ಕಾರ್‍ಪೂಲಿಂಗ್ ಕ್ಯಾಬ್ ಮಾಡಿ ಹಣ ಉಳಿತಾಯ ಮಾಡಿ

ಟೀಮ್​​ ವೈ.ಎಸ್​​.

ಕಾರ್‍ಪೂಲಿಂಗ್ ಕ್ಯಾಬ್ ಮಾಡಿ ಹಣ ಉಳಿತಾಯ ಮಾಡಿ

Friday November 06, 2015,

4 min Read

ಓಲಾ, ಊಬರ್, ಜಿಪ್ ಗೊ ಹಾಗೂ ಇನ್ನಿತರ ದೊಡ್ಡ ಕಂಪನಿಗಳ ನಡುವೆ ಲಿಫ್ಟ್ ಓ ಸಾರಿಗೆ ವಲಯದಲ್ಲಿ ಹೊಸ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿರೋದು ನಮ್ಮೆಲ್ಲರಿಗೂ ಗೊತ್ತಿರೋ ಸ್ಟೋರಿನೇ. ಸಾರಿಗೆ ವಲಯದಲ್ಲಿ ಹೆಚ್ಚಾದ ವಾಹನಗಳಿಂದ, ಕಿರಿಕಿರಿಗಳಿಂದ ಉಂಟಾಗುವ ತೊಂದರೆಗಳನ್ನು ಸುಧಾರಿಸಲು ಹೊಸ ಐಡಿಯಾಗಳು ಸಜ್ಜಾಗಿವೆ. ಲಿಫ್ಟ್ ಓ- ಇಂತಹ ಭಿನ್ನ ವೇದಿಕೆಗೆ ಹೊಸ ಸ್ಪೇಸ್ ಪಡೆದುಕೊಂಡಿದೆ. ಉಳಿದೆಲ್ಲಕ್ಕಿಂತ ವಿಶೇಷತೆ ಇಲ್ಲಿ ಇದೆ. ಲಿಫ್ಟ್ ಓ ನಲ್ಲಿ ಕಾರುಗಳನ್ನಷ್ಟೇ ಅಲ್ಲದೇ ಗ್ರಾಹಕರು ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳಲ್ಲಿಯೂ ಸಹ ಬೇರೆ ಗ್ರಾಹಕರೊಂದಿಗೆ ಸವಾರಿ ಮಾಡಿ ಖರ್ಚದನ್ನು ಹಂಚಿಕೊಳ್ಳಬಹುದು.

image


ಈ ನಿಟ್ಟಿನಲ್ಲಿ ಲಿಫ್ಟ್ ಓ ತನ್ನ ಗ್ರಾಹಕರಿಗೆ ಸಹ ಪ್ರಯಾಣಿಕರೊಂದಿಗೆ ತಮ್ಮಿಚ್ಚೆ, ಅನುಕೂಲಕ್ಕೆ ತಕ್ಕಂತೆ ವಾಹನಗಳನ್ನೂ ಆರಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಡುತ್ತದೆ. ಯಾವುದೇ ಗ್ರಾಹಕರು ತಾವು ಪ್ರಯಾಣಿಸುವ ಮಾರ್ಗದಲ್ಲಿ ಪ್ರಯಾಣ ಮಾಡಲಿಚ್ಚಿಸುವ ಬೇರೆ ವ್ಯಕ್ತಿಗಳೊಂದಿಗೆ ತನ್ನ ಪ್ರಯಾಣ ದರವನ್ನು ಹಂಚಿಕೊಳ್ಳಬಹುದಾಗಿದೆ. ಪ್ರಯಾಣದ ಸಲುವಾಗಿ ಗ್ರಾಹಕರು ಓಲಾ, ಊಬರ್, ಮೆರೂ, ಟಿಎಬಿ ಕ್ಯಾಬ್ ಮುಂತಾದ ಟ್ಯಾಕ್ಸಿಗಳಷ್ಟೇ ಅಲ್ಲದೇ ಆಟೋ ರಿಕ್ಷಾಗಳನ್ನು ಆರಿಸುವ ಅವಕಾಶವಿದೆ.

ಮೊದಲ ಹಂತವಾಗಿ ಲಿಫ್ಟ್ ಓ- ತನ್ನ ಸೇವೆಯನ್ನು ಪೋವೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾರಂಭಿಸಿದೆ. ಈ ಮಾರ್ಗದಲ್ಲಿ 26 -45 ವರ್ಷದೊಳಗಿನ ಅನೇಕ ಉದ್ದಿಮೆದಾರರು, ನೌಕರರೂ ಇದ್ದು, ಅವರುಗಳು ಪ್ರತಿ ದಿನಕ್ಕೆ ಅಂದಾಜು 150 ರಿಂದ .200 ರೂ ಗಳನ್ನು ತಮ್ಮ ಸಾರಿಗೆಯ ಸಲುವಾಗಿ ವ್ಯಯಿಸುತಿದ್ದಾರೆ. ಇಂತಹವರ ಅನುಕೂಲಕ್ಕಾಗಿಯೇ ಲಿಫ್ಟ್ ಓ ಸಾರಿಗೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಲಿಪ್ಟ್ ಓ ಮಾಸ್ಟರ್ ಮೈಂಡ್ಸ್

ವಿಕೇಶ್ ಅಗರ್ವಾಲ್ ಹಾಗೂ ನಿಖಿಲ್ ಅಗರ್ವಾಲ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಮತ್ತು ಮುಂಬೈನಲ್ಲಿ ವಾಸವಾಗಿದ್ದು, ಪ್ರತಿದಿನ 40 ರಿಂದ 50 ಕಿ.ಮೀ ನೌಕರಿ/ ಕೆಲಸಕ್ಕಾಗಿ ಪ್ರಯಾಣ ಮಾಡುತ್ತಿದ್ದರು. ಕಾರ್ ಪೂಲಿಂಗ್ ಬಗೆಗೆ ಆಲೋಚಿಸಿದರೂ ಅದು ಹೆಚ್ಚು ಪ್ರಯೋಜನಕಾರಿ ಆಗಲಿಲ್ಲ. ಅವರುಗಳ ಅನಿಸಿಕೆಯ ಪ್ರಕಾರ ಕಾರ್ ಪೂಲಿಂಗ್ ವ್ಯವಸ್ಥೆಯಲ್ಲಿ ಒಂದೆರಡು ಬಾರಿ ಪ್ರಯಾಣ ಮಾಡಿದ ನಂತರ ಕೆಲವು ನ್ಯೂನತೆಗಳು ಕಂಡು ಬರುತ್ತವೆ. ಗ್ರಾಹಕರು ತಮಗೆ ಸರಿ ಹೊಂದುವ ಸಹ ಸವಾರಿಗರನ್ನು ಕಂಡುಕೊಳ್ಳುವಲ್ಲಿ, ನಿಗಧಿತ ಸಮಯದಲ್ಲಿ ಪ್ರಯಾಣ ಮಾಡುವುದು ಕಷ್ಟಸಾಧ್ಯವಾಗಿದೆ. ಇಂತಹ ನ್ಯೂನತೆಗಳ ಬೆನ್ನು ಹತ್ತಿ ಹೋದಾಗ ರೂಪುಗೊಂಡಿದ್ದೇ "ಲಿಫ್ಟ್ ಓ" ಎಂದು ವಿಖೇಶ್ ತಿಳಿಸುತ್ತಾರೆ.

ಟೀಂ ಕಟ್ಟಿದ್ದು ಹಿಂಗೆ!

ಲಿಫ್ಟ್ ಓನ ಸಂಸ್ಥಾಪಕರಲ್ಲಿ ಒಬ್ಬರಾದ ನಿಖಿಲ್ ಕಂಪನಿಯ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯ ಐಐಟಿ ಹಾಗೂ ಲಖನೌದ ಐಐಎಮ್ ನ ಪದವೀಧರರಾಗಿರುವ ನಿಖಿಲ್ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ 9 ವರ್ಷಗಳ ಅನುಭವ ಹೊಂದಿದ್ದಾರೆ. ಲಿಫ್ಟ್ ಓ ನ ಮತ್ತೋರ್ವ ಸಂಸ್ಥಾಪಕ ವಿಖೇಶ್ ಸಿಓಓ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಬಿಐಟಿಸ್ ಹಾಗೂ ಏಐಮ್ - ಮಾನಿಲಾ ಹಳೆಯ ವಿದ್ಯಾರ್ಥಿಯಾಗಿದ್ದು, ಮಾಧ್ಯಮಗಳಲ್ಲಿ ವ್ಯವಹಾರ ಕೇತ್ರದಲ್ಲಿ 6 ವರ್ಷಗಳ ಅನುಭವ ಹೊಂದಿದ್ದಾರೆ. ಕಂಪನಿಯ ಸಿಟಿಓ ಆಗಿ ಕಾರ್ಯನಿರ್ವಹಿಸುತ್ತಿರುವ ನಂದ ಕುಮಾರ್ ಎಸ್ ಆರ್ ಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಮೊಬೈಲ್ ಅಪ್ಲಿಕೇಶನ್​​ನಲ್ಲಿ 10 ವರ್ಷ ಪರಿಣಿತಿ ಹೊಂದಿದ್ದಾರೆ.

ಹೊಸದಾಗಿ ಆರಂಭವಾಗಿರುವ ನಿಟ್ಟಿನಲ್ಲಿ ತಂಡಕ್ಕೆ ಸೇರಲಿಚ್ಚಿಸುವ ಹೊಸಬರು ಜವಾಬ್ದಾರಿಯೊಂದಿಗೆ ಕಂಪನಿಗೆ ಸಂಪೂರ್ಣ ಸಹಕಾರ ನೀಡಬೇಕೆಂಬುದು ವಿಖೇಶ್ ತಿಳಿಸಿದ್ದಾರೆ.

ಸ್ಟಾರ್ಟ್ ಮೈ ರೈಡ್

ಕಂಪನಿಯ ಮಾಲೀಕರಾದ ವಿಕೇಶ್ ಅನಿಸಿಕೆಯಾನುಸಾರ 'ಮಾರ್ಗ ಹೊಂದಿಸುವ ಅಲ್ಗಾರಿದಮ್' ಈ ಆಪ್ ನ ತಳಹದಿಯಾಗಿದ್ದು, ಇದರಿಂದ ಗ್ರಾಹಕರು ಸುಲಭವಾಗಿ ತಮ್ಮ ಸ್ಥಳದ ನಿಖರ ಮಾಹಿತಿ, ತಮ್ಮನ್ನು ಕರೆದೊಯ್ಯಲಾಗುವ ಸ್ಥಳದ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಯಾವುದೇ ಆ್ಯಪ್​​ನಿಂದ ಟ್ಯಾಕ್ಸಿ ಮಾಡುವಷ್ಟೇ ಸುಲಭವಾಗಿ ಲಿಫ್ಟ್ ಒ- ಆಪ್ ಅನ್ನು ಬಳಸಬಹುದಾಗಿದೆ.

ಬಳಕೆದಾರರು ಕೇವಲ ಅವರನ್ನು ಕರೆದೊಯ್ಯಬೇಕಾದ ಸ್ಥಳ, ಸಮಯ ಹಾಗೂ ಪ್ರಯಾಣ ಮಾಡಲಿಚ್ಚಿಸುವ ಮಾರ್ಗ/ ಸ್ಥಳ ದ ಮಾಹಿತಿ ನೀಡಿದರಾಯಿತು, ಲಿಫ್ಟ್ ಒ- ಅವರ ಪ್ರೊಫೈಲ್​ಗೆ ಹೊಂದುವಂತಹ ಇನ್ನೋರ್ವ ಗ್ರಾಹಕರ ಸಂಪೂರ್ಣ ವಿವರ, ಮಾರ್ಗದ ಮಾಹಿತಿಯನ್ನು ಒದಗಿಸುತ್ತದೆ. ಒಪ್ಪಿಗೆಯಾದಲ್ಲಿ 'ಸ್ಟಾರ್ಟ್ ರೈಡ್'ನ್ನು ಲಿಫ್ಟ್ ಒ- ನಲ್ಲಿ ಕ್ಲಿಕ್ ಮಾಡಿದರೆ ಅವರ ಸಹಪಾಟಿಯನ್ನು ಮಾರ್ಗ ಮದ್ಯದಲ್ಲಿ ಸಂಪರ್ಕಿಸಬಹುದು. ನಂತರ ಅವರಿಗೆ ವಾಹನಗಳ ಆಯ್ಕೆಗೆ (ಏಸಿ/ನಾನ್ ಏಸಿ,ಆಟೋ ಇತರೆ) ಅವಕಾಶ ಕಲ್ಪಿಸಲಾಗುತ್ತದೆ. ನಂತರ ಗ್ರಾಹಕರಿಗೆ ಒಪ್ಪಿಗೆಯಾದಲ್ಲಿ, ಅವರಿಗೆ ಸಹ ಸವಾರರ ಪ್ರೊಫೈಲ್ ನೋಡಬಹುದು. ನಂತರ ಸಹ ಸವಾರರಿಗೆ ಮನವಿ ಕಳುಹಿಸಿ ಸಂಪರ್ಕಿಸುವ ಅವಕಾಶ ಕಲ್ಪಿಸಲಾಗುತ್ತದೆ.

ಸ್ಟಾಪ್ ಸ್ಟಾಪ್..

ಮೊದಲ ಹಂತವಾಗಿ/ ಪ್ರಾಯೋಗಿಕವಾಗಿ ಪೋವೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇವೆ ಪ್ರಾರಂಭವಾಗಿದೆ. ಪೋವೈನಿಂದ ಬಿಕೆಸಿ, ಲೋವರ್, ಪ್ಯಾರೆಲ್, ನಾರಿಮನ್ ಪಾಯಿಂಟ್ ಹಾಗೂ ಇನ್ನಿತರ ಪಶ್ಚಿಮ ವಲಯದ ಉಪನಗರದ ಕಡೆಗೆ ಪ್ರಯಾಣಿಸುವ ನೌಕರರು, ತಮಗೆ ಸಮಯಕ್ಕೆ ಹಾಗೂ ಮಾರ್ಗಕ್ಕೆ ಹೊಂದಿಕೊಳ್ಳುವ ಸಹ ಸವಾರರೊಂದಿಗೆ ತಮ್ಮ ಪ್ರಯಾಣವನ್ನು ನಿಗಧಿಪಡಿಸಬಹುದು ಎಂದು ಕಂಪನಿಯ ವಿಖೇಶ್ ತಿಲೀಸಿದ್ದಾರೆ.

ವಾರದ ದಿನಗಳಲ್ಲಿ ಗ್ರಾಹಕರು ಪರದಾಡದಂತೆ, ಅವರ ಕಛೇರಿಗಳಿಗೆ ಅಡೆತಡೆ ಇಲ್ಲದೆ ಸರಾಗವಾಗಿ ಸರಿ ಸಮಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಲಿಫ್ಟ್ ಓ ಕಾರ್ಯನಿರತವಾಗಿ. ನಿಗಧಿತ ಸಮಯದಲ್ಲಿ ಗ್ರಾಹಕರು ಆಟೋ/ಕ್ಯಾಬ್​​ಗಳು ಸಿಗದೆ ಪರದಾಡುವ ಸ್ಥಿತಿಗೆ ಬದಲೀ ವ್ಯವಸ್ಥೆಯಾಗಿ ಲಿಫ್ಟ್ ಓ ರೂಪುಗೊಂಡಿದೆ.

ಪ್ರಸ್ತುತ, ಲಿಫ್ಟ್ ಓ ಗೂಗಲ್ ಪ್ಲೇ ನಲ್ಲಿ ಲಭ್ಯವಿದ್ದು, ಜನವರಿ ತಿಂಗಳಿನ ಮಧ್ಯದಲ್ಲಿ ಐಓಎಸ್ ವರ್ಷನ್ ಕಾರ್ಯರೂಪಕ್ಕೆ ಬರಲಿದೆ.

ಪ್ರಾರಂಭವಾದ ಮೊದಲ ತಿಂಗಳಿನಲ್ಲಿ ಪ್ರತಿದಿನ ಅಂದಾಜು 50 ಗ್ರಾಹಕರು ಲಿಫ್ಟ್ ಓ ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸರಿಸುಮಾರು ಪ್ರತಿದಿನ 500 ರಿಂದ 600 ಜರ್ನಿ ಆಗುತ್ತಿವೆ.

ಲಿಫ್ಟ್ ಓ ನ ಆ್ಯಪ್ ಬಳಕೆದಾರರ ಸಂಖ್ಯೆ 4300 ಕ್ಕಿಂತ ಹೆಚ್ಚು ಕ್ರಮಿಸಿದ್ದು, ನವೆಂಬರ್ ಎರಡನೇ ವಾರದ ಹೊತ್ತಿಗೆ ಪ್ರತಿದಿನಕ್ಕೆ 100 ವಹಿವಾಟುಗಳು ನೆರೆವೇರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೂಡಿಕೆ-ಗಳಿಕೆ

ಪ್ರಸ್ತುತ ಕಂಪನಿಯಲ್ಲಿ 85 ಲಕ್ಷ ರೂ ಗಳ ವಹಿವಾಟಿದ್ದು, ಪ್ರಾರಂಭ ಕಾಲದಲ್ಲಿ ಲಿಫ್ಟ್ ಓ ಒಂದು ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ.

ಮುಂಬೈನ ಮುಧ್ಯಭಾಗದಲ್ಲಿ ತನ್ನ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಮುಂಬರುವ ಮಾರ್ಚ್ ಒಳಗಾಗಿ ತನ್ನ ವಹಿವಾಟನ್ನು ನಗರದ ಎಲ್ಲಾ ಭಾಗಗಳಿಗೂ ವಿಸ್ತರಿಸುವ ಉದ್ದೇಶವಿದೆ. ಅಷ್ಟೇ ಅಲ್ಲದೆ 2016 ರ ಮಧ್ಯದಲ್ಲಿ ತನ್ನ ಸೇವೆಯನ್ನು ಭಾರತದ ಹೆಸರಾಂತ ಮೆಟ್ರೋ ನಗರಗಳಾದ ದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್ ಹಾಗೂ ಕೊಲ್ಕತ್ತಾ ಗೆ ವಿಸ್ತರಿಸುವ ಆಲೋಚನೆ ಇದೆ. ಇಷ್ಟಕ್ಕೇ ಸೀಮಿತವಾಗದೆ ಮುಂದಿನ 2 ವರ್ಷಗಳಲ್ಲಿ ಲಿಫ್ಟ್ ಓ ಅಂತರಾಷ್ಟ್ರೀಯವಾಗಿ ಕಾರ್ಯನಿರ್ವಹಿಸುವ ಯೋಚನೆಗೆ ಸಿದ್ಧತೆ ನಡೆಸಿದೆ.

ಕಾನೂನು ಹಾಗೂ ಕಾರ್ ಪೂಲ್

ಪ್ರಸಕ್ತ ದಿನಗಳಲ್ಲಿ ಟ್ಯಾಕ್ಸಿ, ರೈಡ್ ಹಂಚಿಕೆಗಳು ಕ್ರಮೇಣ ಬೆಳವಣಿಗೆ ಕಂಡುಕೊಳ್ಳುತ್ತಿದ್ದು, ಸರ್ಕಾರ ತನ್ನ ನೀತಿ ನಿಯಮಗಳನ್ನು ಹೇರಿ ಬೆಳವಣಿಗೆ ನಿಯಂತ್ರಿಸುವ ಪ್ರಯತ್ನ ನಡೆಸುತ್ತಿದೆ. ಸರ್ಕಾರದ ಈ ಬೆಳವಣಿಗೆಗಳನ್ನು ಕಂಡು ಜಿಪ್ ಗೋ - ಇಂತಹ ಪರಿಸ್ಥಿತಿಯಲ್ಲಿ ತಮ್ಮಂತಹ ಸಂಸ್ಥೆಗಳ ಉಳಿವಿನ ಬಗೆಗೆ ಆತಂಕ ವ್ಯಕ್ತಪಡಿಸಿದೆ. ವಿವಿಧ ಕೋನಗಳಿಂದ ಪರಿಶೀಲಿಸಿ, ಲಿಫ್ಟ್ ಓ ಸಂಸ್ಥಾಪಕ ವಿಖೇಶ್ ಮೋಟಾರು ವಾಹನ ಕಾಯ್ದೆ 1988 ರಲ್ಲಿ ರೈಡ್ ಶೇರಿಂಗ್ ಹಾಗೂ ಕಾರ್ ಪೂಲಿಂಗ್​​ಗಳ ಬಗೆಗೆ ಉಲ್ಲೇಖೀಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸೆಕ್ಷನ್ 66 ರಲ್ಲಿ ಕೇವಲ ಕಾಂಟ್ರಾಕ್ಟ್ ಕ್ಯಾರಿಕೇಜ್ಸ್​​ ಮತ್ತು ಸಾರ್ವಜನಿಕ ಸೇವೆಯ ವಾಹನಗಳನ್ನು ವಿಶ್ಲೇಷಣೆ ಮಾಡಿದೆ. ಇದರ ಅನ್ವಯ ಕೇವಲ ಬಾಡಿಗೆಗೆ ಬಳಸಲಾಗುವ ವಾಹನಗಳು ಮತ್ತು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ವಿವರಣೆ ನೀಡಲಾಗಿದೆ.

ಕಾರ್ ಪೂಲಿಂಗ್​​ನಲ್ಲಿ ವ್ಯವಹರಿಸುವ ಗ್ರಾಹಕ ಕೇವಲ ತನ್ನ ಪ್ರಯಾಣಕ್ಕೆ ತಗುಲುವ ಖರ್ಚು ವ್ಯಯಿಸುತ್ತಾನೆ ಹೊರತು ಲಾಭ-ನಷ್ಟದ ಪಾಲುದಾರನಾಗಿರುವುದಿಲ್ಲ. ಪ್ರಸ್ತುತ, ಖಾಸಗಿ ವಾಹನವು ಪ್ರತಿ ಕಿ.ಮೀ ಗೆ 10ರೂ ನಿಗಧಿಪಡಿಸಿಕೊಂಡಿದೆ. ಇದಕ್ಕಿಂತ ಹೆಚ್ಚಿನ ಖರ್ಚು ವೆಚ್ಚವನ್ನು ತೋರಿಸುವ ನಿಟ್ಟಿನಲ್ಲಿ ಮಾತ್ರ ಆತನು ಲಾಭ-ನಷ್ಟದ ಪಾಲುದಾರನಾಗುತ್ತಾನೆ ಎಂದು ಪರಿಗಣಿಸಲಾಗುತ್ತದೆ

ಮಾರುಕಟ್ಟೆ

ಇತ್ತೀಚಿನ ಬೆಳವಣಿಗೆಯಾದ ಕಾರ್ ಪೂಲಿಂಗ್ ಆರ್ಥಿಕ ಸಹಕಾರದ ಆಶ್ರಯದಡಿಯ ಒಂದು ಪ್ರಮುಖ ಬೆಳವಣಿಗೆ ಆಗಿದೆ. ಪ್ರೈಸ್ ವಾಟರ್ ಕೊರ್ಪಸ್ ನ ಇತ್ತೀಚಿನ ವರದಿಯ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಅಂದಾಜು 15 ಬಿಲಿಯನ್ ಡಾಲರ್ ವಹಿವಾಟು ಇದ್ದು, 2025ನೇ ಇಸವಿಯಲ್ಲಿ 335 ಬಿಲಿಯನ್ ಡಾಲರ್ ವಹಿವಾಟು ನಡೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿವೆ.

ತಜ್ಞರ ಅಭಿಪ್ರಾಯದಂತೆ ಭಾರತದ ಮಾರುಕಟ್ಟೆಯಲ್ಲಿ ಒಳ್ಳೆಯ ಪಾಲುದಾರಿಕೆ ಇದೆ. ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಸರುವಾಸಿಯಾದ ಮೇ ಬಡಿ, ರೈಡಿಂಗ್, ಪೂಲ್ ಸರ್ಕಲ್, ಕಾರ್ ಪೂಲ್ ಅಡ್ಡಾ ಹೆಸರುವಾಸಿಯಾಗಿದ್ದು, ಪ್ರಪಂಚದಾದ್ಯಂತ ಪ್ರಖ್ಯಾತರಾಗಿರುವ ಬ್ರೆಸಿಲ್ ನ ಟ್ರಿಪ್ ಡಾ ಹಾಗೂ ಫ್ರೆಂಚ್​ನ ಬ್ಲಾಬ್ಲಾ ಆಗಮನ ಕಾರ್ ಪೂಲಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ.