ನಿಮ್ಮಬ್ರಾಂಡ್‍ನ ಡಿಎನ್‍ಎ ಶೋಧ ಹೇಗೆ...?

ಟೀಮ್​ ವೈ.ಎಸ್​​.

ನಿಮ್ಮಬ್ರಾಂಡ್‍ನ ಡಿಎನ್‍ಎ ಶೋಧ ಹೇಗೆ...?

Saturday November 07, 2015,

3 min Read

ಮಾಹಿತಿ - ತಂತ್ರಜ್ಞಾನ ಕ್ಷೇತ್ರವೇ ಈಗ ಜಗತ್ತನ್ನು ಆಳ್ತಾ ಇದೆ ಅಂದ್ರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಎಲ್ಲಾ ಕಡೆ ಈಗ ಐಟಿ ಉದ್ಯಮದ್ದೇ ಮಾತು. ಸುಮ್ನೇ ಎಂಬಿಎ ಮಾಡಿ ಹಣ ಪೋಲು ಮಾಡೋ ಬದಲು ಐಟಿ ಸೇರಬಹಹುದಲ್ಲ ಅನ್ನೋ ಮಾತುಗಳೇ ಸಿಇಓಗಳ ಮಧ್ಯೆ ಕೇಳಿ ಬರ್ತಿರುತ್ತೆ. ಬ್ರಾಂಡಿಂಗ್ ಹಾಗೂ ಡಿಎನ್‍ಎ ಅಂತೂ ಈಗ ಮುಂಚೂಣಿಯಲ್ಲಿವೆ. ವಿಶ್ವದ ಉದ್ಯಮ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಡಿಎನ್‍ಎ ಅಂದ್ರೇನು ಅನ್ನೋ ಪ್ರಶ್ನೆ ಕೂಡ ಮೂಡೋದು ಸಹಜ.

image


ವಿಜ್ಞಾನ ಲೋಕದಲ್ಲಿ ಡಿಎನ್‍ಎ ಅಂದ್ರೆ ಜೈವಿಕ ಮಾಹಿತಿ. ನೀವು ಯಾರು? ಯಾವುದು ನಿಮ್ಮನ್ನು ಒಬ್ಬ ವ್ಯಕ್ತಿಯನ್ನಾಗಿ ಮಾಡಿದೆ? ಇವೆಲ್ಲದರ ಅರ್ಥ ಒಂದು ಬ್ರಾಂಡ್. ಒಂದು ಬ್ರಾಂಡ್‍ನ ಡಿಎನ್‍ಎ ಅನ್ನೋದು ಅದು ಎಲ್ಲಿಂದ ಬಂದಿದೆ ? ಅದನ್ನು ಜೊತೆಯಾಗಿರಿಸಿದ್ದು ಯಾವುದು? ಅದರ ಸುದೀರ್ಘ ಸಮಯದ ಉದ್ದೇಶ ಏನು? ಎಂಬುದರ ಸಂಯೋಜನೆ. ದೃಷ್ಟಿಕೋನ, ಉದ್ದೇಶ, ಅಲ್ಪಾವಧಿಯ ಗುರಿ ಎಲ್ಲವೂ ಇದರಿಂದ್ಲೇ ಪಡೆದಂಥದ್ದು.

ಕೆಲ ಸಮಯದಿಂದ ನೀವು ಅಸ್ತಿತ್ವದಲ್ಲಿದ್ರೆ ನಿಮ್ಮ ಡಿಎನ್‍ಎ ಹಾಗೂ ಬ್ರಾಂಡ್ ಬಗ್ಗೆ ನ್ಯಾಯೋಚಿತ ಕಲ್ಪನೆ ನಿಮಗಿರುತ್ತೆ. ನಿಮ್ಮ ಐಡಿಯಾ ಆಗಷ್ಟೇ ಆಕಾರ ಪಡೆದುಕೊಳ್ತಿದ್ರೆ ನಿಮ್ಮ ಡಿಎನ್‍ಎ ಶೋಧಿಸಲು ಕೆಲ ಟಿಪ್ಸ್ ಇಲ್ಲಿದೆ.

1. ನಿಮ್ಮೊಳಗೆ ನೋಡಿಕೊಳ್ಳಿ : ನಿಮ್ಮ ಇರುವಿಕೆಯ ಬಗೆಗಿನ ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರ ನಿಮ್ಮ ಬಳಿಯೇ ಇದೆ. ಒಮ್ಮೆ ನಿಮ್ಮ ನೆನಪಿನಂಗಳಕ್ಕೆ ಜಾರಿ, ನಿಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಲು ನಿಮ್ಮನ್ನು ಪ್ರೇರೇಪಿಸಿದ್ದೇನು ಅನ್ನೋದನ್ನು ನೆನಪಿಸಿಕೊಳ್ಳಿ. ಯಾವುದಾದರೂ ಘಟನೆಯೋ? ಸಮಸ್ಯೆ ಬಗೆಹರಿಸುವ ಪ್ರಯತ್ನವೋ? ಅಥವಾ ಯಾವುದಾದರೂ ಸಿನಿಮಾದ ಪಾತ್ರ ನಿಮಗೆ ಪ್ರೇರಣೆಯಾಗಿದ್ಯಾ? ಹೀಗೆ ಕಾರಣಗಳನ್ನು ಹುಡುಕುತ್ತ ಆಳಕ್ಕೆ ಹೋದಾಗ ಸಿಗುವು ಅಸ್ತಿತ್ವವೇ ನಿಮ್ಮ ಡಿಎನ್‍ಎ ಹೊರತು ಮತ್ತೇನಲ್ಲ.

2. ನಿಮ್ಮ ಮೌಲ್ಯ : ಎಲ್ಲ ಕಂಪನಿಗಳು ಕೆಲ ಮೂಲಭೂತ ಮೌಲ್ಯ ಮತ್ತು ನಿಯಮಗಳನ್ನು ಪಾಲಿಸುತ್ತಿವೆಯಾದ್ರೂ ಅಂತರ್ಗತದಲ್ಲಿ ಕೆಲ ವಿಷಯಗಳ ಬಗ್ಗೆ ಬಲವಾದ ವಿಶ್ವಾಸ ಹೊಂದಿರುತ್ತವೆ. ಒಳ್ಳೆ ಕಾರ್ಯದಲ್ಲಿ ಕೆಲ ಕಂಪನಿಗಳು ನಂಬಿಕೆ ಇಟ್ರೆ, ಇನ್ನು ಕೆಲವು ತಮ್ಮ ಗ್ರಾಹಕರನ್ನು ಸಂತೋಷಪಡಿಸುವುದರಲ್ಲೇ ತೃಪ್ತಿ ಕಾಣುತ್ತವೆ. ಇನ್ನು ಕೆಲವರು ಗುಣಮಟ್ಟದ ಉತ್ಪನ್ನ ವಿತರಣೆಯಲ್ಲಿ ವಿಶ್ವಾಸವಿಟ್ರೆ ಇನ್ನು ಕೆಲವರು ಹಣದ ಮೌಲ್ಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ತಾರೆ. ನಿಮ್ಮ ಮೌಲ್ಯವನ್ನು ಗುರುತಿಸಿಕೊಂಡಲ್ಲಿ ನಿಮ್ಮ ಡಿಎನ್‍ಎ ಶೋಧಕ್ಕೆ ನೆರವಾಗುತ್ತದೆ.

3. ನಿಮ್ಮನ್ನು ವಿಭಿನ್ನವಾಗಿಸುವುದಯ ಯಾವುದು? : ದೀರ್ಘ ಕಾಲದಿಂದ ನೀವು ಉದ್ಯಮದಲ್ಲಿ ಗುರುತಿಸಿಕೊಂಡಿದ್ದರೂ, ನೀವು ಒಮ್ಮೆಯಾದ್ರೂ ಹಳೆಯದನ್ನು ನೆನೆಸಿಕೊಳ್ಳಲೇಬೇಕು. ಎದುರಾಳಿಗಳೆದುರು ಮಾರುಕಟ್ಟೆಯಲ್ಲಿ ನೀವು ಗುರುತಿಸಿಕೊಳ್ಳುವಂತೆ ನಿಮ್ಮನ್ನು ವಿಭಿನ್ನವಾಗಿಸಿದ್ದು ಯಾವ ಅಂಶ ಅನ್ನೋದನ್ನು ಗಮನಿಸಬೇಕು. ಈ ಬಗ್ಗೆ ಚಿಂತಿಸುವುದರಿಂದ ನಿಮಗೆ ಪ್ರೇರಣೆಯಾಗಿದ್ದೇನು? ಒಗ್ಗಟ್ಟಾಗಿರುವ ಅಂಶ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

4. ಗ್ರಾಹಕರು : ಒಮ್ಮೊಮ್ಮೆ ಪ್ರಮಾದದಿಂದ ನಿಮ್ಮ ಬ್ರಾಂಡ್‍ನ ಡಿಎನ್‍ಎ ಬಗ್ಗೆ ಐಡಿಯಾ ಕೊಡಬಹುದು. ನೀವು ಆಗಷ್ಟೇ ಆರಂಭವಾದ ಉದ್ಯಮದ ಜೊತೆ ಕೆಲಸ ಮಾಡಲು ಬಯಸುತ್ತೀರಾ? ಅಥವಾ ಅನುಭವಿ ಕಂಪನಿಯ ಜೊತೆಗೋ? ಒಂದು ನಿದಿಷ್ಟ ಕೈಗಾರಿಕಾ ವಲಯದ ಜೊತೆಗಿರಲು ಬಯಸುತ್ತೀರಾ? ನಿದಿಷ್ಟ ನಗರವೊಂದರಲ್ಲಿ ಕೆಲಸ ಮಾಡಲು ಬಯಸುತ್ತೀರಾ? ಇವೆಲ್ಲವೂ ನಿಮ್ಮ ಬ್ರಾಂಡ್‍ನ ಡಿಎನ್‍ಎ ಹಾಗೂ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ.

5. ನಿಮ್ಮ ಬ್ರಾಂಡ್‍ನ ಸಂವಹನ ಹೇಗೆ..? : ಒಂದಿಲ್ಲ ಒಂದು ರೀತಿಯಲ್ಲಿ ಬಹುತೇಕ ಎಲ್ಲ ಬ್ರಾಂಡ್‍ಗಳು ಗ್ರಾಹಕರು ಹಾಗೂ ಸಾಮಾನ್ಯ ಪ್ರೇಕ್ಷಕರ ಮೂಲಕವೇ ಸಂವಹನ ನಡೆಸುತ್ತವೆ. ನಿಮ್ಮ ಬ್ರಾಂಡ್ ತಮಾಷೆಯಾಗಿದೆಯೋ ಅಥವಾ ಆಕ್ರಮಣಕಾರಿಯಾಗಿದೆಯೋ ? ನಿಮ್ಮ ಬ್ರಾಂಡ್ ಸಂವಹನದಲ್ಲಿ ಬೆಂಬಲಿತವೋ ಅಥವಾ ವೃತ್ತಿಪರವಾದದ್ದೋ? ನೀವು ಯಾವ ರೀತಿ ಸಂವಹನ ನಡೆಸುತ್ತಿದ್ದೀರಾ ಎಂಬುದು ನಿಮ್ಮ ಬ್ರಾಂಡ್‍ನ ಧ್ವನಿ, ವ್ಯಕ್ತಿತ್ವ ಮತ್ತು ಡಿಎನ್‍ಎಯ ಆಳವನ್ನು ಗುರುತಿಸುತ್ತದೆ.

ಮೇಲ್ಕಂಡ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿಕೊಂಡ್ರೆ ನೀವು ನಿಮ್ಮ ಬ್ರಾಂಡ್‍ನ ಡಿಎನ್‍ಎಯನ್ನು ಗುರುತಿಸಬಹುದು. ಸಂಸ್ಥೆ ಹಾಗೂ ನೌಕರರ ಶ್ರೇಯೋಭಿವೃದ್ಧಿಗೆ ಇದು ನೆರವಾಗಲಿದೆ. ಈಗಾಗ್ಲೇ ನಿಮ್ಮ ಬ್ರ್ಯಾಂಡ್‍ನ ಡಿಎನ್‍ಎ ಬಗ್ಗೆ ನಿಮಗೆ ತಿಳಿದಿದ್ರೂ ಮೇಲ್ಕಂಡ ವಿಷಯಗಳನ್ನು ಅಳವಡಿಸಿಕೊಳ್ಳುವುದರಿಂದ ನೈಜ ಡಿಎನ್‍ಎ ಪತ್ತೆ ಮಾಡಬಹುದು. ಒಮ್ಮೆ ನೀವು ಡಿಎನ್‍ಎ ಶೋಧಿಸಿದ್ರೆ ನಿಮ್ಮ ಜವಾಬ್ಧಾರಿ ಹೆಮ್ಮೆಯಾಗಿ ಬದಲಾಗಲಿದೆ. ಉದಾಹರಣೆಗೆ ಡಿಎನ್‍ಎಯಿಂದ್ಲೇ ಗುರುತಿಸಿಕೊಂಡ ಸಂಸ್ಥೆ ಅಂದ್ರೆ ಆ್ಯಪಲ್. ಸರಳ ಹಾಗೂ ಮೌಲ್ಯಯುತ ಉತ್ಪನ್ನಗಳಿಗೆ ಹೆಸರುವಾಸಿ. ಡಿಎನ್‍ಎ ವಿರುದ್ಧ ಹೋಗಿ ಐಫೋನ್‍ನ ಅಗ್ಗದ ಉತ್ಪನ್ನ ಐಫೋನ್ 5ಸಿಯನ್ನು ಆ್ಯಪಲ್ ಬಿಡುಗಡೆ ಮಾಡಿತ್ತು. ಆದ್ರೆ ಅದು ವರ್ಕೌಟ್ ಆಗಲೇ ಇಲ್ಲ. ಪರಿಣಾಮ ಕೂಡಲೇ ಆ್ಯಪಲ್ ಉತ್ಪನ್ನವನ್ನು ಹಿಂಪಡೆಯಿತು. ಹಾಗಾಗಿ ನಿಮ್ಮ ಡಿಎನ್‍ಎಯನ್ನು ಶೋಧಿಸಿ, ನೀವು ನೀವಾಗಿಯೇ ಇರಿ.