ಕನ್ನಡಿಗರನ್ನು ಬಡಿದೆಚ್ಚರಿಸಿದ ಕನ್ನಡ ಡಿಂಡಿಮ ವೀಡಿಯೋ

ಉಷಾ ಹರೀಶ್​​

1

ಸಾಮಾನ್ಯವಾಗಿ ನವೆಂಬರ್ ಬಂತೆಂದರೆ ರಾಜ್ಯಾದ್ಯಾಂತ ಎಲ್ಲೆಲ್ಲೂ ಕನ್ನಡದ ಹಾಡುಗಳು ಕೇಳಿ ಬರುತ್ತವೆ. ಅದರಲ್ಲೂ ಕುವೆಂಪು ಬರೆದಿರುವ ಜನಪ್ರಿಯ ಗೀತೆ ‘ಬಾರಿಸು ಕನ್ನಡ ಡಿಂಡಿಮವ...’ ಹಾಡಂತೂ ರಾಜ್ಯೋತ್ಸವ ಆಚರಿಸುವ ಪ್ರತಿ ವೇದಿಕೆಯಲ್ಲೂ ಹಾಡುತ್ತಾರೆ.

ಆದ್ರೆ ಈ ಬಾರಿಯ ಕನ್ನಡ ಹಬ್ಬವನ್ನು ವಿಶಿಷ್ಠವಾಗಿಸಿದ್ದಾರೆ. ಮೆಸೂರಿನ ಕೆಲ ಯುವಕರು ಸೇರಿಕೊಂಡು ಬಾರಿಸು ಕನ್ನಡ ಡಿಂಡಿಮವ ಹಾಡನ್ನು ವಿಶ್ವವಿಖ್ಯಾತಿಗೊಳಿಸಿದ್ದಾರೆ. ಯಾರ ಫೇಸ್ ಬುಕ್ ಪೇಜ್ ನೋಡಿದರೂ ಬಾರಿಸು ಕನ್ನಡ ಡಿಂಡಿಮವೇ ಕಾಣುತ್ತಿದೆ. ಇದಕ್ಕೆ ಕಾರಣ, ಹೊಸ ರಾಗದಲ್ಲಿ ಮೂಡಿಬಂದಿರುವ ವೀಡಿಯೋ ಸಾಂಗ್.

ಈ ಹೊಸತನದ ಹಾಡು ಮೊದಲು ಬಿಡುಗಡೆಯಾಗಿದ್ದು ಅಕ್ಟೋಬರ್ 9 ರಂದು. ಯೂಟೂಬ್​​ನಲ್ಲಿ ಬಿಡುಗಡೆಯಾದ ಮೊದಲ ದಿನವೇ ಒಂದು ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ನಾಲ್ಕೆದು ದಿನಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ನೋಡಿ ಇಷ್ಟಪಟ್ಟಿದ್ದಾರೆ. ಸಾವಿರಾರು ಬಾರಿ ಈ ವಿಡಿಯೋ ಶೇರ್ ಆಗಿದೆ.

ಸುನೀಲ್​​ ಮೈಸೂರು, ನಿರ್ದೇಶಕ
ಸುನೀಲ್​​ ಮೈಸೂರು, ನಿರ್ದೇಶಕ

ಈ ಹಾಡನ್ನು ನೋಡುತ್ತಿದ್ದರೆ ಪ್ರತಿಯೊಬ್ಬ ಕನ್ನಡಿಗನಿಗೂ ಮೈ ಜುಂ ಎನ್ನುತ್ತದೆ ಹಾಗಿದೆ ಇದರ ಚಿತ್ರಣ.

ಮೆಸೂರಿನಲ್ಲಿ ಎಂಜಿನಿಯರಿಂಗ್ ಪದವಿಧರ ಸುನೀಲ್ ಮೈಸೂರು ಈ ವಿಡಿಯೋದ ನಿರ್ದೇಶಕರು. ಎಂಜಿನಿಯರಿಂಗ್ ಮುಗಿಸಿ ಸಾವಿರಾರು ರೂಪಾಯಿ ಸಂಬಳ ತೆಗೆದುಕೊಳ್ಳುವ ಬದಲು ತನ್ನ ಸ್ನೇಹಿತರ ದಂಡು ಕಟ್ಟಿಕೊಂಡು ಇಂತಹದ್ದೊಂದು ಉತ್ತಮ ಕೆಲಸ ಮಾಡಿದ್ದಾರೆ ಸುನೀಲ್. ಈ ವೀಡಿಯೋ ಸಾಂಗ್, ಫೇಸ್ ಬುಕ್, ಯೂಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರನ್ನು ಆಕರ್ಷಿಸುತ್ತಿದೆ.

ಸೆಬರ್ ಯುಗದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಂತಹ ಸಿಟಿಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಹಾಡುಗಳು ಅವಶ್ಯಕ. ಇಂತಹ ಒಂದು ಪ್ರಾಜೆಕ್ಟ್​​ನೊಂದಿಗೆ ವಾರ್ತಾ ಇಲಾಖೆ ಕದ ತಟ್ಟಿದಾಗ ರೂಪಗೊಂಡಿದ್ದೆ ಬಾರಿಸು ಕನ್ನಡ ಡಿಂಡಿಮ.

ಕನ್ನಡದ ಜನಪ್ರಿಯ ಕವಿಗಳು ಭಾಷೆಯ ಬಗ್ಗೆ ಬರೆದಿರುವ ಹಾಡುಗಳನ್ನು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡಿರುವ ಯೋಜನೆಯ ಮೊದಲ ಹೆಜ್ಜೆ ಇದು. ಇಂದು ಇದು ಅಧಿಕೃತವಾಗಿ ಬಿಡುಗಡೆ ಆಗಲಿದೆ.

ಪೂರ್ಣಚಂದ್ರ ಸಂಗೀತ:

ಈ ಹಾಡು ಇಷ್ಟೋಂದು ಖ್ಯಾತಿ ಗಳಿಸಲು ಕಾರಣ ಇದಕ್ಕೆ ನೀಡಿದ ಸಂಗೀತ. ಲೂಸಿಯಾ, ಇನ್ನು ಬಿಡುಗಡೆಯಾಗದ ಕಿರಗೂರಿನ ಗಯ್ಯಾಳಿಗಳು, ರಾಕೆಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಪೂರ್ಣ ಚಂದ್ರ ಅವರು ಸಂಗೀತ ಸಂಯೋಜಿಸಿದ್ದು, ಹಿನ್ನೆಲೆ ಗಾಯಕರಾದ ಉದಿತ್ ಹರಿದಾಸ್, ಅನನ್ಯ ಭಟ್, ರಾಜ್ಯ ಪ್ರಶಸ್ತಿ ವಿಜೇತ ಗಾಯಕ ನವೀನ್ ಸುಜ್ಜು , ಮತ್ತಿತರರ ಹಾಡಿಗೆ ಧನಿಯಾಗಿದ್ದಾರೆ.

ಕಪಾಕರ ಸೇನಾನಿ ನೆರವು: 

ವನ್ಯ ಜೀವಿ ತಜ್ಞ, ಗ್ರೀನ್ ಆಸ್ಕರ್ ವಿಜೇತ ಜೋಡಿ ಕಪಾಕರ ಸೇನಾನಿ ಅವರ ಮಾರ್ಗದರ್ಶನದಲ್ಲಿ ಈ ವಿಡಿಯೋ ತಯಾರಾಗಿದೆ. ಈ ಹಿಂದೆ ವಾರ್ತಾ ಇಲಾಖೆ ವತಿಯಿಂದ ನಿರ್ಮಾಣವಾದ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರನ್ನು ಕುರಿತ ‘ಮಾಯಾಲೋಕ’ ಎಂಬ ಡಾಕ್ಯುಮೆಂಟರಿ ಸಾಕಷ್ಟು ಜನಪ್ರಿಯಗೊಂಡಿತ್ತು. ಇದರ ನಿರ್ದೇಶಕರು ಕೃಪಾಕರ್ ಸೇನಾನಿ. ಈಗ ಇವರ ಮಾರ್ಗದರ್ಶನದಲ್ಲಿ ಚಿತ್ರತವಾಗಿರು ಈ ಹಾಡು ಈಗ ನೀರಿಕ್ಷೆಗೂ ಮೀರಿ ಯಶಸ್ವಿಯಾಗಿದೆ. ರಂಗಭೂಮಿ,ಸಂಗೀತ, ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವಕರ ದಂಡೇ ಈ ವಿಡಿಯೋದಲ್ಲಿದೆ. ಒಟ್ಟಿನಲ್ಲಿ ಈ ಯುವಕರು ಹಾಡಿನ ಮೂಲಕ ಕನ್ನಡಿಗರನ್ನು ಬಡಿದೆಚ್ಚರಿಸಿದ್ದಾರೆ ಎಂದೇ ಹೇಳಬಹುದು.

‘ಕನ್ನಡ ಕವಿಗಳು ಬರೆದ ಗೀತೆಗಳನ್ನು ಇವತ್ತಿನ ಜನರೇಷನ್​ಗೆ ಇಷ್ಟವಾಗುವಂತೆ ಮಾಡುವ ಸಲುವಾಗಿ ಈ ರೀತಿ ಚಿತ್ರಿಕರಿಸಿದ್ದೇವೆ. ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ.

-ವಿಶುಕುಮಾರ್, ವಾರ್ತಾಇಲಾಖೆ ನಿರ್ದೇಶಕ


ನಾನು ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕು ಎಂಬ ಕನಸಿನ ಮೊದಲ ಹಂತ ಇದು. ಅಷ್ಟೇ ಅಲ್ಲದೆ ಕಾನ್ವೆಂಟ್​ನಲ್ಲಿ ಓದಿದ ನಾನು ಕನ್ನಡದ ಬಗ್ಗೆ ಇದ್ದ ಪ್ರೀತಿಯನ್ನು ಈ ರೀತಿ ನಾನು ವ್ಯಕ್ತಪಡಿಸಿದ್ದೇನೆ. ಈ ಜನರೇಶನ್ನವರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ವಿಡಿಯೋ ಮಾಡಿದ್ದೇನೆ.

-ಸುನಿಲ್ ಮೈಸೂರು, ನಿರ್ದೇಶಕ