ಆನ್‍ಲೈನ್ ಶಾಪಿಂಗ್‍ಗೆ ಹೊಸ ರೂಪ ಕೊಟ್ಟ ಅಡಿಮನ್ ಡಾಟ್‍ಕಾಮ್

ಟೀಮ್​​ ವೈ.ಎಸ್​​.

0

ನೀವು ಒಮ್ಮೆ ಈ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ಗೆ ಭೇಟಿ ನೀಡಿ, ನಿಮಗೆ ತಿಳಿಯದ ಹಾಗೆ ನೀವು ಅಲ್ಲಿರುವ ಜ್ಯುವೆಲರಿಗಳ ಹಿಂದೆ ಬಿದ್ದೀರುತ್ತೀರಿ. ಯಾವುದು ಕೊಳ್ಳುವುದು, ಯಾವುದು ಬಿಡುವುದು ಅಷ್ಟರಮಟ್ಟಿಗೆ ಕನ್‍ಫ್ಯೂಸ್ ಮಾಡಿಬಿಡುತ್ತವೆ ಅಲ್ಲಿರುವ ಫ್ಯಾನ್ಸಿ ಡೈಮಂಡ್ ಜ್ಯುವೆಲರಿಗಳು. ಹೌದು, ಇಷ್ಟೆಲ್ಲಾ ವೈವಿಧ್ಯಮಯ ಡಿಸೈನಿಂಗ್ ಜ್ಯುವೆಲರಿಗಳನ್ನು ಹೊಂದಿರುವ, ಲೈಟ್ ವೈಟ್ ಇದ್ದರೂ, ಉತ್ತಮ ಗುಣಮಟ್ಟ ಹಾಗೂ ಬೆಲೆ ಹೊಂದಿರುವ, ಇಂದು ಎಲ್ಲಾ ವರ್ಗದ ಮಹಿಳೆಯರು ಹಾಗೂ ಪುರುಷರನ್ನು ತನ್ನತ್ತ ಸೆಳೆಯುತ್ತಿರುವ ಆ ಆನ್‍ಲೈನ್ ಶಾಪಿಂಗ್ ತಾಣದ ಹೆಸರು ಅಡಿಮನ್ ಡಾಟ್‍ಕಾಮ್.

ಕಣ್ಣು ಕೋರೈಸುವ ಅತ್ಯಮೂಲ್ಯವಾದ ಪೆಂಡೆಂಟ್ ಮತ್ತು ಸೆಟ್‍ಗಳು, ಕಿವಿಯೋಲೆಗಳು, ಹೊಸ ಬಗೆಯ ವಿನ್ಯಾಸಗಳ ಫ್ಯಾಷನ್ ಜ್ಯುವೆಲರಿಗಳು ಬೇಕೆಂದರೆ ಅಡಿಮನ್ ಡಾಟ್‍ಕಾಮ್‍ಗೆ ಭೇಟಿ ನೀಡಿದರೆ ಸಾಕು, ನಿಮ್ಮ ಕನಸಿನ ಆಭರಣಗಳು ಪ್ರತ್ಯಕ್ಷವಾಗುತ್ತವೆ. ಅಂದಹಾಗೆ ಇಂತಹ ಆಭರಣಗಳನ್ನು ಜನತೆಗೆ ಪರಿಚಯಿಸಿದ ಕೀರ್ತಿ ಸುಮಿತ್ ಸುಕಿಜಾ ಮತ್ತವರ ಪತ್ನಿ ಪ್ರಿಯಾಂಕಾ ಹ್ಯಾನ್ಸ್ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ, ಪಡೆದಿರುವ ಅಡಿಮನ್ ಡಾಟ್‍ಕಾಮ್ ಆರಂಭವಾಗಿ ಬಹಳ ವರ್ಷಗಳೇನು ಕಳೆದಿಲ್ಲ. ಆದರೂ ಗ್ರಾಹಕರನ್ನು ತಲುಪುವಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಿದೆ!

ಸ್ಪೆಷಾಲಿಟಿ ಏನು ಗೊತ್ತಾ?

ಯಾವುದೇ ವಸ್ತುವಿರಬಹುದು, ಅದರಲ್ಲಿ ಏನಾದರೊಂದು ವಿಶೇಷತೆ ಇದ್ದರೇನೇ ಅಲ್ಲವೇ ಜನ ಅದನ್ನು ಕೊಳ್ಳಲು ಮುಂದಾಗುವುದು. ಹಾಗಾದರೆ ಅಡಿಮನ್ ಜ್ಯುವೆಲರಿಗಳನ್ನು ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆಂದರೆ ಈ ಜ್ಯುವೆಲರಿಯಲ್ಲಿಯೂ ಏನಾದರೊಂದು ಸ್ಪೆಷಾಲಿಟಿ ಅಂತ ಇರಬೇಕಲ್ಲ ಎಂಬ ಸಂದೇಹ ನಿಮ್ಮನ್ನು ಕಾಡದೆ ಇರದು, ನಿಜ ಇದರ ಸ್ಪೆಷಾಲಿಟಿ ಏನೆಂದರೆ ‘ವಜ್ರದ ಆಭರಣಗಳು’ ಮತ್ತು ‘ಸಾಲಿಟೇರ್ಸ್’. ಗ್ರಾಹಕರಿಗಾಗಿ ಕಸ್ಟಮ್ ಜ್ಯುವೆಲರಿಗಳನ್ನು ಡಿಸೈನ್ ಮಾಡುವ ಅಡಿಮನ್ ಆಯಾ ಪ್ರದೇಶಗಳ ಕಲೆಗಳಲ್ಲಿ ಪರಿಣತಿ ಹೊಂದಿರುವ ಕುಶಲಕರ್ಮಿಗಳಿಂದ ಆಭರಣಗಳ ವರ್ಕ್ ಮಾಡಿಸುತ್ತದೆ.

ಆರಂಭವಾದದ್ದು ಹೀಗೆ...

ಸುಮಿತ್ ಅಡಿಮನ್ ಆರಂಭಿಸುವಾಗ ದೇಶಿಯ ಡೈಮಂಡ್ ಜ್ಯುವೆಲರಿಗಳನ್ನು ಮಾರಾಟ ಮಾಡುವುದರಲ್ಲಿ ಆನ್‍ಲೈನ್‍ಗಿಂತ ಆಫ್‍ಲೈನ್ ವ್ಯಾಪಾರಿಗಳದ್ದೇ ಮೇಲುಗೈ ಇತ್ತು. ಅಂದರೆ ಆನ್‍ಲೈನ್‍ಗೆ ಇದ್ದ ಸ್ಥಾನ ಕೇವಲ 0.75% ಮಾತ್ರ.

ಅಡಿಮನ್ ಆರಂಭವಾಗುವುದಕ್ಕಿಂತ ಮುಂಚೆ ಆಗಲೇ ‘ಜುವಲಿಯ ಡಾಟ್‍ಕಾಮ್’ ಹಾಗೂ ‘ಕರಟ್ಲೇನ್’ ಇದೇ ರೀತಿ ಆನ್‍ಲೈನ್ ಆಭರಣಗಳು ಹಾಗೂ ಆಕ್ಸೆಸರಿಗಳನ್ನು ಮಾರಿ ಭರ್ಜರಿ ಯಶಸ್ಸು ಕಂಡಿದ್ದವು. ‘ಕ್ಯಾರಟ್ಲೇನ್’ ಡೈಮಂಡ್‍ನ ಕ್ಯಾರೆಟ್, ಕಲರ್, ಕ್ಲಾರಿಟಿ, ಕಟ್‍ನಲ್ಲಿ ವಿಶ್ವಾಸರ್ಹತೆಗಳಿಸಿ ಜನರನ್ನು ಮೋಡಿ ಮಾಡಿತ್ತು. ಆಗ ಇದೇ ಮಾದರಿಯನ್ನು ಅನುಸರಿಸಿದ ಅಡಿಮನ್ ಸಹ ಮುಂದೆ ಬರಲು ಬಹಳ ಸಮಯ ಹಿಡಿಯಲಿಲ್ಲ.

ಪ್ರತಿಯೊಬ್ಬ ದೊಡ್ಡ ಉದ್ಯಮಿಗಳಂತೆ ಸುಮಿತ್ ಅನುಭವಿಸಿದ ಪರ್ಸನಲ್ ಸಮಸ್ಯೆಯೇ ಅವರನ್ನು ಇಂದು ಇಷ್ಟು ದೊಡ್ಡ ಮಟ್ಟದ ಆನ್‍ಲೈನ್ ಉದ್ಯಮಕ್ಕೆ ಕೈ ಹಾಕುವಂತೆ ಪ್ರೇರಣೆ ನೀಡಿತು ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಸುಮಿತ್ ವಿವಾಹವಾದದ್ದು 2008ರಲ್ಲಿ. ಆಗ ಮದುವೆಗೆ ಆಭರಣಗಳನ್ನು ಕೊಳ್ಳಲು ಹತ್ತಿರದ ಒಂದು ದೊಡ್ಡ ಶಾಪ್‍ಗೆ ಭೇಟಿ ನೀಡಿದಾಗ ಆಭರಣಗಳ ಕ್ವಾಲಿಟಿ ಹಾಗೂ ಡಿಸೈನ್‍ಗಳು ಮನಸ್ಸಿಗೆ ಒಪ್ಪುವಂತೆ ಇರಲಿಲ್ಲ. ಆಗ ಇವರಿಗೆ ಬಂದದ್ದೇ ಡೈಮಂಡ್ ಜ್ಯುವೆಲರಿ ಶಾಂಪಿಂಗ್ ಐಡಿಯಾ. ಜನರ ಇಷ್ಟಕ್ಕೆ, ಮನೋಭಾವಕ್ಕೆ ತಕ್ಕಂತೆ ಆಭರಣಗಳನ್ನು ತಯಾರಿಸಿದರೆ ಚೆನ್ನ ಅಂದುಕೊಂಡವರೇ, ಹೇಗಿದ್ದರೂ ತಮ್ಮ ಮಾವ ಆಭರಣಗಳ ವ್ಯಾಪಾರಿ, ಪತ್ನಿ ಕೂಡ ಹವ್ಯಾಸಕ್ಕೆಂದು ಜ್ಯುವೆಲರಿ ಡಿಸೈನಿಂಗ್ ಕಲಿತವರು. ಹೇಗಿದ್ದರೂ ಆನ್‍ಲೈನ್‍ನಲ್ಲಿ ಕ್ವಾಲಿಟಿ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಗ್ಯಾರಂಟಿಯಾಗಿ ಮಾರುವ ಆಫರ್ ಇದೆ. ಹೆಚ್ಚಿನ ಬಂಡವಾಳದ ಅವಶ್ಯಕತೆಯೂ ಬರುವುದಿಲ್ಲ. ಪ್ರಾಡಕ್ಟ್ಸ್ ಜೊತೆಗೆ ಬೆಲೆಯನ್ನು ನಮೂದಿಸುವುದರಿಂದ ಜನರಿಗೆ ತಮ್ಮ ಬಜೆಟ್‍ಗೆ ತಕ್ಕ ಹಾಗೆ, ಅವರಿಗಿಷ್ಟ ಬಂದ ವಿನ್ಯಾಸದ ಜ್ಯುವೆಲರಿಗಳನ್ನು ಕೊಳ್ಳಲು ಸುಲಭವಾಗುತ್ತದೆ ಎಂದು ಯೋಚಿಸಿ ಈ ವ್ಯವಹಾರಕ್ಕೆ ಕೈಹಾಕಿಯೇ ಬಿಟ್ಟರಂತೆ ಸುಮಿತ್.

ಜೋರಾಯ್ತು ವ್ಯಾಪಾರ-ವಹಿವಾಟು

ಅಡಿಮನ್ ಇಂದು ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ ದೇಶದಾದ್ಯಂತ ನೆಟ್‍ವರ್ಕ್ ಹೊಂದಿರುವುದಲ್ಲದೆ, ಒಂದು ಸಾವಿರಕ್ಕೂ ಹೆಚ್ಚು ವೆಂಡರ್ಸ್‍ಗಳನ್ನು ಹೊಂದಿದೆ. ಕಡಿಮೆ ಬೆಲೆಯಲ್ಲಿ ಗ್ಯಾರಂಟಿ ಆಭರಣಗಳನ್ನೂ ಆಫರ್ ಮಾಡುತ್ತಿರುವುದರಿಂದ ಗ್ರಾಹಕರೂ ಕೂಡ ಕನಿಷ್ಠವೆಂದರೂ ಆನ್‍ಲೈನ್‍ನಲ್ಲಿ 25,000ಕ್ಕೂ ಅಧಿಕ ಸಾಲಿಟೇರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಸಾರಿ ಆರ್ಡರ್ ಮಾಡಿ, ಕನ್‍ಫರ್ಮ್ ಆದ ತಕ್ಷಣ ಅವರ ಪಟ್ಟಿ ರೆಡಿ ಮಾಡಿ ವ್ಯವಸ್ಥಿತವಾಗಿ ತಲುಪುವ ವ್ಯವಸ್ಥೆ ಮಾಡುತ್ತದೆ ಅಡಿಮನ್. ಇಲ್ಲಿ ಎಲ್ಲವೂ ಪರಿಣಿತರ ಸಹಯೋಗದೊಂದಿಗೆ ನಡೆಯಲಿದ್ದು, ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಪ್ಲಾನ್ ಮಾಡಲಾಗುತ್ತಿದೆ.

ಅಡಿಮನ್ ಆನ್‍ಲೈನ್ ಮಾರ್ಕೆಟಿಂಗ್‍ಗಾಗಿ ಇ-ಮೇಲರ್ಸ್, ಗೂಗಲ್, ಫೇಸ್‍ಬುಕ್ ಆಡ್ಸ್, ಆರ್ಗಾನಿಕ್ ಎಸ್‍ಇಒಗಳನ್ನು ಅವಲಂಬಿಸಿದ್ದು, ಇದು ಮೊದಲು ತನ್ನ ಕಾರ್ಯಚಟುವಟಿಕೆಗಳನ್ನು ಎಕ್ಸಿಬಿಶನ್ ಮೂಲಕ ಆರಂಭಿಸಿತು. ನಂತರ ವೈರಲ್ ಮಾರ್ಕೆಟಿಂಗ್ ತಂತ್ರವನ್ನು ಅಳವಡಿಸಿಕೊಂಡಿತು. ಇಷ್ಟೇ ಅಲ್ಲದೆ, ಆನ್‍ಲೈನ್ ಸ್ಟೋರ್ಸ್‍ಗಳಾದ ಸ್ನಾಪ್ ಡೀಲ್, ಲೂಟ್ ಬಾರ್ಗೇನ್, ಅಮೊರಶ್, ಇಬೇ ಮುಂತಾದವುಗಳ ಜೊತೆ ಟೈ ಅಪ್ ಮಾಡಿಕೊಂಡಿದೆ. ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಕೆಲವು ಕೂಪನ್ ಸೈಟ್ಸ್‍ಗಳೊಂದಿಗೆ ಪಾರ್ಟ್‍ನರ್ ಶಿಪ್ ಕೂಡ ಹೊಂದಿದೆ. ಜುವಲಿಯ ತರಹವೇ ಇರುವ ಇನ್ನೊಂದು ಸೋಶಿಯಲ್ ಸೆಲ್ಲಿಂಗ್ ಚಾನಲ್ ‘ಗ್ಯಾಂಗ್ ಆಫ್ ಪಿಂಕ್’ ಮೂಲಕವೂ ಅಡಿಮನ್ ಗ್ರಾಹಕರನ್ನು ತಲುಪುತ್ತಿದೆ. ಈಗಾಗಲೇ ಗ್ಯಾಂಗ್ ಆಫ್ ಪಿಂಕ್ ಮಹಿಳೆಯರಿಗೆ ವಾಣಿಜ್ಯೋದ್ಯಮದ ಆಯ್ಕೆಯ ಬಗ್ಗೆ ಆಫರ್‍ಗಳನ್ನು ನೀಡುತ್ತಿದ್ದು, ಬಹುಮಾನಗಳನ್ನು ನೀಡುವುದರ ಮೂಲಕ ಉದ್ಯಮಿಗಳಾಗಲು ಬಯಸುವವರಿಗೆ ಪ್ರೋತ್ಸಾಹಿಸುತ್ತಿದೆ. ಅಂದ ಹಾಗೆ ಇದರ ಮಾಲೀಕರು ದಂತವೈದ್ಯೆ ಪ್ರಿಯಾಂಕ. ಅಡಿಮನ್ ಮಾಲೀಕ ಸುಮಿತ್ ಸಹ ಐಟಿ ಪದವೀಧರರಾಗಿದ್ದು, ಈ ಉದ್ಯಮಕ್ಕೆ ಬರುವ ಮುಂಚೆ ಐಸಿಐಸಿಐ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದರು.

ಅಡಿಮನ್‍ನಲ್ಲಿ ಪ್ಲಸ್ ಪಾಯಿಂಟ್ ಎಂದರೆ ಇಲ್ಲಿನ ಕೆಲವು ಡೈಮಂಡ್‍ಗಳನ್ನು ಬೇರೆ ಆನ್‍ಲೈನ್ ಸ್ಟೋರ್‍ಗಳಿಗಿಂತ ಶೇ.15 ರಷ್ಟು ರಿಯಾಯಿತಿ ಹಾಗೂ ಆಫ್‍ಲೈನ್‍ಗಿಂತ ಶೇ.40ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಸಾಧನೆಯ ಹಾದಿಯಲ್ಲಿ...

ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಆಕಾಂಕ್ಷೆ ಹೊಂದಿರುವ ಸುಮಿತ್ ಮುಂದೆ ಎದುರಾಗುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ತಮ್ಮ ಬ್ರಾಂಡ್ ಹಾಗೂ ವೆಬ್‍ಸೈಟ್ ಅನ್ನು ಗ್ರಾಹಕರಿಗೆ ಪರಿಚಯಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಹಾಗೂ ಎನ್‍ಸಿಆರ್ ಪ್ರದೇಶಗಳಲ್ಲಿ ‘ಹೋಮ್ ಟ್ರೈ ಆನ್’ ಸೌಲಭ್ಯ ಆರಂಭಿಸಿರುವ ಅಡಿಮನ್ ಫ್ರಾಂಚೈಸಿ ಹಾಗೂ ಕಂಪನಿ ಸ್ವಾಮ್ಯದಲ್ಲಿ ಸ್ಟೋರ್‍ಗಳನ್ನು ತೆರೆಯಲು ಪ್ಲಾನ್ ಮಾಡಿದೆ. ಒಟ್ಟಾರೆಯಾಗಿ 2016ರ ವೇಳೆಗೆ 20 ಸ್ಟೋರ್ಸ್‍ಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಂಡಿದೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ವೆಬ್‍ಸೈಟ್ ಅನ್ನು ಲಾಂಚ್ ಮಾಡುವ ಗುರಿಯಿಟ್ಟುಕೊಂಡಿದೆ.

ಈಗಾಗಲೇ ಪಶ್ಚಿಮ ದೆಹಲಿಯ ಸ್ಟೋರ್ಸ್‍ನಲ್ಲಿ ಅಡಿಮನ್ ಪ್ರಾಡಕ್ಟ್ಸ್‍ಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಭರವಸೆಯನ್ನಿಟ್ಟುಕೊಂಡಿದೆ ಅಡಿಮನ್.

Related Stories