ಮಹಿಳೆಯರ ಫ್ಯಾಷನ್ ಜಗತ್ತಿಗೆ ಹೊಸ ವಿನ್ಯಾಸ ನೀಡುತ್ತಿದ್ದಾರೆ ಈ ಪುರುಷ ಉದ್ಯಮಿಗಳು

ಟೀಮ್​​ ವೈ.ಎಸ್​​.

0

ಇದೊಂದು ಆಶ್ಚರ್ಯದ ಸಂಗತಿ. ಅಷ್ಟೇ ಆಶ್ಚರ್ಯಕರ ಔದ್ಯಮಿಕ ಪ್ರಗತಿಯೂ ಹೌದು. ಯಾಕಂದರೇ ಈ ಉದ್ಯಮವನ್ನು ಆರಂಭಿಸಿದವರೆಲ್ಲಾ ಗಂಡಸರು ಆದರೆ ಈ ಉದ್ಯಮ ಸಂಬಂಧಪಟ್ಟಿದ್ದು ಹೆಣ್ಣುಮಕ್ಕಳು ಆಸಕ್ತಿ ಹೊಂದಿರುವ ವಿನ್ಯಾಸಕರ ವಸ್ತುಗಳ ಆನ್​​ಲೈನ್ ಮಾರಾಟ. ಅಂದ ಹಾಗೆ ಈ ಉದ್ಯಮವನ್ನಾರಂಭಿಸಿದ ಸಂಸ್ಥೆ ಲೇಡಿಬ್ಲಶ್.

ಅತಿ ಹೆಚ್ಚಿನ ಆಯ್ಕೆಗಳ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶುರುಮಾಡಿದ ಸಂಸ್ಥೆ ಲೇಡಿಬ್ಲಶ್. ಲೇಡಿಬ್ಲಶ್ ಸಂಸ್ಥೆಯನ್ನು ಸ್ಥಾಪಿಸಿದ ಹಾಗೂ ಸಿಇಓ ಕೂಡ ಆಗಿರುವ ರಾಹುಲ್ ಸೇಥಿ ಹೇಳುವಂತೆ, ಈ ಸಂಸ್ಥೆಯನ್ನು ಆರಂಭಿಸಿದ ಸಂದರ್ಭದಲ್ಲಿ ಆನ್​ಲೈನ್ ಹಾಗೂ ಇ-ಕಾಮರ್ಸ್ ವೆಂಚರ್​​ಗಳು ಔದ್ಯಮಿಕ ಕ್ಷೇತ್ರದಲ್ಲಿ ಕಾವು ಪಡೆದುಕೊಂಡಿದ್ದವು. ಹಾಗಾಗಿ ಈ ಪರಿಸರದಲ್ಲಿ ಒಂದು ನಿರ್ದಿಷ್ಟ ಮಾದರಿಯನ್ನು ಹುಟ್ಟುಹಾಕುವುದು ಅವರಿಗೆ ಅತ್ಯಂತ ತ್ರಾಸದಾಯಕ ಕೆಲಸವಾಗಿತ್ತು.

ಲೇಡಿಬ್ಲಶ್​​ನ ಆದಿ ಹಾಗೂ ಸಂಶೋಧನೆ:

ಬ್ಯಾಂಕಾಕ್ ಮೂಲದ ಆಲ್ಫಾ ಫೌಂಡರ್​​ನಿಂದ ಸುಮಾರು 4 ಮಿಲಿಯನ್ ಯುಎಸ್ ಡಾಲರ್ ಸಾಂಸ್ಥಿಕ ಬಂಡವಾಳ ಹೂಡಿಕೆ ಮಾಡುವ ಮೂಲಕ 2012ರ ಆರಂಭದಲ್ಲಿ ರಾಹುಲ್ ಸೇಥಿ, ಸುನೀತ್ ಮಂಚಂಡ ಹಾಗೂ ನಾಗಾರ್ಜುನ್ ಶ್ರೀವಾತ್ಸವ್ ಆರಂಭಿಸಿದ ಸಂಸ್ಥೆ ಲೇಡಿ ಬ್ಲಶ್. ರಾಹುಲ್ ಈಗಾಗಲೆ ಹೇಳಿರುವಂತೆ ಅವರು ಸಂಸ್ಥೆಯನ್ನು ಆರಂಭಿಸುವ ವೇಳೆಗಾಗಲೆ ಇ-ಕಾಮರ್ಸ್ ತನ್ನ ಗತಿಯನ್ನು ವಿಸ್ತರಿಸಿಕೊಳ್ಳುತ್ತಿತ್ತು. ಇದೇ ತರ್ಕದಲ್ಲೇ ತಮ್ಮ ವ್ಯವಹಾರ ಆರಂಭಿಸಿದ ಈ ತ್ರಿಮೂರ್ತಿಗಳು ಮಹಿಳೆಯರ ಆಲಂಕಾರಿಕ ವಿನ್ಯಾಸ ಹಾಗೂ ಫ್ಯಾಶನ್ ಕ್ಷೇತ್ರದಲ್ಲಿಯೇ ಉದ್ಯಮ ಆರಂಭಿಸಿದರು.

ಈ ಮೂವರು ತಮ್ಮ ದಾಸ್ತಾನುಗಳಿಗೆ ಮಾರುಕಟ್ಟೆಯನ್ನು ಒದಗಿಸುವಲ್ಲಿ ಕಾರ್ಯನಿರತವಾಗಿದ್ದರು. ಆದರೆ ಅವರಿಗೆ ತಮ್ಮ ಹಣವನ್ನು ಸುಮ್ಮನೇ ಪ್ರಚಾರಕ್ಕಾಗಿ ವಿನಿಯೋಗಿಸುವುದು ಇಷ್ಟವಿರಲಿಲ್ಲ. ಆಗ ರಾಹುಲ್ ಹಾಗೂ ಸುನೀತ್ ನ್ಯಾಸ್ಪರ್ ಹಾಗೂ ಟೆನ್ಸೆಂಟ್ ಸಂಸ್ಥೆಗಳು ನಿರ್ವಹಣಾ ಘಟಕ ನೋಡಿಕೊಳ್ಳುತ್ತಿದ್ದರು. ನಾಗಾರ್ಜುನ್ ಲಂಡನ್ ಮೂಲದ ದಿಟ್ರೈನ್ಆನ್​ಲೈನ್.ಕಾಮ್ ಸಂಸ್ಥೆಯ ಭಾರತೀಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಇದೇ ವೇಳೆ ಈ ಮೂವರು ಲೇಡಿಬ್ಲಶ್​​ಗೆ ತಮ್ಮ ಸಂಪರ್ಕಗಳನ್ನು ಉಪಯೋಗಿಸಿಕೊಂಡು ಪ್ರಾಧಾನ್ಯತೆ ನೀಡಲು ಯೋಜಿಸಿದ್ದರು.

ಮಹಿಳೆಯರ ಅಭಿರುಚಿ ಹಾಗೂ ಆಸಕ್ತಿಯನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ ಹಾಗಾಗಿ ನಮಗೆ ಇದರ ಆರಂಭದಲ್ಲಿ ಸಾಕಷ್ಟು ಸಮಯ ಹಿಡಿಯಿತು ಅಂತಾರೆ ರಾಹುಲ್. ಭಾರತೀಯ ಮಾರುಕಟ್ಟೆಯಲ್ಲಿ ಫ್ಯಾಷನ್ ಉದ್ಯಮ ಇನ್ನೂ ಸಗಟು ಜವಳಿ ವ್ಯಾಪಾರಿಗಳು ಹಾಗೂ ಇ-ಟೈಲರ್​​ನಂತಹ ಸಂಸ್ಥೆಗಳ ಹಿಡಿತದಲ್ಲೇ ಇತ್ತು. ಹಾಗಾಗಿ ಫ್ಯಾಷನ್ ಜಗತ್ತಿನಲ್ಲಿ ಹೊಸ ಆಯಾಮ ಸೃಷ್ಟಿಸಲು ಲೇಡಿಬ್ಲಶ್ ಸಂಸ್ಥೆ ತನ್ನ ನವೀನ ವಿನ್ಯಾಸದ ಉತ್ಪನ್ನಗಳನ್ನು ನೇರವಾಗಿ ವರ್ತಕರಿಗೆ ಕಳಿಸುವ ಮಾನದಂಡವನ್ನಿಟ್ಟುಕೊಂಡು ಕಾರ್ಯಾಚರಣೆಗೆ ಇಳಿಯಿತು.

ಏರಿಳಿತಗಳು ಹಾಗೂ ಗಳಿಕೆ ಕಳೆದುಕೊಳ್ಳುವಿಕೆಯ ಆರಂಭ:

ಪ್ರತಿಯೊಂದು ಸಂಸ್ಥೆಯನ್ನು ಪ್ರಾರಂಭಿಸುವುದು ಒಂದು ರೀತಿಯಲ್ಲಿ ಮೊದಲು ಆಟವಾಡುವಾಗ ಹೊಸ ಬಾಲನ್ನು ಎದುರಿಸುವ ರೀತಿಯದ್ದು. ಇದರಲ್ಲಿ ಏರಿಳಿತಗಳು ಹಾಗೂ ಗಳಿಸಿಕೊಳ್ಳುವುದು ಕಳೆದುಕೊಳ್ಳುವುರ ಸಮೀಕರಣ ಸರ್ವೇಸಾಮಾನ್ಯ. ಈ ಮಾತುಗಳನ್ನಾಡಿದ ರಾಹುಲ್ ತಮ್ಮ ಅನುಭವಗಳನ್ನು ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹೋಲಿಸಿದ್ದಾರೆ. ಎಷ್ಟೇ ಬಾರಿ ಹಿಂದೆ ಈ ಎರಡು ತಂಡಗಳ ನಡುವಿನ ಪಂದ್ಯ ನೋಡಿದ್ದರೂ ಪ್ರತಿ ಬಾರಿ ನೋಡಿದಾಗಲೂ ಅದೇ ಉತ್ಸಾಹ ಇದ್ದೇ ಇರುತ್ತದೆ. ಅಂತಿಮ ಫಲಿತಾಂಶಗಳೇನೇ ಇರಲಿ, ಉದ್ಯಮವನ್ನು ಆರಂಭಿಸುವ ಪ್ರತಿಯೊಬ್ಬರಿಗೂ ಇಂತಹ ರೋಚಕ ಅನುಭವಗಳು ಖಂಡಿತಾ ಆಗುತ್ತದೆ ಅನ್ನುವುದು ರಾಹುಲ್​​ ಅಭಿಮತ.

2003ರಲ್ಲಿ ಸಂಸ್ಥೆಯ ಪಯಣ:

2003, ಲೇಡಿಬ್ಲಶ್ ಸಂಸ್ಥೆಯ ಪಾಲಿಗೆ ಅತಿ ದೊಡ್ಡ ತಿರುವು ನೀಡಿದ ಸಮಯ. ಈ ಅವಧಿಯಲ್ಲಿ ಸಂಸ್ಥೆ ತನ್ನ ನಿರ್ದಿಷ್ಟ ಆದಾಯ ಅಳತೆಮಾಡಲು ಸಾಧ್ಯವಾಯಿತು. ಲೇಡಿಬ್ಲಶ್ ತನ್ನ ಬೆಳವಣಿಗೆಗಿಂತ ದರ ನಿಗದಿ ಹಾಗೂ ಪ್ರಮಾಣಗಳ ಅವಲೋಕನಕ್ಕೆ ಮುಂದಾಯಿತು.

ಇದೇ ವರ್ಷ ಸಂಸ್ಥೆ ತನ್ನ ಅವಶ್ಯಕತೆಗಳಿಂದ ನಾಪತ್ತೆಯಾಗಿದ್ದ ಪರಿಣಿತರ ತಂಡ ಕಟ್ಟಿಕೊಂಡಿತು. ಸುರುಚಿ ಸಾವ್ಹ್ನಿ ಸಂಸ್ಥೆಯ ಆಡಳಿತ ಸಮಿತಿಗೆ ಸೇರಿಕೊಂಡಿದ್ದು ಇದೇ ವರ್ಷ. ದಶಕಗಳಿಂದ ಸುರುಚಿ ಮಹಿಳೆಯರ ಫ್ಯಾಷನ್ ವಿನ್ಯಾಸಕಿಯಾಗಿ, ಉತ್ಪಾದಕರಾಗಿ ಹಾಗೂ ಮಾರಾಟಗಾರರಾಗಿ ಅನುಭವ ಹೊಂದಿದ್ದರು. ಟಾಪ್ ಬ್ರಾಂಡ್ ಸಂಸ್ಥೆಗಳಾದ ಎಎಸ್ಓಎಸ್, ಟಾಪ್ಶಾಪ್, ಮಾರ್ಕ್ಸ್ ಎಂಡ್ ಸ್ಪೆನ್ಸರ್, ರೆನಿಡೆರಿ, ಮಿಕೈಲ್ ಕೋರ್ಸೆ ಹಾಗೂ ಮೋರ್​ಗಳಲ್ಲಿ ಅವರು ಕೆಲಸ ನಿರ್ವಹಿಸಿದ್ದರು. ಈ ಉದ್ಯಮದಲ್ಲಿ ಅಗಾಧ ಜ್ಞಾನ ಹೊಂದಿದ್ದ ಸುರುಚಿ ಸೇರ್ಪಡೆ ಲೇಡಿಬ್ಲಶ್ ಸಂಸ್ಥೆಗೆ ಹೊಸ ಬಲ ನೀಡಿತು. ಸಂಸ್ಥೆಯ ವಿನ್ಯಾಸ, ಶೈಲಿ, ಫ್ಯಾಶನ್ ಉತ್ಪನ್ನಗಳಲ್ಲಿ ಬದಲಾವಣೆ ಹಾಗೂ ಟ್ರೆಂಡ್ ಸೆಟ್ ಮಾಡುವಲ್ಲಿ ಸುರುಚಿಯವರ ಪಾತ್ರವೂ ಮಹತ್ವದ್ದು.

ಈವರೆಗಿನ ಸಂಸ್ಥೆಯ ಮಾಪನ:

ಪ್ರಸ್ತುತ ಲೇಡಿಬ್ಲಶ್ ಪ್ರತಿ ತಿಂಗಳು ಸಾವಿರಾರು ಬೇಡಿಕೆ ಪಡೆದುಕೊಳ್ಳುತ್ತಿದೆ. ಪ್ರತಿ ತಿಂಗಳಿನಿಂದ ತಿಂಗಳಿಗೆ ಇದರ ಬೇಡಿಕೆಯ ಪ್ರಮಾಣ ಶೇ.20-25ರಷ್ಟು ಹೆಚ್ಚಳವಾಗುತ್ತಿದೆ. ಹಾಗಾಗಿ ಇದು ಸಂಸ್ಥೆಯ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ. ಆದರೂ ದರ ನೀತಿ ರೂಪಿಸುವಲ್ಲಿ ಸಂಸ್ಥೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಜೊತೆಗೆ ನವೀನ ತಂತ್ರಜ್ಞಾನಗಳ ಮೂಲಕ ಅವರನ್ನು ಹೊಸ ರೀತಿಯಾಗಿ ಅಪ್ರೋಚ್ ಮಾಡುವತ್ತಲೂ ಸಂಸ್ಥೆ ಗಮನ ಹರಿಸುತ್ತಿದೆ.

ಮುಂದಿನ ಯೋಜನೆ ಹಾಗೂ ಔದ್ಯಮಿಕ ಪ್ರಗತಿಯ ಕುರಿತಾಗಿ ಸಂಕ್ಷಿಪ್ತ ಮಾತು:

ನಮ್ಮ ಸಂಸ್ಥೆಯನ್ನು ಕಟ್ಟುವ ಪ್ರತಿಯೊಂದು ಗಳಿಗೆಯನ್ನು ನಾವು ಆಸ್ವಾದಿಸುತ್ತಿದ್ದೇವೆ. ಯಾವ ಸವಾಲುಗಳನ್ನೂ ಹಗುರವಾಗಿ ಪರಿಗಣಿಸದೇ ಎದುರಿಸುತ್ತಿದ್ದೇವೆ ಎಂದಿರುವ ರಾಹುಲ್ ಭವಿಷ್ಯದಲ್ಲಿ ಮತ್ತಷ್ಟು ಸಹಭಾಗಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೊಸ ಸವಾಲು ಹಾಗೂ ಬೆಳವಣಿಗೆಗೆ ಸಿದ್ಧರಾಗುತ್ತಿದ್ದೇವೆ ಎಂದಿದ್ದಾರೆ. ನಮ್ಮ ಈ ಉದ್ಯಮಶೀಲತೆಯ ಪಯಣದಲ್ಲಿ ಸರಿಸಮಾನವಾದ ಒಳ್ಳೆಯ ಹಾಗೂ ಕೆಟ್ಟ ದಿನಗಳಿವೆ ಅನ್ನುವುದನ್ನು ಅವರು ಹೇಳಲು ಮರೆಯಲಿಲ್ಲ. ಹಸಿವಿದ್ದಾಗ, ನಂಬಿಕೆಯಿದ್ದಾಗ ಹಾಗೂ ಬೆಳಕಿನ ನಿರೀಕ್ಷೆಯಿದ್ದಾಗ ನಿಮ್ಮ ಸಂಸ್ಥೆಯನ್ನು ಕಟ್ಟುವುದು ನಿಜಕ್ಕೂ ಸರಳವಾದ ಪ್ರಯತ್ನ ಹಾಗೂ ನಿಮಗೆ ಖಂಡಿತಾ ಜಯ ಕಟ್ಟಿಟ್ಟಬುತ್ತಿ ಅಂತ ರಾಹುಲ್ ಹೇಳಿದ್ದಾರೆ.

Related Stories