ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!

ಟೀಮ್​ ವೈ.ಎಸ್​. ಕನ್ನಡ

3

ನೀವು ಯಾವತ್ತಾದರೂ ಕುದುರೆ ಸವಾರಿ ಮಾಡಿದ್ದೀರಾ..?ಅಥವಾ ಕುದುರೆಗಳ ಜೊತೆ ಒಂದಿಷ್ಟು ಸಮಯ ಕಳೆದಿದ್ದೀರಾ..? ಇಲ್ಲಾ ಅಲ್ವಾ..? ಆದ್ರೆ ಈ ಆಸೆಗಳನ್ನ ಆರಾಮಾಗಿ ಪೂರೈಸಿಕೊಳ್ಳಬಹುದು. ನಿಮಗೆ ಅಂತಾನೇ ಬೆಂಗಳೂರಿನ ಕನಕಪುರ ರಸ್ತೆ ಬಳಿ ಕುದುರೆ ಸವಾರಿ ಟ್ರೈನಿಂಗ್ ಸೆಂಟರ್ ಹುಟ್ಟಿಕೊಂಡಿದೆ. "ಜಿಪ್ಪಿ ಹಾರ್ಸ್​ ರೈಡಿಂಗ್" ಸೆಂಟರ್ . ಇಲ್ಲಿ ನೀವು ಕುದುರೆ ಸವಾರಿ ಕಲಿಯಬಹುದು. ಕುದುರೆ ಜೊತೆಗೆ ಟೈಂ ಸ್ಪೆಂಡ್ ಮಾಡಬಹುದು. ಅಷ್ಟೇ ಅಲ್ಲದೆ ಕುದುರೆಗಳನ್ನು  ಫ್ರೆಂಡ್ ಮಾಡಿಕೊಳ್ಳಬಹುದು. ನಿಮಗೆ ಫ್ರೀ ಆದ ಟೈಂನಲ್ಲಿ ನಿಮಗಿಷ್ಟವಾಗುವಷ್ಟು ಸಮಯದಲ್ಲಿ ಕುದುರೆ ಜೊತೆಯಲ್ಲಿ ಸಮಯ ಕಳೆಯಬಹುದು.

"ಜಿಪ್ಪಿ ಹಾರ್ಸ್​ ರೈಡಿಂಗ್" ಸೆಂಟರ್

"ಜಿಪ್ಪಿ ಹಾರ್ಸ್​ ರೈಡಿಂಗ್​​" ಸೆಂಟರ್‍ ಕನಕಪುರ ರಸ್ತೆಯ ಬಳಿ ಇದೆ. ಇಲ್ಲಿ ಕುದುರೆ ಸವಾರಿ, ಕುದುರೆಯ ಮೇಲೆ ಮಾಡೋ ಕ್ರೀಡೆ, ಕುದುರೆಯನ್ನು ನೋಡಿಕೊಳ್ಳುವ  ರೀತಿಯನ್ನ ಹೇಳಿಕೊಡಲಾಗುತ್ತದೆ. ಮೂರು ಬ್ಯಾಚ್​ನಲ್ಲಿ ಕುದುರೆ ಸವಾರಿ, ಟ್ರೈನಿಂಗ್ ನಡೆಯಲಿದ್ದು ದಿಲೀಪ್ ಮತ್ತು ಅಬ್ದುಲ್‍ ಅನ್ನುವ ಇಬ್ಬರು ಗೆಳೆಯರು ಸೇರಿ ಆರಂಭ ಮಾಡಿರುವ ಜಿಪ್ಪಿ ಹಾರ್ಸ್ ರೈಡಿಂಗ್ ಸೆಂಟರ್​ನಲ್ಲಿ​ 10 ದಿನಗಳ ಕೋರ್ಸ್, 30 ದಿನಗಳ ಕೋರ್ಸ್ ಹಾಗೂ 60 ದಿನಗಳ ಕೋರ್ಸ್​ಗಳು ಲಭ್ಯವಿದೆ. ಇಬ್ಬರು ಮಾಸ್ಟರ್‍ ಟ್ರೈನರ್ಸ್‍ ಇದ್ದು ಇನ್ನು ನಾಲ್ಕು ಜನ ಅಸಿಸ್ಟೆಂಟ್ ಟ್ರೈನರ್ಸ್​ ಇದ್ದಾರೆ. ಸದ್ಯ 10 ಕುದುರೆಗಳಿದ್ದು ಬೆಳ್ಳಿಗ್ಗೆ 10 ರಿಂದ ರಾತ್ರಿ 10ರವರೆಗೂ ತರಬೇತಿ ನಡೆಯುತ್ತದೆ. ಇನ್ನೂ ವಿಶೇಷ ಅಂದ್ರೆ 5 ವರ್ಷದ ಮಕ್ಕಳಿಂದದ 64 ವರ್ಷದ ವಯಸ್ಕರು ಕೂಡ ಕುದುರೆ ಸವಾರಿ ಕಲಿಯೋದಕ್ಕೆ ಬರುತ್ತಾರೆ. "ಜಿಪ್ಪಿ ಹಾರ್ಸ್​ ರೈಡಿಂಗ್‍" ಕ್ಲಾಸ್​ಗೆ ಜನ ಎಷ್ಟರ ಮಟ್ಟಿಗೆ ಅಡಿಕ್ಟ್​  ಆಗಿದ್ದಾರೆ ಅಂದ್ರೆ ತಮ್ಮ  ಕ್ಲಾಸ್ ಸ್ಟಾರ್ಟ್ ಆಗುವ ಮುಂಚೆಯೇ ಬಂದು ಕುದುರೆಗಳ ಜೊತೆ ಸಮಯ ಕಳೆಯುತ್ತಾರೆ. 

" ಮನಸ್ಸಿಗೆ ನೆಮ್ಮದಿ ಸಿಗಲು ಖುಷಿ ಇರಬೇಕು. ಕುದುರೆ ಸವಾರಿ ಕಲಿಕೆಯಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುತ್ತದೆ. ಜೊತೆಗೆ ಕುದುರೆಗಳನ್ನು ಹತ್ತಿರದಿಂದ ಮುದ್ದು ಮಾಡಲು ಅವಕಾಶ ಸಿಗುತ್ತದೆ. ಸಮಯದ ಅಭಾವ ಇದ್ರೂ, ಅವಕಾಶ ಸಿಕ್ಕಾಗಲೆಲ್ಲಾ ಕುದುರೆ ಸವಾರಿಯ ಕಲಿಕೆ ಹೋಗುತ್ತೇನೆ "
- ಚಂದನ್​, ಕುದುರೆ ಸವಾರಿ ಕಲಿಕಾ ಸದಸ್ಯ

ಹವ್ಯಾಸ ಆಗಿದ್ದು ಪ್ರೋಫೆಷನಲ್‍ ಜಾಬ್‍ ಆಯ್ತು..!

ದಿಲೀಪ್ ಮತ್ತು ಅಬ್ದುಲ್‍, ದಯಾನಂದ್ ಸಾಗರ್‍ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿ, ರಜಾದ ಸಮಯದಲ್ಲಿ ಕುದುರೆ ಸವಾರಿ ಕಲಿಯುವುದಕ್ಕೆ ಆರಂಭ ಮಾಡಿದ್ದರು. ಬೆಂಗಳೂರಿನಿಂದ ಸುಮಾರು 60ಕಿಲೋಮೀಟರ್ ಪ್ರತಿನಿತ್ಯ ಪ್ರಯಾಣ ಮಾಡಿ ಕುದುರೆ ಸವಾರಿಯ ತರಬೇತಿ ಪಡೆಯುತ್ತಿದ್ದರು. ಇಷ್ಟೆಲ್ಲ ಕಷ್ಟ ಪಟ್ಟು ಟ್ರೈನಿಂಗ್ ಪಡೆದ ನಂತ್ರ ಬೆಂಗಳೂರಿನ ಜನಕ್ಕೂ ನಮ್ಮಂತೆ ಕುದುರೆ ಓಡಿಸುವ ಆಸೆ ಇದ್ದೇ ಇರುತ್ತದೆ. ನಾವೇ ಯಾಕೆ ಇಂತಹದೊಂದು ಟ್ರೈನಿಂಗ್ ಸೆಂಟರ್ ಸ್ಟಾರ್ಟ್ ಮಾಡಬಾರದು ಅಂತ ಪ್ಲಾನ್ ಮಾಡಿ, ಅಬ್ದುಲ್​ ರೆಹಮಾನ್ ಮತ್ತು ದಿಲೀಪ್‍ "ಜಿಪ್ಪಿ ಹಾರ್ಸ್​ ರೈಡಿಂಗ್ ಸೆಂಟರ್" ಸ್ಟಾರ್ಟ್ ಮಾಡಿದರು. ಸದ್ಯ ಒಂದು ವರ್ಷ ಪೂರೈಸಿರುವ "ಜಿಪ್ಪಿ ಹಾರ್ಸ್​ ರೈಡಿಂಗ್ ಸೆಂಟರ್" ಬೆಂಗಳೂರಿನ ಮತ್ತು ಬೆಂಗಳೂರು ಸುತ್ತಾ ಮುತ್ತಾ ಇರೋರಿಗೆ ಕುದುರೆ ಸವಾರಿಯನ್ನ ಹೇಳಿಕೊಡುತ್ತಿದೆ. ಅದೂ ನಿಮಗೆ ಬಿಡುವಿದ್ದ ಮತ್ತು ನಿಮ್ಮ ಕೈಗೆಟುಕುವ ಬೆಲೆಯಲ್ಲಿ. ಎಲ್ಲೋ ಪ್ರವಾಸಕ್ಕೆ ಹೊದಾಗ ರೈಡರ್ ಹಿಡಿದುಕೊಂಡು ಒಂದು ರೌಂಡ್ ಹಾಕಿಸೋ ಕುದುರೆ ಮೇಲೆ ಕುಳಿತುಕೊಳ್ಳುವ ಬದಲು ನೀವೇ ಸ್ವಂತವಾಗಿ ಕುದುರೆ ರೈಡ್ ಮಾಡೋದನ್ನ ಕಲಿತುಕೊಂಡು ನೀವೆ ಓಡಿಸಬಹುದು.

" ಕುದುರೆ ಸವಾರಿ ಮಾಡಲು ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಆದ್ರೆ ಬೆಂಗಳೂರಿನಂತಹ ನಗರಗಳಲ್ಲಿ ಎಲ್ಲವೂ ಸಿಗುತ್ತದೆ. ಆದ್ರೆ ಕುದುರೆ ಕಲಿಯಲು ಮಾತ್ರ ಅವಕಾಶ ಇಲ್ಲ. ಇದನ್ನು ಮನಗಂಡು ನಾವು ಈ ಟ್ರೈನಿಂಗ್​ ಸೆಂಟರ್​ ಆರಂಭ ಮಾಡಿದೆವು. ಜನರ ಕಲಿಕೆಯ ಆಸೆ ನೋಡಿ ನಮಗೂ ಹೊಸ ಉತ್ಸಾಹ ಮೂಡಿದೆ. "
- ದಿಲೀಪ್​, ಜಿಪ್ಪಿ ಹಾರ್ಸ್​ ರೈಡಿಂಗ್​ ಸೆಂಟರ್​ ಮಾಲೀಕ

ಗೆಸ್ಟ್​ ರೈಡಿಂಗ್

ನಿಮಗೆ ಕುದುರೆ ಸವಾರಿ ತರಬೇತಿ ಪಡೆಯುವುದಕ್ಕೆ ಸಮಯ ಇಲ್ಲ, ತಿಂಗಳಲ್ಲಿ ಒಂದು ದಿನ ಅಥವಾ ಎರಡು ದಿನ ಮಾತ್ರ ಸಮಯ ಸಿಗುತ್ತೆ ಅನ್ನೋರಿಗೆ ಗೆಸ್ಟ್​ಟ್ರೈನಿಂಗ್‍ ಅನ್ನ ನೀಡಲಾಗುತ್ತದೆ. ಇಂತಹ ಗೆಸ್ಟ್​​ ರೈಡಿಂಗ್​ನಲ್ಲಿ ಕುದುರೆ ಎಂತಹ ಸಮಯದಲ್ಲಿ ಯಾವ ರೀತಿ ವರ್ತನೆ ಮಾಡುತ್ತದೆ, ಕುದುರೆಯನ್ನ ಪಳಗಿಸೋದು ಹೇಗೆ ..?ಇವೆಲ್ಲವನ್ನೂ ಹೇಳಿಕೊಡಲಾಗುತ್ತದೆ. ಅಂದಹಾಗೇ  ದಿಲೀಪ್‍ ಟೀಮ್​ನಲ್ಲಿ ಸದ್ಯ 10 ಕುದುರೆಗಳಿದ್ದು ಅವುಗಳನ್ನ ನೋಡಿಕೊಳ್ಳಲು ಆರೈಕೆ ಮಾಡಲು ಜನರನ್ನ ನೇಮಿಸಲಾಗಿದೆ. ಎರಡು ಕುದುರೆಗೆ ಒಬ್ಬ ಪಾಲಕರನ್ನ ನೇಮಿಸಿದ್ದು ಪ್ರತಿ ತಿಂಗಳಿಗೆ ಒಂದು ಕುದುರೆಯ ವೆಚ್ಚ 80 ಸಾವಿರ ರೂಪಾಯಿ ತಲುಪುತ್ತದೆ. ಕೇವಲ ತರಬೇತಿಯನ್ನ ಮಾತ್ರವಲ್ಲದೆ ಎಲ್ಲಾ ರೀತಿಯ ಸೇಫ್ಟಿಯನ್ನೂ ಕೂಡ ಇಲ್ಲಿ ತೆಗೆದುಕೊಳ್ಳಲಾಗುತ್ತದೆ. ಒಂದು ವರ್ಷದಿಂದ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿ ಬಂದು ಕುದುರೆ ಸವಾರಿಯನ್ನ ಕಲಿತಿದ್ದು ಸಾಕಷ್ಟು ಜನರು ಈಗಲೂ ಕುದುರೆ ಸವಾರಿಯ ಟ್ರೈನಿಂಗ್ ಪಡೆದುಕೊಳ್ತಿದ್ದಾರೆ.  ನಿಮಗೂ ಸಿನಿಮಾದಲ್ಲಿ  ಕುದುರೆ ಸವಾರಿಯನ್ನ ನೋಡಿ, ನಾನು ಒಂದು ಸಲ ಕುದುರೆ ಓಡಿಸಬೇಕು ಅನ್ನೋ ಆಸೆ ಮನಸ್ಸಲ್ಲಿ ಹುಟ್ಟಿಕೊಂಡಿದ್ರೆ "ಜಿಪ್ಪಿ ಹಾರ್ಸ್​ ರೈಡಿಂಗ್​" ಟೀಮ್​ ಅನ್ನ ಬೇಟಿ ಮಾಡಿ.

ಇದನ್ನು ಓದಿ:

1. ಸ್ಮಾರ್ಟ್​ಫೋನ್​ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್​ ಲೈವ್​" ಮ್ಯಾಜಿಕ್​

2. ಹಾಲೆಂಡ್​ ವಿಜ್ಞಾನಿಗಳ ಅನ್ವೇಷಣೆ- ಸಮುದ್ರವನ್ನು ಕ್ಲೀನ್​ ಮಾಡುತ್ತೆ ಈ ಸ್ಪೆಷಲ್​ "ಶಾರ್ಕ್​"

3. ಟೇಸ್ಟಿ ಚಾಕಲೇಟ್​ನ ಹಿಂದಿದೆ ಇಂಟರೆಸ್ಟಿಂಗ್​ ಕಥೆ..!

Related Stories