಎಡಿಟಿಂಗ್ ಮತ್ತು ಹೆಚ್ಚಿಸುವ ಉಪಕರಣಗಳನ್ನು ಹೊಂದಿದೆ. ಲುಮ್ಮೀ, ಇದು ಫೋಟೊ ಮತ್ತು ವೀಡಿಯೋಗಳನ್ನು ತೆಗೆಯುವಾಗ ಬೆಳಕನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಒನ್ ಟಚ್ ಪೋಟೊ ಸೌಲಭ್ಯವಿದೆ. ಪೋಟೋ ತೆಗೆದಾಗ ಅಲ್ಲಿ ಅಕ್ಷರಗಳ ಗಾತ್ರ ಮತ್ತು ಬಣ್ಣಗಳನ್ನು ಸರಿಪಡಿಸಬಹುದು. ನಿಮ್ಮ ಫೊಟೋ ಮತ್ತು ವಿಡೀಯೋಗಳನ್ನು ಯಾರಿಗೂ ಕಾಣದಂತೆ ಮುಚ್ಚಿಡಬಹುದಾಗಿದೆ.

YOURSTORY ತೀರ್ಪು

ಕ್ಯಾಮೆರಾ ಪ್ಲಸ್ ಒಂದು ಆಸಕ್ತಿಯ ಹಾಗೂ ಉಪಯುಕ್ತವಾದ ಆ್ಯಪ್ ಆಗಿದೆ. ಇದು ಎಲ್ಲ ರೀತಿಯಲ್ಲಿಯೂ ಉತ್ತಮವಾದ ಅನುಭವ ನೀಡುತ್ತದೆ. ‘ಏರ್ ಸ್ನ್ಯಾಪ್’ ನ ವಿಶಿಷ್ಟಗಳು ತುಂಬಾ ಚೆನ್ನಾಗಿವೆ ಮತ್ತು ಗ್ರೂಪ್ ಫೋಟೋಗಳನ್ನು ಹಾಗೂ ರಿಮೋಟ್ ಸೆಲ್ಪಿಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಅದು ಕೂಡ ಯಾವುದೇ ತೊಂದರೆಗಲಿಲ್ಲದೆ ಇದನ್ನು ಉಪಯೋಗಿಸಬಹುದಾಗಿದೆ. iOS ಉಪಕರಣಗಳಲ್ಲಿ ವೈಪೈ ಹಾಗೂ ಬ್ಲೂ ಟೂತ್​ ಉಪಯೋಗಿಸಿಕೊಂಡು ರಿಮೋಟ್ ತರ ಬಳಸಬಹುದು.

ಇದರೊಂದಿಗೆ ಗ್ರಾಹಕರು ಉತ್ತಮವಾದ ಸೇವೆಯನ್ನು ನೀರಿಕ್ಷಿಸಬಹುದು. ಉತ್ತಮವಾದ ಫೊಟೋಗಳನ್ನು ಮತ್ತು ಎಡಿಟಿಂಗ್ ಸೇವೆಗಳನ್ನು ಅನುಬವಿಸಬಹುದು. ವಿಶ್ವವಿಖ್ಯಾತವಾದ ನಮ್ಮ ತಂಡವು ಯಶಸ್ವಿಯಾಗಿದೆ. ಇದು ನಮಗೆ ಭಾರತದಿಂದ ಸಿಕ್ಕಿದೆ ಎಂಬ ಹೆಮ್ಮೆ ಇದೆ. ತುಂಬಾ ಆಸಕ್ತಿದಾಯಕವಾಗಿದೆ, ಕಂಪನಿಯೂ ಏಷಿಯನ್ ಹಾಗೂ ವಿಶ್ವದ ಮಾರುಕಟ್ಟೆಗಳಲ್ಲಿ ತನ್ನ ಹೊಸ ಹೊಸ ಉತ್ಪನ್ನಗಳನ್ನು ಹಾಗೂ ವೈಶಿಷ್ಟ್ಯಗಳನ್ನ ತರಲಿದೆ.

Related Stories