ನಿಮ್ಮ ಕೈಯಲ್ಲಿರುವ 2000 ರೂಪಾಯಿ ನೋಟಿನ ಬಗ್ಗೆ ನಿಮಗೆಷ್ಟು ಗೊತ್ತು..?

ಟೀಮ್​ ವೈ.ಎಸ್​. ಕನ್ನಡ

1

ಭಾರತ ಬದಲಾವಣೆಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಪ್ಪುಹಣದ ಚಲಾವಣೆಯನ್ನು ನಿಲ್ಲಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಕಳ್ಳ ನೋಟನ್ನು ನಿಷೇಧಿಸಲು ಕೂಡ ದಿಟ್ಟ ಕ್ರಮ ಕೈಗೊಂಡಿದೆ. ನವೆಂಬರ್ 8ರಂದು ಕೇಂದ್ರ ಸರ್ಕಾರ ದೇಶದಲ್ಲಿ 500 ಮತ್ತು 1000 ರೂಪಾಯಿಗಳ ನೋಟುಗಳ ಚಲಾವಣೆಯನ್ನು ನಿಷೇಧಿಸಿದೆ. ಈ ಮೂಲಕ ಕಪ್ಪು ಹಣದ ಧನಿಕರಿಗೆ ಶಾಕ್ ನೀಡಿದೆ. ಕಳ್ಳ ನೋಟಿನ ಚಲಾವಣೆ ಮೂಲಕ ಮನಿ ಟೆರರಿಸಂ ಮಾಡುತ್ತಿದ್ದವರಿಗೂ ಕೇಂದ್ರ ಸರ್ಕಾರದ ನಿರ್ಧಾರ ಶಾಕ್ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ಸ್ವಾಗತವೂ ಸಿಕ್ತು. ಇನ್ನೊಂದಷ್ಟು ಜನ ಟೀಕೆಗಳನ್ನು ಕೂಡ ಮಾಡಿದ್ರು. ಹಳೆಯ ನೋಟುಗಳನ್ನು ಇಟ್ಟುಕೊಂಡ ಜನಸಾಮಾನ್ಯರಿಗೆ ಹಳೆಯ ನೋಟುಗಳನ್ನು ಬದಲಿಸಲು ಅವಕಾಶವನ್ನು ನೀಡಲಾಯಿತು. ಈ ಮಧ್ಯೆ ಆರ್​ಬಿಐ 2000 ರೂಪಾಯಿಗಳ ಹೊಸ ನೋಟ್​ನ್ನು  ಬಿಡುಗಡೆ ಮಾಡಿದ ಸುದ್ದಿಯನ್ನೂ ತಿಳಿಸಿದ್ರು. ಸದ್ಯ ಚಾಲ್ತಿಯಲ್ಲಿರುವ ನೋಟುಗಳ ಪೈಕಿ 2000 ರೂಪಾಯಿ ಮುಖಬೆಲೆಯೇ ಗರಿಷ್ಠ. ಈ ಹಿಂದೆ ಆರ್​ಬಿಐ 1978ರ ಜನವರಿಯಲ್ಲಿ 5000 ಮತ್ತು 10,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡಿತ್ತು. ಆದ್ರೆ ಕೆಲವೇ ವರ್ಷಗಳಲ್ಲಿ ಸರ್ಕಾರ ಅದನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಈಗ 2000 ರೂಪಾಯಿಗಳ ಹೊಸ ನೋಟು ಬಿಡುಗಡೆಯಾಗಿದೆ. ಈ ನೋಟು ನಮ್ಮ ಕರ್ನಾಟದ ಮೈಸೂರಿನ ಆರ್​ಬಿಐ ಮುದ್ರಣಾಲಯದಲ್ಲಿ ಮುದ್ರಿತವಾಗಿದೆ ಅನ್ನೋದು ಮತ್ತೊಂದು ಹೆಮ್ಮೆಯ ವಿಚಾರ. ಅಂದಹಾಗೇ, 2000 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಹಲವು ವಿಭಿನ್ನತೆಗಳಿವೆ.

ಇದನ್ನು ಓದಿ: ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ

1.  2000 ರೂಪಾಯಿ ಮೌಲ್ಯದ ಹೊಸ ನೋಟು 66 ಎಂಎಂ X 166 ಎಂಎಂ ಉದ್ದಗಲವಿದ್ದು, ಹಳೆಯ ನೋಟುಗಳಿಗಿಂತ ಚಿಕ್ಕದಾಗಿ ಕಾಣುತ್ತದೆ. ಹೊಸ ನೋಟ್ ಅನ್ನು ಮಜೆಂಟ್ ಕಲರ್​ನಲ್ಲಿ ಪ್ರಿಂಟ್ ಮಾಡಲಾಗಿದೆ.

2.  ಹೊಸ ನೋಟಿನಲ್ಲಿ ದೇವನಗರಿ ಲಿಪಿಯಲ್ಲಿ 2 ಸಾವಿರ ಅನ್ನೋದನ್ನ ಬರೆಯಲಾಗಿದೆ. ಒಟ್ಟು ಹದಿನೈದು ಭಾಷೆಗಳಲ್ಲಿ ಎರಡು ಸಾವಿರ ರೂಪಾಯಿಗಳು ಅಂತ ಬರೆಯಲಾಗಿದೆ. ಮೈಕ್ರೋ ಅಕ್ಷರಗಳಲ್ಲೂ ಎರಡು ಸಾವಿರ ಅನ್ನೋದನ್ನು ಮುದ್ರಿಸಲಾಗಿದೆ. ನೋಟಿನ ಎಡಭಾಗದಲ್ಲಿ 2000 ಅನ್ನೋದನ್ನ ಬರೆಯಲಾಗಿದೆ.

3.  ಹೊಸ ನೋಟಿನಲ್ಲಿ 2000 ಅನ್ನೋದನ್ನು ಬರಿಗಣ್ಣಿನಲ್ಲೂ ನೋಡಬಹುದು. ಬೆಳಕಿಗೆ ಎದುರಾಗಿ ಹಿಡಿದಾಗಲೂ ನೋಟಿನಲ್ಲಿ 2000 ಅನ್ನೋ ಡಿನೋಮಿನೇಷನ್ ಕಾಣುತ್ತದೆ.

4.  2000 ರೂಪಾಯಿ ನೋಟಿನಲ್ಲಿ ಮಹಾತ್ಮಾಗಾಂಧಿ ಭಾವಚಿತ್ರವನ್ನು ಮಧ್ಯಭಾಗದಲ್ಲಿ ಪ್ರಿಂಟ್ ಮಾಡಲಾಗಿದೆ. ಅಷ್ಟೇ ಅಲ್ಲ ಮಹಾತ್ಮಾ ಗಾಂಧಿ ಭಾವಚಿತ್ರದ ಪೊಪೈಲ್ ಎಡಭಾಗದಲ್ಲಿದೆ.

5.  ಮಂಗಳಯಾನದ ಸಂಭ್ರಮವನ್ನು ಬಿಂಬಿಸಲು ಕೂಡ ಆರ್​ಬಿಐ ಮುಂದಾಗಿದೆ. ನೋಟಿನ ಹಿಂಭಾಗದಲ್ಲಿ ಮಂಗಳಯಾನದ ಲೋಗೋ ಮತ್ತು ಟ್ಯಾಗ್​ಲೈನ್​ಗಳನ್ನು ಕೂಡ ಹಾಕಲಾಗಿದೆ. ಸ್ವಚ್ಛ ಭಾರತ್ ಅಭಿಯಾನದ ಲೋಗೋ ಮತ್ತು ಟ್ಯಾಗ್​ಲೈನ್ ಇದೆ.

6. ನೋಟಿನ ಭದ್ರತೆ ಮತ್ತು ಸೆಕ್ಯುಟಿರಿಗಳ ಬಗ್ಗೆಯೂ ಗಮನ ವಹಿಸಲಾಗಿದೆ. ನೋಟಿನ ಮಧ್ಯಭಾಗದಲ್ಲಿ ಬೆಳ್ಳಿ ಬಣ್ಣದ ಗೆರೆಯ ಜೊತೆ ಭಾರತ್ ಅನ್ನೋದನ್ನು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಆರ್ಬಿಐ ಮತ್ತು 2000 ಅನ್ನೋದನ್ನ ವಿಭಿನ್ನ ಬಣ್ಣಗಳಲ್ಲಿ ಬರೆಯಲಾಗಿದೆ. ನೋಟನ್ನು ಮೇಲೆ ಕೆಳೆಗೆ ಮಾಡಿದಾಗ ಮಧ್ಯಭಾಗದಲ್ಲಿರುವ ಗೆರೆ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

7.  ನೋಟಿನಲ್ಲಿ ಆರ್​ಬಿಐ ಗವರ್ನರ್, ನೋಟಿಗೆ ಎರಡು ಸಾವಿರ ರೂಪಾಯಿಗಳ ಬೆಲೆಯಿದೆ ಅನ್ನೋದನ್ನ ಬರೆದು ಸಹಿ ಮಾಡಿದ್ದಾರೆ. ಆರ್​ಬಿಐನ ಚಿಹ್ನೆ ಬಲಭಾಗದಲ್ಲಿದೆ. ಎಲೆಕ್ಟ್ರೋ ಟೈಪ್ ವಾಟರ್ ಮಾರ್ಕ್ ಅನ್ನು ಕೂಡ ನೋಟಿನಲ್ಲಿ ಹಾಕಲಾಗಿದೆ.

8.  ಮಹಾತ್ಮಾಗಾಂಧಿ ಚಿತ್ರದ ಜೊತೆಗೆ ಅಶೋಕ ಪಿಲ್ಲರ್ ಅನ್ನು ಕೂಡ ಮುದ್ರಿಸಲಾಗಿದೆ. ಎಲೆಕ್ಟ್ರೋ ಟೈಪ್ ವಾಟರ್ ಮಾರ್ಕ್​ನಲ್ಲಿ 2000 ಅನ್ನೋದನ್ನ ಬರೆಯಲಾಗಿದೆ. ಆರ್​ಬಿಐ ಗೈಡ್​ಲೈನ್ಸ್ ಪ್ರಕಾರ ಏಳು ಬ್ಲೀಡ್ ಲೈನ್​ಗಳನ್ನು ನೋಟಿನಲ್ಲಿ ಹಾಕಲಾಗಿದೆ. ಈ ವಿಭಿನ್ನ ಗೆರೆಗಳು ದೃಷ್ಟಿ ವಿಕಲ ಚೇತನರಿಗೆ 2000 ರೂಪಾಯಿ ಮೌಲ್ಯದ ನೋಟು ಅನ್ನೋದನ್ನ ತಿಳಿಯಲು ಸಹಾಯ ಮಾಡುತ್ತದೆ.

9. ಹೊಸ ನೋಟು ಹೊರಬರಲಿದೆ ಅನ್ನುವಾಗ 2000 ರೂಪಾಯಿ ನೋಟಿನಲ್ಲಿ ಜಿಪಿಎಸ್ ಚಿಪ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಅಂತ ರೂಮರ್ ಹಬ್ಬಿಸಲಾಗಿತ್ತು. ಆದ್ರೆ ನೋಟಿನಲ್ಲಿ ಅಂತಹ ತಂತ್ರಜ್ಞಾನ ಬಳಸಲಾಗಿಲ್ಲ ಅಂತ ಆರ್​ಬಿಐ ಸ್ಪಷ್ಟನೆ ನೀಡಿದೆ.

10.  ಕಣ್ಣಿಗೆ 45 ಡಿಗ್ರಿ ಭಾಗಿಸಿ ನೋಟನ್ನು ಹಿಡಿದಾಗ 2000 ಅನ್ನೋ ಡಿನೋಮಿನೇಷನ್ ಹಲವು ಭಾಗಗಳಲ್ಲಿ ಕಾಣ ಸಿಗುತ್ತದೆ.

ಪರ್ಪಲ್ ಕಲರ್​ನ ಈ ನೋಟಿಗಾಗಿ ಜನರು ಬ್ಯಾಂಕ್​ಗಳ ಮುಂದೆ ಸಾಲು ಗಟ್ಟಿನಿಂತಿದ್ದಾರೆ. ಹಳೆಯ ನೋಟು ಬದಲಿಸಿಕೊಳ್ಳುವಾಗ ಹೊಸ ನೋಟು ಕೂಡ ಪಾಕೆಟ್​​ನಲ್ಲಿ ಇರಲಿ ಎಂದು ಜನ 2000 ಮುಖಬೆಲೆಯ ನೋಟನ್ನು ಪಡೆದುಕೊಂಡಿದ್ದಾರೆ. ಹೊಸ ನೋಟನ್ನು ಹಿಡಿದು ಸಂಭ್ರಮಿಸಿದ್ದಾರೆ.

ಇದನ್ನು ಓದಿ: 

1. ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

2. ಇದು ಜಸ್ಟ್​ ಸ್ಕೂಟರ್​ ಮಾತ್ರ ಅಲ್ಲ... ಸ್ಮಾರ್ಟ್​ ಲೈಫ್​ನ ಸರದಾರ..!

3. ನೀರಲ್ಲಿ ಬಿದ್ದ ಮೊಬೈಲ್ ರಿಪೇರಿ ಬಲು ಈಸಿ..