ಪ್ರವಾಸದ ಅನುಭವ ನೀಡುವ WeNomads.com

ಟೀಮ್​​ ವೈ.ಎಸ್​​.

ಪ್ರವಾಸದ ಅನುಭವ ನೀಡುವ WeNomads.com

Saturday November 07, 2015,

3 min Read

ದೇಶ ಸುತ್ತು ನೋಡು, ಕೋಶ ಓದು. ಇದು ಹಳೆಯ ಗಾದೆ. ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ. ದೇಶವನ್ನು ಸುತ್ತಿ ನೋಡಿದಷ್ಟು ಅನುಭವವಾಗುತ್ತದೆ. ಸಂಸ್ಕೃತಿ, ಭಾಷೆ, ಅಭಿರುಚಿ ಬಗ್ಗೆ ಅನುಭವವಾಗುತ್ತದೆ. ಈ ಪ್ರವಾಸದ ಅನುಭವ ಹಂಚಿಕೊಳ್ಳುವ ಸಲುವಾಗಿಯೇ ಒಂದು ವೆಬ್ ಸೈಟ್ ಇದೆ. ಆ ವೆಬ್ ಸೈಟಿನ ಹೆಸರೇ WeNomads.com

ಅಸಂಖ್ಯಾತ ಉದ್ಯಮಗಳ ಜೊತೆಗೆ ಪ್ರವಾಸೋದ್ಯಮ ಉದ್ಯಮ ಕೂಡ. ಈಗಿರುವ ಉದ್ಯಮಗಳ ಜೊತೆಗೆ ಪ್ರವಾಸ ಹಾಗೂ ಪ್ರಯಾಣ ವಿಭಾಗದಲ್ಲಿ ಹೊಸ ಕಲ್ಪನೆಗಳಿಗೆ ಜಾಗವೇ ಇರುವುದಿಲ್ಲ. ಆದರೆ, ಅನಿಮೇಶ್ ಸಿಂಗ್ ಹಾಗೂ ಅನುಪಮ್ ಪಾಠಕ್ ವಿಶೇಷ ಪ್ರವಾಸಗಳಿಗೆಂದೇ ಒಂದು ಆನ್‌ಲೈನ್ ಆರಂಭಿಸಿದ್ದಾರೆ.

image


ಈ ವರ್ಷದ ಏಪ್ರಿಲ್‌ನಲ್ಲಿ ಆರಂಭವಾದ WeNomads.com ಪ್ರವಾಸಿಗರಿಗೆ ಶಾಂತಿಯುತವಾದ ಮತ್ತು ಅನುಭವ ಆಧಾರಿತ ಪ್ರವಾಸಗಳನ್ನು ಆಯೋಜಿಸಿದ್ದು. ಈ ಪ್ರವಾಸಗಳಲ್ಲಿ ರಸ್ತೆ, ಪ್ರವಾಸ, ಟ್ರಕ್ಕಿಂಗ್, ಕ್ಷೇಮ ಪ್ರವಾಸಗಳು, ಧಾರ್ಮಿಕ ಪ್ರವಾಸಗಳು ಮತ್ತು ಛಾಯಾಗ್ರಹಣಗಳನ್ನು ಒಳಗೊಂಡಿರುವುದು ವಿಶೇಷವಾಗಿದೆ.

ನಾವು ರಜೆಯ ಪ್ರವಾಸವನ್ನು ಒಂದು ಅನನ್ಯ ಅನುಭವವಾಗಿ ಮಾಡಲು ಮಾಡಲು WeNomads.com ಹುಟ್ಟು ಹಾಕಿರುವುದಾಗಿ ಹೇಳುವ ಸಂಸ್ಥೆಯ ಸಿಇಓ ಅನುಪಮ್, ಇಲ್ಲಿಯವರೆಗೂ ಪ್ರವಾಸಗಳು ಒಂದು ನಿರ್ದಿಷ್ಠ ಉದ್ದೇಶವನ್ನು ಹೊಂದಿದ್ದವು. ಆದರೆ ಈ ಪ್ರವಾಸಗಳನ್ನು ಒಂದು ವಿಶೇಷ ಪ್ರವಾಸಗಳನ್ನಾಗಿ ವರ್ಗಿಕರಿಸಲು ವೇದಿಕೆಯೊಂದನ್ನು ಹುಟ್ಟು ಹಾಕಿರುವುದಾಗಿ ಅನುಪಮ್ ಹೇಳುತ್ತಾರೆ.

WeNomads.com ಆರಂಭಕ್ಕೆ ಕಾರಣವೇನು?

WeNomads.com ರಾತ್ರಿ ಬೆಳಗೆಯಾಗುವುದರ ಹುಟ್ಟಿದ ಸಂಸ್ಥೆಯೇನಲ್ಲ. ಇದರ ಹಿಂದೆ ಅನಿಮೇಶ್ ಸಿಂಗ್ ಹಾಗೂ ಅನುಪಮ್ ಪಾಠಕ್ ಪರಿಶ್ರಮವಿದೆ. ತಮ್ಮ ಸ್ವಂತ ಅನುಭವದ ಆಧಾರದ ಮೇಲೆಯೇ ಈ ಸಂಸ್ಥೆಯನ್ನು ಹುಟ್ಟು ಹಾಕಿರುವುದು ವಿಶೇಷವಾಗಿದೆ.

ಹಾಗೆ ನೋಡಿದ್ರೆ, ಪ್ರಯಾಣದ ಬಗ್ಗೆ ಅನುಭವ ವ್ಯಕ್ತಪಡಿಸಲು ಹಾಗೂ ಮಾಹಿತಿ ನೀಡಲು ಸಂಸ್ಥೆಗಳ ಕೊರತೆ ಇತ್ತು. ಅನಿಮೇಶ್ ಸಿಂಗ್ ಹಾಗೂ ಅನುಪಮ್ ಪಾಠಕ್, ಈ ಕೊರತೆಯನ್ನು ಅರಿತಿದ್ದರು. ಪ್ರವಾಸದ ಅನುಭವ ಹಾಗೂ ಆಯ್ಕೆಯ ಮಾಹಿತಿ ಕೊರತೆಯನ್ನು ಮನಗಂಡಿದ್ದರು. ಈ ವಿಭಾಗದಲ್ಲಿ ಪ್ರಯಾಣದ ಉದ್ಯಮ ಸಂಘಟಿತವಾಗಿರುವುದನ್ನು ತಿಳಿದುಕೊಂಡಿದ್ದರು. ಇದರ ಸಲುವಾಗಿಯೇ WeNomads.comಗೆ ಚಾಲನೆ ನೀಡಿದರು

ಅನುಭವ ಆಧಾರಿತ ಪ್ರವಾಸದ ಮಾಹಿತಿ ಒದಗಿಸುವುದನ್ನು ಹುಡುಕುವುದೇ ಈಗ ಕಷ್ಟವಾಗುತ್ತಿದೆ. ಪ್ರವಾಸಿಗರಿಗೆ ಅನನ್ಯ ಅನುಭವ ಒದಗಿಸಲು ಮುಖ್ಯ ಪ್ರಚಾರ ವೇದಿಕೆಯಂತೆ ವರ್ತಿಸುವ ಅಂತರ್ಜಾಲದ ಕೊರತೆ ಇಂದು ಹೆಚ್ಚಾಗಿದೆ. ಹೀಗಾಗಿಯೇ, ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಸಲುವಾಗಿ, ಜನರಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದಲೇ WeNomads.com ಆರಂಭಿಸಲಾಗಿದೆ ಎನ್ನುತ್ತಾರೆ ಅನಿಮೇಶ್ ಸಿಂಗ್ ಹಾಗೂ ಅನುಪಮ್ ಪಾಠಕ್,

ಇನ್ನು, ಪ್ರವಾಸದ ವೇಳೆ ಅನುಭವಿಸಿರುವ ಕಿರಿಕಿರಿ ಬಗ್ಗೆ ಅನುಪಮ್ ಪಾಠಕ್ ಎಳೆ ಎಳೆಯಾಗಿ ವಿವರಿಸಿದ್ದಾರೆ. ಪ್ರವಾಸದ ವೇಳೆ ಸ್ಥಳದ ಮಾಹಿತಿ ಪಡೆಯುವ ಸಲುವಾಗಿ ಪಡೆಯುವ ಗೈಡ್ ಗಳಿಂದ ಅಷ್ಟೇನೂ ಮಾಹಿತಿ ಸಿಗುವುದಿಲ್ಲ. ಸ್ಥಳದ ವಿಶೇಷತೆಯನ್ನಾಗಲೀ ಅಥವಾ ಪ್ರವಾಸದ ಅನುಭವವೇನೂ ಅಷ್ಟೇನೂ ಸಿಗಲಾರದು. ಗೈಡ್‌ಗಳು ಕೇವಲ ಅನುಭವದ ಅಧಾರದ ಮೇಲೆ ಸ್ಥಳದ ಮಾಹಿತಿಯನ್ನು ನೀಡುತ್ತಾರೆ. ಆತುರಾತುರವಾಗಿ ಮಾಹಿತಿ ನೀಡಿ ಹಣ ಪಡೆದು ವಾಪಸ್ಸಾಗುತ್ತಾರೆ. ಮಾಹಿತಿ ನೀಡಿದ್ದಕ್ಕಾಗಿ ಚೆಕ್, ಡಿಡಿ, ಅಥವಾ ಮನಿ ಟ್ರಾನ್ ಪರ್ ಮೂಲಕ ಹಣವನ್ನು ಕೇಳುವ ಗೈಡ್‌ಗಳು ಇಡೀ ಪ್ರವಾಸದ ವೇಳೆ ಅನುಮಾನದಿಂದಲೇ ಸತ್ಕರಿಸುತ್ತಾರೆ. ಇದು ಮನಸ್ಸಿಗೆ ಹೆಚ್ಚು ಕಿರಿ ಕಿರಿ ನೀಡುತ್ತದೆ.

ಈ ಎಲ್ಲಾ ಸಮಸ್ಯೆಗಳನ್ನು ಮನಗೊಂಡು ಪರಿಹಾರದ ರೂಪವಾಗಿ ಹಾಗೂ ಮಾಹಿತಿಯನ್ನು ರವಾನಿಸುವ ಸಲುವಾಗಿಯೇ, ಪ್ರವಾಸಿಗರ ಅನುಕೂಲಕ್ಕಾಗಿ WeNomads.comಗೆ ಚಾಲನೆ ನೀಡಲಾಗಿದೆ ಎನ್ನುತ್ತಾರೆ ಸಂಸ್ಥೆಯ ಅನುಪಮ್ ಪಾಠಕ್

WeNomads.com ಆರಂಭದಲ್ಲೇ ಮುನ್ನಡೆ

1 ಕೋಟಿ ಬಂಡವಾಳದೊಂದಿಗೆ ಶುರುವಾದ WeNomads.com ಸಂಸ್ಥೆ ಇಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಪ್ರತಿ ತಿಂಗಳು 20 ಲಕ್ಷ ನಿವ್ವಳ ಲಾಭದೊಂದಿಗೆ ಪ್ರಗತಿಯ ಪಥದೆಡೆಗೆ ಮುನ್ನುಗ್ಗುತ್ತಿದೆ. ಮೊದಲ ತಿಂಗಳು 4 ಪ್ರವಾಸ ನಿರ್ವಾಹಕರುಗಳೊಂದಿಗೆ ಸಂಸ್ಥೆಯು 15 ಪ್ರವಾಸಗಳನ್ನು ಆಯೋಜಿಸಿತ್ತು. ನಂತರದ ನಾಲ್ಕು ತಿಂಗಳಲ್ಲಿ 35 ಪ್ರವಾಸ ನಿರ್ವಾಹಕರುಗಳೊಂದಿಗೆ 100ಕ್ಕೂ ಹೆಚ್ಚು ಪ್ರವಾಸಗಳನ್ನು ಆಯೋಜಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ. ವರ್ಷಾಂತ್ಯದ ವೇಳೆಗೆ 500 ಪ್ರವಾಸ ನಿರ್ವಾಹಕರುಗಳೊಂದಿಗೆ ಪ್ರವಾಸಗಳನ್ನು ಆಯೋಜಿಸಿ, 1.3 ಕೋಟಿ ಲಾಭವನ್ನು ಪಡೆಯುವ ಗುರಿಯನ್ನು ಹೊಂದಲಾಗಿದೆ ಎನ್ನುತ್ತಾರೆ ಸಂಸ್ಥೆಯ ಸಿಇಓ ಅನುಪಮ್ ಪಾಠಕ್.

WeNomads.com ಗುರಿಯೇನು?

WeNomads.comನ ಗುರಿ ಕೇವಲ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ. ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಭವಿಷ್ಯದಲ್ಲಿ ಸಾಹಸೋದ್ಯಮವನ್ನು ಹೊಂದುವ ಗುರಿಯನ್ನೂ ಕೂಡ ಸಂಸ್ಥೆ ಇಟ್ಟುಕೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಪ್ರಮುಖ ಪ್ರವಾಸಿಗರನ್ನು ಆಕರ್ಷಿಸಿ, ಬಂಡವಾಳ ಹೂಡಿಕೆದಾರರೋಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನೂ ಕೂಡ ಇಟ್ಟುಕೊಂಡಿದೆ.

ಪ್ರವಾಸೋದ್ಯಮ ಉದ್ಯಮದಲ್ಲಿ ಪ್ರಗತಿ ಸಾಧಿಸಲು ಜನರಲ್ಲಿ ಅರಿವು ಮೂಡಿಸುವುದು ಪ್ರಮುಖ ಕಾರ್ಯವಾಗಿದೆ. ಇದೊಂದು ಸವಾಲಿನ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನು ಸಾಧಿಸುವ ಗುರಿಯನ್ನು WeNomads.com ಹೊಂದಿದೆ. ಮಾರುಕಟ್ಟೆಯ ಗೊತ್ತು ಗುರಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಲಾಗುವುದು ಎನ್ನುತ್ತಾರೆ ಅನಿಮೇಶ್ ಸಿಂಗ್.

ಪ್ರಸ್ತುತ ವೆಬ್‌ಸೈಟ್ ERP PLATFORM ಮುಖಾಂತರ ಕಾರ್ಯನಿರ್ವಹಿಸುತಿದ್ದು, ವ್ಯಾಪಾರ ನಿರ್ಣಯಗಳು ಹಾಗೂ ಅವುಗಳ ಮಾಹಿತಿಯನ್ನು ಪಡೆಯಲು ಇದು ಸಹಕಾರಿಯಾಗಿದೆ.

ಪ್ರವಾಸ ಉದ್ಯಮದಲ್ಲಿ ಏನು ನಡೆಯುತ್ತಿದೆ

ಪ್ರಸ್ತುತ ಭಾರತೀಯ ಪ್ರವಾಸ ಮಾರುಕಟ್ಟೆಯು ವಾರ್ಷಿಕ 80 ಬಿಲಿಯನ್ ನಷ್ಟು ವಹಿವಾಟನ್ನ ನಡೆಸುತ್ತಿದ್ದು, 2024ರ ಹೊತ್ತಿಗೆ ಈ ವಹಿವಾಟನ್ನು 150 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.