ಬಾಡಿಗೆಗೆ ಬೈಕ್​​ ತೆಗೆದುಕೊಳ್ಳಿ- ಸಿಲಿಕಾನ್​ ಸಿಟಿಯಲ್ಲಿ ಎಂಜಾಯ್​ ಮಾಡಿ

ಟೀಮ್​ ವೈ.ಎಸ್. ಕನ್ನಡ

0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏನ್ ಬೇಕಾದ್ರೂ ಬಾಡಿಗೆಗೆ ಸಿಗುತ್ತೆ. ಕೇವಲ ಮನೆಗಳು ಬಾಡಿಗೆಗಷ್ಟೇ ಸಿಗುತ್ತೆ ಅಂದುಕೊಂಡಿದ್ರೆ ನಿಮ್ ಊಹೆ ತಪ್ಪು. ನಿಮಗೆ ಓಡಾಡಲು ಕಾರು, ಬೈಕ್ ಗಳೂ ಬಾಡಿಗೆಗೆ ಸಿಗುತ್ತವೆ. ಆದರೆ ಹೈಟೆಕ್ ಬೈಕುಗಳ ಬಾಡಿಗೆ ಕಡಿಮೆ ಬೆಲೆಗೆ ಸಿಗುತ್ತವೆ ಅನ್ನೋದು ಗೊತ್ತಾ..? ಎಸ್, ನಾವು ಅದರ ಬಗ್ಗೆಯೇ ಹೇಳ ಹೊರಟಿರುವುದು ಇವತ್ತು.

ಇದನ್ನು ಓದಿ: ಸವಿ ನೆನಪುಗಳಿಗೆ ಪುಸ್ತಕ ರೂಪ ನೀಡುವ ಆನ್​ಲೈನ್​ ಸೇವೆ..!

ಬೆಂಗಳೂರಲ್ಲಿ ಬೈಕ್‌ ಬಾಡಿಗೆಗೆ ಸಿಗುವ ವಿಷಯ ಹೊಸತೇನಲ್ಲ. ಸಣ್ಣ ಬೈಕ್‌ನಿಂದ ಹಿಡಿದು ಅದ್ಧೂರಿ ಬೈಕ್‌ನವರೆಗೆ ಎಲ್ಲವೂ ಬಾಡಿಗೆಗೆ ಸಿಗುತ್ತವೆ. ಆದರೆ ವೀಕೆಂಡ್​ನಲ್ಲಿ ಬಾಡಿಗೆ ರೇಟು ಏರಿಸುತ್ತವೆ. ವಾರದ ದಿನಗಳಲ್ಲಿ ಒಂದು ರೇಟು, ವೀಕೆಂಡ್ ಗಳಲ್ಲಿ ಒಂದು ರೇಟು. ಆದರೆ ಈಗ ಎಲ್ಲಾ ದಿನಗಳಲ್ಲೂ ಒಂದೇ ಬಾಡಿಗೆ ಬೆಲೆ ನಿಗದಿ ಮಾಡಿ ಯುವಕರ ಬೈಕ್ ಕ್ರೇಜ್ ಗೆ ಕಿಚ್ಚು ಹೊತ್ತಿಸಿರೋ ಸಂಸ್ಥೆ ಸ್ವಿಚ್‌ ರೈಡ್ಸ್‌.

ಬೆಂಗಳೂರಿನ ಆರ್ ಟಿ ನಗರದಲ್ಲಿ ಯುವಕರ ತಂಡವೊಂದು ಈ ನೂತನ ವ್ಯವಸ್ಥೆಗೆ ನಾಂದಿಹಾಡಿದೆ. ಅದೂ ಕಡಿಮೆ ದರದಲ್ಲಿ. ಸದ್ಯ ಮೂರು ಬೈಕ್‌ಗಳು ಬಾಡಿಗೆಗೆ ಲಭ್ಯವಿದೆ. ಮೂರೂ ಯುವಕರ ನೆಚ್ಚಿನ ಬೈಕ್ ಗಳೇ. ಕೆಟಿಎಂ ಡ್ಯೂಕ್, ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ ಮತ್ತು ಅಪಾಚೆ ಆರ್ ಟಿ ಆರ್ 180. ಸ್ಪೋರ್ಟ್ಸ್, ಕ್ರೂಸರ್ ಬೈಕ್ ಗಳ ಪ್ರೇಮಿಗಳು ಈ ಬೈಕ್ ಗಳನ್ನು ಕಡಿಮೆ ಬೆಲೆಯಲ್ಲಿ ರೈಡ್ ಮಾಡಿ ಎಂಜಾಯ್ ಮಾಡಬಹುದು.

ಟೂರ್‌ ಹೋಗಬೇಕಾದರೆ ಅಥವಾ ಒಂದು ದಿನ ಬೆಂಗಳೂರಿನಲ್ಲಿ ತಿರುಗಾಡುವುದಾದರೆ ಅಥವಾ ನಿಮಗೆ ಈ ಬೈಕ್‌ ಖರೀದಿಸುವ ಐಡಿಯಾ ಇದ್ದು, ಬೈಕ್‌ ಹೇಗಿದೆ ಅಂತ ನೋಡಿಕೊಳ್ಳುವುದಾದರೆ ಬೈಕ್‌ ಬಾಡಿಗೆಗೆ ಪಡೆಯಬಹುದು. ಒಂದೊಂದು ಬೈಕ್‌ಗೆ ಒಂದೊಂದು ಬೆಲೆ ನಿಗದಿಗೊಳಿಸಲಾಗಿದೆ. ಬೆಂಗಳೂರಿನಾದ್ಯಂತ ಸುಮಾರು 10 ಕಡೆಗಳಲ್ಲಿ ಈ ಸ್ವಿಚ್‌ ರೈಡ್ಸ್‌ ಬೈಕ್‌ಗಳು ಲಭ್ಯ. ನೀವು ಎಲ್ಲಿಂದ ಬೇಕಾದರೂ ಪಡೆದುಕೊಳ್ಳಬಹುದು. ಆನ್ ಲೈನ್ ಮೂಲಕವೂ ಬೈಕ್ ರೈಡ್ ಅನ್ನು ಬುಕ್ ಮಾಡಿಕೊಳ್ಳಬಹದು. ಬೈಕ್ ಬಾಡಿಗೆಗೆ ತೆಗೆದುಕೊಂಡರೆ ಹೆಲ್ಮೆಟ್ ಗಳನ್ನೂ ನೀಡಲಾಗುತ್ತದೆ. ಇದಕ್ಕೆ ಪ್ರತ್ಯೇಕ ಬಾಡಿಗೆ ನೀಡಬೇಕಾದ ಅಗತ್ಯ ಇಲ್ಲ.

ರಾಯಲ್ ಎನ್ ಫೀಲ್ಡ್ ಥಂಡರ್‌ಬರ್ಡ್‌ 350 ಬೈಕ್ ಸವಾರಿಗೆ ಗಂಟೆಗೆ ಬಾಡಿಗೆ ದರ ಕೇವಲ 35 ರುಪಾಯಿ. ಒಂದು ದಿನಕ್ಕೆ 800 ರುಪಾಯಿ ಬಾಡಿಗೆ ನಿಗದಿಯಾಗಿದೆ. ಸೆಕ್ಯುರಿಟಿ ಡಿಪಾಸಿಟ್‌ ಆಗಿ 1000 ರುಪಾಯಿ ಇಡಬೇಕಾದದ್ದು ಕಡ್ಡಾಯ. ಇಷ್ಟು ಪಾವತಿಸಿ ಬೈಕ್ ರೈಡ್ ಖುಷಿ ಅನುಭವಿಸಬಹುದು.

ಕೆಟಿಎಂ ಡ್ಯೂಕ್ ಬೈಕ್‌ ಸವಾರಿಗೆ ಒಂದು ಗಂಟೆಗೆ 65 ರುಪಾಯಿ ಬಾಡಿಗೆ ನಿಗದಿಗೊಳಿಸಲಾಗಿದೆ. ಒಂದು ದಿನಕ್ಕೆ ಬಾಡಿಗೆ ಪಡೆಯುವುದಾದರೆ 1500 ರುಪಾಯಿ. ಮೂರು ದಿನಕ್ಕಿಂತ ಜಾಸ್ತಿ ದಿನ ಬಾಡಿಗೆ ಪಡೆದರೆ ದರ ಕಡಿಮೆಯಾಗುತ್ತದೆ. ವಾರಗಟ್ಟಲೆ ಬಾಡಿಗೆಗೆ ಪಡೆದರೆ ಬಾಡಿಗೆ ದಿನಕ್ಕೆ 1200 ರುಪಾಯಿ. ಇದರ ಜೊತೆ ರೂ.1500 ಸೆಕ್ಯುರಿಟಿ ಡಿಪಾಸಿಟ್‌ ಇಡಬೇಕಾಗುತ್ತದೆ.

ಮೂರನೇ ಬೈಕ್ ಟಿವಿಎಸ್ ಅಪಾಚೆ ಆರ್‌ಟಿಆರ್‌ 180. ಒಂದು ಗಂಟೆ ಬಾಡಿಗೆ ದರ ಕೇವಲ 25 ರುಪಾಯಿ. ದಿನಕ್ಕೆ 600 ರುಪಾಯಿ ಬಾಡಿಗೆ ಕಟ್ಟಬೇಕಾಗುತ್ತದೆ. ಸೆಕ್ಯುರಿಟಿ ಡಿಪಾಸಿಟ್‌ ರೂ.1000 ನಿಗದಿ ಮಾಡಲಾಗಿದೆ.

ಸ್ವಿಚ್ ರೈಡ್ ನ ಅವಕಾಶಿದಿಂದಾಗಿ ಕಾಲೇಜು ವಿದ್ಯಾರ್ಥಿಗಳು ಜಾಲಿ ಟ್ರಿಪ್ ಗೆ, ಕಾರಿನಲ್ಲೇ ಓಡಾಡುವ ಐಟಿ ಮಂದಿಗೆ ಅಪರೂಪಕ್ಕೆ ಬೈಕ್ ಸವಾರಿಗೆ ಹೋಗಲು ಸಹಕಾರಿಯಾಗಲಿದೆ. ಬೈಕ್ ತೆಗೆದುಕೊಳ್ಳಲು ಹಣ ವಿಲ್ಲ ಎಂದು ಕೊರಗುವವರಿಗೆ ಇದು ಅಕ್ಷರಶಃ ಸುವರ್ಣಾವಕಾಶ. 

ಇದನ್ನು ಓದಿ:

1. ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!

2. ಟೆಕ್ಕಿ ಹೈನುಗಾರನಾದ ಯಶೋಗಾಥೆ..!

3. ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

Related Stories