ಭಾರತದ ರಸ್ತೆಗಳಿಗೆ ಹೊಸ ಪ್ಲಾನ್- ರಿಪೇರಿ ಇಲ್ಲದ ರೋಡ್​ಗಳಿಗೆ ಬ್ಲೂ ಪ್ರಿಂಟ್​

ಟೀಮ್​ ವೈ.ಎಸ್​. ಕನ್ನಡ

1

ಯಾವುದೇ ಕಡೆ ಹೋದರೂ ಭಾರತದಲ್ಲಿನ ರಸ್ತೆಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಕೆಟ್ಟ ರಸ್ತೆಗಳು ಪ್ರಯಾಣಿಕರ ಪ್ರಾಣ ಹಿಂಡುತ್ತಿವೆ. ಕೆಟ್ಟ ರಸ್ತೆಗಳು ಎಲ್ಲಾ ಅಭಿವೃದ್ಧಿಗಳನ್ನು ಒಂದೇ ಏಟಿನಲ್ಲಿ ಹುರಿದು ಮುಕ್ಕುತ್ತವೆ. ಆದ್ರೆ ರಸ್ತೆಗಳ ಅಭಿವೃದ್ಧಿಗೆ ಹೊಸ ಐಡಿಯಾ ಒಂದು ಸಿಕ್ಕಿದೆ.

ನೆಮ್​ಕುಮಾರ್ ಬಂಟಿಯಾ, ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಪ್ರೊಫೆಸರ್. ಆದ್ರೆ ಈ ನೆಮ್​ಕುಮಾರ್​ಗೆ ಭಾರತದ ರಸ್ತೆಗಳನ್ನು ರಿಪೇರಿ ಮಾಡುವ ಕನಸಿತ್ತು. ಇದಕ್ಕಾಗಿ ಇವರು ಕಂಡು ಹಿಡಿದಿದ್ದು ಹೊಸ ತಂತ್ರಜ್ಞಾನ. ನೇಮ್​ಕುಮಾರ್ ತಂತ್ರಜ್ಞಾನದ ಪ್ರಕಾರ ನಿರ್ಮಾಣವಾದ ರಸ್ತೆಗಳು ಕೆಟ್ಟು ಹೋದ್ರೆ ಅವು ತನ್ನಿಂದ ತಾನೇ ರಿಪೇರಿ ಆಗುತ್ತವೆ. ಈ ತಂತ್ರಜ್ಞಾನದ ಪ್ರಕಾರ ನಿರ್ಮಾಣವಾಗುವ ರಸ್ತೆಗಳ ವೆಚ್ಚ ಕಡಿಮೆ ಇದ್ದು, ಬಾಳ್ವಿಕೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ ಇವುಗಳು ಪರಿಸರ ಸ್ನೇಹಿ ರಸ್ತೆಗಳಾಗಿರುತ್ತವೆ.

ಫ್ರೊಫೆಸರ್ ನೆಮ್​ಕುಮಾರ್ 34 ವರ್ಷಗಳ ಹಿಂದೆ ದೆಹಲಿಯ ಐಐಟಿಯಲ್ಲಿ ಪದವಿ ಪಡೆದು ಕೆನಾಡದಲ್ಲಿ ವೃತ್ತಿ ಆರಂಭಿಸಿದ್ದರು. ಸದ್ಯ ನೆಮ್​ಕುಮಾರ್ ವ್ಯಾಂಕೋವರ್​ನಲ್ಲಿರುವ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 2014ರಿಂದ ನೆಮ್​ಕುಮಾರ್ ಮತ್ತು ಅವರ ತಂಡ ರಸ್ತೆಗಳ ಬಗೆಗಿನ ತಂತ್ರಜ್ಞಾನವನ್ನು ಪರೀಕ್ಷೆ ಮಾಡಲು ಬೆಂಗಳೂರಿನಿಂದ 90 ಕಿಲೋಮೀಟರ್ ದೂರದಲ್ಲಿರುವ ತೊಂಡೆಬಾವಿಯಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ.

ಇದನ್ನು ಓದಿ: "ಧ್ರುವ"ತಾರೆ ಬಗ್ಗೆ ನಿಮಗೆಷ್ಟು ಗೊತ್ತು..?

ನೆಮ್​ಕುಮಾರ್ ತಂತ್ರಜ್ಞಾನದ ಪ್ರಕಾರ ನಿರ್ಮಾಣಗೊಂಡ ರಸ್ತೆಗಳು ಮಾಮೂಲಿ ರಸ್ತೆಗಿಂತ ಶೆಕಡಾ 60ರಷ್ಟು ಪ್ರತಿಶತ ತೆಳ್ಳಗಿರುತ್ತದೆ. ಹೀಗಾಗಿ ಖರ್ಚುಗಳು ಕೂಡ ಕಡಿಮೆ ಇರುತ್ತದೆ. ನೆಮ್​ಕುಮಾರ್ ತಂತ್ರಜ್ಞಾನದ ಪ್ರಕಾರ ನಿರ್ಮಾಣಗೊಳ್ಳುವ ಬಹುತೇಕ ರಸ್ತೆಗಳು ಸಿಮೆಂಟ್ ರಸ್ತೆಗಳೇ ಆಗಿದ್ದರು, ಅದ್ರಲ್ಲಿ ಫ್ಲಾಶ್ ಮತ್ತು ಕಾರ್ಬನ್ ಅಂಶಗಳು ಹೆಚ್ಚಾಗಿರುತ್ತವೆ. ಹೀಗಾಗಿ ಈ ರಸ್ತೆಗಳು ಮಾಮೂಲಿ ರಸ್ತೆಗಳಿಗಿಂತ ವಿಭಿನ್ನವಾಗಿದೆ.

“ ಈ ರಸ್ತೆಗಳು ಫೈಬರ್ ಮತ್ತು ಹೈಡ್ರೋಫಿಲಿಕ್​ನ ನ್ಯಾನೋ ಕೋಟಿಂಗ್​ ಹೊಂದಿರಲಿವೆ. ಹೈಡ್ರೋಫಿಲಿಯಾ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ರಸ್ತೆ ಬಿರುಕುಗಳನ್ನು ಒಂದುಗೂಡಿಸಲು ಸಹಾಯ ಮಾಡುತ್ತದೆ. ಈ ಕೆಮಿಕಲ್ ರಿಯಾಕ್ಷನ್ ರಸ್ತೆಗಳು ಗುಂಡಿ ಬೀಳುವುದನ್ನು ಮತ್ತು ಬಿರುಕು ಬಿಡುವುದನ್ನು ತಡೆಯಲು ನೆರವಾಗುತ್ತದೆ. ಈ ಮೂಲಕ ರಸ್ತೆಗಳು ಕೆಟ್ಟು ಹೋಗುವುದು ಕಡಿಮೆ ಆಗುತ್ತದೆ. ”

ಇವೆಲ್ಲದಕ್ಕಿಂತ ಹೆಚ್ಚಾಗಿ ಇದು ಕಾಸ್ಟ್ ಕಟ್ಟಿಂಗ್​​ಗೂ ನೆರವು ನೀಡಲಿದೆ. ಈ ಪ್ರಕ್ರಿಯೆ ಮೂಲಕ ನಿರ್ಮಾಣವಾಗುವ ರಸ್ತೆಗಳು ಕಡಿಮೆ ವೆಚ್ಚದಿಂದ ಕೂಡಿರಲಿದ್ದು, ಕನಿಷ್ಠ 15 ವರ್ಷಗಳ ಕಾಲ ಬಾಳಿಕೆ ಬರಲಿದೆ. ನೆಮ್​ಕುಮಾರ್ ಅವರ ಪ್ರಾಜೆಕ್ಟ್ ಯಶಸ್ಸು ಕಂಡ್ರೆ ಭಾರತದ ರಸ್ತೆಗಳಿಗೆ ಹೊಸ ರೂಪ ಸಿಗಲಿದೆ. ಈಗಾಗಲೇ ನೆಮ್​ಕುಮಾರ್ ಮಾದರಿ ರಸ್ತೆಗಳ ಬಗ್ಗೆ ಕರ್ನಾಟಕ ಸರಕಾರ ಸೇರಿದಂತೆ, ಹರ್ಯಾಣ ಮತ್ತು ಮದ್ಯಪ್ರದೇಶ ಸರಕಾರಗಳು ಆಸಕ್ತಿ ತೋರಿವೆ. ಒಟ್ಟಿನಲ್ಲಿ ಭಾರತದ ರಸ್ತೆಗಳ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಇನ್ನು ಕೆಲವೇ ದಿನಗಳಲ್ಲಿ ನಮ್ಮ ದೇಶದ ರಸ್ತೆಗಳನ್ನು ಹಾಡಿ ಹೊಗಳುವುದು ಗ್ಯಾರೆಂಟಿ.

ಇದನ್ನು ಓದಿ:

1. "ಹೆಮ್ಮೆಯ ಕನ್ನಡಿಗ"ರು ಇಂದು ಎಂದು ಎಂದೆಂದೂ- ಎಲ್ಲೆಡೆ ಪಸರಿಸಲಿ ಕನ್ನಡ ನುಡಿ

2. ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

3. ಸ್ಟಾರ್​ಗಳಿಗೆ ಲುಕ್​ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ

Related Stories