ಕ್ಷೌರಿಕ ರೋಲ್ಸ್ ರಾಯ್ಸ್ ಮಾಲೀಕನಾದ ಕಥೆ

ಟೀಮ್​​​ ವೈಎಸ್​​​​

2

ಮುನ್ನುಗ್ಗುವ ಧೈರ್ಯ ಮತ್ತು ಮಾಡೇ ಮಾಡುತ್ತೇನೆ ಅನ್ನೋ ಆತ್ಮವಿಶ್ವಾಸ ಇದ್ರೆ ಆಕಾಶವನ್ನೇ ಭೂಮಿಗಿಳಿಸುವ ಪ್ರಯತ್ನ ಮಾಡಬಹುದು. ನಾವು ಅಂದುಕೊಂಡಂತೆ ನಡೆದ್ರೆ, ಧೈರ್ಯ ಇದ್ರೆ ಅದೃಷ್ಟವನ್ನು ಕೂಡ ಬದಲಾಯಿಸಬಹುದು.ಲಿಯೊನಾರ್ಡ್ ವಿಲಬೀ ಹೇಳಿರುವ ಹಾಗೆ ನಾವು ನಮ್ಮ ಮಾರ್ಗದರ್ಶನದಲ್ಲಿ ನಡೆದರೆ ಹಾಗೂ ಧೈರ್ಯವಂತಿಕೆ ಇದ್ದರೆ ಎಲ್ಲವೂ ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ರಮೇಶ್ ಬಾಬು.. ರಮೇಶ್ ಬಾಬು ಒಬ್ಬ ಸಾಮಾನ್ಯ ಕ್ಷೌರಿ. ತನ್ಕನ ದುಡಿಮೆಯಿಂದ ಬಂದ ಹಣವನ್ನು ಉಳಿತಾಯ ಮಾಡಿ ಮತ್ತೊಂದು ಉದ್ಯೋಗವನ್ನು ಆರಂಭಿಸಿ ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಹಲವಾರು ಕಷ್ಟದ ಕಥೆಗಳಿರುತ್ತವೆ. ಹಾಗೇ ರಮೇಶ್ ಬಾಬು ಜೀವನದಲ್ಲೂ ಕೂಡ ಹಲವಾರು ಕಷ್ಟದ ದಿನಗಳನ್ನು ಎದುರಿಸಿದ್ದಾರೆ. 

1994ರಲ್ಲಿ ಅನಿವಾರ್ಯ ಕಾರಣಗಳಿಗೆ ಕ್ಷೌರಿಕ ಕಾರ್ಯವನ್ನು ಆರಂಭಿಸಿ ಬಂದ ಆದಾಯದಲ್ಲಿ ಒಂದು ಮಾರುತಿ ವ್ಯಾನ್​​​ ಪರ್ಚೇಸ್​ ಮಾಡಿದ್ದರು. 10 ವರ್ಷಗಳ ಬಳಿಕ ಅಂದ್ರೆ 2004ರಲ್ಲಿ 7 ಕಾರುಗಳಿಗೆ ಮಾಲೀಕನಾಗಿ ಬಾಡಿಗೆಗೆ ಬಿಟ್ಟಿದ್ದರು. ಮುಂದಿನ 10 ವರ್ಷಗಳ ಕನಸು ದೊಡ್ಡದಾಗಿ ಬೆಳೆದಿತ್ತು.. ಹೀಗಾಗಿ 2014ರ ಹೊತ್ತಿಗೆ ರಮೇಶ್​ ಬಾಬು 200 ಕಾರುಗಳ ಒಡೆಯರಾಗಿ ಬಿಟ್ಟಿದ್ದರು..

ಅಂದಹಾಗೇ ರಮೇಶ್​ ಬಾಬು ಬಳಿ ಇರೋ ಕಾರುಗಳೆಲ್ಲಾ ಸಾಮಾನ್ಯ ಕಾರುಗಳಲ್ಲ..೨೦೦ ಕಾರುಗಳ ಪೈಕಿ 75 ಐಷಾರಾಮಿ ಕಾರುಗಳು, ೫ ಮತ್ತು ೧೦ ಸೀಟ್‌ಗಳ ಐಷಾರಾಮಿ ವ್ಯಾನ್​​ಗಳು, ಆಡೀ, BMW ಹಾಗೂ ಬೆನ್ಸ್ ಕಾರುಗಳು ಇವೆ. ಇತ್ತೀಚೆಗೆ ರಮೇಶ್​​ ಬಾಬುವಿನ ಕಾರ್​ ಬ್ಯುಸಿನೆಸ್​​ಗೆ ರಾಲ್​ ರಾಯ್ಸ್​ ಕೂಡ ಸೇರಿಕೊಂಡಿದೆ.

ರಮೇಶ್ ಬಾಬು ಅನಿವಾರ್ಯ ಕಾರಣಗಳಿಂದಾಗಿ ಚಿಕ್ಕ ವಯಸ್ಸಿನಲ್ಲೇ ತನ್ನ ವಿಧ್ಯಾಭ್ಯಾಸವನ್ನು ನಿಲ್ಲಿಸಿ ಕ್ಷೌರಿಕ ಉದ್ಯೋಗವನ್ನು ಮಾಡಬೇಕಾಯಿತು. ಸಂಸಾರದ ಹಿತದೃಷ್ಟಿಯಿಂದ ವಿಧ್ಯಾಭ್ಯಾಸವನ್ನು ನಿಲ್ಲಿಸಿ ಕ್ಷೌರಿಕ ಉದ್ಯೋಗ ಮಾಡಿದರು.. ಅದೆಷ್ಟೇ ಕಷ್ಟ ಬಂದ್ರೂ ಅದನ್ನು ಲೆಕ್ಕಿಸದ ರಮೇಶ್‌ಬಾಬು ತನ್ನ ದಿಟ್ಟತನವನ್ನು ಬಿಡದೆ ಮುಂದುವರೆದು ಈ ದಿನ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ರಮೇಶ್ ಬಾಬುವಿನ ಬಗೆ ಹಲವು ಟಿವಿ ಚಾನಲ್‌ಗಳು ಕೂಡ ವರದಿ ಮಾಡಿವೆ. ಎಲ್ಲೆ ಹೋದರು ಇವರು ತಮನ್ನು ಒಬ್ಬ ಕ್ಷೌರಿಕ ಎಂದು ಹೇಳಿಕೊಳ್ಳುವುದನ್ನು ಇನ್ನೂ ಮರೆತಿಲ್ಲ. ಕೋಟ್ಯಾಧಿಪತಿ ಬಾಬು ಬಿಚ್ಚಿಟ್ಟಿರುವ ಮನಸ ಮಾತು ಹೀಗಿದೆ..

ರಮೇಶ್ ಬಾಬುವಿನ ಆರಂಭದ ಕಷ್ಟದ ದಿನಗಳು

ನಾನು ಬಡ ಕುಟುಂಬದಲ್ಲಿ ಜನಿಸಿದ್ದೆ. ತಂದೆ ಕ್ಷೌರಿಕ. ನಾನು ೭ವರ್ಷ ಹುಡುಗನಾಗಿದ್ದಾಗಲೇ ಅವರು ೧೯೭೯ರಲ್ಲಿ ಮರಣ ಹೊಂದಿದರು. ನಂತರ ನನ್ನ ತಾಯಿ ಮನೆ ಕೆಲಸವನ್ನು ಮಾಡಿ ನಮ್ಮ ಸಂಸಾರವನ್ನು ಸರಿತೂಗಿಸುತಿದ್ದರು. ನನ್ನ ತಂದೆ ಕ್ಷೌರದ ಅಂಗಡಿಯನ್ನು ಮಾತ್ರ ನಮ್ಮ ಜೀವನ ನಡೆಸುವುದಕ್ಕೆ ಬಿಟ್ಟು ಹೋಗಿದ್ದರು. ಅದನ್ನು ನನ್ನ ಚಿಕ್ಕಪ್ಪ ನಡೆಸಿಕೊಂಡು ಹೋಗುತ್ತಿದರು ನಮಗೆ ದಿನಕ್ಕೆ ಕೇವಲ ೫ರೂಗಳನ್ನು ಮಾತ್ರ ಕೊಡುತ್ತಿದ್ದರು. ಅದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ನನ್ನ ಸಹೋದರ, ಸಹೋದರಿ ವಿಧ್ಯಾಭ್ಯಾಸ ಮತ್ತು ನನ್ನ ವಿಧ್ಯಾಭ್ಯಾಸ ಹಾಗೂ ಅವರ ಪಾಲನೆ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ನಾವು ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೆವು. ನಮ್ಮ ಸಂಸಾರ ತೂಗಿಸುವುದಕ್ಕಾಗಿ ಹೈಸ್ಕೂಲ್ ಹೋಗುವ ಹೊತ್ತಿಗೆ ಅಮ್ಮನ ಹೊರೆಯನ್ನು ಕಡಿಮೆ ಮಾಡಲು ಹಲವಾರು ಕೆಲಸಗಳನ್ನು ಮಾಡುತ್ತಿದ್ದೆ. ದಿನ ಬೆಳಿಗ್ಗೆ ದಿನ ಪತ್ರಿಕೆ,ಹಾಲು ಮಾರಾಟ ಮಾಡಿ ಅದರಿಂದ ಸ್ವಲ್ಪ ಹಣವನ್ನು ಸಂಪಾದಿಸಿ ಅಮ್ಮನಿಗೆ ಸಹಾಯ ಮಾಡುತ್ತಿದ್ದೆ. ಹೀಗೆ ಬಂದ ಹಣದಿಂದ ನನ್ನ ೧೦ನೇ ತರಗತಿ ಮುಗಿಸಿ ಪಿ . ಯು .ಸಿ ಗಾಗಿ ಸಂಜೆ ಕಾಲೇಜ್ ಗೆ ಸೇರಿಕೊಂಡೆ.

ಒಳ್ಳೆ ಸಮಯದ ಆರಂಭ..!

ನಾನು ಪಿಯುಸಿ ಓದುವ ಹೊತ್ತಿನಲ್ಲಿ ನನ್ನ ಅಮ್ಮನಿಗೂ ನನ್ನ ಚಿಕ್ಕಪ್ಪ ಗೂ ಸ್ವಲ್ಪ ಜಗಳ ಆಗಿ ನನ್ನ ಚಿಕ್ಕಪ್ಪ ಅಂಗಡಿ ಮುಚ್ಚಿ ಹೊರಟು ಹೋದರು. ಆವಾಗ ನಾನು ನನ್ನ ತಾಯಿಗೆ ನಾನೇ ಅಂಗಡಿ ನೋಡಿಕೊಳ್ಳುವದಾಗಿ ಹೇಳಿದೆ. ಆದರೆ ಅದು ಆಕೆಗೆ ಇಷ್ಟವಿರಲಿಲ್ಲ. ಆಕೆಗೆ ನಾನು ಓದಿನ ಕಡೆ ಗಮನ ಹರಿಸಬೇಕೆಂಬ ಆಸೆ ಇಟ್ಟಿದ್ದರು.ನನ್ನ ತಾಯಿಯ ಮನವೊಲಿಸುವ ಪ್ರಯತ್ನ ಆರಂಭಿಸಿದೆ. ಆಕೆಯನ್ನು ಒಪ್ಪಿಸಿ ನಾನು ಕ್ಷೌರಿಕ ಕೆಲಸವನ್ನು ಆರಂಭಿಸಿದೆ. ಬೆಳೆಗ್ಗೆ ಅಂಗಡಿಯಲ್ಲಿ ಕ್ಷೌರದ ಕೆಲಸ ಮಾಡುತ್ತಿದೆ . ಸಂಜೆ ಕಾಲೇಜ್ ಗೆ ಹೋಗುತ್ತಿದೆ. ರಾತ್ರಿ ಅಂಗಡಿಗೆ ಬಂದು ಮತ್ತೆ ರಾತ್ರಿ ಒಂದು ಗಂಟೆಯವರೆಗೂ ಕ್ಷೌರದ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ನನನ್ನು ಎಲ್ಲರೂ ಕ್ಷೌರಿಕ ಎಂದು ಕರೆಯಲು ಪ್ರಾರಂಭಿಸಿದರು. ಇಲ್ಲಿಂದಲೇ ನನ್ನ ವ್ಯಾಪಾರದ ತಂತ್ರಗಳ ಕಲಿಕೆ ಶುರುವಾಯಿತು.

ಜೀವನದ ದಿಕ್ಕು ಬದಲಿಸಿದ ಉಪಾಯ

೧೯೯೩ರಲ್ಲಿ ನನ್ನ ಚಿಕ್ಕಪ್ಪ ಒಂದು ಕಾರು ಕೊಂಡುಕೊಂಡರು. ಆವಾಗ ನನ್ನ ಮನಸ್ಸು ಜಾಗೃತಗೊಂಡಿತು. ನಾನು ಒಂದು ಕಾರು ಕೊಂಡುಕೊಳ್ಳಬೇಕೆಂಬ ಆಸೆಯಾಯಿತು. ಅದು ನನ್ನ ಚಿಕ್ಕಪ್ಪನಿಗಿಂತ ಒಳ್ಳೆ ಕಾರು ಖರೀದಿಸಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ನಾನು ಕ್ಷೌರಿಕ ಕೆಲಸದಿಂದ ಕೂಡಿಟ್ಟ ಸ್ವಲ್ಪ ಹಣ ಹಾಗೂ ಬ್ಯಾಂಕ್ ನಿಂದ ಸ್ವಲ್ಪ ಸಾಲ ತೆಗೆದುಕೊಂಡು ಕಾರು ಕೊಳ್ಳಲು ನಿರ್ಧರಿಸಿದೆ. ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳಲು ನನ್ನ ತಾತ ನನಗೆ ಸಹಾಯ ಮಾಡಿದ್ರು . ಅವರ ಆಸ್ತಿ ಪತ್ರ ಅಡವಿಟ್ಟು ನನಗೆ ಸಾಲ ಸಿಗುವಂತೆ ಮಾಡಿದರು. ಹೀಗೆ ನಾನು ಒಂದು ಮಾರುತಿ ಕಾರು ಖರೀದಿ ಮಾಡಿದೆ. ಆದರೆ ಸಾಲದ ಬಡ್ಡಿ ದರ ೬೮೦೦ ರೂಗಳನ್ನು ಭರಿಸಿವುದು ನನಗೆ ಕಷ್ಟವಾಯಿತು. ಆವಾಗ ನಂದಿನಿ ಅಕ್ಕ ನನಗೊಂದು ಸಲಹೆ ಕೊಟ್ಟರು. ನಂದಿನಿ ಅಕ್ಕ ನನ್ನ ತಾಯಿ ಕೆಲಸ ಮಾಡುತ್ತಿದ್ದ ಮನೆಯ ಒಡತಿ. ನೀನೇಕೆ ನಿನ್ನ ಕಾರನ್ನು ಬಾಡಿಗೆಗೆ ಬಿಡಬಾರದು ಎಂದು ಕೇಳಿದ್ದರು. ನಂದಿನ ಅಕ್ಕ ಹೇಳಿದ್ದು ಒಳ್ಳೆಯ ಉಪಾಯ ಅನ್ನಿಸಿತು. ನಾನು ನನ್ನ ಕಾರನ್ನು ಬಾಡಿಗೆಗೆ ಬಿಡಲು ನಿರ್ಧರಿಸಿದೆ . ನಂದಿನಿ ಅಕ್ಕ ನನಗೆ ವ್ಯಾಪಾರದ ಬಗ್ಗೆ ಹೇಳಿಕೊಟ್ಟ ಗುರು ಎಂದರೆ ತಪ್ಪಾಗಲಾರಾದು. ಅವರು ನನ್ನ ಜೀವನದಲ್ಲಿ ಪ್ರಮುಖ ವ್ಯಕ್ತಿ. ನಂದಿನಿ ಅಕ್ಕ ಅವರ ಮಗಳ ಮದುವೆಗೂ ನನ್ನನು ಕರೆದಿಂದರು ಹಾಗೂ ಎಲ್ಲ ಜನರಿಗೂ ನನ್ನನ್ನು ಪರಿಚಯ ಮಾಡಿಕೊಟ್ಟರು.

ಯಶಸ್ವಿ ವ್ಯಾಪಾರದ ಆರಂಭ 

೧೯೯೪ರಿಂದ ನಾನು ಕಾರು ಬಾಡಿಗೆ ವ್ಯಾಪಾರವನ್ನು ಗಂಭೀರವಾಗಿ ತೆಗೆದುಕೊಂಡೆ ನಂದಿನಿ ಅಕ್ಕ ಕೆಲಸ ಮಾಡುತಿದ್ದ ಇಂಟೆಲ್ ಕಂಪನಿಯಿಂದ ನನ್ನ ಮೊದಲ ಕಾರು ಬಾಡಿಗೆ ವ್ಯಾಪಾರವನ್ನು ಆರಂಭಿಸಿದೆ. ಕಾರು ಬಾಡಿಗೆ ಬಿಡಲು ನಂದಿನಿ ಅಕ್ಕ ತುಂಬಾ ಸಹಾಯ ಮಾಡಿದರು. ಅಲ್ಲಿಂದ ನನ್ನ ಒಳ್ಳೆ ದಿನಗಳು ಆರಂಭವಾಯಿತು. ಕಾರು ಬಾಡಿಗೆ ವ್ಯಾಪಾರ ವೇಗವಾಗಿ ಬೆಳೆಯಿತು. ಹೆಚ್ಚು ಗಳಿಕೆ ಆಯಿತು. ೨೦೦೪ರಲ್ಲಿ ನಾನು ಐದರಿಂದ ಆರು ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದೆ. ಅಂದು ಬೆಂಗಳೂರಿನಲ್ಲಿ ಕಾರು ಬಾಡಿಗೆ ವ್ಯಾಪಾರದಲ್ಲಿ ತುಂಬಾ ಸ್ಪರ್ಧೆ ಇತ್ತು. ಕಾರು ಬಾಡಿಗೆ ವ್ಯಾಪಾರವನ್ನು ಬೆಳೆಸಲು ಒಂದು ಯೋಚನೆ ಮಾಡಿದ್ದೆ. ಏನಾದರೂ ಹೊಸದಾಗಿ ಮಾಡಬೇಕು ಬೇರೆ ಯಾರು ಮಾಡಿರಬಾರದು ಎಂದು. ಅದಕ್ಕಾಗಿ ಐಷಾರಾಮಿ ಕಾರುಗಳು ಅಥವಾ ದೊಡ್ಡ ಕಾರುಗಳನ್ನು ಖರೀದಿ ಮಾಡಲು ಶುರು ಮಾಡಿದೆ.

ಸವಾಲುಗಳನ್ನು ಎದುರಿಸಲು ಸಜ್ಜು..!

ನಾನು ನನ್ನ ಮೊದಲ ಐಷಾರಾಮಿ ಕಾರನ್ನು ೨೦೦೪ರಲ್ಲಿ ತೆಗೆದುಕೊಂಡೆ ೨೦೦೪ರಲ್ಲೇ ಐಷಾರಾಮಿ ಕಾರು ಕೊಳ್ಳಲು ನಾಲ್ಕು ಮಿಲಿಯನ್ ಖರ್ಚಾಗಿತ್ತು . ಎಲ್ಲರೂ ನನಗೆ ನಾನು ತಪ್ಪು ಮಾಡಿದೆ ಎಂದು ಹೇಳಿದರು. ನನಗೂ ಸ್ವಲ್ಪ ಭಯ ಹಾಗೂ ಸಂಶಯ ಇತ್ತು. ಒಂದೊಂದು ಸಾರಿ ಕಾರು ಮಾರಿಬಿಡೋಣ ಅನ್ನಿಸಿತ್ತು. ಅವಾಗ ನಾನೆ ಮನಸ್ಸಿನಲ್ಲಿ ಧೈರ್ಯ ಮಾಡಿಕೊಂಡು ಕಷ್ಟಗಳನ್ನು ಎದುರಿಸಲು ಸಿದ್ಧನಾಗಿದ್ದೆ . ಅದೃಷ್ಟಾವತ್ ಅಂದು ಬೆಂಗಳೂರಿನಲ್ಲಿ ಬೇರೆ ಯಾವುದೇ ಕಾರು ಬಾಡಿಗೆ ವ್ಯಾಪಾರದ ಸೇವೆ ಐಷಾರಾಮಿ ಕಾರುಗಳನ್ನು ಹೊಂದಿರಲಿಲ್ಲ. ಇದು ನನಗೆ ವರದಾನವಾಯಿತು. ಬೆಂಗಳೂರಿನಲ್ಲಿ ಐಷಾರಾಮಿ ಕಾರನ್ನು ಬಾಡಿಗೆ ಸೇವೆಗೆ ಬಿಟ್ಟ ಮೊದಲ ವ್ಯಕ್ತಿ ನಾನೇ.

ನೀವು ವ್ಯಾಪಾರ ಮಾಡಬೇಕಾದರೆ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು

ನಾನು ೨೦೧೧ರಲ್ಲಿ ರೋಲ್ಸ್ ರಾಯ್ಸ್ ಕಾರು ಖರೀದಿಸಲು ನಿರ್ಧರಿಸಿದಾಗ ಎಲ್ಲರೂ ನನಗೆ ಎಚ್ಚರಿಸಿದರು. ಅಷ್ಟೊಂದು ಮೊತ್ತದ ಕಾರು ಏಕೆ ಕೊಂಡುಕೊಂಡೆ ..?ಏನಾದರೂ ವಿಫಲವಾದರೆ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದರು.. ಆದರೂ ನಾನು ಧೃತಿಗೆಡಲಿಲ್ಲ. ೨೦೦೪ರಲ್ಲೂ ಮೊದಲ ಐಷಾರಾಮಿ ಕಾರು ಕೊಂಡುಕೊಂಡಾಗಲು ಇಂತಹ ಸವಾಲುಗಳನ್ನು ಎದುರಿಸಿದ್ದೆ. ಮತ್ತೊಮ್ಮೆ ಏಕೆ ಎದುರಿಸಬಾರದು ಎಂದು ಗಟ್ಟಿ ಮನಸ್ಸು ಮಾಡಿ ಸುಮಾರು ನಾಲ್ಕು ಕೋಟಿ ವ್ಯಯ ಮಾಡಿ ರೋಲ್ಸ್ ರಾಯ್ಸ್ ಕಾರು ಕೊಂಡುಕೊಂಡೆ. ಅವಾಗಲೂ ಅದೃಷ್ಟ ನನ್ನ ಕೈ ಬಿಡಲಿಲ್ಲ . ಅದು ಕೂಡ ಲಾಭ ತಂದುಕೊಟ್ಟಿತು. ಮೂರು ವರ್ಷಗಳಲ್ಲಿ ತುಂಬಾ ಜನಪ್ರಿಯವೂ ಆಯಿತು. ಕಳೆದ ವರ್ಷ ಸಾಲದ ಕಂತುಗಳು ಕೂಡ ಮುಗಿದವು. ಕಳೆದ ವರ್ಷ ಸುಮಾರು ಮೂರು ಕೋಟಿ ರಸ್ತೆ ತೆರಿಗೆ ಕಟ್ಟಿದ್ದೆ. ಅಷ್ಟೊಂದು ಹಣವನ್ನು ಹೊಂದಿಸುವುದು ಸ್ವಲ್ಪ ಕಷ್ಟವಾಯಿತು. ಆಸ್ತಿ ಪತ್ರವನ್ನು ಅಡವಿಟ್ಟು ಹಣವನ್ನು ತೆಗೆದುಕೊಂಡು ತೆರಿಗೆ ಪಾವತಿ ಮಾಡಿದ್ದೆ. ನನಗೆ ಇವಾಗಲೂ ತಿಳಿದಿಲ್ಲ ತೆರಿಗೆ ಪಾವತಿ ಮಾಡಲು ಅಷ್ಟೊಂದು ಹಣವನು ಹೇಗೆ ಹೊಂದಿಸಿದ್ದೆ ಎಂದು. ನನಗೆ ನಂಬಿಕೆ ಇದೆ, ಇನ್ನೂ ಸ್ವಲ್ಪ ದಿನಗಳಲ್ಲಿ ಅದರಿಂದನು ಹೊರಗೆ ಬರುತ್ತೇನೆ. ೨೦೧೫ ರಲ್ಲಿ ಇನ್ನಷ್ಟು ಐಷಾರಾಮಿ ಕಾರುಗಳನ್ನು ಖರೀದಿ ಮಾಡಿ ಕಾರು ಬಾಡಿಗೆ ವ್ಯಾಪಾರವನ್ನು ವಿಸ್ತರಿಸುವ ಯೋಜನೆ ಇದೆ. ಶ್ರಮ ಹಾಗೂ ಅದೃಷ್ಟ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ರಮೇಶ್ ಬಾಬು ಹೇಳುತ್ತಾರೆ.