ಸಿರಿಧಾನ್ಯ ಮೇಳಗಳಲ್ಲಿ ಮಿಂಚಿದ “ಕನಸಿನ ಮರ”- ಗ್ರಾಹಕರ ಅಭಿಮತಗಳೇ ಸರಕಾರಕ್ಕೆ ವರ..!

ಟೀಮ್​ ವೈ.ಎಸ್​. ಕನ್ನಡ

ಸಿರಿಧಾನ್ಯ ಮೇಳಗಳಲ್ಲಿ ಮಿಂಚಿದ “ಕನಸಿನ ಮರ”-  ಗ್ರಾಹಕರ ಅಭಿಮತಗಳೇ ಸರಕಾರಕ್ಕೆ ವರ..!

Monday May 01, 2017,

2 min Read

ಕರ್ನಾಟಕ ಸರಕಾರ ಆಯೋಜಿಸಿದ್ದ ದೇಶದ ಮೊತ್ತ ಮೊದಲ ಸಾವಯವ ಕೃಷಿ ಧಾನ್ಯ ಮೇಳ ಹಲವರ ಗಮನ ಸೆಳೆದಿದೆ. ರಾಜ್ಯ ಸರಕಾರ ಆಯೋಜಿಸಿದ್ದ ಮೇಳ ಇತರೆ ರಾಜ್ಯಗಳನ್ನು ಇತ್ತ ನೋಡುವಂತೆ ಮಾಡಿದೆ. ಮೊದಲ ಎರಡು ದಿನಗಳಲ್ಲೇ ಸುಮಾರು 30,000ಕ್ಕಿಂತಲೂ ಅಧಿಕ ಜನರು ಇದರಲ್ಲಿ ಭಾಗಿಯಾಗಿದ್ದರು. ಮೇಳದಲ್ಲಿ ಹಾಕಲಾಗಿದ್ದ ಸ್ಟಾಲ್​ಗಳಲ್ಲಿ ಧಾನ್ಯಗಳಿಂದ ತಯಾರಾಗಿದ್ದ ಆಹಾರಗಳ ರುಚಿ ನೋಡಿದ್ದರು. ರಾಜ್ಯ ಕೃಷಿ ಸಚಿವರಾದ ಕೃಷ್ಣ ಬೈರೇಗೌಡರು ಹಲವು ಉದ್ದೇಶಗಳಿಂದ ಮೇಳವನ್ನು ಆಯೋಜಿಸಿದ್ದರು.

image


“ ಸಿರಿಧಾನ್ಯ ಮೇಳಕ್ಕೆ ಹಲವು ಗ್ರಾಹಕರು ಆಗಮಿಸಿದ್ದರು. ಆರೋಗ್ಯಯುತ ಜೀವನಕ್ಕೆ ಯಾವ ಆಹಾರ ಸೂಕ್ತ ಅನ್ನುವುದನ್ನು ಅರಿತುಕೊಂಡು ಹೋಗಿದ್ದಾರೆ. ಮೇಳದ ಮೂಲಕ ರೈತರಿಗೂ ಅವರು ಬೆಳೆಯುವ ಸಿರಿಧಾನ್ಯಗಳಿಗೆ ಎಷ್ಟು ಮಹತ್ವವಿದೆ ಅನ್ನುವುದನ್ನು ಅರಿತುಕೊಂಡಿದ್ದಾರೆ. ಜೈವಿಕ ಮತ್ತು ಸಾವಯವ ಕೃಷಿಗೆ ಇರುವ ಮಹತ್ವವನ್ನು ರೈತರು ಗಮನಿಸಿದ್ದಾರೆ.”
ಕೃಷ್ಣ ಬೈರೇಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಮೇಳದ ಮೂರೂ ದಿನವು ಗಮನ ಸೆಳೆದಿದ್ದು ಅಷ್ಟೂ ಜನರ ಮಧ್ಯೆದಲ್ಲಿ ಸಂಬಂಧ ಬೆಳೆಸಿದ ಕನಸಿನ ಮರ. ಈ ಕನಸಿನ ಮರದಲ್ಲಿ ಹಲವು ಅಭಿಮತಗಳನ್ನು ಬರೆದು ಅಂಟಿಸಿದ್ದರು. ಇದು ಸರಕಾರಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಭವಿಷ್ಯದ ದಿನಗಳಲ್ಲಿ ಮಾಡಬೇಕಿರುವ ಯೋಜನೆಗಳಿಗೆ ವಿಸ್ತೃತ ರೂಪ ನೀಡಲು ಸಹಾಯ ಮಾಡಿದೆ.

ಇದನ್ನು ಓದಿ: ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಕನಸಿನ ಮರವನ್ನು ಮೇಳಕ್ಕೆ ಶುಭ ಹಾರೈಸಲು ಚಿತ್ರಿಸಲಾಗಿತ್ತು. ಆದ್ರೆ ಮೇಳದ ಕೊನೆಯಲ್ಲಿ ಆ ಕನಸಿನ ಮರವೇ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅಷ್ಟೇ ಅಲ್ಲ ಆರೋಗ್ಯಯುತ ಜೀವನಕ್ಕೆ ಮತ್ತು ಭವಿಷ್ಯದ ಕನಸಿಗೆ ಪ್ರೇರಣೆ ಆಗಿತ್ತು.

image


ಇವತ್ತು ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯವಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಪರಿಸರವನ್ನು ಸಂರಕ್ಷಿಸುವ ಹಾಗೂ ನೀರಿನ ಅಭಾವದ ನಡುವೆ ಉತ್ತಮ ಬೆಳೆ ಬೆಳೆಯುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದಾಗಿದೆ. ಸಿರಿಧಾನ್ಯಗಳಿಗೆ ಭತ್ತ, ಗೋದಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇಕಡಾ 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯೋದಿಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡಲಿದೆ.

“ ರೈತರು ತಾನು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯಬೇಕು. ಹಾಗಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.”

ಈ ಮಾತು ನಿಜಕ್ಕೂ ಸತ್ಯ ಅನಿಸುತ್ತಿದೆ. ಯಾಕಂದ್ರೆ ಭಾರತದ ಜನಸಂಖ್ಯೆಯಲ್ಲಿ ಶೇಕಡಾ 60ರಷ್ಟು ಜನರು ಕೃಷಿಯನ್ನೇ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಆದ್ರೆ ಈ ಪೈಕಿ ಕೇವಲ ಶೇಕಡಾ 2ರಷ್ಟು ಜನರು ಮಾತ್ರ ಕೃಷಿಯಿಂದ ಜೀವನವನ್ನು ಸಮೃದ್ಧವನ್ನಾಗಿ ಮಾಡಿಕೊಂಡಿದ್ದಾರೆ. ದೇಶದ ಜಿಡಿಪಿಗೆ ಕೊಡಗೆ ನೀಡಿದ್ದಾರೆ. ಆದ್ರೆ ಉಳಿದ ಶೇಕಡಾ 58ರಷ್ಟು ಕೃಷಿಕರ ಕಥೆ ಏನು.. ? ದೇಶದ ಜನರ ಹೊಟ್ಟೆ ತುಂಬಿಸುವ ಕೃಷಿಕರ ಸ್ಥಿತಿ ಹೇಗಿದೆ ಅನ್ನೋದನ್ನ ನಾವೇ ಯೋಚನೆ ಮಾಡಬಹುದು.

image


“ ಒಂದು ಕ್ವಿಂಟಾಲ್ ಸಿರಿಧಾನ್ಯಗಳನ್ನು ಬೆಳೆದ್ರೆ ರೈತರಿಗೆ ಕೇವಲ 3000 ರೂಪಾಯಿ ಸಿಗುತ್ತದೆ. ಆದ್ರೆ ಇಂದು ಕ್ವಿಂಟಾಲ್ ಭತ್ತ ಬೆಳೆದ್ರೆ 32,000 ರೂಪಾಯಿ ಸಿಗುತ್ತದೆ. ಹೀಗಾಗಿ ಕಡಿಮೆ ಬಂಡವಾಳ ಸಿರಿಧಾನ್ಯಗಳಿಗೆ ಸಾಕು ಅನಿಸಿದ್ರೂ, ಭತ್ತಕ್ಕಿರುವ ಬೇಡಿಕೆ ರೈತರನ್ನು ಅತ್ತ ಕಡೆ ಮುಖ ಮಾಡುವಂತೆ ಮಾಡಿದೆ. ”

ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ಆಕರ್ಷಣೆಯ ಕೇಂದ್ರಬಿಂದು. ಈ ಹಿಂದೆ ರಾಗಿ, ಜೋಳದಂತಹ ಧಾನ್ಯಗಳನ್ನು ಕೇವಲ ಬಡ ಕೃಷಿಕರ ಆಹಾರ ಎಂದು ಪರಿಗಣಿಸಲಾಗಿತ್ತು. ಆದ್ರೆ ಇವತ್ತು ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯ ಎಲ್ಲರಿಗೂ ಬೇಕೇ ಬೇಕು. ಕರ್ನಾಟಕ ಸರಕಾರದ ಮಾನ್ಯ ಕೃಷಿ ಸಚಿವರಾದ ಕೃಷ್ಣ ಬೈರೇಗೌಡರು, ಕೇವಲ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಕೇಂದ್ರವನ್ನು ಸಿರಿಧಾನ್ಯ ಮೇಳದಲ್ಲಿ ಉದ್ಘಾಟಿಸಿ ಹೊಸ ಶಕೆಗೆ ಮುನ್ನುಡಿ ಬರೆದಿದ್ದಾರೆ.

ಕಾಲ ಬದಲಾದ ಹಾಗೇ ಆರೋಗ್ಯದಲ್ಲಿ ಏರುಪೇರಾಗಿದೆ. ಈಗ ಆರೋಗ್ಯವನ್ನು ಮತ್ತೆ ಪಡೆಯುವ ತವಕ ಹೆಚ್ಚುತ್ತಿದೆ. ಸಿರಿಧಾನ್ಯಗಳಂತ ಮೇಳಗಳು ರೈತರಿಗೆ ಮತ್ತು ಗ್ರಾಹಕರ ಯೋಚನಾ ಲಹರಿಯನ್ನು ಬದಲಿಸಬಲ್ಲದು. 

ಇದನ್ನು ಓದಿ:

1. ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

2. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...

3. ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ…