ವಕೀಲರಾಗಿ ಕೆಲ್ಸ ಆರಂಭಿಸಿದ್ರು, ಆದಾಯಕ್ಕೆ ದ್ರಾಕ್ಷಿ ಕೃಷಿ ಕೈಹಿಡಿಯಿತು.

ವಿಸ್ಮಯ

0

ಅದೆಷ್ಟು ಮಂದಿ ಇಂದಿಗೂ ಕೃಷಿಯನ್ನೇ ನಂಬಿ ಜೀವನವನ್ನು ಸಾಗಿಸ್ತಾರೆ. ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಇಲ್ಲಿ ಒಬ್ಬ ವ್ಯಕ್ತಿ ವೃತ್ತಿಯಲ್ಲಿ ವಕೀಲರು, ಸಮಯವಿರುವಾಗ ರೈತರು..! ಅರೇ ಇದು ಹೇಗೆ ಸಾಧ್ಯ ಅಂತೀರಾ? ಹೌದು ಎರಡೆರಡು ಕೆಲಸವನ್ನು ಹೇಗೆ ಮಾಡ್ತಾರೆ ಅನ್ನೋ ಅನುಮಾನ ಇರುತ್ತೆ. ಆದ್ರೆ ಅದೆಷ್ಟೊ ಜನ ಕೃಷಿಯಲ್ಲಿ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ಅತ್ಯಮೂಲ್ಯ ಜೀವವನ್ನು ಕಳೆದಕೊಂಡು ತಮ್ಮನ್ನೇ ನಂಬಿಕೊಂಡಿರೋ ಜೀವಗಳಿಗೆ ನೋವುಂಟು ಮಾಡ್ತಾರೆ. ಆದರೆ ಈ ವ್ಯಕ್ತಿ ತುಂಬಾನೇ ಸ್ಪೆಷಲ್.

ವಯಸ್ಸು ಇನ್ನು ಕೇವಲ 33 ವರ್ಷ. ವೃತ್ತಿಯಲ್ಲಿ ವಕೀಲರು. ಜೊತೆಗೆ ರೈತರು ಕೂಡ. ಅರೇ ಇದೆನಾಪ್ಪ ಅಂತ ಆಶ್ಚರ್ಯ ಆಗಬಹುದು. ಆದ್ರೆ ಇವ್ರನ್ನು ನೋಡಿದ್ರೆ ಸಾಕು ಖುಷಿಯಾಗುತ್ತೆ. ಯಾಕೆಂದರೆ ಕೃಷಿ ನಂಬಿಕೊಂಡು ಅದೆಷ್ಟೂ ಜನ ಆತ್ಮಹತ್ಯೆ ಮಾಡಿಕೊಳ್ಳತ್ತಾರೆ. ಆದರೆ ಇವ್ರು ಎಲ್ಲರಿಗೂ ಮಾದರಿಯಾಗಿ ಕೃಷಿಯಿಂದಾಗಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅಂದಹಾಗೇ ಆ ವ್ಯಕ್ತಿ ವಿಜಯಪುರ ಬಸವನಬಾಗೇವಾಡಿಯ ಶಿವಾನಂದ ಮುತ್ತಪ್ಪ ಒಣರೊಟ್ಟಿ.

ಇದನ್ನು ಓದಿ

ಮೌಸ್ ಹಿಡಿಯಬೇಕಾಗಿದ್ದ ಕೈಯಲ್ಲಿ ಕತ್ತರಿ ಹಿಡಿದು ಹೆಸರು ಗಳಿಸಿದ ವಿನ್ಯಾಸಕಿ

ಕೃಷಿಯನ್ನೇ ನಂಬಿಕೊಂಡು ಸಂತೋಷವಾಗಿರಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕೃಷಿ ಯಾವತ್ತು ಯಾರನ್ನು ಕೈಬಿಡೋದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಅಂತಾರೆ. ಇನ್ನು ಒಂದೇ ಬೆಳೆಗೆ ಸೀಮಿತವಾಗಿರದೇ ವಿವಿಧ ಬೆಳೆಗಳನ್ನ ಬೆಳೆಯಬೇಕು ಎಂದು ಕಿವಿಮಾತು ಹೇಳತ್ತಾರೆ. ಆಲಮಟ್ಟಿ ರಸ್ತೆಯ ಇಂದಿರಾನಗರದಲ್ಲಿ ಎಂಟು ಎಕರೆ ನೀರಾವರಿ ಭೂಮಿಯಲ್ಲಿ ಎರಡು ಎಕರೆ ದ್ರಾಕ್ಷಿ ಬೆಳೆದರು. ಒಣದ್ರಾಕ್ಷಿಯಲ್ಲಿನ ವರ್ಷದ ಆದಾಯ ಹೆಚ್ಚು ಕಡಿಮೆ ಅಂದರೂ 4 ಲಕ್ಷ ರೂಪಾಯಿ. 8 ಎಕರೆ ನೀರಾವರಿ ಭೂಮಿಯಲ್ಲಿ 6 ಎಕರೆ ದವಸ ಧಾನ್ಯಗಳಿಗೆ ಮೀಸಲಿಟ್ಟು, ಅದ್ರಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾರೆ.

ದ್ರಾಕ್ಷಿ ಬೆಳೆ ಜೊತೆಜೊತೆಗೆ ಜೋಳ ಬೆಳೆತ್ತಾರೆ..

8 ಎಕರೆ ಜಮೀನಿನಲ್ಲಿ 6 ಎಕರೆ ದವಸ ಧಾನ್ಯಗಳಿಗೆ ಜಾಗ ಬಿಟ್ಟು, ಅದರಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನುಳಿದ 2 ಎಕರೆಯಲ್ಲಿ ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಇದಕ್ಕಾಗಿ ಬಾವಿಯ ನೀರನ್ನು ಬಳಸಿಕೊಳ್ಳತ್ತಾರೆ.

ಯಾವ ರೀತಿ ದ್ರಾಕ್ಷಿ ಬೆಳೆ ಬೆಳೆಯುತ್ತಾರೆ?

ಶಿವಾನಂದ ಅವರು ಥಾಮ್ಸನ್ ಗಣೇಶ ತಳಿಯ ದ್ರಾಕ್ಷಿಯನ್ನು ಟೆಲಿಫೋನ್ ಪದ್ಧತಿಯಲ್ಲಿ ಬೆಳೆಯುತ್ತಾರೆ. ಸುಮಾರು 1050 ಗಿಡಗಳಿವೆ. ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ಗಿಡಗಳನ್ನು ನೆಡಲಾಗಿದೆ. ಆರು ತಿಂಗಳು ಡಾಗ್ರೊಜ್ ಗಿಡ ಬೆಳೆಸಿದ್ದಾರೆ. ಬಳಿಕ ತಮಗೆ ಬೇಕಾದ ತಳಿಗೆ ಮುಂದೆ ಕಸಿ ಕಟ್ಟಿದ್ದಾರೆ. ಅದರ ಆಚೆ 18 ತಿಂಗಳಿಗೆ ಅಂದರೆ ಒಟ್ಟು ಗಿಡಕ್ಕೆ 2 ವರ್ಷಗಳಾಗುವಷ್ಟರಲ್ಲಿ ದ್ರಾಕ್ಷಿ ಫಸಲು ಕೈಗೆ ಸಿಗುತ್ತೆ ಅಂತಾರೆ ಶಿವಾನಂದ. ವರ್ಷಕ್ಕೆ ಒಂದು ಫಸಲು ಸಿಗುವುದರಿಂದ 5-6 ತಿಂಗಳು ಕಾಲ ದ್ರಾಕ್ಷಿ ಸಿಗುತ್ತೆ.

ದ್ರಾಕ್ಷಿ ಗಿಡಗಳಿಗೆ ಮಕ್ಕಳಂತೆ ಆರೈಕೆ...

ರೈತ ಶಿವನಾಂದ ದ್ರಾಕ್ಷಿ ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡತ್ತಾರೆ. ಕಾಡುವ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಔಷದೋಪಚಾರ ಮಾಡತ್ತಾರೆ. ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿ ಕಾಂಟಪ್, ನ್ಯೂಸ್ಟಾರ್, ಆಯಿಸ್ಟಾರ್, ಮಟಗೊ, ಆಕ್ರೊಬಿಟ್, ಕರ್ಜಟ್, 2-28ಗಳಂತ ಸೂಕ್ತ ಔಷಧಗಳನ್ನು ಬಳಸುತ್ತಾರೆ. ಏಪ್ರಿಲ್ ತಿಂಗಳಲ್ಲಿ ಚಾಟವಿ ಮಾಡಿ 5 ತಿಂಗಳ ಕಡ್ಡಿ ಬೆಳೆಸಿ ಕಡ್ಡಿ ಕೆಂಪು ಆದ ನಂತರ ಅಕ್ಟೋಬರ್ ತಿಂಗಳಲ್ಲಿ ಕಾಯಿ ಚಾಟನಿ ಮಾಡಿ ಮುಂದೆ ಜನವರಿಯಲ್ಲಿ ಕಾಯಿ ಶುಗರ್ ಆಗಿ ಮಾರಾಟಕ್ಕೆ ಸಿದ್ದವಾಗುತ್ತೆ ಅಂತಾರೆ ಶಿವಾನಂದ. ಹಸಿ ದ್ರಾಕ್ಷಿಗಿಂತ ಒಣದ್ರಾಕ್ಷಿಗೆ ಉತ್ತಮ ಬೆಲೆ ಇರುವುದರಿಂದ ಕಾಯಿ ಪೂರ್ತಿಯಾಗಿ ಶುಗರ್ ಬಂದಾಗ ಕೂಡಲೇ ಕತ್ತರಿಸಿ ಪ್ರತ್ಯೇಕ ಶೆಡ್ ಮಾಡಿ ಒಣಗಿಸುತ್ತಾರೆ. ಸೂಕ್ತ ನೆರಳಿನಲ್ಲೇ ಒಣಗಿಸಬೇಕಿರುವುದರಿಂದ ನೆರಳಿಗೆ ಅನುಗುಣವಾದ ಶೇಡ್ ನೆಟ್ ಅಡಿ ಒಣಗಿಸಬೇಕಾಗುತ್ತೆ. ಬಿಸಿಲು ಹಾಗೂ ಗಾಳಿ ಇದ್ದರೆ 10ರಿಂದ 11 ದಿನಗಳಲ್ಲಿ ಒಣದ್ರಾಕ್ಷಿ ಸಿದ್ಧ ವಾಗುತ್ತೆ. ಇದನ್ನು ಮಹಾರಾಷ್ಟದ ಸಾಂಗ್ಲಿಯಲ್ಲಿರುವ ತಾಸಗಾಂವ ಮಾರುಕಟ್ಟೆಗೆ ಹಾಕುತ್ತಾರೆ.

ಇನ್ನು ಶಿವಾನಂದ ಬೆಳಗ್ಗೆ 7ರಿಂದ 9ಗಂಟೆಯವರೆಗೂ ತೋಟದಲ್ಲಿ ಕೆಲಸ ನಿರ್ವಹಿಸ್ತಾರೆ. ನಂತರ ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ಸಂಜೆ 5 ಗಂಟೆ ತನಕ ಕೆಲಸ ಮಾಡಿ. ನಂತರ 5ರಿಂದ 6. 30ರವರೆಗೆ ಮತ್ತೆ ತೋಟದಲ್ಲಿ ತೊಡಗುತ್ತಾರೆ. ಒಟ್ಟಾರೆ ಕೃಷಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಕೈಸುಟ್ಟುಕೊಂಡವಿ ಅನ್ನೋವ್ರ ಮಧ್ಯೆ, ಇವರು ಕೃಷಿಯಿಂದಲೇ ಲಕ್ಷ ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಕೃಷಿ ನಂಬಿದವರ ಸಮೃದ್ಧ ಬದುಕು ಸರ್ವಬೆಳೆ ಶಿವಾನಂದಂ ಆಗಿದೆ. ಇವರು ಎಲ್ಲ ರೈತರಿಗೂ ಪ್ರೋತ್ಸಾಹದ ಚಿಲುಮೆಯಾಗಿದ್ದಾರೆ.

ಇದನ್ನು ಓದಿ

1. ಮಗುವಿನ ಕೈಯಲ್ಲಿ ವಾಚ್​ ಇದ್ರೆ, ಟೆನ್ಶನ್​ನ ಮಾತೇ ಇಲ್ಲ..!

2. ಬಡ ಮಕ್ಕಳ ಪಾಲಿಗೆ ಬದುಕಿನ ಭರವಸೆ ‘ದೀಪಾಲಯ’

3. ಹೊಸ ವರ್ಷ ಬೊಜ್ಜಿನಿಂದ ಮುಕ್ತಿ ಹೊಂದಬೇಕಾ? ಋತು ರಾಣಿ ಕೊಡ್ತಾರೆ ಟಿಪ್ಸ್