ಮೈಕ್ರೋಮ್ಯಾಕ್ಸ್ ಸಂಸ್ಥೆಯ ಹೊಸ ಕಾರ್ಯಾಚರಣೆಯ ನಿರ್ಧಾರ:

ಟೀಮ್​ ವೈ.ಎಸ್​. ಕನ್ನಡ

ಮೈಕ್ರೋಮ್ಯಾಕ್ಸ್ ಸಂಸ್ಥೆಯ ಹೊಸ ಕಾರ್ಯಾಚರಣೆಯ ನಿರ್ಧಾರ:

Friday December 18, 2015,

2 min Read

image


15 ವರ್ಷಗಳ ಹಿಂದೆ ಮೈಕ್ರೋಮ್ಯಾಕ್ಸ್ ಇನ್ಫೋರ್ಮ್ಯಾಟಿಕ್ಸ್ ಗುರಗಾಂವ್​​ನಲ್ಲಿ ತನ್ನ ಐಟಿ ಸಂಸ್ಥೆಯ ಕಾರ್ಯಾಚರಣೆ ಆರಂಭಿಸಿದ್ದಾಗ ಭಾರತದಲ್ಲಿನ್ನು ಮೊಬೈಲ್ ಫೋನ್​ಗಳ ಕ್ರಾಂತಿಕಾರಕ ಉದ್ಯಮ ಆರಂಭವಾಗಿರಲಿಲ್ಲ. 2008ರಲ್ಲಿ ಮೈಕ್ರೋಮ್ಯಾಕ್ಸ್ ಮೊಬೈಲ್ ಮಾರುಕಟ್ಟೆಗೆ ಕಾಲಿರಿಸಿದ ಸಂದರ್ಭದಲ್ಲಿ ಆಗತಾನೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್​ಗಳ ಅಲೆಗಳು ಏಳಲಾರಂಭಿಸಿತ್ತು. 2013ರ ಕೌಂಟರ್ಪಾಯಿಂಟ್ ಸಂಶೋಧನೆಯ ಪ್ರಕಾರ ಭಾರತೀಯ ಸ್ಮಾರ್ಟ್​ಫೋನ್​​ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್ ಎರಡನೇ ಅತಿ ದೊಡ್ಡ ಸ್ಥಾನ ಪಡೆದುಕೊಂಡಿದೆ ಹಾಗೂ ಜಾಗತಿಕ ಬೃಹತ್ ಸ್ಮಾರ್ಟ್​ಫೋನ್​​ ತಯಾರಿಕೆ ಹಾಗೂ ಮಾರಾಟ ಸಂಸ್ಥೆಗಳ ಲಿಸ್ಟ್​ನಲ್ಲಿ 10 ಸ್ಥಾನದಲ್ಲಿದೆ. ಮೈಕ್ರೋಮ್ಯಾಕ್ಸ್ ಇಂದು ತನ್ನ 60 ಮಾದರಿಗಳ ಸುಮಾರು 2.3 ಮಿಲಿಯನ್ ಸ್ಮಾರ್ಟ್​ಫೋನ್​ಗಳು ಪ್ರತೀ ತಿಂಗಳು ಮಾರುತ್ತಿವೆ. ಮೈಕ್ರೋಮ್ಯಾಕ್ಸ್ ಸಂಸ್ಥೆ 2014-15ರ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ ಬರೋಬ್ಬರಿ 11 ಸಾವಿರ ಕೋಟಿ.

ಮೇ-2015ರಲ್ಲಿ ಮೈಕ್ರೋಮ್ಯಾಕ್ಸ್ ಸುಮಾರು 20 ಬೇರೆ ಬೇರೆ ಕ್ಷೇತ್ರಗಳ ಸಂಸ್ಥೆಗಳಿಗೆ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಅದರಲ್ಲಿ ಹೆಲ್ತ್ಕೇರ್, ಮನೋರಂಜನಾ ಕ್ಷೇತ್ರ, ಹಾಗೂ ಗೇಮಿಂಗ್ ಸೆಕ್ಟರ್​ಗಳೂ ಇವೆ. ಸುಮಾರು 0.5 ಮಿಲಿಯನ್ ಡಾಲರ್​ನಿಂದ 20 ಮಿಲಿಯನ್ ಡಾಲರ್​ವರೆಗೆ ಹೂಡಿಕೆ ಮಾಡಲು ಅದು ನಿರ್ಧರಿಸಿದೆ. ಭಾರತದ ಜೊತೆ ಕೆಲವು ಅಮೇರಿಕನ್, ಯುರೋಪಿಯನ್ ಹಾಗೂ ಇಸ್ಟ್ರೇಲ್​ನ ಸಂಸ್ಥೆಗಳಿಗೂ ಮೈಕ್ರೋಮ್ಯಾಕ್ಸ್ ಹೂಡಿಕೆ ಮಾಡಲು ಯೋಜಿಸುತ್ತಿದೆ. ಹೂಡಿಕೆಯ ಯೋಜನೆಯನ್ನು ಘೋಷಿಸಿದ ಬಳಿಕ ಇಲ್ಲಿಯವರೆಗೂ ಮೈಕ್ರೋಮ್ಯಾಕ್ಸ್ ಫಿಟ್ನೆಸ್, ಟ್ರಾವೆಲ್, ಮ್ಯೂಸಿಕ್ ಹಾಗೂ ಕ್ಲೌಡ್ಸೇವೆಗಳ ಒಟ್ಟು ಐದು ಸಂಸ್ಥೆಗಳಿಗೆ ಹೂಡಿಕೆ ಮಾಡಿದೆ .

ಮೈಕ್ರೋಮ್ಯಾಕ್ಸ್, ಸ್ಮಾರ್ಟ್ ಡಿವೈಎಸ್​ಗಳಿಗೆ ಸೇವೆ ಒದಗಿಸಬಲ್ಲ ತನ್ನ ಆ್ಯಪ್​​ ಅನ್ನು ಅಭಿವೃದ್ಧಿಪಡಿಸಲು ಹೂಡಿಕೆಮಾಡಿದೆ. ಮೈಕ್ರೋಮ್ಯಾಕ್ಸ್ ಮೊಬೈಲ್ ಜೊತೆ ಟೈ ಅಪ್ ಹೊಂದಿರುವ ಸ್ಟಾರ್ಟ್ಅಪ್ ಸಂಸ್ಥೆಗಳ ಸಂಶೋಧನಾತ್ಮಕ ಕೆಲಸಗಳಿಗೆ ನೆರವು ನೀಡುವ ಯೋಜನೆಯನ್ನೂ ಇದು ಹೊಂದಿದೆ.

ಮೈಕ್ರೋಮ್ಯಾಕ್ಸ್ ಸಂಸ್ಥೆಯ ಸ್ಟ್ರಾಟಜಿ ಹೆಡ್ ಹಾಗೂ ಎಂ ಎಂಡ್ ಎ ಸಹ ಆಗಿರುವ ಕುಮಾರ್ ಶಾ ಹೇಳುವಂತೆ, ಮೈಕ್ರೋಮ್ಯಾಕ್ಸ್ ಈಗಾಗಲೆ ಡಿವೈಸ್ ಉತ್ಪಾದನೆಯಲ್ಲಿ ಯಶ ಗಳಿಸಿಕೊಂಡಿದೆ. ಆದರೆ ಅದರ ಮುಂದೆ ಡಿವೈಸ್​​ಗೆ ಸಂಬಂಧಿಸಿದ ಉಪಯೋಜನೆಗಳು ಹಾಗೂ ಗ್ರಾಹಕರ ವಿಶ್ವಾಸಾರ್ಹ ನಂಬಿಕೆಯನ್ನು ವೃದ್ಧಿಸಿಕೊಳ್ಳಲು ಹಲವು ಸೇವಾ ಯೋಜನೆಗಳ ನೀಲನಕ್ಷೆ ಇದೆ. ಫೋನ್ ಖರೀದಿಸಿದ ನಂತರವೂ ಗ್ರಾಹಕರೊಂದಿಗೆ ದೀರ್ಘಕಾಲದ ಸಂಬಂಧ ಹೊಂದುವ ಸೇವೆಗಳನ್ನು ಒದಗಿಸುವತ್ತ ಮೈಕ್ರೋಮ್ಯಾಕ್ಸ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಉದ್ಯಮದ ಜೊತೆಗೆ ಇತ್ತೀಚೆಗೆ ಗ್ರಾಹಕರನ್ನು ಅತಿಯಾಗಿ ಸೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರದಲ್ಲೂ ಹೂಡಿಕೆ ಮಾಡುವುದು ಉತ್ತಮ ಬೆಳವಣಿಗೆ ಅನ್ನುವುದು ಶಾರ ಅಭಿಪ್ರಾಯ.

ಭಾರತೀಯ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ಹೂಡಿಕೆ ಮಾಡಲು ಮೈಕ್ರೋಮ್ಯಾಕ್ಸ್ ಮಾತ್ರವಲ್ಲದೇ ಚೀನಾ ಮೂಲದ ಕ್ಸಿಯೋಮಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯೂ ಮುಂದಾಗಿದೆ. ಕೆಲವು ತಿಂಗಳ ಹಿಂದಷ್ಟೇ ವಿಶ್ವದ ನಾಲ್ಕನೇ ಅತಿ ದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆ ಕ್ಸಿಯೋಮಿ ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಹೂಡಿಕೆ ಮಾಡಲು ನಿರ್ಧಾರ ಮಾಡಿ ಘೋಷಿಸಿತ್ತು. ಮುಂದಿನ 2 ವರ್ಷಗಳಲ್ಲಿ ಕ್ಸಿಯೋಮಿ ಭಾರತೀಯ ಸಂಸ್ಥೆಗಳಿಗೆ ಸುಮಾರು 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ. ಮೈಕ್ರೋಮ್ಯಾಕ್ಸ್​ನಂತಹ ಇದು ತನ್ನದೇ ಆದ ಸ್ವತಂತ್ರ್ಯ ಆ್ಯಪ್​​​ ಹೊಂದುವ ಮೂಲಕ ಕಾರ್ಯಾಚರಣೆ ನಡೆಸಲು ಮುಂದಾಗದೆ.

ಇಲ್ಲಿಯವರೆಗೂ ಮೈಕ್ರೋಮ್ಯಾಕ್ಸ್ ಒಟ್ಟು ಎಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತದೆ ಎನ್ನುವುದನ್ನು ಬಹಿರಂಗಪಡಿಸಿಲಿಲ್ಲ. ಸ್ಟಾರ್ಟ್ ಅಪ್ ಸಂಸ್ಥೆಗಳ ಕಾರ್ಯಾಚರಣೆ ಹಾಗೂ ವಿಸ್ತಾರದ ಆಧಾರದಲ್ಲಿ ಅರ್ಧ ಮಿಲಿಯನ್ ಡಾಲರ್​​ನಿಂದ 20 ಮಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡುವುದಾಗಿ ಮಾತ್ರ ಇದು ಹೇಳಿಕೊಂಡಿದೆ. ಇಲ್ಲಿಯವರೆಗೆ ಮೈಕ್ರೋಮ್ಯಾಕ್ಸ್ ಯಾವುದೇ ಟೈಅಪ್ ಆಗಲೀ, ಮೈತ್ರಿಯಾಗಲೀ ಅಥವಾ ಸ್ಟಾರ್ಟ್ಅಪ್ ಸಂಸ್ಥೆಗಳನ್ನು ಖರೀದಿಸುವ ಪ್ರಕ್ರಿಯೆಯನ್ನಾಗಲಿ ನಡೆಸಿಲ್ಲ. ಮೈಕ್ರೋಮ್ಯಾಕ್ಸ್ ಈ ಮೇನಲ್ಲಿ ಮೋಫರ್ಸ್ಟ್ ಸೆಲ್ಯೂಷನ್ ಅನ್ನುವ ಸಂಸ್ಥೆಯನ್ನು ತನ್ನ ಪಾರ್ಟನರ್ ಅನ್ನಾಗಿ ಮಾಡಿಕೊಂಡಿದೆ. ಮೊಬೈಲ್ ಮೆಸೆಜಿಂಗ್ಗೆ ಸಂಬಂಧಿಸಿದಂತೆ ಅಗತ್ಯವಿರುವ ಭಾಷಾಂತರ ಕೆಲಸಗಳನ್ನು ಇದಕ್ಕೆ ವಹಿಸಿದೆ. ಸಂಸ್ಥೆ ಇತ್ತೀಚೆಗಷ್ಟೇ ಅನಾಲಿಸಿಸ್ ಸಂಸ್ಥೆಯೊಂದಕ್ಕೆ ಹೂಡಿಕೆ ಮಾಡಿದೆ, ಆದರೆ ಎಷ್ಟು ಹೂಡಿಕೆ ಮಾಡಿದೆ ಅನ್ನುವ ವಿವರಗಳನ್ನು ಮಾತ್ರ ಬಹಿರಂಗಪಡಿಸಿಲ್ಲ.

ಮೈಕ್ರೋಮ್ಯಾಕ್ಸ್ ಸಂಸ್ಥೆಯ ಚೇರ್ಮನ್ ಸಂಜಯ್ ಕಪೂರ್ ಹೊರತಳ್ಳಿದ ವಿವಾದವಾಗಲೀ ಅಥವಾ ಅಲಿಬಾಬಾ ಗ್ರೂಪ್ 1 ಬಿಲಿಯನ್ ಡಾಲರ್ ಹೂಡಿಕೆಯ ವಿದ್ಯಮಾನಗಳಾಗಲೀ ಮೈಕ್ರೋಮ್ಯಾಕ್ಸ್ ಪ್ರಗತಿಗೆ ಅಡ್ಡಿ ಬಂದಿಲ್ಲ.

image


ಲೇಖಕರು: ಅತಿರಾ ಎ ನಾಯರ್​

ಅನುವಾದಕರು: ವಿಶ್ವಾಸ್​​