ಆನ್​​ಲೈನ್​​ನಲ್ಲಿ ಇಟ್ಟಿಗೆ ಮರಳು, ಮತ್ತು ಕಟ್ಟಡ ಸಾಮಾಗ್ರಿಗಳು..!

ಉಷಾ ಹರೀಶ್​​

0

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇಂಟರ್​​ನೆಟ್ ಒಂದಿದ್ದರೆ ಸಾಕು ಏನನ್ನು ಬೇಕಾದರು ಕೊಳ್ಳಬಹುದು. ಅಕ್ಕಿ ಬೇಳೆ, ಶರ್ಟ್​, ಪ್ಯಾಂಟು, ಮೊಬೈಲ್ ಎಲ್ಲವನ್ನೂ ಅಂಗಡಿಗೆ ಹೋಗಿ ತರುವ ಪ್ರಮೇಯವೇ ಇಲ್ಲ. ಎಲ್ಲವೂ ಆನ್​​ಲೈನ್​​​ನಲ್ಲೇ ಸಿಗುತ್ತದೆ. ಇಂದು ಬುಕ್ ಮಾಡಿದರೆ ನಾಳೆ ಅಥವಾ ನಾಡಿದ್ದು ನಿಮ್ಮ ಕೈಯಲ್ಲಿರುತ್ತದೆ. ಆನ್​​ಲೈನ್​​ ವ್ಯಾಪಾರದಿಂದ ಸಾಕಷ್ಟು ಕಂಪನಿಗಳು ನೂರಾರು ಕೋಟಿ ರೂಪಾಯಿ ಲಾಭಗಳಿಸಿವೆ. ಇಂತಹ ಆನ್​ಲೈನ್​​ ಮಾರುಕಟ್ಟೆಗೆ ಇದೀಗ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಾಗ್ರಿಗಳು ಲಗ್ಗೆ ಇಟ್ಟಿವೆ.

ಹೌದು ಎಂ ಸಪ್ಲೈ ಡಾಟ್ ಕಾಮ್ (msupply.com) ಎಂಬ ಜಾಲತಾಣದಲ್ಲಿ ಒಂದು ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಸಲಕರಣೆಗಳು ಸಿಗುತ್ತಿವೆ. ನಗರ ಪ್ರದೇಶದಲ್ಲಿ ಅದರಲ್ಲೂ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಕಟ್ಟಡ ಕಟ್ಟುವುದು ಮತ್ತು ನವೀಕರಣಗೊಳಸಿವುದು ಬಹಳ ತ್ರಾಸದಾಯಕ ಕೆಲಸವೇ ಸರಿ. ಅಂತವರಿಗಾಗಿ ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ತಲುಪಿಸಲು ಪ್ರಾರಂಭವಾಗಿರುವುದೇ ಈ ಎಂ ಸಪ್ಲೈ ಡಾಟ್ ಕಾಮ್.

ಮನೆಯನ್ನು ಅಥವಾ ಅಪಾರ್ಟ್​ಮೆಂಟ್​​ನ್ನು ನವೀಕರಣಗೊಳಸುವ ಐಡಿಯಾ ಇದ್ದರೆ ಉತ್ಕೃಷ್ಟ ಗುಣಮಟ್ಟದ ವಸ್ತುಗಳು ಎಂ ಸಪ್ಲೈ ಡಾಟ್ ಕಾಂನಲ್ಲಿ ಲಭ್ಯವಿದೆ. ಹೊಸ ಕಟ್ಟಡಕ್ಕೆ ಬೇಕಾಗುವ ಇಟ್ಟಿಗೆ, ಕಬ್ಬಿಣ, ಸಿಮೇಂಟ್, ಮರಳು, ವಿದ್ಯುತ್ ಸಂಪರ್ಕಕ್ಕೆ ಬೇಕಾಗುವ ಸಾಮಾಗ್ರಿಗಳು, ವಾಟರ್ ಟ್ಯಾಂಕ್, ನಲ್ಲಿಗಳು, ವಾಷ್ ಬೇಸಿನ್​​ಗಳು, ಗ್ರಾನೈಟ್ಸ್ ಎಲ್ಲವೂ ಇಲ್ಲಿ ಲಭ್ಯ.

ಸಂಪರ್ಕಿಸುವುದು ಹೇಗೆ

ಎಂ ಸಪ್ಲೈ ಡಾಟ್ ಕಾಮ್ನ ವೆಬ್ ಸೈಟ್​​ಗೆ ಹೋಗಿ ಲಾಗ್ ಇನ್ ಆದರೆ ಸಾಕು ಅಲ್ಲಿ ನಿಮಗೆ ಬೇಕಾಗುವ ವಸ್ತುಗಳ ಪಟ್ಟಿಯೇ ನಿಮಗೆ ಸಿಗುತ್ತದೆ. ಅಲ್ಲಿ ನೀವು ನಿಮ್ಮ ವಿವರ ಮತ್ತು ಸಂಪರ್ಕ ಸಂಖ್ಯೆಯನ್ನು ಅಲ್ಲಿ ನಮೂದಿಸಿ ನಿಮಗೆ ಏನು ಬೇಕೊ ಅದನ್ನು ಆರಿಸಿಕೊಳ್ಳಬಹುದು.

ಬಡಗಿ, ಇಂಟಿರಿಯರ್ ಡೆಕೋರೆಟರ್ಸ್ ಕೂಡಾ ಲಭ್ಯ..!

ಒಂದು ಮನೆಯ ನಿರ್ಮಾಣ ಕೆಲಸ ಬಡಗಿಯಿಲ್ಲದೇ ಯಾವುದೇ ಕಾರಣಕ್ಕೂ ಮುಗಿಯುವುದಿಲ್ಲ. ಆದರೆ ಬಡಗಿಗಳು ಬರದೇ ಸಾಕಷ್ಟು ಕಟ್ಟಡ ಕೆಲಸಗಳು ಅರ್ಧಕ್ಕೆ ನಿಂತಿರುತ್ತವೆ. ಅಂತಹ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಎಂ ಸಪ್ಲೈ ಡಾಟ್ ಕಾಮ್ ಬರುತ್ತದೆ. ನಿಮ್ಮ ಕಟ್ಟಡ ಕೆಲಸಕ್ಕೆ ಬಡಗಿಯನ್ನು ಈ ಜಾಲತಾಣದ ಮೂಲಕ ಅವರು ನೀಡುತ್ತಾರೆ. ಇನ್ನು ಇಂಟಿರಿಯರ್ ಡಿಸಿನೈರ್ ಸಹ ಇವರ ಬಳಿ ಇದ್ದು ಅವರ ಸೇವೆಯನ್ನು ನೀವು ಪಡೆಯಬಹುದು. ಉತ್ತಮ ಗುಣಮಟ್ಟದ ಮತ್ತು ಉತ್ತಮ ಕಾಲೇಜಿನಲ್ಲಿ ಕೋರ್ಸ್ ಮಾಡಿದ ಇಂಟಿರಿಯರ್ ಡಿಸೈನರ್​​ಗಳನ್ನು ಎಂ ಸಪ್ಲೈ ಡಾಟ್ ಕಾಂ ವತಿಯಿಂದ ನಿಮಗೆ ಅವಶ್ಯಕತೆ ಇದ್ದರೆ ನಿಮಗೆ ಕಳುಹಿಸಿಕೊಡುತ್ತಾರೆ. ನಿಮ್ಮದು ಖಾಲಿ ಜಾಗವಿದ್ದು ಕಟ್ಟಡ ಕಟ್ಟಲು ಯೋಚನೆ ಮಾಡುತ್ತಿದ್ದರೆ ನೀವು ಎಂ ಸಪ್ಲೈ ಡಾಟ್ ಕಾಮ್​​ನ್ನು ಸಂಪರ್ಕಿಸಿದರೆ ಸಾಕು ಅವರು ಬಿಲ್ಡರ್​​ಗಳನ್ನು ನಿಮಗೆ ಒದಗಿಸಿಕೊಡುತ್ತಾರೆ. 2020ರ ವೇಳೆಗೆ ಭಾರತದ ಬಹುದೊಡ್ಡ ಕಟ್ಟಡ ಸಾಮಾಗ್ರಿ ಮಾರಾಟ ಜಾಲತಾಣವಾಗಬೇಕು ಎಂಬ ಉದ್ದೇಶವಿಟ್ಟುಕೊಂಡಿರುವ, ಈ ಜಾಲತಾಣದ ಉಸ್ತುವಾರಿಯನ್ನು ಈಶ್ವರ್ ಸುಬ್ರಹ್ಮಣ್ಯನ್, ಟಿಜಿಸಿ ಪ್ರಸಾದ್, ಸುಬ್ರತೋ ಚೌದರಿ, ಕಪಿಲ್ ಭಾಟಿಯಾದಂತಹ ಉತ್ತಮ ತಂತ್ರಜ್ಞರ ತಂಡ ನೋಡಿಕೊಳ್ಳುತ್ತಿದೆ. ಈ ಜಾಲ ತಾಣ ಈಗ ಮೊಬೈಲ್ ಆ್ಯಪ್ ರೂಪದಲ್ಲಿಯೂ ಲಭ್ಯ. ಒಟ್ಟಿನಲ್ಲಿ ಕಟ್ಟಡ ಕಟ್ಟಬೇಕೆನ್ನುವವರಿಗೆ ಉತ್ತಮ ವೇದಿಕೆಯಾಗಿ ಎಂ ಸಪ್ಲೈ ಡಾಟ್ ಕಾಮ್ ಕೆಲಸ ಮಾಡುತ್ತದೆ. ಮತ್ತಿನ್ಯಾಕೆ ತಡ ಹೊಸ ಕಟ್ಟಡದ ಪ್ಲಾನಿಂಗ್​​ನಲ್ಲಿದ್ದರೆ http://www.msupply.com/ಗೆ ಬೇಟಿ ನೀಡಿ.


Related Stories