ಗ್ರಾಮೀಣ ಭಾರತದ ನಿರ್ಮಾಣಕ್ಕೊಂದು ರೂಬಲ್ ಯೋಜನೆ..!

ಕೃತಿಕಾ

ಗ್ರಾಮೀಣ ಭಾರತದ ನಿರ್ಮಾಣಕ್ಕೊಂದು ರೂಬಲ್ ಯೋಜನೆ..!

Sunday January 03, 2016,

4 min Read

ಎಲ್ಲರೂ ಈಗ ತಂತ್ರಜ್ಞಾನ, ಅಭಿವೃದ್ದಿಯದ್ದೇ ಮಾತನಾಡುತ್ತಾರೆ. ದೇಶದದ ಯಾವ ನಗರಗಳಿಗೆ ಹೋದ್ರೂ ಈಗ ಈ ಎರೆಡೇ ಶಬ್ದಗಳು ಕಿವಿಗೆ ಬೀಳುತ್ತವೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಈ ಎರಡೂ ಪದಗಳಿಗೆ ಅರ್ಥವೇ ಇಲ್ಲದಂತಾಗಿಬಿಟ್ಟಿದೆ. ಅಭಿವೃದ್ದಿ, ಗ್ರಾಮಗಳಲ್ಲಿ ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದರೂ, ತಂತ್ರಜ್ಞಾನ ಅನ್ನೋದು ಮಾತ್ರ ಗ್ರಾಮೀಣ ಜನರ ಪಾಲಿಗೆ ಮರೀಚೆಕೆಯಾಗಿಬಿಟ್ಟಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಯುವಕನೊಬ್ಬ ಸಂಸ್ಥೆಯೊಂದನ್ನು ಕಟ್ಟಿಕೊಂಡು ಗ್ರಾಮೀಣ ಜನರಿಗೆ ಶಿಕ್ಷಣ ನೀಡಿ ಅವರನ್ನು ತಂತ್ರಜ್ಞಾನದೆಡೆಗೆ ಸೆಳೆಯುತ್ತಿದ್ದಾನೆ.

image


"ಹೆಡ್‌ ಹೆಲ್ಡ್‌ ಹೈ" ಎಂಬ ಸಂಸ್ಥೆ ಕಟ್ಟಿರುವ ರಾಜೇಶ್ ಭಟ್ ಗ್ರಾಮೀಣ ಯುವಜನರಲ್ಲಿ ಆತ್ಮವಿಶ್ವಾಸ ಬಿತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜೇಶ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಗ್ರಾಮದ ಯುವಜನರಿಗೆ ವಿವಿಧ ರೀತಿಯ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಜೇಶ್ ತಮ್ಮ "ಹೆಡ್ ಹೆಲ್ಡ್ ಹೈ" ಸಂಸ್ಥೆಯ ಮೂಲಕ ಗ್ರಾಮೀಣ ಜನರಿಗೆ ಶಿಕ್ಷಣ,ತಂತ್ರಜ್ಞಾನ, ಸ್ವಯಂ ಉದ್ಯೋಗ ಕಲ್ಪಿಸುವ ತರಬೇತಿಗಳನ್ನು ನೀಡುತ್ತಿದೆ. ಇಡೀ ದೇಶಕ್ಕೆ ದೇಶವೇ ಡಿಜಿಟಲ್ ಕ್ರಾಂತಿಯಲ್ಲಿರುವಾಗ ಗ್ರಾಮಗಳು ಅದರಿಂದ ಹೊರತಾಗಬಾರದು ಎಂಬ ಪರಿಕಲ್ಪನೆಯೂ ಈ ಸಂಸ್ಥೆಗಿದೆ.

ರಾಜೇಶ್ ಭಟ್ ಅವರ ಈ ಸಂಸ್ಥೆ ಆರಂಭವಾಗಿದ್ದು 2007 ರಲ್ಲಿ. ಎಂಜಿನಿಯರಿಂಗ್ ಓದಿದ್ದ ರಾಜೇಶ್ ಭಟ್ ಗೆ ತಾನೂ ಎಲ್ಲರಂತೆ ಕಂಪ್ಯೂಟರ್ ಮುಂದೆ ಮೌಸ್ ಹಿಡಿದು ಕೂರುವುದು ಇಷ್ಟವಿರಲಿಲ್ಲ. ಅದರ ಬದಲಾಗಿ ಬೇರೆ ಏನಾದರೂ ಮಾಡಬೇಕು ಅನ್ನಿಸಿದಾಗ ತಾವು ಪಟ್ಟ ಕಷ್ಟ ನೆನಪಾಯಿತು. ಹಳ್ಳಿಗಳ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗದಿರುವುದು, ಸಂವಹನದ ಕೊರತೆ, ದೂರವೇ ಉಳಿದಿರುವ ತಂತ್ರಜ್ಞಾನ. ಹಳ್ಳಿಯ ಯುವಕರಿಗೆ ಇಂಗ್ಲಿಷ್ ಕಲಿಸಬೇಕು ಎಂಬ ಮಹದಾಸೆ ಹೊತ್ತು ಹುಟ್ಟಿದದ ಊರಿಗೇ ಹಿಂತಿರುಗಿದರು. ಭಾಷೆ ಹಿಡಿತವಿಲ್ಲದ, ವ್ಯವಹಾರ ಕೌಶಲವಿಲ್ಲದ ಗ್ರಾಮಸ್ಥರಿಗೆ ವ್ಯಕ್ತಿತ್ವ ವಿಕಸನದ ತರಬೇತಿ ನೀಡುವ ನನ್ನ ನಿಲುವಿನ ಕುರಿತು ಹಲವರಲ್ಲಿ ಅಭಿಪ್ರಾಯ ಹಂಚಿಕೊಂಡೆ. ಬೆಂಬಲವೂ ಸಿಕ್ಕಿತು .ಸ್ವಲ್ಪ ಓದಿದವರಿಗೆ ಕಲಿಕೆ ಕಷ್ಟವೆನಿಸದು. ಆದರೆ ಅನಕ್ಷರಸ್ಥರದ್ದು ಕಷ್ಟದ ವಿಚಾರ ಅನ್ನೋದನ್ನ ತಿಳಿದಿದ್ದ ರಾಜೇಶ್ ಕಲಿಕೆಯ ಜೊತೆಗೆ ಅಗತ್ಯ ತರಬೇತಿಯನ್ನೂ ನೀಡಲು ಮುಂದಾದರು. ಎಂಬುದನ್ನು ಅರಿತ ಅವರು ಎರಡೂ ವರ್ಗಕ್ಕೆ ತರಬೇತಿ ಆಯೋಜಿಸಿದರು. ಹೀಗೆ ಆರಂಭವಾಗಿದ್ದೇ "ಹೆಡ್ ಹೆಲ್ಡ್ ಹೈ" ಸಂಸ್ಥೆ. ರಾಜೇಶ್ ರ ಕನಸಿಗೆ ಅವರ ಇಬ್ಬರು ಸ್ನೇಹಿತರಾದ ಸುನಿಲ್ ಸವಾರ ಹಾಗೂ ಮದನ್ ಪದಕಿ ಕೂಡ ಜೊತೆಯಾಗಿದ್ದಾರೆ.

image


ಆರಂಭದ ದಿನಗಳಲ್ಲಿ ನಾವು ಮಾಡುತ್ತಿದ್ದ ಕೆಲಸವನ್ನು ಜನರು ನಂಬುತ್ತಲೇ ಇರಲಿಲ್ಲ. ಮೂಗು ಮುರಿಯುವವರೇ ಹೆಚ್ಚಿದ್ದರು. ಅವರನ್ನೆಲ್ಲ ದೊಡ್ಡ ಕಷ್ಟವಾಗಿತ್ತು.ಆಗ ನಾವು ಜನರಿಗೆ ಸ್ಟೈ ಫಂಡ್ ನೀಡಿ ತರಬೇತಿ ಆರಂಭಿಸಿದೆವು. ಆಗ ಜನರಲ್ಲೂ ನಮ್ಮ ಮೇಲೆ ನಂಬಿಕೆ ಬೆಳೆಯುತ್ತಾ ಹೋಯಿತು. ಕೆಲಸವಿಲ್ಲದೇ ಕಲಿಕೆಗೂ ಹಣ ಕೊಡುತ್ತಾರಲ್ಲ ಅಂತ ಜನರೂ ನಮ್ಮತ್ತ ಬರತೊಡಗಿದದರು. ಜನರನ್ನು ತಲುಪುವ ಉದ್ದೇಶದಿಂದ ಹಳ್ಳಿಗಳ ಸ್ಥಿತಿ ಗತಿಯ ಬಗ್ಗೆ ಅಧ್ಯಯನ ನಡೆಸಿದೆವು. ಅನಕ್ಷರಸ್ಥರಿಗಾಗಿಯೇ ವಿಶಿಷ್ಟ ಪಠ್ಯಕ್ರಮ ರೂಪಿಸಿದೆವು. ಅನಕ್ಷರಸ್ಥರಿಗೆ ಆರು ತಿಂಗಳು, ಹತ್ತನೇ ತರಗತಿ ಅಥವಾ ಪದವಿ ಇದ್ದರೆ ನಾಲ್ಕು ತಿಂಗಳು ತರಬೇತಿ ನಿಗದಿಪಡಿಸಲಾಯಿತು. ಇಂಗ್ಲಿಷ್ ಭಾಷಾ ಕಲಿಕೆ, ಕಂಪ್ಯೂಟರ್ ಕೌಶಲ್ಯತೆಯನ್ನು ಕಲಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು ಅಂತ ತಮ್ಮ ಸಂಸ್ಥೆಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ರಾಜೇಶ್ ಭಟ್.

‘ರೂಬನ್’ ಪ್ಲಾನ್..!

ಇದೇನಪ್ಪಾ ರೂಬನ್ ಪ್ಲಾನ್ ಅಂತೀರಾ..? ರೂಬನ್ ಅಂದ್ರೆ ರೂರಲ್ ಅರ್ಬನ್ ಅಂತ. ಗ್ರಾಮಗಳನ್ನು ನಗರಗಳ ರೀತಿ ಅಭಿವೃದ್ದಿ ಪಡಿಸುವುದೇ ಈ ರೂಬನ್ ಪರಿಕಲ್ಪನೆಯ ಮೂಲ ಉದ್ದೇಶ. ಈ ಪರಿಕಲ್ಪನೆಯಡಿಯಲ್ಲಿ ಸ್ಕಿಲ್ಸ್‌ ರೂರಲ್, ಸ್ಟಾರ್ಟ್‌ ಅಪ್ ರೂರಲ್, ಮಾರ್ಕೆಟ್ ಪ್ಲೇಸ್ ರೂರಲ್, ಡಿಜಿಟರ್ ರೂರಲ್ ಎಂಬ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಮಗಳಲ್ಲಿ ಹೊಸ ರೀತಿಯ ಬದಲಾವಣೆಯನ್ನು ಮಾಡಲಾಗುತ್ತಿದೆ. ‘ರೂಬನ್ ಶಕ್ತಿ’ಯ ಮೂಲಕ ಹಳ್ಳಿ ಯುವಜನರಿಗೆ ವ್ಯವಹಾರ ಕೌಶಲ ತರಬೇತಿ ನಡೆಯುತ್ತದೆ. ‘ಅಂತ್ರಪ್ರೇರಣ’ ಎಂಬುದು ಕೌಶಲ ಅಭಿವೃದ್ಧಿ ತರಬೇತಿ ನೀಡುವ ಮತ್ತೊಂದು ಕಾರ್ಯಕ್ರಮ. ವಿವಿಧ ಹುದ್ದೆಯ ಕುರಿತು ಮಾಹಿತಿ ನೀಡಿ ಅಲ್ಲಿಯೇ ಉದ್ದಿಮೆ ಸ್ಥಾಪಿಸಲು ಶಿಬಿರಗಳನ್ನು ನಡೆಸಿಕೊಡಲಾಗುತ್ತದೆ. ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯೂ ಬೆಂಬಲದೊಂದಿಗೆ ಹಲವರಿಗೆ ಕೆಲಸವೂ ಸಿಕ್ಕಿದೆ.

image


ರೂಬನ್ ಬ್ರಿಡ್ಜ್‌

ಮಾರುಕಟ್ಟೆ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡುವುದು. ಕೃಷಿ, ಆರೋಗ್ಯ ಸೇವೆ, ಶಿಕ್ಷಣ, ಹಣಕಾಸು ಸೇವೆ ಇನ್ನಿತರ ಸೇವೆಗಳಲ್ಲಿ ಅವರು ತೊಡಗುವಂತೆ ಪ್ರೇರೇಪಿಸುವುದು ಇದರ ಬಹು ಮುಖ್ಯ ಉದ್ದೇಶ. ‘ರೂಬನ್ ಯುವ’ ಮೂಲಕ ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟವರಿಗೆ ಮತ್ತೆ ಉನ್ನತ ಶಿಕ್ಷಣ ಪಡೆಯುವಂತೆ ಮಾಡುವ ಕೆಲಸ ನಡೆಯುತ್ತಿದೆ. ‘ರೂಬನ್ ಕಿಶೋರ್’ ಅಡಿಯಲ್ಲಿ ಶಾಲೆ ಬಿಟ್ಟವರಿಗೆ, ಕಡಿಮೆ ಓದಿರುವವರರಿಗೆ ಹತ್ತನೇ ತರಗತಿ ಪಾಸು ಮಾಡುವ ಅವಕಾಶ ನೀಡುವುದಾಗಿದೆ. ‘ರೂಬನ್ ಲೀಡರ್’– ಮೂಲಕ ಕಾಲೇಜು ವಿದ್ಯಾರ್ಥಿಗಳಲ್ಲಿ ನಿರ್ವಹಣಾ ಸಾಮರ್ಥ್ಯ ಬೆಳೆಸಿ ಗ್ಲೋಬಲ್ ರೆಡಿನೆಸ್ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ.

‘ರೂರಲ್ ಎಡ್ಜ್‌’ ಎಂಬ ಹೆಸರಿನಲ್ಲಿ ಗ್ರಾಮಸ್ಥರಿಗೆ ತರಬೇತಿ ನೀಡಿ ನೌಕರಿ ನೀಡುವ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಹಲಬವು ಜಿಲ್ಲೆಗಳ ನಿರುಧ್ಯೋಗಿ ಯುವಕತಿಗೆ ತರಬೇತಿ ನೀಡಲಾಗಿದೆ. ಹೀಗೆ ಸುಮಾರು ಐನೂರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದ್ದು ಎಲ್ಲರೂ ಉದ್ಯೋಗ ಕಂಡುಕೊಂಡಿದ್ದಾರೆ. ಇನ್ನು ಕೆಲಸಕ್ಕಾಗಿ ನಗರ ಪ್ರದೇಶಗಳತ್ತ ಮುಖ ಮಾಡುವ ಯುವಕರಿಗೆ ತಮ್ಮ ಊರುಗಳಲ್ಲೇ ಇದ್ದು ತಮ್ಮದೇ ಉದ್ದಿಮೆ ಸ್ಥಾಪಿಸುವ ಸಲುವಾಗಿ ‘ರೂರಲ್ ಬಿಪಿಒ’ ಅನ್ನೂ ಸ್ಥಾಪಿಸಲಾಯಿತು. ಎಂಟು ಮಂದಿಯಿಂದ ಆರಂಭಗೊಂಡ ಸಂಸ್ಥೆ ಎಂಟು ವರ್ಷದ ಅವಧಿಯಲ್ಲಿ ಸಾವಿರಾರು ಗ್ರಾಮೀಣಿಗರಿಗೆ ವ್ಯವಹಾರ ಕೌಶಲ, ಆತ್ಮವಿಶ್ವಾಸವನ್ನು ತುಂಬಿದೆ.ಈ ಸಂಸ್ಥೆಯುಲ್ಲಿ ಕಲಿತು ಉದ್ಯೋಗ ಪಡೆದು ಯಶಸ್ವಿಯಾದವರನ್ನು ತಮ್ಮ ತಮ್ಮ ಹಳ್ಳಿಗಳಲ್ಲಿ ಜನರಿಗೆ ಕಲಿಸಿಕೊಡಲು ಪ್ರೇರೇಪಿಸಲಾಗುತ್ತಿದೆ.

image


ನಮ್ಮ ಸಂಸ್ಥೆಯಿಂದ ಇದುವರೆಗೂ ಸುಮಾರು ಎರೆಡು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿದ್ದೇವೆ. ಎಲ್ಲರೂ ಈಗ ಉದ್ಯೋಗ ಕಂಡುಕೊಂಡಿದ್ದಾರೆ. ನಗರಕ್ಕಿಂತ ಗ್ರಾಮ ಭಿನ್ನವಲ್ಲ. ಅಲ್ಲಿಯೇ ಎಷ್ಟೋ ಪ್ರತಿಭೆಗಳು ಅಡಗಿರುವುದು. ಆದರೆ ಅವರಿಗೆ ಆತ್ಮವಿಶ್ವಾಸ ತುಂಬುವುದು ಮುಖ್ಯ. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತೇವೆ. ಇಲ್ಲಿ ತರಬೇತಿ ಪಡೆದು ಅವರೇ ವ್ಯವಹಾರ ಆರಂಭಿಸುತ್ತಾರೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಎಷ್ಟೋ ಮಂದಿ ಈಗ ಎಸ್ ಎಸ್ ಎಲ್ ಸಿ ಪಾಸು ಮಾಡಿ ತಾವೂ ಅಕ್ಷರಸ್ಥರಾಗಿದ್ದಾರೆ. ನಾವು ಅಂದುಕೊಂಡಿದ್ದು ನಿಧಾನವಾಗಿ ಪಲ ಕೊಡುತ್ತಿದೆ ಅಂತಾರೆ ರಾಜೇಶ್ ಭಟ್.

ಗ್ರಾಮೀಣ ಪ್ರದೇಶಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸುವ ಕೆಲಸವನ್ನೂ ರಾಜೇಶ್ ಅವರ ಸಂಸ್ಥೆ ಮಾಡುತ್ತಿದೆ. ಈ ಉದ್ದೇಶದಿಂದ ‘ಇಂಟರ್‌ನೆಟ್‌ ಸಂತೆ’ ಅನ್ನೋ ಯೋಜನೆ ರೂಪಿಸಲಾಗಿದೆ. ಶಿರಾ, ನರಗುಂದ, ತಾವರೆಕೆರೆ, ಬಸವ ಕಲ್ಯಾಣ, ಗುಬ್ಬಿ, ಪಾವಗಡ, ಚಿಕ್ಕೋಡಿ, ಹುಮ್ನಾಬಾದ್, ಬಾಲ್ಕಿ, ಇಳಕಲ್‌ಗಳಲ್ಲಿ ಈ ಸಂತೆ ತಕ್ಕ ಮಟ್ಟಿಗೆ ಯಶಸ್ಸೂ ಸಿಕ್ಕಿದೆ. ಸ್ಮಾರ್ಟ್ ಪೋನ್ ಗಳ ಹಾವಳಿ ಗ್ರಾಮಗಳಿಗೂ ಪ್ರವೇಶಿಸಿರುವುದರಿಂದ ಈ ಯೋಜನೆಗೆ ಇನ್ನಷ್ಟು ಬಲ ಸಿಕ್ಕಿದ

ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ‘ಹೆಡ್‌ ಹೆಲ್ಡ್‌ ಹೈ’ ನ 20 ಕೇಂದ್ರಗಳಿವೆ. ಮೂವರು ಆರಂಭಿಸಿದ ಸಂಸ್ಥೆಯಲ್ಲಿ ಇಂದು 170 ಮಂದಿ ಬೋಧಕರಿದ್ದಾರೆ. 750 ಜನ ವಿವಿಧ ರೀತಿಯ ಸಂವಹನ, ಕೌಶಲ ತರಬೇತಿ ಪಡೆಯುತ್ತಿದ್ದು, ಎರಡೂವರೆ ಸಾವಿರ ಮಂದಿ ಈಗಾಗಲೇ ತರಬೇತಿ ಪೂರ್ಣಗೊಳಿಸಿದ್ದಾರೆ. ಇನ್ನಷ್ಟು ಹಳ್ಳಿಗಳನ್ನು ತಲುಪಲು, ಸ್ಥಳೀಯ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ ತಂಡ.

ಗ್ರಾಮೀಣ ಭಾರತದ ನಿರ್ಮಾಣದ ಬಗ್ಗೆ ಕೇವಲ ಭಾಷಣ ಭಿಗಿಯುವವರೇ ಹೆಚ್ಚಿನ ಜನರು ಕಾಲ ಕಳೆಯುತ್ತಿರುವ ಈ ದಿನ ದಿನಗಳಲ್ಲಿ ರಾಜೇಶ್ ಮತ್ತವರ ಸ್ನೇಹಿತರು ಆ ಮಾತನ್ನು ಕಾರ್ಯರೂಪಕ್ಕಿಳಿಸುತ್ತಿದ್ದಾರೆ. ಈ ಮೂಲಕ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ, ಕೆಲಸವಿಲ್ಲದವರಿಗೆ ಉದ್ಯೋಗ ಕಲ್ಪಿಸುವ, ತಂತ್ರಜ್ಙಾನವನ್ನು ಹಳ್ಳಿಗಳಿಗೂ ಪಸರಿಸುವ ಕೆಲಸವನ್ನು "ಹೆಡ್ ಹೆಲ್ಡ್ ಹೈ" ಸಂಸ್ಥೆ ಸದ್ದಿಲ್ಲದೇ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದೆ.