ಸರ್ವಜ್ಞ ಅವರ ಕೆಲವು ತತ್ವಗಳು

ಟೀಮ್​​. ವೈ.ಎಸ್​​​

ಸರ್ವಜ್ಞ ಅವರ ಕೆಲವು ತತ್ವಗಳು

Wednesday July 08, 2015,

1 min Read

ಸರ್ವಜ್ಞ ಕನ್ನಡದ ಕವಿ. ಸರ್ವಜ್ಞ 16 ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯ , ಹಿರೇಕೂರ್ ತಾಲ್ಲೂಕುನ, ಅಬಾಲೂರಿನಲ್ಲಿ ಜನಿಸಿದರು. ಇವತ್ತಿಗೂ ಸರ್ವಜ್ಞ ಯಾರು ಎಂಬುದು ನಿಗೂಢವಾಗೆ ಉಳಿದಿದೆ. ಆದರೆ ಇತಿಹಾಸಕಾರರ ಪ್ರಕಾರ ಸರ್ವಜ್ಞ 16ನೇ ಶತಮಾನದಲ್ಲಿ ಜೀವಿಸಿದ್ದರು. ಅವರ ನಿಜವಾದ ಹೆಸರು ಪುಷ್ಪದತ್ತ . ಉರಿನಿಂದ ಉರಿಗೆ ಅಲೆಯುತ್ತಾ ಅಲೆಮಾರಿಯಂತೆ ಜೀವನ ನಡೆಸಿದ್ದರು. ಈತನ ತಂದೆ ಒಬ್ಬ ಬ್ರಾಹ್ಮಣ. ಜನರೆಲ್ಲರೂ ಈತನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಸರ್ವಜ್ಞ ಅನೇಕ ನೀತಿ ಉಪದೇಶಗಳನ್ನು ನೀಡಿದ್ದಾರೆ .

ಸರ್ವಜ್ಞ ಅವರ ಕೆಲವು ಉಲ್ಲೇಖಗಳು

image


1. ಭಕ್ತಿ ಎಂಬುದೇ ಬೀಜ ಮುಕ್ತಿ ಎಂಬುದೇ ಫಲ

2. ಮಜ್ಜಿಗೆ ಇಲ್ಲದ ಊಟ

ಮಜ್ಜನವ ಕಾಣದಾ ಲಜ್ಜೆಗೆಟ್ಟ

ಹೆಣ್ಣಂತೆ ಸರ್ವಜ್ಞ

3. ಸಾಲವನು ಕೊಂಬಾಗ ಹಾಲೋಗರುಂಡಂತೆ

ಸಾಲಿಗರು ಕೊಂಡು ಎಳೆವಾಗ

ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ.

4. ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ ಫಲವೇನು, ಎತ್ತು ಗಾಣವ ಹೊತ್ತು ನಿತ್ಯದಲಿ, ಸುತ್ತಿ ಬಂದಂತೆ .

5. ಗುಣವಿರುವ ಗ೦ಡು ಹೆಣ್ಣುಗಳ ಸ೦ಗಾತ ಹೆಜ್ಜೇನು ಸವಿದ೦ತೆ, ಗುಣವಿರದ ಸ೦ಗಾತ ಕೊಚ್ಚೆಗು೦ಡಿಯ ಹ೦ದಿಯಾ ತೆರನ೦ತೆ .

6. ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು

ಗೋರ್ಕಲ್ಲಮೇಲೆ ಮಳೆಗರೆದರೆ

ಆಕಲ್ಲು ನೀರುಕುಡಿವುದೆ ಸರ್ವಜ್ಞ?

7. ಬೂದಿಯನು ಹಚ್ಚಲು ಕೈಲಾಸಕ್ಕೇ ಹೋಗುವನೆ೦ಬರು, ಬೂದಿಯಲೇ ಹೊರಳಾಡಿದ ಕತ್ತೆ ಕೈಲಾಸಕ್ಕೇ ಹೊಗಳುಂಟೆ ಸರ್ವಜ್ಞ

8. ವೆಚ್ಚಕ್ಕೆ ಹೊನ್ನು, ಬೆಚ್ಚನಾ ಮನೆಯು, ಇಚ್ಚೆಯನರಿತು ಸತಿ ಇದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ

9. ಸರ್ವಜ್ಞ ಎಂಬುವನು ಗರ್ವದಿ೦ ಆದವನೆ

ಎಲ್ಲರ ಬಳಿ ಒಂದು-ಒಂದು ಮಾತನ್ನು ಕಲಿತು

ವಿದ್ಯೆ ಎನ್ನುವ ಪರ್ವತ ಆದ ನಮ್ಮ ಸರ್ವಜ್ಞ

10. ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ

ಸರ್ವರೊಳು ಒಂದೊಂದು ನುಡಿಗಲಿತು

ವಿದ್ಯೆಯ ಪರ್ವತವೆ ಆದ ಸರ್ವಜ್ಞ

    Share on
    close