ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟದ ಅವಕಾಶಕ್ಕಾಗಿ ಕಾಯುತ್ತಿದೆ ಮುಂಬೈ ಮೂಲದ ಬಿಗ್‍ಸ್ಟೈಲಿಸ್ಟ್:

ಟೀಮ್​​ ವೈ.ಎಸ್​​.

0

ಭಾರತದಲ್ಲಿ ಕ್ರಮೇಣವಾಗಿ ಅಂತರ್ಜಾಲ ಕೇಂದ್ರಿತ ಹಾಗೂ ಮನೆ ಬಾಗಿಲಿಗೆ ಡೆಲಿವರಿ ನೀಡುವ ಉತ್ಪನ್ನಗಳ ವಹಿವಾಟಿಗೆ ಬೇಡಿಕೆ ಹೆಚ್ಚಾಗುತ್ತಿದೆ.. ಜವಳಿ ಉದ್ಯಮದ ಜೊತೆ ನಿತ್ಯದ ದಿನಸಿ ಹಾಗೂ ಇನ್ನಿತರೆ ಉತ್ಪನ್ನಗಳು ಆನ್‍ಲೈನ್ ವ್ಯಾಪಾರದ ಸರಕಾಗುತ್ತಿವೆ.. ಸ್ಮಾರ್ಟ್‍ಫೋನ್‍ನಲ್ಲಿ ಎರಡು ಮೂರು ಸಲ ಬೆರಳಾಡಿಸಿದರೆ ಸಾಕು ಆರ್ಡರ್ ಮಾಡಿದ ಉತ್ಪನ್ನ ಮನೆ ಬಾಗಿಲಿಗೆ ಬರುತ್ತದೆ.. ಆನ್‍ಲೈನ್ ದಿನಸಿ ವ್ಯಾಪಾರ, ಆನ್‍ಲೈನ್ ಟ್ಯಾಕ್ಸಿ ಬುಕಿಂಗ್ ಹಾಗೂ ಆನ್‍ಲೈನ್ ಜವಳಿ ಉತ್ಪನ್ನಗಳ ಮಾರಾಟದ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಆನ್‍ಲೈನ್ ಸೌಂದರ್ಯ ವರ್ಧಕ ಉತ್ಪನ್ನಗಳ ವಹಿವಾಟು.. ಸೌಂದರ್ಯ ವಿನ್ಯಾಸಕಿ ರೀಚಾ ಸಿಂಗ್ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.. ಸೌಂದರ್ಯ ವಿನ್ಯಾಸ ಮಾಡುವ ವೃತ್ತಿಪರ ಬ್ಯೂಟಿಶಿಯನ್‍ಗಳ ಸೌಲಭ್ಯಗಳನ್ನು ಸರಳೀಕರಿಸಲು ರೀಚಾ, ಸೌಂದರ್ಯ ವರ್ಧಕಗಳಿಗೆ ಮಾರುಕಟ್ಟೆ ಸೃಷ್ಟಿಸಿದ್ದಾರೆ..

ಪ್ರಸ್ತುತ ಭಾರತದಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳ ಸೇವೆ ಅಲ್ಲಲ್ಲಿ ಹರಡಿಕೊಂಡಿದ್ದು, ತುಟ್ಟಿ ಹಾಗೂ ಅನಿಯಮಿತವಾಗಿದೆ.. ಪ್ರತೀ ಸಲ ಈ ರೀತಿಯ ಅಸೌಕರ್ಯಗಳಿಂದ ತಮ್ಮ ನಗರದಲ್ಲೇ ವೃತ್ತಿಪರ ಬ್ಯೂಟಿಶಿಯನ್‍ಗಳ ತೊಂದರೆ ಅನುಭವಿಸಿದ್ದರು ರಿಚಾ ಹಾಗೂ ದೀಪ್ಷಿಕಾ.. ಆಗಲೆ ಅವರಿಗೆ ಸೌಂದರ್ಯ ಉತ್ಪನ್ನಗಳ ಅಭಾವದ ಪ್ರಭಾವ ತಿಳಿದಿದ್ದು..

ಬಿಗ್‍ಸ್ಟೈಲಿಸ್ಟ್​​ ಉಗಮ:

ಐಐಟಿ ಖರಗ್‍ಪುರ್‍ನಲ್ಲಿ ತಮ್ಮ ಪದವಿ ವಿದ್ಯಾಭ್ಯಾಸ ನಡೆಸುತ್ತಿರುವಾಗ ಈ ವಿಚಾರ ಮನಗಂಡ ರೀಚಾ ಪ್ರಕಾರ ಸುಲಭ ಹಾಗೂ ಕೈಗೆಟುಕುವ ಧರದಲ್ಲಿ ಉತ್ತಮ ಬ್ಯೂಟಿ ಪಾರ್ಲರ್‍ಗಳನ್ನು ಹುಡುಕುವುದೇ ತರುಣಿಯೊಬ್ಬಳ ದೊಡ್ಡ ಸಮಸ್ಯೆಯಾಗಿತ್ತು.. ಆ ಸಂದರ್ಭದಲ್ಲಿ ಸಣ್ಣ ಪುಟ್ಟ ಬ್ಯೂಟಿ ಪಾರ್ಲರ್‍ಗಳ ಅವ್ಯವಸ್ಥೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ.. ಹೀಗಾಗಿ ಖರಗ್‍ಪುರದಲ್ಲಿ ಕಲಿಯುತ್ತಿದ್ದವರಲ್ಲಿ ಕೆಲವು ತರುಣಿಯರು ಕೇಶ ವಿನ್ಯಾಸಕ್ಕಾಗಿಯೇ ಕೋಲ್ಕತ್ತಾಗೆ ಹೋಗಬೇಕಾಗಿ ಬರುತ್ತಿತ್ತು.. ಪದವಿ ಕಲಿತ ಬಳಿಕ ರೀಚಾ ಭಾರತದ ಇನ್ನೂ ಕೆಲವು ಪಟ್ಟಣಗಳಲ್ಲಿ ಇದೇ ಪರಿಸ್ಥಿತಿ ಇರುವುದನ್ನು ಗಮನಿಸಿದ್ದರು..

ಈ ಬಗ್ಗೆ ಪರಿಣಿತರು ಹಾಗೂ ಹಣಕಾಸಿನ ಮೂಲಗಳಿಗೆ ಯೋಜನೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭಿಸಿದ್ದಾಗಿ, ಹಾಗೂ ಆ ತೊಂದರೆ ಈಗಲೂ ಮುಂದುವರೆಯುತ್ತಲೇ ಇದೆ ಅನ್ನುವುದಾಗಿ ರೀಚಾ ಹೇಳಿದ್ದಾರೆ..

ಬಿಗ್‍ಸ್ಟೈಲಿಸ್ಟ್ ಆರಂಭಿಸುವ ಉದ್ದೇಶದಿಂದ ರೀಚಾ ವ್ಯಾವಹಾರಿಕ ಪರಿಣಿತ ಸಂಸ್ಥೆಗಳಾದ ಕ್ಯಾಪಿಟಲ್ ಒನ್ ಹಾಗೂ ಓಲಿವರ್ ವೈಮ್ಯಾನ್‍ಗಳಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡರು.. ಈ ವೇಳೆ ಚಿನ್ಮಯ ಶರ್ಮ ಹಾಗೂ ಅನುರಾಗ್ ಶ್ರೀವಾತ್ಸವ್ ರೀಚಾ ಜೊತೆ ಸೇರಿ ಸಹ ಸಂಸ್ಥಾಪಕರಾಗಿ ಗುರುತಿಸಿಕೊಂಡರು ಹಾಗೂ ತಾಂತ್ರಿಕ ಹಾಗೂ ಕಾರ್ಯಾಚರಣೆಯ ವಿಭಾಗಗಳನ್ನು ನಿರ್ವಹಿಸತೊಡಗಿದರು..

ಎಡದಿಂದ ಬಲಕ್ಕೆ ರಿಚಾ, ಚಿನ್ಮಯ ಮತ್ತು ಅನುರಾಗ್​​
ಎಡದಿಂದ ಬಲಕ್ಕೆ ರಿಚಾ, ಚಿನ್ಮಯ ಮತ್ತು ಅನುರಾಗ್​​

ಐಐಟಿ ಹಾಗೂ ಐಐಎಮ್ ಬೆಂಗಳೂರಿನಲ್ಲಿ ಕಲಿತ ಚಿನ್ಮಯ ಶರ್ಮ ವಿವಿಧ ಸಂಸ್ಥೆಗಳಲ್ಲಿ 4 ವರ್ಷ ಕೆಲಸ ಮಾಡಿದ್ದ ಅನುಭವ ಹಾಗೂ ಪ್ರಾವಿಣ್ಯ ಹೊಂದಿದ್ದಾರೆ.. ಹೈದರಾಬಾದ್ ಮೂಲದ ಪ್ರತಿಭೆ ಅನುರಾಗ್ ಸಹ ಎಡಿಜಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.. ಪ್ರಾಥಮಿಕ ಹಂತದ ಮಾರುಕಟ್ಟೆ ಅಧ್ಯಯನಗಳ ಮೂಲಕ ತಮ್ಮ ಯೋಜನೆಯ ಮುಖ್ಯ ಸಾದಕ ಭಾದಕಗಳನ್ನು ಚರ್ಚಿಸಿದ ಈ ಮೂವರು ಅಂತಿಮವಾಗಿ ಬಿಗ್‍ಸ್ಟೈಲಿಸ್ಟ್‍ಗೆ ಮೂರ್ತರೂಪ ಒದಗಿಸಿದರು..

ಜನರಿಗೆ ಅವರ ಮನೆಯಲ್ಲಿಯೇ ಸರಳವಾಗಿ ಉಪಯೋಗಿಸಿ, ಸುಲಭವಾಗಿ ಹಾಗೂ ಉತ್ತಮವಾಗಿ ಬಳಸಬಲ್ಲ ಸೌಂದರ್ಯ ವರ್ಧಕಗಳನ್ನು ನೀಡುವುದೇ ನಮ್ಮ ಮೂಲ ಉದ್ದೇಶವಾಗಿತ್ತು.. ಹಾಗಾಗಿ ಈ ನಿಟ್ಟಿನಲ್ಲಿ ಸೌಂದರ್ಯ ವಿನ್ಯಾಸಕ್ಕಾಗಿ ಬೇರೆ ನಗರಗಳಿಗೆ ಹುಡುಕಿಕೊಂಡು ಹೋಗುವ ಕಷ್ಟ ತಪ್ಪಿಸಲು ಬೆಗ್‍ಸ್ಟೈಲಿಸ್ಟ್ ತನ್ನ ಪ್ಲಾಟ್‍ಫಾರ್ಮ್ ಹಾಕಿಕೊಂಡಿತು ಅಂತಾರೆ ಚಿನ್ಮಯ ಶರ್ಮ.

ಸೌಂದರ್ಯ ವರ್ಧಕ ಪರಿಕರಗಳ ಸದ್ಯದ ಅವಕಾಶ, ಸೆಳೆತ ಹಾಗೂ ಸವಾಲುಗಳು:

2015ರ ಮೇನಲ್ಲಿ ಮುಂಬೈನಲ್ಲಿ ಶುರುವಾದ ಈ ಬಿಗ್‍ಸ್ಟೈಲಿಸ್ಟ್ ಪ್ರಸ್ತುತ ಪ್ರತೀ ತಿಂಗಳು ಸುಮಾರು 100 ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದು, ಪ್ರತೀ ಸೇವೆಗಳಿಗೆ ಸರಾಸರಿ 1200 ರೂಪಾಯಿಯಂತೆ ಚಾರ್ಜ್ ಮಾಡುತ್ತಿದೆ.. ಇಲ್ಲೀತನಕ ಸಂಸ್ಥೆಯನ್ನು ಸಂಸ್ಥಾಪಕರ ಮೂಲ ಬಂಡವಾಳದೊಂದಿಗೆ ನಡೆಸಲಾಗುತ್ತಿದೆ ಅಂದಿರುವ ರೀಚಾ ಈಗಾಗಲೆ ಸಂಸ್ಥೆಯ ಬೆಳವಣಿಗೆಗೆ ಕೆಲವು ಬಂಡವಾಳ ಹೂಡಿಕೆದಾರರ ಬಳಿ ಮಾತುಕಥೆ ನಡೆಸಲಾಗುತ್ತಿದೆ ಅಂದಿದ್ದಾರೆ..

ಮುಂಬರುವ ದಿನಗಳಲ್ಲಿ ಬಿಗ್‍ಸ್ಟೈಲಿಸ್ಟ್ ಸಂಸ್ಥೆ ನಿಮ್ಮದೇ ನಗರದಲ್ಲಿಯೇ ನೀವಿರುವ ಜಾಗದಲ್ಲೇ, ನಿಮ್ಮ ಅಕ್ಕಪಕ್ಕದಲ್ಲೇ ಅತ್ಯುತ್ತಮ ಬ್ಯೂಟಿಶಿಯನ್ ಸೇವೆಗಳನ್ನು ಒದಗಿಸಿ ಸೌಂದರ್ಯ ವರ್ಧಕಗಳನ್ನು ನೀಡಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರೀಚಾ. ಮುಂದೊಂದು ದಿನ ನೀವು ಬ್ಯೂಟಿ ಪಾರ್ಲರ್​​ಗೆ ಹೋಗಿ ಬರ್ಬೆಕಲ್ಲಾ ಅಂತ ಹೇಳುವ ಹಾಗಿಲ್ಲ. ನಿಮ್ಮ ಮನೆ ಮುಂದೆಯೇ ಬ್ಯೂಟಿಷಿಯನ್​​ಗಳು ಹಾಜರಾಗಿ ಬಿಡುತ್ತಾರೆ..!