ಆನ್‌ಲೈನ್ ಸೆಕ್ಯುರಿಟಿಯ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಆರ್ಗ್‌ಬೈಟ್

ಟೀಮ್​​ ವೈ.ಎಸ್​​.

0

ಮಹಿಳಾ ಟೆಕಿ, ಉದ್ಯಮಿ ಮತ್ತು ಕ್ರೀಡಾಪಟು. ಹೀಗೆ ಮಂಜುಳಾ ಶ್ರೀಧರ್ ಅವರದ್ದು ಬಹುಮುಖ ಪಾತ್ರ. ಕರ್ನಾಟಕದ ಸಣ್ಣ ಹಳ್ಳಿಯಲ್ಲಿ ಬೆಳೆದ ಅವರು ಉತ್ಸಾಹಶೀಲ ಮನಸ್ಥಿತಿಯನ್ನು ರೂಪಿಸಿಕೊಂಡವರು. ಈ ಉತ್ಸಾಹಶೀಲತೆಯೇ ಅವರ ಜೀವನದುದ್ದಕ್ಕೂ ಸಹಾಯ ಮಾಡಿದೆ.

ವಿದ್ಯಾಭ್ಯಾಸದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದ ಮಂಜುಳಾ ಮೈಸೂರು ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಚಾರದಲ್ಲಿ ಬಿಇ ಪದವಿಯನ್ನು 5ನೇ ಶ್ರೇಯಾಂಕದಲ್ಲಿ ಪಡೆದು ಉತ್ತೀರ್ಣರಾಗಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ ಬಳಿಕ ಅವರು ಜರ್ಮನ್ ಕಂಪನಿಯಾದ ಬಾಶ್‌ನಲ್ಲಿ ಕಾರ್ಯನಿರ್ವಹಿಸಲು ಬೆಂಗಳೂರಿಗೆ ಬಂದರು.

ತಾಂತ್ರಿಕತೆಯಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದ ಅವರು, ತಮ್ಮ ದಾರಿಯನ್ನು ತಾವೇ ಹುಡುಕಿಕೊಂಡರು. ಲೂಸೆಂಟ್/ಬೆಲ್ ಲ್ಯಾಬ್ಸ್ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಮೆರಿಕಾಗೆ ಹೋದರು. ಅವರ ಸಂಶೋಧನೆಗಳು ಅವರನ್ನು ಅನೇಕ ಪೇಟೆಂಟ್‌ಗಳನ್ನು ಸಂಗ್ರಹಿಸಲು ನೆರವಾಯಿತು. ಈ ಮೂಲಕ ಅವರು ತಂತ್ರಜ್ಞಾನದ ಕುರಿತಾದ ಮಾಹಿತಿ ಇರುವ ಪ್ರಮುಖ ವ್ಯಕ್ತಿಯಾದರು. ಅಲ್ಲದೇ ಲೂಸೆಂಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಚಿಕಾಗೋ ಐಐಟಿಯಲ್ಲಿ ಭದ್ರತೆ ವಿಚಾರವಾಗಿ ಎಂಎಸ್ ಕೂಡ ಮಾಡಿದರು. “ಇದು ನನ್ನ ಜೀವನದ ಪ್ರಮುಖ ಘಟ್ಟ. ನಾನು ಭಾರತಕ್ಕೆ ಹಿಂತಿರುಗಲು ಮತ್ತು ಔಜಾಸ್ ಸಂಸ್ಥೆಯ ಸಹ ಸಂಸ್ಥಾಪಕಿಯಾಗಲು ನಿರ್ಧರಿಸಿದೆ” ಎಂದಿದ್ದಾರೆ ಮಂಜುಳಾ. ಔಜಾಸ್ ನಲ್ಲಿ ಮಂಜುಳಾರಿಗೆ ಹೊಸ ವಿಚಾರಗಳನ್ನು ಕಲಿಯುವಲ್ಲಿ ಅದ್ಭುತವಾದ ಅನುಭವ ನೀಡಿತು. ಇದು ಮಂಜುಳಾರಿಗೆ ಉದ್ಯಮದ ದೃಷ್ಟಿಕೋನಗಳನ್ನು ಅರಿಯಲು ಸಹಕರಿಸಿತು. ಔಜಾಸ್‌ನಲ್ಲಿ 3 ವರ್ಷಗಳನ್ನು ಕಳೆದ ನಂತರ ಅನೇಕ ಸಾಂಸ್ಕೃತಿಕ ಕಾರಣಗಳಿಂದ ಡಬ್ಲ್ಯು.ಟಿ.ಎ ಎಂಬ ಸೇವಾ ಸಂಸ್ಥೆಯೊಂದನ್ನು ಸೇರಲು ನಿರ್ಧರಿಸಿದರು.

ಸ್ವಲ್ಪ ಬ್ರೇಕ್ ಪಡೆದುಕೊಂಡ ನಂತರ ಅವರು ಕೆಲ ಕಾಲಕ್ಕಾಗಿ ಕಾರ್ಪೋರೇಟ್ ವಲಯಕ್ಕೆ ಹಿಂದಿರುಗಿದರು. ಆರ್ಕಾಟ್ ಎಂಬ ಪಾವತಿ ಭದ್ರತಾ ಸಂಸ್ಥೆಯನ್ನು ಸೇರಿದರು. ಅತ್ಯಂತ ಕಷ್ಟಕರವಾದ ತರಬೇತಿ ಪಡೆದುಕೊಂಡು ಕ್ರೀಡಾಪಟುವಾದರು.

ಇದು ಅವರ ಆತ್ಮವಿಶ್ವಾಸವನ್ನು ಮರಳಿಪಡೆದುಕೊಳ್ಳುವಂತೆ ಮತ್ತು ಮುಂದಿನ ಸವಾಲು ಸ್ವೀಕರಿಸಲು ಸಿದ್ಧರಾಗುವಂತೆ ಮಾಡಿತು. ನಂತರ ಅವರು ಐರನ್ ಸೆನ್ಸ್ ಎಂಬ ಯೋಜನೆಯಲ್ಲಿ ತೊಡಗಿಕೊಂಡರು. ಇದು ಒಂದು ರೀತಿಯ ಗೂಢಲಿಪಿಯ ತರಗತಿ. ಇದರಲ್ಲಿ ರಹಸ್ಯವಾಗಿ ಹಂಚಿಕೊಳ್ಳುವ ಉದ್ಯಮದ ತರಗತಿಗಳಿರುತ್ತವೆ ಎನ್ನುತ್ತಾರೆ ಮಂಜುಳಾ. ಸಿಲಿಕಾನ್ ವ್ಯಾಲಿಗೆ ತೆರಳಿದ ಮಂಜುಳಾ ಅಲ್ಲಿ ಇದರ ಮಾದರಿಗಳನ್ನು ಅಭ್ಯಾಸ ಮಾಡಿದರು. ತಮ್ಮ ಯೋಜನೆಯನ್ನು ಪ್ರಸ್ತುತ ಪಡಿಸುವುದಕ್ಕಾಗಿ ಹಣ ಹೂಡಿಕೆಯನ್ನು ಗಳಿಸುವುದೇ ದೊಡ್ಡ ಸವಾಲು ಎಂಬುದನ್ನು ಅರಿತರು.

ಹೀಗೆ ಹುಟ್ಟಿಕೊಂಡಿದ್ದೇ ಆರ್ಗ್​ಬೈಟ್ ಎಂಬ ಯೋಜನೆ. ಆನ್‌ಲೈನ್‌ನಲ್ಲಿ ಜನರ ಸಮಸ್ಯೆಗಳನ್ನು ಎದುರಿಸುವವರಿಗೆ ಸಹಾಯ ಮಾಡುವ ಯೋಜನೆ ಇದಾಗಿತ್ತು. ಸೈಬರ್ ಸೆಕ್ಯುರಿಟಿಯ ಉತ್ಪನ್ನ ಇದಾಗಿತ್ತು.

ತನ್ನ ಸಂಸ್ಥೆಯ ವಿಚಾರವನ್ನು ಮಂಜುಳಾ ಹೀಗೆ ವಿವರಿಸುತ್ತಾರೆ

“ಎಷ್ಟೋ ಬಾರಿ ಆನ್‌ಲೈನ್ ದೌರ್ಜನ್ಯಗಳು ನೋವುಂಟು ಮಾಡುತ್ತದೆ. ತಮಗೆ ಇಷ್ಟೊಂದು ಹಿಂಸೆ ಕೊಡುತ್ತಿರುವವರು ಯಾರು ಎಂಬುದು ಗೊತ್ತಿಲ್ಲದೇ, ಕಂಡುಹಿಡಿಯಲಾಗದೇ ಪರದಾಡುವಂತಾಗುತ್ತದೆ. ಇದು ಎಷ್ಟೋ ಬಾರಿ ಮತಿಭ್ರಷ್ಟ ಸ್ಥಿತಿಗೂ ಕಾರಣವಾಗಬಹುದು. ಇದನ್ನು ಕಾನೂನಾತ್ಮಕವಾಗಿ ಪರಿಹರಿಸಬಹುದು. ಆದರೆ ಬಹಳಷ್ಟು ಜನ ಇದನ್ನೇ ಮೊದಲ ಹೆಜ್ಜೆಯಾಗಿ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಇಂತಹ ಸಣ್ಣ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಾನೂನು ಜಾರಿ ಮಾಡುವ ಅಧಿಕಾರಿಗಳೂ ಸಹ ತೆಗೆದುಕೊಳ್ಳುವುದಿಲ್ಲ. ಇದಕ್ಕೆಲ್ಲಾ ನಮ್ಮ ಸಂಸ್ಥೆ ಪರಿಹಾರ ಒದಗಿಸುತ್ತದೆ. ವಿಚಾರವನ್ನು ಸ್ಪಷ್ಟವಾಗಿ ಅರಿಯಲು ಅಗತ್ಯವಿರುವ ನಿಯಮಬದ್ಧ ಹಾದಿಯನ್ನು ನಾವು ಹಾಕಿಕೊಂಡಿದ್ದೇವೆ. ತೊಂದರೆಗೊಳಗಾದ ವ್ಯಕ್ತಿ ಇಚ್ಛಿಸಿದರೆ ಕಾನೂನು ಜಾರಿ ಮಾಡುವ ಅಧಿಕಾರಿಗಳೊಂದಿಗೆ ಸೇರಿ ಕಾರ್ಯನಿರ್ವಹಿಸಲೂ ನಾವು ಸಿದ್ಧರಿದ್ದೇವೆ” ಎನ್ನುತ್ತಾರೆ ಮಂಜುಳಾ.

ಇತ್ತೀಚೆಗೆ ಮಂಜುಳಾ ಬೀಟಾ ವರ್ಷನ್ ಕೂಡ ಬಿಡುಗಡೆ ಮಾಡಿದ್ದರು. ಆನ್‌ಲೈನ್ ದೌರ್ಜನ್ಯಗಳು ನಿರಂತರವಾಗಿ ಅನೇಕರ ಮೇಲೆ ನಡೆಯುತ್ತಲೇ ಇರುತ್ತವೆ. ಆದರೆ ಕೆಲವರ ವಿಚಾರದಲ್ಲಿ ಇದು ಹೆಚ್ಚಾಗುತ್ತಲೇ ಇರುತ್ತವೆ. ನಿಂದನಾ ಈ ಮೇಲ್‌ಗಳು, ಈ ಮೇಲ್ ಅಕೌಂಟ್ ಹ್ಯಾಕ್ ಮಾಡುವ ವಿಚಾರಗಳಂತೂ ನಡೆಯುತ್ತಲೇ ಇರುತ್ತವೆ. ಇವುಗಳು ನಿಜಕ್ಕೂ ಮಾನಸಿಕ ಕಿರಿಕಿರಯನ್ನು ಉಂಟುಮಾಡುತ್ತವೆ. ಡಿಜಿಟಲ್ ಇಂಡಿಯಾ ಪ್ರಚಾರದಿಂದ ಇನ್ನೂ ಅನೇಕರು ಆನ್‌ಲೈನ್‌ನಲ್ಲಿ ಸಕ್ರಿಯರಾಗುತ್ತಿದ್ದಾರೆ. ಇದೇ ವೇಳೆ ಆನ್‌ಲೈನ್ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆಗಳೂ ಇವೆ.

ಎಲ್ಲಾ ದೌರ್ಜನ್ಯಗಳನ್ನೂ ಪೋಲಿಸರವರೆಗೆ ತೆಗೆದುಕೊಂಡು ಹೋಗುವುದು ಅಸಾಧ್ಯ. ಅನೇಕರು ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುತ್ತಾರೆ. ಇದಲ್ಲದೇ ಮಂಜುಳಾರಿಗೆ ಅರವಿಂದ್ ಐ ಕ್ಲಿನಿಕ್ ಅನ್ನು ಅಭಿವೃದ್ಧಿಪಡಿಸುವ ಇಚ್ಛೆಯೂ ಇದೆ. ಇಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ, ಬಡ ಕಾಲೇಜು ವಿದ್ಯಾರ್ಥಿಗಳು ಉಚಿತ ಅಥವಾ ಪ್ರೊ-ಬೋನೋ ಸಮಾಲೋಚನೆ ನೀಡಲಾಗುತ್ತದೆ ಮತ್ತು ಅವರಿಗೆ ಟೂಲ್‌ಗಳನ್ನು ಬಳಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಆರ್ಗ್‌ಬೈಟ್ ಕೆಲವೇ ಕೆಲವು ಸಮಾಲೋಚಕರನ್ನು ಹೊಂದಿದ್ದ ಓರ್ವ ಮಹಿಳೆಯ ಸೈನ್ಯ ಆಗಿತ್ತು. ಈಗಷ್ಟೇ ಉದ್ಯಮದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವ ಸಂಸ್ಥೆ ನೇರವಂತಿಕೆಯನ್ನು ಉಳಿಸಿಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿ ಸಾಧನೆಗಳನ್ನು ಮಾಡಿರುವ ಸಲಹೆಗಾರರ ಸಮಿತಿಯನ್ನೇ ಸಂಸ್ಥೆಗಾಗಿ ನೇಮಿಸಿಕೊಳ್ಳಲಾಗಿದೆ. ಉದ್ಯಮ ಬೆಳೆದಂತೆ ಹೊಸ ವಿಚಾರಗಳನ್ನು ಸೇರಿಸಲಾಗುವುದು ಎನ್ನುತ್ತಾರೆ ಮಂಜುಳಾ. ಸಮಾಲೋಚಕರ ಆಧಾರದಿಂದಲೇ ಈಗಿನ ಆದಾಯದ ಮಾದರಿಯನ್ನು ರೂಪಿಸಲಾಗಿದೆ. ಆದರೆ ಶೀಘ್ರದಲ್ಲಿ ಸಾಸ್(ಸಾಫ್ಟ್‌ ವೇರ್ ಆ್ಯಸ್ ಎ ಸರ್ವಿಸ್- ಒಂದು ಸೇವೆಯಾಗಿ ಸಾಫ್ಟ್‌ ವೇರ್) ಮಾದರಿಯಲ್ಲಿ ಆದಾಯವನ್ನು ರೂಪಿಸಲಾಗುವುದು.

ಇದೊಂದು ಹೊಸ ಮಾದರಿಯ ಉದ್ಯಮವಾಗಿದ್ದು, ಬಿಸಿನೆಸ್ ಟು ಬಿಸಿನೆಸ್ ಮಾದರಿ ಸಂಸ್ಥೆಗಳು ಇಂತಹ ಸೈಬರ್ ಸೆಕ್ಯುರಿಟಿಯ ಸಮಸ್ಯೆಗಳನ್ನು ಪರಿಹರಿಸುತ್ತಿವೆ. ಆದರೆ ವೈಯಕ್ತಿಕ ಬಳಕೆದಾರರಿಗಾಗಿ ಇಂತಹ ಯಾವುದೇ ಪರಿಹಾರೋಪಾಯಗಳಿಲ್ಲ. ಇದಲ್ಲದೇ ಮಂಜುಳಾ ಉದ್ಯಮಿಗಳಾಗಲು ಸಜ್ಜಾಗುತ್ತಿರುವವರಿಗಾಗಿ ಶಿಬಿರಗಳನ್ನೂ ಸಹ ಏರ್ಪಡಿಸುತ್ತಾರೆ.

ಮಂಜುಳಾ, ಬೆಂಗಳೂರಿನ ಡೇಟಾ ಸೆಕ್ಯುರಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಸದಸ್ಯರೂ ಆಗಿದ್ದಾರೆ. ಆನ್​​​ಲೈನ್ ಸೆಕ್ಯುರಿಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೇಂದ್ರಬಿಂದುವೇ ಆರ್ಗ್‌ ಬೈಟ್ ಎಂಬುದು ಸಂಸ್ಥೆಯ ಬಗ್ಗೆ ಮಂಜುಳಾ ಸರಳ ವಿವರಣೆ.

Related Stories

Stories by YourStory Kannada