ತಾಂತ್ರಿಕ ಮೇಳ 2017 : ಈ ಟೆಕ್ಕಿ ಹಬ್ಬವನ್ನು ಮಿಸ್ ಮಾಡಲೇಬೇಡಿ, ಏಕೆಂದು ಓದಿ ನೋಡಿ...

0

ಬೆಂಗಳೂರಿನಲ್ಲಿ ಎಷ್ಟು ಸ್ಟಾರ್ಟ್‌ಅಪ್‌ಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎಂದು ಹೇಳುವದೆ ಕಷ್ಟ. ಇದೇ ಕಾರಣಕ್ಕೆ ಬೆಂಗಳೂರಿಗೆ ಭಾರತದ ಸಿಲಿಕಾನ್ ವ್ಯಾಲಿ, ಸ್ಟಾರ್ಟ್‌ಅಪ್‌ಗಳ ಹಬ್, ಟೆಕ್ನಾಲಾಜಿಯ ಕ್ಯಾಪಿಟಲ್ ಎಂದರೂ ತಪ್ಪಾಗಲಾರದು.

ಇತ್ತೀಚೆಗೆ ವರ್ಲ್ಡ್ ಎಕನಾಮಿಕ್ಸ್ ಫೋರಂನಲ್ಲಿ ರಿಯಲ್ ಎಸ್ಟೇಟ್ ಎಜೆನ್ಸಿ ಜೇಮ್ಸ್ ಲಾಂಗ್ ಲಾಸೆಲ್ ಬೆಂಗಳೂರನ್ನು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ನಗರ ಎಂದು ಘೋಷಿಸಿದರು, ಇದು ಎಂತಹ ಹೆಮ್ಮೆಯ ವಿಷಯವಲ್ಲವೆ?

ಈ ಮೇಳದಲ್ಲಿ ಬೆಂಗಳೂರು ತಾನು ತಂತ್ರಜ್ಞಾನದಲ್ಲಿ ಎಷ್ಟು ಸಮರ್ಥವಾಗಿದೆ ಎಂದು ಇಡೀ ಜಗತ್ತಿಗೇ ಎತ್ತಿ ತೋರಿಸಲು ಸಜ್ಜಾಗಿದೆ. ಬೆಂಗಳೂರು‌ಐಟಿ.ಬಿಜ್ ಮತ್ತು ಬೆಂಗಳೂರು ಇಂಡಿಯಾ ಬಯೋ ಟೆಕ್ನಾಲಾಜಿಯ ಸಮ್ಮಿಲನವಾಗಿರುವ ಈ ಮೇಳ "ಐಡಿಯೇಟ್, ಇನ್ನೋವೇಟ್ ಮತ್ತು ಇನ್ವೆಂಟ್" ಅಂದರೆ "ಕಲ್ಪನೆ, ನಾವಿನ್ಯತೆ ಮತ್ತು ಅವಿಷ್ಕಾರ" ಎಂಬ ಮೂರು ಅಂಶಗಳಿಗೆ ಪ್ರಾಮುಖ್ಯತೆ ಕೊಡುತ್ತಿದೆ.

ದೇಶದ ಎಲ್ಲ ಭಾಗಗಳಿಂದ ಬರುವ ಐಟಿ ಬಿಟಿ ದಿಗ್ಗಜರಿಂದ ಕಿಕ್ಕಿರಿಯುವ ಈ ಮೇಳಕ್ಕೆ ನೀವು ಹೋಗದಿದ್ದರೆ ಹೇಗೆ?ಈಗಲೇ ನವಂಬರ್ ೧೬ ರಿಂದ ೧೮ ರವರೆಗೆ ನಿಮ್ಮ ಕ್ಯಾಲೆಂಡರ್ ಬ್ಲಾಕ್ ಮಾಡಿಕೊಳ್ಳಿ. ಏನಪ್ಪ ಈ ಮೇಳದಲ್ಲಿ ಅಂತಹ ವಿಶೇಷಗಳಿವೆ ಎನ್ನುವಿರಾ? ಮುಂದೆ ಓದಿ ನೋಡಿ..

1. ಅನೇಕ ನಾಯಕರು ಮತ್ತು ಉದ್ಯಮದ ಹೂಡಿಕೆದಾರರನ್ನು ಭೇಟಿ ಮಾಡಲು ಅವಕಾಶ:

ಎಲ್ಲ ಐಟಿ ಮತ್ತು ಬಿಟಿ ದಿಗ್ಗಜರು ತಮ್ಮ ಅನುಭವ ಮತ್ತು ಅನಿಸಿಕೆಗಳ ವಿಚಾರ ವಿನಿಮಯ ಮಾಡಿಕೊಳ್ಳುವರು. ಅವರ ಸಹಯೋಗ ಮತ್ತು ಅನುಭವದ ಕಥನಗಳಿಂದ ಅನೇಕ ಸ್ಟಾರ್ಟ್‌ಅಪ್‌ಗಳು ಸಾಕಷ್ಟು ಲಾಭ ಪಡೆದುಕೊಳ್ಳಬಹುದು.

2.ನೀವು ಒಳ್ಳೆಯ ಅನ್ವೇಷಕರಾಗಿದ್ದೀರ?ನಿಮ್ಮ ಅವಿಷ್ಕಾರಗಳಿಗೆ ಅದ್ಭುತವಾದ ಪ್ಲಾಟ್‌ಫಾರ್ಮ್:

ನಿಮ್ಮ ಅವಿಷ್ಕಾರಗಳನ್ನು ಕಾರ್ಯಗತಗೊಳಿಸಲು ಇನ್ನೂ ಅವಕಾಶಗಳೆ ಸಿಕ್ಕಿಲ್ಲವೆ? ಚಿಂತೆ ಬೇಡ, ಈ ಮೇಳಕ್ಕೆ ಬಂದರೆ ನಿಮ್ಮಲ್ಲಿ ಹುದುಗಿರುವ ಪ್ರತಿಭೆಗೆ ಅವಶ್ಯಕವಾಗಿ ಒಂದಲ್ಲ ಒಂದು ಬ್ರೇಕ್ ಸಿಕ್ಕೇ ಸಿಗುತ್ತದೆ.

3. ಜೈವಿಕ ವಿಜ್ಞಾನದಲ್ಲಿ ಸಾಧಿಸುವ ಕನಸಿದೆಯೇ?

ನೀವು ಈಗಾಗಲೇ ನಿಮ್ಮನ್ನು ಜೈವಿಕ ವಿಜ್ಞಾನದಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಬೇರೆ ಬೇರೆ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೀರಾ? ಹಾಗಾದರೆ ತಪ್ಪದೆ ಈ ಮೇಳಕ್ಕೆ ಬನ್ನಿ. ನಿಮ್ಮಲ್ಲಿರುವ ಕೌಶಲ್ಯವನ್ನು ಎತ್ತಿ ತೋರಿಸುವ ಪೋಸ್ಟರ್‌ಗಳನ್ನು ಮಾಡಿಕೊಂಡು ಬರುವದನ್ನು ಮರೆಯಬೇಡಿ.

4.ಎನಿಮೇಶನ್ ಇಷ್ಟವೇ?

’ಏಬಿಏಐ’ ಎಂಬ ಎನಿಮೇಶನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ "ಏನ್ ಜಿ ಓ" ಕೂಡ ಭಾಗವಹಿಸುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ’ವಿ ಎಫ್ ಎಕ್ಸ್’ ಮತ್ತು ’ಗೇಮಿಂಗ್’ ಟೆಕ್ನಾಲಾಜಿಯಲ್ಲಿ ಯಶಸ್ಸುಗಳಿಸಬಹುದು.

5.ಅನೇಕ ಸಾಧಕರ ಭೇಟಿ:

ಮೈಂಡ್‌ಟ್ರೀಯ ಎಕ್ಸಿಕ್ಯುಟಿವ್ ವೈಸ್ ಚೇರ್ಮನ್ ಎನ್.ಎಸ್. ಪಾರ್ಥಸಾರಥಿ, ಟ್ಯಾಲಿ ಸೊಲುಶನ್ಸ್‌ನ ಸಹ ಸಂಸ್ಥಾಪಕ ಭರತ್ ಗೋಯಂಕ, ಬಾಷನ ಆಪರೇಶನ್ಸ್ ಹೆಡ್ ಸುಜಾತಾ ದೊರೆಸ್ವಾಮಿ, ಸ್ಯಾಮ್‌ಸಂಗ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಅಲೋಕ್‌ನಾಥ್ ಡೇ ಮತ್ತು ಎಸ್ ಬ್ಯಾಂಕಿನ ಸೀನಿಯರ್ ಪ್ರೆಸಿಡೆಂಟ್ ಅಮಿತ್ ಷಾ ಮುಂತಾದ ದಿಗ್ಗಜರನ್ನು ಈ ಸಮಾವೇಶದಲ್ಲಿ ಭೇಟಿ ಮಾಡಬಹುದು.

6. ವೈವಿಧ್ಯಮಯ ಕಾರ್ಯಕ್ರಮಗಳು:

ಈ ಮೇಳದಲ್ಲಿ ಒಂದೇ ಒಂದು ನಿಮಿಷ ಕೂಡ ವ್ಯರ್ಥವಾಗದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅಲ್ಲಿ ನಡೆಯುವ ಗ್ರಾಮೀಣವಲಯದ ಮಾಹಿತಿ ತಂತ್ರಜ್ಞಾನದ ರಸಪ್ರಶ್ನೆ, ಜೈವಿಕ ವಿಜ್ಞಾನದಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ, ಮೇಕರ್ ಫೇರ್ ಕಾರ್ಯಕ್ರಮಗಳು ಸ್ವಲ್ಪವೂ ಬೇಜಾರಾಗಲು ಸಮಯ ಕೊಡದಷ್ಟು ನಿಮ್ಮನ್ನು ನಿರತರಾಗಿರಿಸುತ್ತವೆ.

7. ಕಲಿಕೆಗೆ ಅವಕಾಶ:

ನೀವು ಯವುದೇ ತಂತ್ರಜ್ಞಾನ ಮತ್ತು ಕೈಗಾರಿಕೋದ್ಯಮಕ್ಕೆ ಸೇರಿದ್ದರೂ ಇಲ್ಲಿ ಅನೇಕ ಹೊಸ ವಿಷಯಗಳನ್ನು ಅರಿಯಲು ಅವಕಾಶಗಳಿವೆ.

ಇವತ್ತೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ ಹಾಗು ಈ ಮೇಳದ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಿ.

Related Stories

Stories by YourStory Kannada