ಕುಂಚದಲ್ಲಿ ಅಡಗಿದೆ ಮಧುಬನಿ ಕಲೆ- ಹವ್ಯಾಸಕ್ಕೆ ವೃತ್ತಿಯ ಟಚ್​​ ನೀಡಿದ ಉಪನ್ಯಾಸಕಿ

ಟೀಮ್​ ವೈ.ಎಸ್​​.

0

ಇದು ರಾಸಾಯನಿಕ ಶಾಸ್ತ್ರದ ಶಿಕ್ಷಕಿ ಮಧುಬನಿ ಆರ್ಟಿಸ್ಟ್‌ ಆದ ರಂಜನೀಯ ಕಥೆ ಇದು. 

ಅಪ್ಪ ಪಾಟ್ನಾದಲ್ಲಿ ಚಲಚಚಿತ್ರ ವಿತರಕ. ಮಗಳು ವಿಧೂಷಿಣಿ ಪಾಟ್ನಾ ಯೂನಿವರ್ಸಿಟಿಯಿಂದ ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಂದಹಾಗೇ ವಿಧೂಷಿಣಿ ಹುಟ್ಟಿದ್ದು ಕೊಲ್ಕತ್ತಾದಲ್ಲಿ. 10ನೇ ತರಗತಿ ತನಕದ ವಿದ್ಯಾಭ್ಯಾಸ ನಡೆದಿದ್ದು ಕೊಲ್ಕತ್ತಾದಲ್ಲೇ. ಪಾಟ್ನಾದಲ್ಲೇ ಮೂಲ ಇದ್ದಿದ್ದರಿಂದ ಕುಟುಂಬ ಅಲ್ಲಿಗೇ ಶಿಫ್ಟ್​ ಆಯಿತು. ಸ್ನಾತಕೋತ್ತರ ಪದವಿ ಬಳಿಕ ವಿಧೂಷಿಣಿ ಪಾಟ್ನಾದಲ್ಲೇನ ಶಿಕ್ಷಕಿ ಆಗಿ ವೃತ್ತಿ ಆರಂಭಿಸಿದ್ರು.

ಪಾಟ್ನಾದಲ್ಲಿ ವಿಧೂಷಿಣಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸುತ್ತಿದ್ದರು. ಮದುವೆಯಾದ ಬಳಿಕ ವಿಧೂಷಿಣಿ ದೆಹಲಿಗೆ ಹೋಗುವ ಅನಿವಾರ್ಯತೆ ಎದುರಾಯಿತು. ದೆಹಲಿಯಲ್ಲೂ ಕೂಡ ಕೆಲ ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಆದ್ರೆ ವಿಧೂಷಿಣಿಗೆ ತಮ್ಮ ಕನಸುಗಳ ಬೆನ್ನು ಹತ್ತಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಯೋಚನೆ ಮಾಡ ತೊಡಗಿದ್ರು. ಬದುಕು ಇದ್ದ ಹಾಗೇ ಇದ್ರೆ ಅದ್ರಲ್ಲಿ ಉನ್ನತಿ ಸಿಗೋದು ಬಹುಕಷ್ಟ ಅನ್ನೋ ಸತ್ಯವನ್ನು ಅರತಿದ್ರು.

ಮನೆಯಲ್ಲೇ ಕುಳಿತು ಏನನ್ನಾದರೂ ಮಾಡಬಹುದಾದರೆ ಅದನ್ನೇ ವೃತ್ತಿಯಾಗಿಸಿಕೊಳ್ಳಲು ವಿಧೂಷಿಣಿ ಸಿದ್ಧರಿದ್ದರು. ಹೀಗಾಗಿ ಪೇಂಟಿಂಗ್ ಮಾಡಲು ಆರಂಭಿಸಿದರು ವಿಧೂಷಿಣಿ. ಮೊದ ಮೊದಲು ಕೇವಲ ತಮ್ಮ ಮನೆಯನ್ನು ಸಿಂಗರಿಸಿಕೊಳ್ಳಲು, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಗಿಫ್ಟ್‌ ಕೊಡಲು ಪೇಂಟಿಂಗ್ ಮಾಡುತ್ತಿದ್ದ ಅವರು ಎಲ್ಲರ ಪ್ರೋತ್ಸಾಹದ ನುಡಿಗಳಿಂದ ಉತ್ತೇಜಿತರಾಗಿ ವೃತ್ತಿಪರ ಕಲಾವಿದರಾಗುವತ್ತ ಹೆಜ್ಜೆ ಇಟ್ಟರು.

ಮಧುಬನಿ ಕಲೆ ಸದಾ ವಿಧೂಷಿಣಿಯವರನ್ನು ಆಕರ್ಷಿಸುತ್ತಿತ್ತು. ಉಬ್ಬುವಿಕೆ ವೈಶಿಷ್ಟ್ಯಗಳು ಹಾಗೂ ತೀಕ್ಷ್ಣ ಮೂಗಿನ ವಿನ್ಯಾಸವನ್ನು ಹೊಂದಿರುತ್ತಿದ್ದ ಹಾಗೂ ಸಂಕೀರ್ಣ ರೇಖೆಗಳಿಂದಾವೃತವಾಗಿದ್ದ ವಿನ್ಯಾಸಗಳು ವಿಧೂಷಿಣಿಯವರ ಕಣ್ಮನ ಸಳೆಯುತ್ತಿತ್ತು. ಕಾಲೇಜು ದಿನಗಳಲ್ಲೂ ಈ ಕಲೆಯನ್ನು ವಿಧೂಷಿಣಿ ಅಭ್ಯಸಿಸಿದ್ದರು.

ತಮ್ಮ ವೃತ್ತಿಬದುಕನ್ನು ಅಭಿವೃದ್ಧಿಪಡಿಸಿಕೊಳ್ಳುವತ್ತ ಗಮನಹರಿಸಿದ್ರೂ, ಆಸಕ್ತಿಯ ಕ್ಷೇತ್ರವಾದ ಮಧುಬನಿ ಪೇಂಟಿಂಗ್ ಮೂಲಕ ಮನೆಯಲ್ಲಿಯೇ ಕೆಲವು ಚಿತ್ರಗಳನ್ನು ಬಿಡಿಸಿಟ್ಟುಕೊಂಡರು. ಇದು ಅವರಿಗೆ ಪ್ರಯೋಗಾತ್ಮಕ ಪ್ರಾಥಮಿಕ ಅನುಭವ ನೀಡಿತು. ತಮ್ಮ ಕೆಲಸವನ್ನು ಬಿಟ್ಟ ಬಳಿಕ ಮಧುಬನಿ ಪೇಂಟಿಂಗ್ ಪ್ರವೃತ್ತಿಯನ್ನೇ ತಮ್ಮ ಪೂರ್ಣಕಾಲಿಕ ವೃತ್ತಿಯನ್ನಾಗಿಸಿಕೊಂಡರು.

ಮಧುಬನಿ ಪೇಂಟಿಂಗ್ ಕುರಿತಾಗಿ ವಿಧೂಷಿಣಿ ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ ಈ ಕಲೆಯಲ್ಲಿ ಪಳಗುವುದು ಅಷ್ಟೇನೂ ಕಷ್ಟವಾಗಲಿಲ್ಲ. ಅಲ್ಲದೇ ಈ ಕಲೆ ತಮ್ಮ ಸಂಸ್ಕೃತಿಯಲ್ಲೇ ಇದ್ದುಬಿಟ್ಟಿದ್ದರಿಂದ ಪೇಂಟಿಂಗ್ ಅಭ್ಯಾಸ ಕಷ್ಟವಾಗಲಿಲ್ಲ ಅಂತಾರೆ ವಿಧೂಷಿಣಿ. ಈ ಕಲೆಯನ್ನು ಕಲಿಯಲು ಆಸಕ್ತಿ ಇರುವವರಿಗೆ ವಿಧೂಷಿಣಿ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಫೇಸ್‌ಬುಕ್‌ನಲ್ಲೂ ತಮ್ಮ ಪೇಜ್ ತೆರೆದಿರುವ ವಿಧೂಷಿಣಿ ಆ ಮೂಲಕ ಆಸಕ್ತರಿಗೆ ಕಲೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ನೋವಿಕಾ (NOVICA) ಕಲಾವಿದರಾಗಿ ಗುರುತಿಸಿಕೊಂಡ ವಿಧೂಷಿಣಿ

2006ರಿಂದ ಪೇಂಟಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ ವಿಧೂಷಿಣಿಗೆ ನೋವಿಕಾ(NOVICA) (ಜಾಗತಿಕ ಮಾರುಕಟ್ಟೆಯಲ್ಲಿ ಕಲಾವಿದರನ್ನು ಸಂಪರ್ಕಿಸುವ ನ್ಯಾಷನಲ್ ಜಿಯೋಗ್ರಾಫಿಕ್‌ನ ಒಂದು ವೇದಿಕೆ )ದಲ್ಲಿ ತಮ್ಮ ಹೆಸರನ್ನು ದಾಖಲಿಸಲು ಸಿಕ್ಕ ಅವಕಾಶವೇ ದೊಡ್ಡ ತಿರುವಾಗಿ ಪರಿಣಮಿಸಿತು.

2007ರಲ್ಲಿ ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡ ವಿಧೂಷಿಣಿ ತಮ್ಮ ಮಧುಬನಿ ಕಲೆಯ ಪ್ರದರ್ಶನಕ್ಕಾಗಿ ಅನೇಕ ಆರ್ಟ್‌ ಗ್ಯಾಲರಿಗಳನ್ನು ಸಂಪರ್ಕಿಸುವ ಯತ್ನ ಮಾಡಿದರು. ಆದರೆ ಯಾವ ಆರ್ಟ್‌ ಗ್ಯಾಲರಿಗಳಿಂದಲೂ ಉತ್ಸಾಹಕರ ಪ್ರತಿಕ್ರಿಯೆಗಳು ಕಂಡು ಬರಲಿಲ್ಲ. ಕೆಲ ಸಮಯ ನೋವಿಕಾಗಾಗಿಯೇ ಕಾರ್ಯನಿರ್ವಹಿಸಿದ ಅವರು, ನೋವಿಕಾದ ಅವಶ್ಯಕತೆಗಳು, ಬೇಡಿಕಗಳಿಗೆ ತಕ್ಕಂತೆ ಹಲವು ಪೇಂಟಿಂಗ್‌ಗಳನ್ನು ಮಾಡಿಕೊಟ್ಟರು. ನೋವಿಕಾ, ಇ-ಕಾಮರ್ಸ್ ವೇದಿಕೆ ಮುಖಾಂತರ ಪೇಂಟಿಂಗ್‌ಗಳನ್ನು ಮಾರಾಟ ಮಾಡುತ್ತಿದ್ದರು. ಆನ್‌ಲೈನ್‌ನಲ್ಲಿ ವಿಧೂಷಿಣಿ ಪೇಂಟಿಂಗ್‌ಗಳಿಗೆ ಬೇಡಿಕೆ ಇದ್ದ ಸಂದರ್ಭದಲ್ಲಿಯೇ ಎನ್‌ಜಿಓಗಳು, ಹಂಡ್ರೆಡ್ ಹ್ಯಾಂಡ್ ಸಂಸ್ಥೆ, ಏಕ್​ಲೈಫ್ ಸ್ಟೈಲ್ ಸಂಸ್ಥೆಗಳೂ ಸಹ ಪೇಂಟಿಂಗ್‌ಗಳಿಗೆ ವೇದಿಕೆ ಒದಗಿಸಿದರು.

ಬೆಂಗಳೂರಿನ ರೆನೇಸಾನ್ಸ್ ಆರ್ಟ್ ಗ್ಯಾಲರಿ, ಕೇರಳದ ಡೇವಿಡ್ ಹಾಲ್ ಆರ್ಟ್ ಗ್ಯಾಲರಿ ಸೇರಿದಂತೆ ಭಾರತದ ಹಲವು ಆರ್ಟ್ ಗ್ಯಾಲರಿಗಳಲ್ಲಿ ವಿಧೂಷಿಣಿ ತಮ್ಮ ಮಧುಬನಿ ಪೇಂಟಿಂಗ್‌ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ವಿಸ್ತಾ, ಬೆಂಗಳೂರಿನ ಐಐಎಂ ಪ್ರೀಮಿಯರ್ ಬಿಸಿನೆಸ್ ಫೆಸ್ಟಿವಲ್‌ನಲ್ಲಿ ತಮ್ಮ ಪೇಂಟಿಂಗ್‌ಗಳನ್ನು ಪ್ರದರ್ಶಿಸಿದ್ದಾರೆ. ಭಾರತೀಯ ಸರ್ಕಾರದ ಜವಳಿ ಸಚಿವಾಲಯದ ಕೇಂದ್ರ ಕಾಟೇಜ್ ಎಂಪೋರಿಯಂನ ಕಲಾವಿದರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಈ ಕ್ರಿಯಾಶೀಲ ಉದ್ಯಮಿಯ ಪಯಣ

ಇಲ್ಲಿಯವರೆಗಿನ ಸಾಧನೆಯಲ್ಲಿ ಯಾವುದೂ ಸರಳವಾಗಿರಲಿಲ್ಲ. ಆದರೂ ಬೆಂಗಳೂರಿನಲ್ಲಿ ಕುಳಿತು ನನ್ನ ಪೇಂಟಿಂಗ್ ಕೆಲಸ ಮುಂದುವರೆಸಿದ್ದೆ. ದೇಶದ ಎಲ್ಲಾ ಭಾಗಗಳಿಂದ ನನ್ನ ಕಲೆಗೆ ಬೇಡಿಕೆ ಒದಗಿ ಬಂತು. ಕಲೆಯ ಬಗ್ಗೆ ಜಾಗೃತಿ ಮೂಡಿದ್ದು ಇದೇ ಸಂದರ್ಭದಲ್ಲಿ. ವಿಧೂಷಿಣಿ ಪ್ರತಿಬಾರಿಯೂ ಕೊಳ್ಳಲು ಬರುವ ಗ್ರಾಹಕರೊಂದಿಗೆ ದರದ ವಿಚಾರದಲ್ಲಿ ಚರ್ಚೆ ಮಾಡಬೇಕಾಗಿ ಬರುತ್ತಿತ್ತು. ಅವರು ಪ್ರತಿ ಪೇಂಟಿಂಗ್‌ಗಳಿಗೂ ಬೀಳುವ ಶ್ರಮವನ್ನು ಗಮನಿಸದೇ ಗ್ರಾಹಕರು ದರವನ್ನು ಕಡಿಮೆ ಮಾಡುವಂತೆ ಚೌಕಾಸಿ ಮಾಡುತ್ತಾರೆ. ಇದು ಹಲವು ಬಾರಿ ಹತಾಶೆಗೊಳಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ವಿಧೂಷಿಣಿ.

ಹ್ಯಾಂಡ್‌ಮೇಡ್ ಪೇಪರ್ ಹಾಗೂ ಕ್ಯಾನ್‌ವಾಸ್‌ಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ಕೊಳ್ಳುವ ವಿಧೂಷಿಣಿ ಮಧುಬನಿ ಪೇಂಟಿಂಗ್‌ನ ತವರು ಪಾಟ್ನಾದಿಂದ ಪೇಂಟಿಂಗ್‌ಗೆ ಅಗತ್ಯವಿರುವ ನಿಬ್‌ಗಳನ್ನು ತರಿಸಿಕೊಳ್ಳುತ್ತಾರೆ.

ಒಬ್ಬ ಸಂತೃಪ್ತ ಕಲಾವಿದೆ

ತಮ್ಮ ಆಸಕ್ತಿಯ ಕ್ಷೇತ್ರದಲ್ಲಿಯೇ ಮುಂದುವರೆಯಲು ಸಾಧ್ಯವಾದದ್ದಕ್ಕೆ ವಿಧೂಷಿಣಿ ಸಂತಸ ವ್ಯಕ್ತಪಡಿಸುತ್ತಾರೆ. ಹೆಚ್ಚು ಕೆಲಸ ಮತ್ತು ಕಡಿಮೆ ತೃಪ್ತಿ ಎಂಬಂತಿರುವ ಈ ಕಾಲಘಟ್ಟದಲ್ಲಿ ನನಗಿಷ್ಟವಿರುವ, ನನ್ನ ಆಸಕ್ತಿಯ ಕ್ಷೇತ್ರದಲ್ಲಿಯೇ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರುವುದರಿಂದ ನಾನು ಸಂತೃಪ್ತೆ ಎನ್ನುತ್ತಾರೆ ವಿಧೂಷಿಣಿ.

ಮಧುಬನಿ ಪೇಂಟಿಂಗ್ ಹಾಗೂ ಭಾರತದ ವಿವಿಧ ರೀತಿಯ ಕಲಾಪ್ರಾಕಾರಗಳ ಬಗ್ಗೆ ಒಂದು ಕೈಪಿಡಿಯನ್ನು ವಿಧೂಷಿಣಿ ಸಿದ್ಧಪಡಿಸಿದ್ದಾರೆ. ಈ ಪುಸ್ತಕದಲ್ಲಿ ಹಲವು ಕಲಾಪ್ರಾಕಾರಗಳಿಗೆ ಸಂಬಂಧಿಸಿದಂತೆ ಕಲೆ ರೂಪುಗೊಳ್ಳುವ ರೀತಿ, ಮಾರಾಟ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ಇದೆ. ಈ ಪುಸ್ತಕಕ್ಕೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಬೇಡಿಕೆ ಇದೆ. ಇದಕ್ಕಾಗಿ ವಿಧೂಷಿಣಿ 10 ಮಂದಿ ಮಧುಬನಿ ಕಲಾವಿದರನ್ನು ಸಂದರ್ಶಿಸಿದ್ದಾರೆ. ಮಧುಬನಿ ಕಲೆಯ ಪ್ರಚಾರಕ್ಕಾಗಿ, ಕಲಾವಿದೆಯಾಗಿ ತಮ್ಮನ್ನು ತಾವು ಪ್ರಚುರಪಡಿಸಿಕೊಳ್ಳುವುದನ್ನು ತಮ್ಮ ಗುರಿಯನ್ನಾಗಿಸಿಕೊಂಡಿದ್ದಾರೆ ವಿಧೂಷಿಣಿ.

Related Stories

Stories by YourStory Kannada