ಮಹಿಳೆರಿಗೆ ಕಿರಿಕಿರಿ ಮಾಡುವ ಪುಡಾರಿಗಳೇ ಹುಷಾರ್..! ಜೈಪುರದಲ್ಲಿ ರಚನೆಯಾಗಿದೆ ವಿಶೇಷ ಮಹಿಳಾ ಪೊಲೀಸ್ ಪಡೆ

ಟೀಮ್​ ವೈ.ಎಸ್​. ಕನ್ನಡ

ಮಹಿಳೆರಿಗೆ ಕಿರಿಕಿರಿ ಮಾಡುವ ಪುಡಾರಿಗಳೇ ಹುಷಾರ್..! ಜೈಪುರದಲ್ಲಿ ರಚನೆಯಾಗಿದೆ ವಿಶೇಷ ಮಹಿಳಾ ಪೊಲೀಸ್ ಪಡೆ

Sunday June 25, 2017,

2 min Read

ಮಹಿಳೆಯರ ರಕ್ಷಣೆಗೆ ಸರಕಾರ ವಿಶೇಷ ಕಾಳಜಿವಹಿಸುತ್ತಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾದಂತಹ ನಗರಗಳಲ್ಲಿ ಮಹಿಳೆಯರಿಗೆ ಹೆಚ್ಚು ರಕ್ಷಣೆ ಬೇಕಾಗಿದೆ. ಈ ಮಧ್ಯೆ ಪಿಂಕ್ ಪೊಲೀಸ್, ಮಹಿಳಾ ಪೊಲೀಸರು ಮಹಿಳೆಯರ ರಕ್ಷಣೆಗೆ ನಿಂತಿದ್ದಾರೆ. ಈಗ ಜೈಪುರ ನಗರದಲ್ಲಿ ಮಹಿಳೆಯರು ಭಯವಿಲ್ಲದೆ ಓಡಾಡಬಹುದು. ಅದಕ್ಕಾಗಿ ಸುಮಾರು 52 ಮಹಿಳಾ ಪೊಲೀಸರನ್ನು ನೇಮಕ ಮಾಡಲಾಗಿದೆ. ಜೈಪುರ ನಗರದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತವಾಗಿ ಮತ್ತು ಹೆಚ್ಚು ಭದ್ರತೆಯಿಂದ ಓಡಾಡುವಂತೆ ಮಾಡುವ ಸಲುವಾಗಿ ಸರಕಾರ ಈ ಕ್ರಮ ಕೈಗೊಂಡಿದೆ.

image


ರಾಜಸ್ಥಾನ ಸರಕಾರ ಮಾಡಿರುವ ಈ ವ್ಯವಸ್ಥೆ ಸಾಕಷ್ಟು ಪರಿಣಾಮ ಬೀರುವುದು ಖಚಿತ. ಮಹಿಳೆಯರಿಗೆ ಹೆಚ್ಚು ರಕ್ಷಣೆ ಕೊಡುವ ಜೊತೆಗೆ ಅವರ ಸ್ವಾತಂತ್ರ್ಯವನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ತಮ್ಮ, ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಯಾವುದೇ ಸಂಕೋಚವಿಲ್ಲದೆ ಅನುಭವಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಮಹಿಳಾ ರಕ್ಷಣಾ ಪೊಲೀಸ್ ಪಡೆ ವಿಶೇಷ ತರಬೇತಿಯನ್ನು ಪಡೆದುಕೊಂಡಿದೆ. ಮಾರ್ಷಿಯಲ್ ಆರ್ಟ್ಸ್ ಜೊತೆಗೆ ವೈರ್​ಲೆಸ್ ಸೆಟ್​​ಗಳು ಮತ್ತು ವಿಶೇಷ ತರಬೇತಿಯನ್ನು ನೀಡಲಾಗಿದೆ. ಜೈಪುರ ನಗರದ ಶಾಲೆ, ಕಾಲೇಜು, ದೇವಸ್ಥಾನ ಮತ್ತು ಪ್ರಸಿದ್ಧ ಸ್ಥಳಗಳಲ್ಲಿ ಮಹಿಳಾ ರಕ್ಷಣಾ ವಿಶೇಷ ಪಡೆ ಕಾರ್ಯನಿರ್ವಹಿಸಲಿದೆ. ದ್ವಿಚಕ್ರ ವಾಹನಗಳಲ್ಲಿ ಇವರು ಕಾರ್ಯ ನಿರ್ವಹಿಸಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 10 ಗಂಟೆ ತನಕ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನು ಓದಿ: ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

ಅಂದಹಾಗೇ, ಈ ಮಹಿಳಾ ಪೊಲೀಸರು, ಪಾರ್ಕ್​ಗಳಲ್ಲಿ ಅಥವಾ ಮಾಲ್​ಗಳಲ್ಲಿ ಸುತ್ತಾಡುವ ಜೋಡಿಯ ತಂಟೆಗೆ ಹೋಗುವುದಿಲ್ಲ. ಆದ್ರೆ ಅತಿಯಾದ ಹುಚ್ಚುತನ ಮೆರೆಯುವವರಿಗೆ ಮತ್ತು ಮಾತಿನನಲ್ಲಿ ಮಹಿಳೆಯರನ್ನು ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಅಷ್ಟೇ ಅಲ್ಲ ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಈ ವಿಶೇಷ ಪೊಲೀಸ್ ಪಡೆ ಬರಲಿದೆ. 

ಜೈಪುರದಲ್ಲಿ ಆರಂಭವಾಗಿರುವ ಈಗ ವ್ಯವಸ್ಥೆ ನಿಜವಾಗಿಯೂ ಸಾಕಷ್ಟು ಮಹಿಳೆಯರಿಗೆ ಹೆಚ್ಚು ಆತ್ಮವಿಶ್ವಾಸ ನೀಡಲಿದೆ. ಮಹಿಳೆಯರನ್ನು ನಿಂದಿಸುವ ಪುಂಡ ಪೋಕರಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಮಹಿಳೆಯರ ಸ್ವಾತಂತ್ರ್ಯ ರಕ್ಷಣೆಯಾಗಲಿದೆ.

ಅಚ್ಚರಿ ಅಂದ್ರೆ ಇತ್ತೀಚೆಗೆ ಜೈಪುರವನ್ನು ಮಹಿಳೆಯರ ಪಾಲಿಗೆ ಮಾರಕ ನಗರ ಎಂದು ಕರೆಯಲಾಗಿತ್ತು. ಆದ್ರೆ ರಾಜಸ್ಥಾನ ಸರಕಾರ ಆ ಕಪ್ಪುಚುಕ್ಕೆಯನ್ನು ಅಳಿಸಿ ಹಾಕಲು ಈ ಯೋಜನೆ ಕೈಗೊಂಡಿದೆ. ಜೈಪುರದಲ್ಲಿ ಆರಂಭವಾಗಿರುವ ಈ ಲೇಡಿ ಪೊಲೀಸ್ ಪೆಟ್ರೋಲಿಂಗ್ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ವಿಸ್ತರಣೆಯಾಗಲಿದೆ. ಒಟ್ಟಿನಲ್ಲಿ ಮಹಿಳೆಯರ ರಕ್ಷಣೆಗೆ ವಿಶೇಷ ತಂಡಗಳು ರಚನೆಯಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರವೇ ಸರಿ. 

ಇದನ್ನು ಓದಿ:

1. 10ನೇ ಕ್ಲಾಸ್ ವಿದ್ಯಾರ್ಥಿಯ ಉತ್ಕೃಷ್ಟ ಯೋಜನೆ- ಸ್ವಚ್ಛಭಾರತ ಅಭಿಯಾನಕ್ಕೆ ವಿಭಿನ್ನ ಕೊಡುಗೆ

2. ಅಭಿವೃದ್ಧಿಯ ಕನಸಿಗೆ ಅಡ್ಡಿಯಾಗುತ್ತಿದೆ ಬಡತನ

3. ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ