ಬೇ-ಏರಿಯಾಗೇ ಸ್ಪರ್ಧೆ ನೀಡುತ್ತಿರುವ ರಾಜ್ಯದ ಸ್ಟಾರ್ಟ್‌ಅಪ್‌ಗಳು

1

ಜಗತ್ತಿನ ಸಿಲಿಕಾನ್ ವ್ಯಾಲಿಯಾಗಿರುವ ಕ್ಯಾಲಿಫೋರ್ನಿಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬೌದ್ಧಿಕ ಕೌಶಲ್ಯ ಮುಂಚೂಣಿಯಲ್ಲಿದ್ದರೆ, ಬೋಸ್ಟನ್ ಮತ್ತು ಕ್ಲೀವ್ಲಾಂಡನಲ್ಲಿ ಆರೋಗ್ಯ ಸೇವೆ ಮತ್ತು ಔಷಧೀಯ ವಿಭಾಗವು ಅತ್ಯಂತ ಮುಂದುವರೆದಿದೆ. ಈ ನಾಲ್ಕೂ ಸೇವೆಗಳಿಗೆ ನಮ್ಮ ಬೆಂಗಳೂರೊಂದೇ ಅಧಿಕೃತವಾಗಿ ಸ್ಫರ್ಧೆ ನೀಡುತ್ತಿದೆಯೆಂದರೆ ಹೆಮ್ಮೆ ಎನಿಸುವದಿಲ್ಲವೆ?

ಬೆಂಗಳೂರಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬಿಗ್ ಡಾಟ(ಬೃಹತ್ ಮಾಹಿತಿ ತಂತ್ರಜ್ಞಾನ), ಡೀಪ್ ಲರ್ನಿಂಗ್, ಐಟಿ ಮತ್ತು ಬಿಟಿ ಎಲ್ಲವೂ ಅತಿ ತ್ವರಿತಗತಿಯಲ್ಲಿ ಬೆಳೆಯುತ್ತಿವೆ. ನಮ್ಮ ಯುವರ್‌ಸ್ಟೋರಿಯ ಮಾಹಿತಿಯ ಪ್ರಕಾರ 2015ರಲ್ಲಿ ಸ್ಟಾರ್ಟ್‌ಅಪ್‌ಗಳ ಗಳಿಕೆ 9 ಬಿಲಿಯನ್ ಡಾಲರ್ ಆಗಿದ್ದರೆ ಈ ವರ್ಷ 6 ಬಿಲಿಯನ್ ಡಾಲರ್‌ಗೆ ಇಳಿಮುಖವಾಗಿದೆ. ಆದ್ದರಿಂದ ನಮ್ಮ ಸಚಿವ ಪ್ರಿಯಾಂಕ್ ಖರ್ಗೆಯವರು ಸ್ಟಾರ್ಟ್‌ಅಪ್‌ಗಳ ಅಭಿವೃಧ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆಂದರೆ ಸುಳ್ಳಾಗಲಾರದು.

ಫ್ಲಿಪ್‌ಕಾರ್ಟ್, ಮಂಥನ್, ಬಗ್‌ವರ್ಕ್ಸ್ ರಿಸರ್ಚ್ ಪ್ರಾಕ್ಟೋ, ಓಲಾ, ಮ್ಯುಸಿಗ್ಮ ಇವೆಲ್ಲ ಇತ್ತೀಚಿನ ಯಶಸ್ವಿ ಸ್ಟಾರ್ಟ್‌ಅಪ್‌ಗಳು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಿ-ಕ್ಯಾಂಪ್‌ನಲ್ಲಿ ಸೂಪರ್‌ಬುಗ್ಗಿಗೆ ಔಷಧಿ ಕಂಡುಹಿಡಿಯುವ ಯತ್ನ ನಡೆದಿದೆ. ಇಲ್ಲಿ ಸುಮಾರು 30 ಸ್ಟಾರ್ಟ್‌ಅಪ್‌ಗಳು ಬಯೋ ಟೆಕ್ನಾಲಜಿಯಲ್ಲಿ ಸಂಶೋಧನೆ ನಡೆಸುತ್ತಿವೆ.ಬಗ್‌ವರ್ಕ್ಸ್ ಕಂಪನಿಯು ಸರ್ವರೋಗನಿವಾರಕವಾಗುವಂತಹ ಆಂಟಿಬ್ಯಾಕ್ಟೀರಿಯಲ್ ಔಷಧಿ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಣದ ಹೂಡಿಕೆ 2.6 ಮಿಲಿಯನ್ ಡಾಲರ್‌ನಿಂದ 3.5ಕ್ಕೆ ಏರುವ ಸಾಧ್ಯತೆಗಳಿವೆ.

ಈ ಕಂಪನಿಯ ಸಿಈಓ ಆಗಿರುವ ಆನಂದ ಕುಮಾರ್‌ರವರು ಬೆಂಗಳೂರಿನ ಅನುಕೂಲಕರ ಮೂಲಭೂತ ಸೌಕರ್ಯಗಳ ಬಗ್ಗೆ ಅಪಾರ ಸಂತೋಷ ವ್ಯಕ್ತ ಪಡಿಸುತ್ತಾರೆ. ಈ ಕಂಪನಿಯು ಡಾ.ರೆಡ್ಡ್ಯ್ ಲ್ಯಾಬ್ ಕಂಪನಿಗೆ ಒಳ್ಳೆಯ ಸ್ಪರ್ಧೆಯನ್ನು ಕೊಡುತ್ತಿದೆ. 2 ಮಿಲಿಯನ್ ಡಾಲರ್‌ಗಳಷ್ಟು ನಿವ್ವಳ ಲಾಭ ತೋರಿಸಿದೆ.

ಐಡಿಯ ಸ್ಪ್ರಿಂಗಿನ ಸ್ಥಾಪಕ ನಾಗಾನಂದ ದೊರೆಸ್ವಾಮಿಯವರು, ಕರ್ನಾಟಕವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅತಿ ಬೇಗನೆ ಕೌಶಲ್ಯಗಳನ್ನು ಕಲಿತುಕೊಂಡು ಮುಂದೆ ಬರುತ್ತಿವೆ ಎಂದು ಹೆಮ್ಮೆ ಪಡುತ್ತಾರೆ.

ಸರ್ಕಾರವು ರಾಜ್ಯದಲ್ಲಿನ ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರುಗಳಲ್ಲೂ ಮೂಲಭೂತ ಸೌಕರ್ಯಗಳ ವಿಸ್ತರಣೆ ಮಾಡಲು ಪ್ರಯತ್ನಿಸುತ್ತಿದೆ.

ರಾಜ್ಯ ಸರ್ಕಾರವು ಸಂಶೋಧನೆ ಮತ್ತು ವಾಣಿಜ್ಯ ವಿಭಾಗಗಳನ್ನು ಜೊತೆಜೊತೆಯಗಿ ಬೆಳೆಸಲು ಪ್ರಯತ್ನಿಸುತ್ತಿದೆ.

ಅಭಿವೃದ್ಧಿಗಾಗಿ ಆರಿಸಿಕೊಂಡಿರುವ ವಿಭಾಗಗಳು ಇಂತಿವೆ:

1. ಮಾಹಿತಿ ತಂತ್ರಜ್ಞಾನ

2. ಎಲೆಕ್ಟ್ರಾನಿಕ್ ಉಪಕರಣಗಳ ವಿನ್ಯಾಸ ಮತ್ತು ಉತ್ಪಾದನೆ

3. ರೊಬೊಟಿಕ್ಸ್ ಮತ್ತು ೩ಡಿ ಪ್ರಿಂಟಿಂಗ್

4. ಆರೋಗ್ಯ ಸೇವೆ ಮತ್ತು ಔಷಧೀಕರಣ ವಿಭಾಗ

5. ನೀರು ಮತ್ತು ಇತರೆ ಸಂಪನ್ಮೂಲಗಳ ಮರುಬಳಕೆಯ ತಂತ್ರಜ್ಞಾನ

ಸರ್ಕಾರವು ಮಾಡಿರುವ ಪಾಲಿಸಿಗಳ ಪ್ರಕಾರ ಈ ಕೆಳಕಂಡ ಅಂಶಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುವದು:

1. ಸಾಕಷ್ಟು ಖಾಸಗಿ ವಲಯಗಳಿಗೆ ಪ್ರೋತ್ಸಾಹ

2. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಕಂಪನಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳ ವ್ಯವಸ್ಥೆ

3. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಸಾಕಷ್ಟು ಸ್ಥಳಾವಕಾಶದ ಅನುಕೂಲ.

ಸರ್ಕಾರವು ಈಗಾಗಲೆ ಸುಮಾರು ೩೫ ಕೋಟಿಗಳಷ್ಟಕ್ಕೂ ಹೆಚ್ಚು ಹಣವನ್ನು ೨೦೦ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಮೇಲೆ ಹೂಡಿದೆ. ಎಲ್ಲ ಕಂಪನಿಗಳಿಗೆ ಸಮನಾದ ಹಣ ದೊರಕಲಿಕ್ಕಿಲ್ಲ, ಆದರೆ ’ಐಡಿಯಾ ಟು ಪ್ರೂಫ್ ಆಫ್ ಕಾನ್ಸೆಪ್ಟ್‌ನ’ ಆಧಾರದ ಮೇಲೆ ಹಣ ಹೂಡಲ್ಪಡುವದು.

ಅನೇಕ ಜೈವಿಕ ತಂತ್ರಜ್ಞಾನ ಮತ್ತು ಮೆಡಿಟೆಕ್ ವಿಭಾಗಗಳು ಕಿಟ್‌ವೆನ್ ನಿಧಿಯಿಂದ ಒಳ್ಳೆಯ ಬೆಂಬಲ ಪಡೆಯಬಹುದೆಂದು ಖರ್ಗೆರವರು ಹೇಳಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ೨೭ ಕಂಪನಿಗಳು, ಐಟಿ ವಿಭಾಗದ 26, ಮೆಡಿಟೆಕ್‌ನಲ್ಲಿ 19, ಜೈವಿಕ ತಂತ್ರಜ್ಞಾನದ 11, ಕೃಷಿ ವಿಭಾಗದ 3 ಮತ್ತು ನೈರ್ಮಲ್ಯತೆಯ ವಿಭಾಗದ 3 ಮತ್ತು ಕೆಲವು ಎನಿಮೇಷನ್ ವಿಭಾಗಗಳು ಈಗಾಗಲೇ ಸಾಕಷ್ಟು ಸೌಲಭ್ಯ ಪಡೆದುಕೊಂಡಿರುವದಾಗಿ ಹೆಮ್ಮೆಯಿಂದ ಹೇಳಿದರು.

ರಾಜ್ಯಸರ್ಕಾರವು ಅಮೇಜಾನ್, ಗೂಗಲ್, ಯಸ್ ಬಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್ ಹೀಗೆ ಇತರೆ ದೊಡ್ಡ ಸಂಶ್ಥೆಗಳ ಮುಖಾಂತರ ಚಿಕ್ಕ ಪುಟ್ಟದಾಗಿ ಮೇಲೇಳುತ್ತಿಉವ ಸ್ಟಾರ್ಟ್‌ಅಪ್‌ಗಳಿಗೆ ಸಾಕಷ್ಟು ಬೆಂಬಲ ಸಿಗುವಂತೆ ಕೂಡ ಮಾಡಿದೆ.

ರಾಜ್ಯದ ನಮ್ಮ ಸರ್ಕಾರವು ಮುಖ್ಯವಾಗಿ ಈ ಕೆಳಗಿನ ಸೌಕರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಲಿದೆ.

1.ಇನ್‌ಸ್ಟಿಟ್ಯುಟ್ ಫಾರ್ ಬಯೋಇನ್ಫಾರ್ಮೆಟಿಕ್ಸ್ ಆಂಡ್ ಅಪ್ಲೈಡ್ ಬಯೋಟೆಕ್ನಾಲಾಜಿ

2.ಗಾನಿಟ್ ಲಾಬ್

3.ಸೆಂಟರ್ ಫಾರ್ ಹ್ಯುಮನ್ ಜೆನೆಟಿಕ್ಸ್

4.ಐಏಬಿಟಿ-ಧಾರವಾಡ್

5.ನ್ಯುಟ್ರಿ ಫೈಟೊ ಫಾರ್ಮಾಸೆಟಿಕಲ್ ಪಾರ್ಕ್ - ಮೈಸೂರು

6.ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರ್ ಸೈನ್ಸ್ - ಬಾಗಲಕೋಟೆ

7.ಬಯೋ ಇನ್ನೋವೆಶನ್ ಸೆಂಟರ್

8.ಸೆಂಟರ್ ಫಾರ್ ನ್ಯಾನೋ ಸೈನ್ಸ್ ಮತ್ತು ಇಂಜಿನೀಯರಿಂಗ್

9.ಸೆಮಿಕಂಡಕ್ಟರ್ ಮೇಜರ್ಮೆಂಟ್ ಅನಲೈಸಿಸ್ ಆಂಡ್ ಟೆಸ್ಟ್ ಲ್ಯಾಬ್

10.ಐಐಐಟಿಬಿ - ಇನ್ನೋವೇಶನ್ ಸೆಂಟರ್.

11. ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಇನ್‌ಸ್ಟಿಟ್ಯುಟ್

ಅಷ್ಟೇ ಅಲ್ಲ ಸರ್ಕಾರವು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಒದಗಿಸಲು ಈ ಕೆಳಗಿನ ಹಲವಾರು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.

1.1000 ಸ್ಟಾರ್ಟ್‌ಅಪ್‌ಗಳ ಮಳಿಗೆ:

ಒಂದೇ ಸ್ಥಳದಲ್ಲಿ ಸಾವಿರಾರು ಸ್ಟಾರ್ಟ್‌ಅಪ್‌ಗಳಿಗೆ ಸೂರು...ಎಂತಹ ಒಳ್ಳೆಯ ಯೋಜನೆಯಲ್ವೆ? ಇಲ್ಲಿ ರಿಯಾಯತಿಯ ದರದಲ್ಲಿ 3೦,೦೦೦ ಚದರ ಅಡಿಯಷ್ಟು ಸ್ಥಳವನ್ನು ಸ್ಟಾರ್ಟ್‌ಅಪ್‌ಗಳಿಗೆಂದೇ ಕಾದಿರಸಲಾಗಿದೆ. ಇದರಿಂದ ಅತಿ ವೇಗದಲ್ಲಿ ಹಣ ಹೂಡಿಕೆಯಾಗಿ ರಾಜ್ಯದಲ್ಲಿ ನೌಕರಿಯ ಅವಕಾಶಗಳೂ ಹೆಚ್ಚುವವು ಇದರಿಂದ ರಾಜ್ಯ , ಜೊತೆಗೆ ರಾಷ್ಟ್ರದ ಅರ್ಥವ್ಯವಸ್ಥೆಯೂ ಸುಧಾರಣೆಯಾಗುವದು.

2.ಪ್ರೈವೇಟ್ ಕಂಪನಿ ಮತ್ತು ಪಬ್ಲಿಕ್ ಕಂಪನಿಗಳ ಹೊಂದಾಣಿಕೆ:

ಪ್ರೈವೇಟ್ ಕಂಪನಿಯಾದ ಸ್ಪ್ರಿಂಗ್ಬೋರ್ಡ್ ಸೊಲ್ಯುಶನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪ್ರೈವೇಟ್ ಮತ್ತು ಪಬ್ಲಿಕ್ ಸೆಕ್ಟರುಗಳ ಮಧ್ಯೆ ಸೌಹರ್ದತೆ ತರುವ ಯತ್ನ.

3. ಮೊಬೈಲ್ ಸಾಫ್ಟ್ವೇರ್‌ಗಳ ಹಬ್:

ಇನ್ನೂ ಬಡ್ಡಿಂಗ್ ಸ್ಟೇಜಿನಲ್ಲಿರುವ ಅನೇಕ್ ಮೊಬೈಲ್ ಅಪ್ಲಿಕೇಶನ್ಸ್ ದೆವ್‌ಲಪ್ ಮಾಡುತ್ತಿರುವ ಕಂಪನಿಗಳಿಗೆ ಸ್ಥಳ ಮತ್ತು ಪ್ರಶಿಕ್ಷಣ ಹಾಗು ಪ್ರಯೋಗಾಲಯಗಳ ವ್ಯವಸ್ಥೆ.

4.ಜೈವಿಕ ತಂತ್ರಜ್ಞಾನದ ಸಂಶೋಧನಾ ಕೇಂದ್ರ:

ಐಟಿ, ಇಟಿ ಮತ್ತು ’ಎಸ್ ಆಂಡ್ ಟಿ’(ಸ್ಟ್ರಾಟೆಜಿ ಆಂದ್ ಟೆಕ್ನಾಲಾಜಿಯ) ಸಮ್ಮಿಲನದ ಕೇಂದ್ರವೆ ಈ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್. ಇನ್‌ಸ್ಟಿಟ್ಯೂಟ್ ಆಫ್ ಬಯೋಇನ್‌ಫಾರ್ಮೆಟಿಕ್ಸ್ ಆಂಡ್ ಅಪ್ಲೈಡ್ ಬಯೋ ಟೆಕ್ನಾಲಾಜಿ, ಸೆಂಟರ್ ಫಾರ್ ಹ್ಯುಮನ್ ಜೆನೆಟಿಕ್ಸ್ ಮತ್ತು ಬಯೊ ಇಂಡಸ್ಟ್ರಿಯಲ್ ಝೋನ್ ಇವುಗಳ ಸಮ್ಮಿಲನದಲ್ಲಿ ಈ ಕೇಂದ್ರ ಆರಂಭ್ವಾಗಿದೆ.ಇದಕ್ಕೆಂದೇ 50,000 ಚದುರ ಅಡಿಯಷ್ಟು ಸ್ಥಳ ಮೀಸಲಾಗಿದ್ದು, ೫೬ ಕೋಟಿ ರೂಪಾಯಿಗಳಷ್ಟು ಹೂಡಲಾಗಿದೆ. ಈಗಾಗಲೇ ಆಯ್ದ 16 ಸ್ಟಾರ್ಟ್‌ಅಪ್‌ಗಳು ಇದರ ಲಾಭವನ್ನು ಪಡೆಯುತ್ತಿವೆ.

ದೇಶದ ಬೇರಾವುದೇ ರಾಜ್ಯಗಳಿಗೆ ಹೋಲಿಸಿದರೂ ನಮ್ಮ ರಾಜ್ಯವು ತಂತ್ರಜ್ಞಾನದಲ್ಲಿ ಅತ್ಯಂತ ಅಭಿವೃದ್ಧಿಯಲ್ಲಿದೆ.

ತೆಲಂಗಾಣ, ಗುಜರಾತ್, ರಾಜಸ್ಥಾನ್, ಅಂಧ್ರ ಸ್ವಲ್ಪ ಮತ್ತಿಗೆ ಮುನ್ನಡೆ ಕಂಡಿದ್ದರೂ ಇನ್ನೂ ಮುಂದುವರೆಯುವ ಅವಶ್ಯಕತೆಯಿದೆ. ಕರ್ನಾಟಕವೂ ಐಟಿ-ಬಿಟಿ ಕ್ಷೇತ್ರದಲ್ಲಿ ಇತರೆ ಎಲ್ಲ ರಾಜ್ಯಗಳಿಗೆ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯೇನೂ ಅನ್ನಿಸುವದಿಲ್ಲ.

Related Stories

Stories by YourStory Kannada