ಇನ್ವೆಸ್ಟ್ ಕರ್ನಾಟಕದಿಂದ ಹೈಟೆಕ್ ಆಗಲಿದೆ ಬೆಂಗಳೂರು

ಟೀಮ್​ ವೈ.ಎಸ್​. ಕನ್ನಡ

ಇನ್ವೆಸ್ಟ್ ಕರ್ನಾಟಕದಿಂದ  ಹೈಟೆಕ್ ಆಗಲಿದೆ ಬೆಂಗಳೂರು

Wednesday February 03, 2016,

2 min Read

ಇನ್ವೆಸ್ಟ್ ಕರ್ನಾಟಕ ಸಮಾವೇಶದಿಂದಾಗಿ ಬೆಂಗಳೂರಿಗರ ಕನಸು ಕೂಡ ಹೆಚ್ಚಿವೆ. ಬಂಡವಾಳ ಹೂಡಿಕೆ ಸಮಾವೇಶದಿಂದ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಬೆಳವಣಿಗೆಯತ್ತ ಹೆಚ್ಚಿನ ಮಹತ್ವ ನೀಡುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿದೇಶೀ ಹೂಡಿಕೆದಾರರು ಬಂಡವಾಳ ಹೂಡಲು ಆಗಮಿಸಿದ್ದಾರೆ. ಈ ಮೂಲಕ ಬೆಂಗಳೂರಿಗರ ಹೈಟೆಕ್ ಸಿಟಿ ಕನಸು ಅತಿ ಶೀಘ್ರದಲ್ಲಿ ನನಸಾಗಲಿದೆ. ಹಲವು ಮೂಲ ಸೌಕರ್ಯಗಳಿಗೆ ಬಂಡವಾಳ ಹರಿದು ಬರುವ ನಿರೀಕ್ಷೆ ಹೆಚ್ಚಿದೆ...

image


ಇನ್ವೆಸ್ಟ್ ಕರ್ನಾಟಕ 2016 ಸಮಾವೇಶ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಗೂ ಈ ಬಾರಿ ವಿದೇಶಿ ಬಂಡವಾಳ ಹರಿದುಬರಲಿರುವುದು ವಿಶೇಷ. ರಾಜ್ಯದ ಒಟ್ಟು ಸಾರ್ವಜನಿಕ ಸೌಲಭ್ಯ ರಂಗದಲ್ಲಿ 145 ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಯೋಜನೆ ರೂಪಿಸಿದ್ದು. ಹಲವು ಸೇವೆ ನೀಡುವುದರ ಜೊತೆಗೆ, ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಓದಗಿಸಲು ಈ ಸಮಾವೇಶ ಕಾರಣವಾಗಲಿದೆ..

ಸದ್ಯ ಬೆಂಗಳೂರಿನಲ್ಲಿ ಉಪನಗರ ರೈಲು ಸೇವೆ ತರಲು ಸರಕಾರ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಉಪನಗರಗಳಿಗೆ ರೈಲು ಸೇವೆಗೆ ಸುಮಾರು 10 ಸಾವಿರದ 875 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಇನ್ನು ಪರಿಸರ ಸ್ನೇಹಿ ಇಂಧನ ವಿತರಣೆ ಜಾಲ ರೂಪಿಸಲು 1200 ಕೋಟಿ ರೂಪಾಯಿ ಹೂಡಿಕೆ ಹರಿದು ಬರಲಿದೆ. ಇನ್ನು ಹೆಬ್ಬಾಳ, ಜಯನಗರ 4ನೇ ಟಿ ಬ್ಲಾಕ್, ಯಲಹಂಕ , ಕತ್ರಿಗುಪ್ಪೆ, ಎಂ.ಎಸ್.ಪಾಳ್ಯ ಹಾಗೂ ಇಲೆಕ್ಟ್ರಾನಿಕ್ ಸಿಟಿಗಳಲ್ಲಿ ಟಿಟಿಎಂಸಿ ನಿರ್ಮಿಸುವ ಉದ್ದೇಶವಿದ್ದು, ಇದಕ್ಕೆ ಒಟ್ಟು 1103 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷಿಸಲಾಗಿದೆ. ನಗರದಲ್ಲಿ 250 ಶೌಚಾಲಯಗಳನ್ನು ವಿದೇಶಿ ಬಂಡವಾಳದೊಂದಿಗೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ 40 ಸ್ಕೈವಾಕರ್​​ಗಳು, 11 ಹಳೇ ಮಾರುಕಟ್ಟೆಗಳ ಮರುನಿರ್ಮಾಣದ ಉದ್ದೇಶ ಹೊಂದಲಾಗಿದೆ . ನಗರದ ಹಲವೆಡೆ ಎಲಿವೇಟೆಡ್ ಕಾರಿಡಾರ್ಗಳು, ಆಯ್ದ ಪ್ರದೇಶೆಗಳಲ್ಲಿ ಕಮರ್ಷಿಯಲ್ ಸಂಕೀರ್ಣಗಳು, ಪ್ರಯಾಣಿಕರ ತಂಗುದಾಣಗಳ ಅಭಿವೃದ್ಧಿಗಳನ್ನು ಹೂಡಿಕೆ ಮೂಲಕ ಮಾಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ತಕ್ಕ ಯೋಜನೆಯನ್ನು ಈಗಾಗ್ಲೇ ಸಿದ್ಧಪಡಿಸಿದ್ದು. ಬೆಂಗಳೂರು ಭಾರತದ ಅತ್ಯಂತ ಸುಸಜ್ಜಿತ ಸ್ಮಾರ್ಟ್ ಸಿಟಿ ಮಾಡಲು ರೂಪುರೇಷೆ ರೂಪಿಸಲಾಗಿದೆ..

ಸರಕಾರದ ಯೋಜನೆ ಇಷ್ಟಕ್ಕೆ ನಿಲ್ಲುವುದಿಲ್ಲ. ನಗರವನ್ನು ಪ್ರವಾಸಿಗರ ಆಕರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲೂ ಖಾಸಗಿ ಹೂಡಿಕೆಯನ್ನು ಎದುರು ನೋಡಲಾಗುತ್ತಿದೆ. ನಗರವನ್ನು ಡಿಜಿಟಲ್ ಮೀಡಿಯಾ ಸಿಟಿಯನ್ನಾಗಿ ರೂಪಿಸುವ ಪ್ರಸ್ತಾವನೆಯಿದೆ. ಮನರಂಜನೆ ಕೇಂದ್ರಗಳಾದ ಥೀಮ್ ಪಾರ್ಕ್, ಡಿಸ್ನೀ ಲ್ಯಾಂಡ್, ಸ್ನೋ ಪಾರ್ಕ್, ಕಲಾ ಗ್ರಾಮದ ಜತೆಗೆ ಲಂಡನ್‌ನ ಥೇಮ್ಸ್ ನದಿ ದಡದಲ್ಲಿರುವ ಮಿಲೇನಿಯಮ್ ವೀಲ್ ಮಾದರಿಯಲ್ಲಿ ಬೆಂಗಳೂರು ಐ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಸದ್ಯ ಸರಕಾರ ರೂಪಿಸಿರುವ ಯೋಜನೆಯ ಪ್ರಕಾರ ಬೆಂಗಳೂರು ದೇಶದ ಅತ್ಯಂತ ಸ್ಮಾರ್ಟ್ ಸಿಟಿಯಾಗಿ ಬದಲಾಯಿಸಲು ಬೇಕಾದಂತಹ ಎಲ್ಲ ರೀತಿಯ ಪ್ರಸ್ತಾವನೆಯನ್ನು ಸರ್ಕಾರ ರೂಪಿಸಿದೆ. ಒಟ್ಟಾರೆ ಬೆಂಗಳೂರಿನ ಸಣ್ಣ ಮತ್ತು ಅತೀ ದೊಡ್ಡ ಹೂಡಿಕೆದಾರರಿಗೆ ಈ ಬಾರಿ ಇನ್ವೆಸ್ಟ್ ಕರ್ನಾಟಕ ದೊಡ್ಡ ವೇದಿಕೆಯಾಗಲಿದೆ. ಈ ಮೂಲಕ ಬೆಂಗಳೂರು ಅಭಿವೃದ್ಧಿ ಕೂಡ ಆಗಲಿದೆ. ಹಲವರಿಗೆ ಉದ್ಯೋಗ ಕೂಡ ಸಿಗಲಿದೆ.

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ