ಲಕ್ಷ ಚದರಡಿ ನಿರ್ವಹಣೆಯೊಂದಿಗೆ ಶೇಖರಣಾ ಘಟಕ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ "ಸ್ಟೋರ್​​ ಮೋರ್"

ಟೀಮ್​​ ವೈ.ಎಸ್​​.

0

ಈ ಹಿಂದೆ ಸಂಗ್ರಹಣೆ ಹಾಗೂ ಶೇಖರಣೆಗಳಿಗೆ ಅಂತಹ ಮಹತ್ವದ ಆದ್ಯತೆಗಳೇನೂ ಇರಲಿಲ್ಲ. ಆದರೆ ಬೆಳೆಯುತ್ತಿರುವ ಬಿಸಿನೆಸ್ ಯುಗದಲ್ಲಿ ಶೇಖರಣಾ ಘಟಕಗಳು ನೂತನ ಟ್ರೆಂಡ್ ಆಗಿ ಪರಿವರ್ತನೆಗೊಂಡಿದೆ.. ಈಗ ವಿಶ್ವದಾದ್ಯಂತ ಶೇಖರಣಾ ಘಟಕಗಳನ್ನು ಬಾಡಿಗೆಗೆ ಕೊಡುವ ಟ್ರೆಂಡ್ ಎಲ್ಲೆಡೆ ವಿಸ್ತರಿಸತೊಡಗಿದೆ.. ಆನ್​​ಲೈನ್​​​​ ಮಾರುಕಟ್ಟೆ ಟ್ರೆಂಡ್ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಆನ್​​ಲೈನ್​​​ ಸರಕುಗಳಿಗೆ ಭೌತಿಕ ಸ್ಥಳಾವಕಾಶ ನೀಡುವ ಅವಕಾಶಗಳು ಅಧಿಕವಾಗುತ್ತಿದೆ.. ಶೇಖರಣೆಗೆ ಸ್ಥಳ ಕೊಟ್ಟರೆ ಆನ್​​ಲೈನ್​​​ ಕಂಪೆನಿಗಳು ಬಾಡಿಗೆ ಲೆಕ್ಕದಲ್ಲಿ ತಮ್ಮ ಸರಕುಗಳನ್ನು ಸಂಗ್ರಹಿಸಿಡುತ್ತವೆ.. ನಗರೀಕರಣ ಹಾಗೂ ಜೀವನ ಶೈಲಿಯ ಬದಲಾವಣೆಗಳಿಂದ ಇಂತಹ ಸೌಲಭ್ಯಗಳೂ ಹೆಚ್ಚಾಗುತ್ತಿವೆ..

ಇದೊಂದು ಟ್ರೆಂಡ್:

ಸ್ಟೋರ್​​ಮೋರ್​​​​ನ ಶೇಖರಣಾ ಸ್ಥಳ
ಸ್ಟೋರ್​​ಮೋರ್​​​​ನ ಶೇಖರಣಾ ಸ್ಥಳ

ತಂತ್ರಜ್ಞಾನ ಕ್ಷೇತ್ರದಲ್ಲಿ ಉಳಿದ ಟ್ರೆಂಡ್​​ಗಳಂತೆ, ಬೇಡಿಕೆಯಂತೆ ಶೇಖರಣಾ ಸ್ಥಳದ ಟ್ರೆಂಡ್ ಸಹ ಅಮೇರಿಕನ್ ಮೂಲದಿಂದ ಬಂದಿರುವಂತಹದ್ದೆ.. ಈಗಾಗಲೆ ಬೇಡಿಕೆಯ ಅನ್ವಯ ಸಂಗ್ರಹಣಾ ಸ್ಥಳ ಒದಗಿಸುವ ಬಿಸಿನೆಸ್ ಯುಎಸ್​​ನಲ್ಲಿ ದೊಡ್ಡ ಹೆಜ್ಜೆಗಳೊಂದಿಗೆ ಇಲ್ಲಿಯವರೆಗೆ ಸರಾಸರಿ 24 ಬಿಲಿಯನ್ ಆದಾಯ ಗಳಿಸಿದೆ.. ಅಮೇರಿಕಾದ ಹತ್ತರಲ್ಲಿ ಒಬ್ಬರು ಶೇಖರಣಾ ಘಟಕಗಳನ್ನು ಹೊಂದಿದ್ದು ಬಾಡಿಗೆಗೆ ಕೊಡುತ್ತಿದ್ದಾರೆ.. ಯುನೈಟೆಡ್ ಸ್ಟೇಟ್​​ನ ಪ್ರಸಿದ್ಧ ಮೇಕ್ಸ್​​ ಸ್ಪೇಸ್​​ ಹಾಗೂ ಬಾಕ್ಸ್​​​ ಬಿ ಕ್ರಮವಾಗಿ 10 ಮಿಲಿಯನ್ ಡಾಲರ್ ಹಾಗೂ 7 ಮಿಲಿಯನ್ ಡಾಲರ್ ಆದಾಯ ಗಳಿಸಿವೆ.. ಹಾಂಕಾಂಗ್​​ ಮೂಲದ ಬಾಕ್ಸ್​​ಫುಲ್ ಇತ್ತೀಚೆಗಷ್ಟೆ 8 ಮಿಲಿಯನ್ ಡಾಲರ್ ಆದಾಯ ಘೋಷಿಸಿಕೊಂಡಿದೆ.. ಈ ಮಧ್ಯೆ ಭಾರತದಲ್ಲೂ ಮುಂಬೈ ಮೂಲದ ಬಾಕ್ಸ್ ಮೈ ಸ್ಪೇಸ್ ಸಂಸ್ಥೆಯ ಮೂಲಕ ರಾಷ್ಟ್ರದೊಳಗೆ ಶೇಖರಣಾ ಘಟಕದ ಟ್ರೆಂಡ್ ಅಧಿಕೃತವಾಗಿ ಕಾಲಿಟ್ಟಂತಾಗಿದೆ..

ಸ್ಟೋರ್​​ಮೋರ್​​​:

ನಿತಿನ್ ಧವನ್ ಹಾಗೂ ಪೂಜಾ ಕೊಠಾರಿ ಕಳೆದ ಕೆಲವು ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆ ಸ್ಟೋರ್​​ಮೋರ್.. ತಾಂತ್ರಿಕ ಸೌಲಭ್ಯಗಳಿಂದ ಉತ್ತಮಪಡಿಸಿಕೊಂಡು ಇದೀಗ ಬೇಡಿಕೆಯಲ್ಲಿದೆ .

ನಿತಿನ್​​ ಧವನ್​​​
ನಿತಿನ್​​ ಧವನ್​​​

10 ವರ್ಷಗಳ ಹಿಂದೆ ಗುತ್ತಿಗೆ ಗ್ಲೋಬಲ್ ಮೀಡಿಯಾ ಸಂಸ್ಥೆ ಒಂದರಲ್ಲಿ ಸಹ ಸಂಪಾದಕಿಯಾಗಿದ್ದ ಪೂಜಾ ಹಾಗೂ ಹಣಕಾಸು, ಹಾಗೂ ಅಕೌಂಟ್ಸ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಿತಿನ್​​ರ ಮಹತ್ವಾಕಾಂಕ್ಷೆಯ ಯೋಜನೆಯೇ ಈ ಸ್ಟೋರ್ ಮೋರ್..

ಪೂಜಾ ಹಾಗೂ ನಿತಿನ್ 2010ರಲ್ಲಿ ದಾಖಲಾತಿ ನಿರ್ವಹಣೆಯ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು.. ಪೂಜಾ ಬಂಡವಾಳ ಹೂಡಿದ್ದ ಈ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ನಿತಿನ್ ನೋಡಿಕೊಳ್ಳುತ್ತಿದ್ದರು.. 2013ರಲ್ಲಿ ಈ ಸಂಸ್ಥೆಯ ಜೊತೆಯಲ್ಲೇ ಹುಟ್ಟಿಕೊಂಡಿದ್ದು ಸ್ಟೋರ್​​ಮೋರ್.. 2014ರಲ್ಲಿ ಸ್ಟೋರ್​​ಮೋರ್ ಅನ್ನು ಪ್ರತ್ಯೇಕ ಸಂಸ್ಥೆಯನ್ನಾಗಿ ಲಾಂಚ್ ಮಾಡಲಾಯಿತು..

ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ ನಾವು ಹಲವು ಸಂಪರ್ಕಗಳನ್ನು ಹೊಂದಿದ್ದು ನಮ್ಮ 10 ನೆಟ್​ವರ್ಕ್​ಗಳ​ಡಿಯಲ್ಲಿ ಸುಮಾರು 1 ಲಕ್ಷ ಚದರಡಿಯಷ್ಟು ಸ್ಥಳ ಬಾಡಿಗೆ ಕೊಡುತ್ತಿದ್ದೇವೆ ಅಂದಿದ್ದಾರೆ ಪೂಜಾ.. ಪೂಜಾರ ಸ್ಟೋರ್​​ಮೋರ್ ನೆಟ್​ವರ್ಕ್​ ಪ್ರದೇಶಗಳಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಉದ್ದೇಶಗಳಿಂದ ಗ್ರಾಹಕರು ತಮ್ಮ ವಸ್ತುಗಳನ್ನು ಇಡಬಹುದಾಗಿದ್ದು, ಸ್ಟೋರ್​​ಮೋರ್ ಸುಮಾರು 200-250 ಗ್ರಾಹಕರನ್ನು ಹೊಂದಿದೆ.

ಪೂಜಾ ಕೊಠಾರಿ
ಪೂಜಾ ಕೊಠಾರಿ

ಆದಾಯ ಮಾದರಿ:

ಸ್ಟೋರ್​​ಮೋರ್ ತನ್ನ ಘಟಕದ ಸ್ಥಳವನ್ನು ತಿಂಗಳ ಬಾಡಿಗೆಯಂತೆ ಗ್ರಾಹಕರಿಗೆ ನೀಡುತ್ತಿದ್ದು, ಜೊತೆಗೆ ಪ್ಯಾಕಿಂಗ್, ರೀ ಡೆಲಿವರಿ ಹಾಗೂ ಸರಕು ಸಾಗಾಣಿಕೆಗೆ ಪ್ರತ್ಯೇಕ ಚಾರ್ಜ್ ಮಾಡುತ್ತದೆ.. ಸ್ಟೋರ್​​ಮೋರ್ ನಿಂದ ಭದ್ರತೆ ಹಾಗೂ ಲಾಕಿಂಗ್​ಗಾಗಿ ಪ್ರತ್ಯೇಕ ವೆಚ್ಚ ವಿಧಿಸುವುದಿಲ್ಲ ಅಂತ ಪೂಜಾ ಸ್ಪಷ್ಟಪಡಿಸಿದ್ದಾರೆ..

ತಾಂತ್ರಿಕ ಆಯಾಮ ಹಾಗೂ ಆಶಯಗಳು:

ಸ್ಟೋರ್​​ಮೋರ್​ ತನ್ನ ನೆಟ್​ವರ್ಕ್​ ಪ್ರದೇಶಗಳಲ್ಲಿ ಬೇರೆ ಬೇರೆ ಘಟಕಗಳಲ್ಲಿ ಶೇಖರಿಸುವ ವ್ಯವಸ್ಥೆಯನ್ನೂ ಗ್ರಾಹಕರಿಗೆ ನೀಡಿದೆ.. ಬಳಕೆದಾರರು ಲಾಗಿನ್ ಆಗಿ ಶೇಖರಣಾ ವೆಚ್ಚ ಹಾಗೂ ಸೌಕರ್ಯಗಳನ್ನು ತಿಳಿದುಕೊಳ್ಳುವ ಸೌಲಭ್ಯವಿದೆ.. ಹೊಟೇಲ್​​ಗಳಲ್ಲಿ ಉಳಿದುಕೊಳ್ಳಲು ರೂಂ ಬುಕ್ ಮಾಡುವಂತೆ ಗ್ರಾಹಕರು ಈ ಶೇಖರಣಾ ಘಟಕಗಳನ್ನೂ ಬುಕ್ ಮಾಡಿ ತಮಗಿಷ್ಟ ಬಂದಷ್ಟು ದಿನ ತಮ್ಮ ಸಾಮಗ್ರಿಗಳನ್ನು ಸೇಫ್ ಆಗಿ ಇಟ್ಟುಕೊಳ್ಳಬಹುದಾಗಿದೆ.. ಇದಕ್ಕಾಗಿ ಗ್ರಾಹಕರು ತಮ್ಮ ವಸ್ತುಗಳನ್ನು ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಇಟ್ಟುಕೊಳ್ಳಬಹುದಾದಷ್ಟು ಭದ್ರವಾಗಿ ಇಡಲು ಸ್ಥಳ ಹಾಗೂ ಉಳಿದ ಸೌಕರ್ಯಗಳನ್ನು ಸ್ಟೋರ್​​ಮೋರ್​​ನಲ್ಲಿ ಒದಗಿಸಿಕೊಡಲಾಗಿದೆ ಅನ್ನುತ್ತಾರೆ ಪೂಜಾ..

ಗೃಹಬಳಕೆ ಹಾಗೂ ಬಿಸಿನೆಸ್​ಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸುಡುವ ಶೇಖರಣಾ ಘಟಕಗಳ ಬಾಡಿಗೆ ನೀಡುವ ಈ ಉದ್ಯಮವನ್ನು ಮತ್ತಷ್ಟು ವಿಸ್ತಾರವಾಗಿ, ವಿಶಾಲವಾಗಿ ಅಭಿವೃದ್ಧಿಪಡಿಸಬೇಕು ಅನ್ನುವುದು ಸ್ಟೋರ್​​ಮೋರ್ ಸಂಸ್ಥೆಯ ಮಹತ್ವಾಕಾಂಕ್ಷೆಯಾಗಿದೆ.. ಗ್ರಾಹಕರಿಗೆ ಸುಲಭ ಹಾಗೂ ಸರಳ ಅನುಕೂಲ ಹಾಗೂ ಭಾರತದಾದ್ಯಂತ ತನ್ನ ನೆಟ್​​ವರ್ಕ್​ ಅಭಿವೃದ್ಧಿಪಡಿಸುವುದು ಈ ಮೂಲಕ ಸ್ಟೋರಿಂಗ್ ಉದ್ಯಮಕ್ಕೆ ಹೊಸ ಆಯಾಮ ನೀಡುವುದು ಸಹ ಇದರ ಆದ್ಯತೆಯಾಗಿದೆ.. ಇನ್ನು ವೇರ್​​ಹೌಸಿಂಗ್​​ ಇಂಡಸ್ಟ್ರಿಯ ದಿಕ್ಕನ್ನು ಬದಲಾಯಿಸಿ ರಾಷ್ಟ್ರದ ಆರ್ಥಿಕತೆಗೆ ವ್ಯಾಖ್ಯಾನ ಬರೆಯುವ ಕನಸು ಪೂಜಾರದ್ದಾಗಿದೆ..