‘ರಾಯ್​​ಬರೇಲಿಯಿಂದ ನವದೆಹಲಿವರೆಗೂ- ಇದು ರಶ್ಮಿ ವರ್ಮಾಕಥೆ’

ಟೀಮ್​​​ ವೈ.ಎಸ್​​.

‘ರಾಯ್​​ಬರೇಲಿಯಿಂದ ನವದೆಹಲಿವರೆಗೂ- ಇದು ರಶ್ಮಿ ವರ್ಮಾಕಥೆ’

Tuesday November 03, 2015,

3 min Read

ಹನ್ನೆರೆಡು ವರ್ಷಗಳ ನಂತ್ರ ರಶ್ಮಿವರ್ಮಾ ಹಾಗೂ ಆಕೆಯ ಪತಿ ಮ್ಯಾಪ್ ಮೈ ಇಂಡಿಯಾ ಆರಂಭಿಸುವ ಉದ್ದೇಶದಿಂದ 1992ರಲ್ಲಿ ಐಟಿ ಇಂಜಿನಿಯರ್‍ಗಳಾಗಿ ಅಮೇರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದರು. 1994ರಲ್ಲಿತಮ್ಮಕಂಪನಿಯಲ್ಲಿ ಜಿಐಎಸ್ ಶುರುಮಾಡುವ ಮೂಲಕ ಡಿಜಿಟಲ್ ಮ್ಯಾಪ್ ಹಾಗೂ ಡೇಟಾ, ಜಿಪಿಎಸ್ ನ್ಯಾವಿಗೇಷನ್, ಲೊಕೇಶನ್ ಬೇಸ್ಡ್ ಸರ್ವೀಸ್, ಜಿಐಎಸ್ ಹಾಗೂ ಸಂಬಂಧಪಟ್ಟ ಉದ್ಯಮಗಳಲ್ಲಿ ಮೇಲುಗೈ ಸಾಧಿಸಿದರು.

ಹುಟ್ಟಿದ್ದು ಉತ್ತರ ಪ್ರದೇಶದ ಚಿಕ್ಕಟೌನ್ ರಾಯ್​​​ಬರೇಲಿಯಲ್ಲಿ. ಬೆರಳೆಣಿಕೆಯಷ್ಟು ಹುಡುಗಿಯರು ಮಾತ್ರ ಆರಿಸಿಕೊಳ್ಳುತ್ತಿದ್ದ ಇಂಜಿನಿಯರಿಂಗ್ ಪದವಿಗೆ ಸೇರಿದ್ದರು ರಶ್ಮಿ. ತಂತ್ರಜ್ಞಾನ ಹಾಗೂ ಮ್ಯಾನೇಜ್‍ಮೆಂಟ್​​​ನಲ್ಲಿ 34 ವರ್ಷಗಳ ಅನುಭವದ ನಂತರ , ಅಮೇರಿಕಾದಲ್ಲಿ ರಶ್ಮಿ ಹನ್ನೆರೆಡು ವರ್ಷಗಳ ಕಾಲ ಕೆಲಸ ಮಾಡಿದರು. ಇದರಲ್ಲಿ ಎಂಟು ವರ್ಷಗಳ ಕಾಲ ಐಬಿಎಮ್‍ನಲ್ಲೇ ದುಡಿದಿದ್ದಾರೆ. ರಶ್ಮಿ ಹೈ ಎಂಡ್‍ ಕಂಪ್ಯೂಟರ್ ಸಾಫ್ಟ್​​​ವೇರ್‍ನಲ್ಲೇ ಕೆಲಸ ಮಾಡಿದ್ದಾರೆ. ‘ನಾನು ಐಬಿಎಮ್‍ನ ಮೈನ್ ಫ್ರೇಮ್‍ ಟಿಕ್ನಾಲಜಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದೆ. ನನಗೆ ಆ ತಂತ್ರಜ್ಞಾನ ಹೆಚ್ಚು ಖುಷಿ ಕೊಡುತ್ತಿತ್ತು. ಆ ಸಮಯದಲ್ಲಿ ಅಂತಹ ತಂತ್ರಜ್ಞಾನ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ ಜನ ಹೆಚ್ಚಾಗಿ ಕಂಪ್ಯೂಟರ್ ಸಿಸ್ಟಮ್ ಹಾಗೂ ಡೆಸ್ಕ್​​​ಟಾಪ್‍ ಕಡೆಗೆ ವಾಲುತ್ತಿದ್ದರು. ಹಾಗಾಗಿ ನಾವು ವಿನೂತನವಾಗಿ ಏನನ್ನಾದ್ರೂ ಹುಡುಕಬೇಕಿತ್ತು. ತಾಂತ್ರಿಕ ಹಿನ್ನೆಲೆ ಇದ್ದುದರಿಂದ, ಚಿಂತನೆಯನ್ನು ಆರಂಭದಲ್ಲೇ ನಾವು ಜಿಐಎಫ್ ಮ್ಯಾಪಿಂಗ್ ಸಂಬಂಧಪಟ್ಟ ವಲಯವನ್ನ ಆರಿಸಿಕೊಂಡೆವು. ಅದೇ ‘ಮ್ಯಾಪ್‍ಮೈಇಂಡಿಯಾ’.

image


ಏನನ್ನಾದ್ರೂ ಸಾಧಿಸುವ ಹಂಬಲದಿಂದ ರಶ್ಮಿ ಹಾಗೂ ಆಕೆಯ ಪತಿ ಭಾರತಕ್ಕೆ ಹಿಂದಿರುಗಿದ್ದರು. ಅದಕ್ಕಿಂತ ಹೆಚ್ಚಾಗಿ ರಶ್ಮಿ ಅವರಿಗೆ ತಮ್ಮಿಷ್ಟದ ವಲಯದಲ್ಲಿ ಹೊಸದಾಗಿ ಕೆಲಸ ಆರಂಭಿಸುವ ಇಚ್ಛೆ ಇತ್ತು. ರಶ್ಮಿ ಅವರು ಮ್ಯಾಪ್‍ ಅಭಿವೃದ್ಧಿ, ಪ್ರೊಡಕ್ಷನ್ ಹಾಗೂ ನೇಮಕಾತಿಯಲ್ಲೂ ನಿಗಾ ವಹಿಸಿದರು.

‘ನಮ್ಮ ಮ್ಯಾಪ್ ಹಾಗೂ ಡೇಟಾ ಪ್ರಾಡಕ್ಟ್ಸ್​​​ಗಳು ವಿಶಾಲವಾಗಿದ್ದವು, ಹಾಗೂ ಇಂಡಸ್ಟ್ರಿ ವಲಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು. ಹಾಗಾಗಿ, ಇ ಕಾಮರ್ಸ್, ಆಟೋಮೋಟಿವ್, ಟ್ರ್ಯಾಕಿಂಗ್, ಟ್ರಾನ್ಸ್​​​ಪೋರ್ಟೇಷನ್ , ಲಾಜಿಸ್ಟಿಕ್ಸ್ ಹಾಗೂ ಸರ್ಕಾರದ ಮಟ್ಟದಲ್ಲಿ ಪೂರ್ಣ ಪ್ರಮಾಣದಲ್ಲಿ ಉಪಯೋಗಕ್ಕೆ ಬಂದವು. ಇದರರ್ಥ, ಸಾವಿರಾರು ವಲಯಗಳಲ್ಲಿ ಇದು ಅನುಕೂಲವಾಯಿತು. ಇಂತಾ ಉತ್ಕೃಷ್ಟ ಮಟ್ಟದ ಡೇಟಾ ನಿರ್ಮಾಣ ಮಾಡುವುದು ಒಂದು ಸವಾಲಾಗಿತ್ತು. ಆಗಾಗ್ಗೆ, ಹೊಸ ತಂತ್ರಜ್ಞಾನವನ್ನ ಪರಿಚಯಿಸುತ್ತಿರಬೇಕು. ಆದ್ರೂ, ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ನಾವು ಯಶಕಂಡಿದ್ದೆವು’, ಅಂತಾರೆ ರಶ್ಮಿ.

ಜಾಗತಿಕ ಮಟ್ಟದಲ್ಲಿ ಆಗಾಗ ಹೊಸ ಸವಾಲುಗಳು ಎದುರಾಗುತ್ತಿರುತ್ತವೆ. ಒಂದು ಕಂಪನಿಯಲ್ಲಿ ನಾಯಕನ ಸ್ಥಾನದಲ್ಲೇ ಉಳಿಯಬೇಕು ಅಂದ್ರೆ ಹೊಸ ಐಡಿಯಾಗಳನ್ನ ಕೊಡ್ತಾ ಇರಬೇಕು. ಹೊಸದನ್ನ ಆರಂಭಿಸಬೇಕು. ‘ಆವಿಷ್ಕಾರ ಹಾಗೂ ವಿಕಸನ ಎರಡೂ ಕೊನೆ ಇಲ್ಲದ ಪ್ರಕ್ರಿಯೆಗಳು’. ಈ ನಡುವೆ ಗ್ರಾಹಕರಿಗೆ ಏನು ಬೇಕು ಅನ್ನೋದ್ರ ಬಗ್ಗೆ ನಿಗಾವಹಿಸಬೇಕು. ಕಂಪನಿಗಳ ಆರಂಭ ಹಾಗೂ ಸ್ಥಾಪನೆಯನ್ನ ಕಂಡಿದ್ದೇನೆ. ಸಾಧಿಸಿ ತೋರಿಸಬೇಕು ಅನ್ನೋ ಕಿಚ್ಚೊಂದಿದ್ರೆ ಅವರು ಎಂದಿಗೂ ಮುಂಚೂಣಿಯಲ್ಲಿರುತ್ತಾರೆ’.

ಅಮೇರಿಕಾದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ತಂತ್ರಜ್ಞಾನದ ಒಂದು ಕಲಿಕೆಯನ್ನ ರಶ್ಮಿ ನಮ್ಮೊಂದಿಗೆ ಹಂಚಿಕೊಳ್ತಾರೆ. ‘ಐಬಿಎಮ್‍ನಲ್ಲಿ ನಾನು ಕಲಿತ ಒಂದು ಪ್ರಮುಖವಾದ ಅಂಶವನ್ನ ನಿಮ್ಮಮುಂದಿಡಬೇಕು ನೀವೇನಾದ್ರೂ ಒಂದು ವಿಚಾರದ ಬಗ್ಗೆ ಆಸಕ್ತರಾದ್ರೆ, ಅದರ ಬಗ್ಗೆಯೇ ಮನಸನ್ನ ಕೇಂದ್ರೀಕರಿಸಬೇಕು, ಕೊನೆವರೆಗೂ ಅದರ ಜೊತೆಗಿರಬೇಕು. ಅದರರ್ಥ ಆ ವಿಷಯದಲ್ಲಿ ನಿಮಗೆ ಸಮಸ್ಯೆ ಏನಾದ್ರೂ ತಲೆದೋರಿದ್ರೆ, ಆಸಕ್ತಿ ಕಳೆದುಕೊಳ್ಳಬಾರದು.ನೀವು ಸಮಸ್ಯೆಯೊಂದಿಗೆ ಇದ್ದುಕೊಂಡು, ಅದನ್ನ ಬಗೆಹರಿಸಬೇಕು ಹಾಗೂ ತಾಳ್ಮೆಯಿಂದ ಕೆಲಸ ಮಾಡಿ ಮುಗಿಸಬೇಕು. ನಾನು ಹಲವು ಜನರನ್ನ ನೋಡಿದ್ದೇನೆ, ಏನಾದ್ರೂ ಚಿಕ್ಕಕಷ್ಟ ಕಂಡು ಬಂದ್ರೂ ಅದನ್ನ ಅರ್ಧಕ್ಕೆ ಬಿಟ್ಟ್ಟು ಮತ್ತೊಂದನ್ನ ಹುಡುಕಲು ಮುಂದಾಗ್ತಾರೆ. ಯಾವತ್ತೂ ಕಷ್ಟದಿಂದ ದೂರ ಸರಿಯಬಾರದು.

ಆಕೆಯ ಅನುಭವದ ಮತ್ತೊಂದು ಆವಿಷ್ಕಾರ ಅಂದ್ರೆ, ‘ಅಮೇರಿಕಾದಲ್ಲಿ ಜನ ಟೆಕ್ನಾಲಜಿಯನ್ನ ಅವಲಂಭಿಸಿದ್ದಾರೆ, ಟೆಕ್ನಾಲಜಿ ಅಂದ್ರೆ ಪುಸ್ತಕಗಳಲ್ಲಿ ಓದಲು ಸೀಮಿತವಾಗಿದ್ದಲ್ಲ, ಅದನ್ನಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರಿಗೆ ತಂತ್ರಜ್ಞಾನವನ್ನ ಎಷ್ಟರ ಮಟ್ಟಿಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣಅರಿವಿದೆ.

ರಶ್ಮಿ ಅವರ ಪ್ರಕಾರಆಕೆಯ ಮನಸ್ಥಿತಿ ಹಾಗೂ ಆಕೆಯ ತಂಡ ಭಾರತದಲ್ಲಿ ಅವರ ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ.

ಮ್ಯಾಪ್‍ ಮೈಇಂಡಿಯಾ ಇತ್ತೀಚೆಗಷ್ಟೆ ‘ಸೇಫ್‍ಮೇಟ್’ ಲಾಂಚ್ ಮಾಡಿದೆ.ಈ ಅಪ್ಲಿಕೇಷನ್‍ ತಮಗೆ ಬೇಕಾದವರು ಎಲ್ಲಿದ್ದಾರೆ ಅನ್ನೋದನ್ನ ತಿಳಿಸಲಿದೆ.ರಶ್ಮಿ ಅವರ ಪ್ರಕಾರ ‘ಸೇಫ್‍ಮೇಟ್’ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚು ಸಹಕಾರಿಯಾಗಲಿದೆ.

‘ಸೇಫ್‍ಮೇಟ್’ಯಾಕೆ ವಿಶೇಷ ಅನಿಸಿಕೊಳ್ಳತ್ತೆ ಅಂದ್ರೆ, ಇದು ಅಪ್ಲಿಕೇಷನ್‍ ಅಥವಾ ಸ್ಮಾರ್ಟ್ ಪೋನ್ ನ ಅಗತ್ಯವಿಲ್ಲದೆಯೂ ಕಾರ್ಯ ನಿರ್ವಹಿಸತ್ತೆ. ಇದರ ಮೂಲಕ ವೃದ್ಧರ ಮೇಲೆಯೂ ಸಂಪೂರ್ಣನಿಗಾ ವಹಸಿಬಹುದು, ವಯಸ್ಸಾದವರು ಹೊರಗಡೆ ಹೊದಾಗ, ಅಥವಾ ವಾಕಿಂಗ್ ಹೋದಾಗಅವಘಡ ಸಂಭವಿಸಿದ್ರೆ ತಕ್ಷಣ ತಿಳಿಯಲಿದೆ.ಶಾಲೆಗಳು ಮಕ್ಕಳ ಸುರಕ್ಷತೆಗಾಗಿ, ಸಂಸ್ಥೆಗಳು ತಮ್ಮ ಸಿಬ್ಬಂದಿಯ ಸುರಕ್ಷತೆಗಾಗಿ ಅದ್ರಲ್ಲೂ ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ಹೆಚ್ಚು ಉಪಯುಕ್ತ. ಸ್ಥಳೀಯ ಪೊಲೀಸರು ಸಾರ್ವಜನಿಕರಿಗೆ ಸೇಫ್‍ಮೇಟ್ ಅಳವಡಿಸಿಕೊಳ್ಳುವ ಬಗ್ಗೆ ಶಿಫಾರಸ್ಸು ಮಾಡಬಹುದು.ಈ ಮೂಲಕ ತಮ್ಮ ಏರಿಯಾಗಳ ನಿವಾಸಿಗಳು ಮಕ್ಕಳು ಹಾಗೂ ಎಲ್ಲಾ ಸಾರ್ವಜನಿಕರ ಸುರಕ್ಷತೆಯನ್ನ ಕಾಪಾಡಿಕೊಳ್ಳಬಹುದು.

ವೃತ್ತಿ ಬದುಕು ಹಾಗೂ ಖಾಸಗಿ ಬದುಕು

ವೃತ್ತಿ ಬದುಕು ಹಾಗೂ ಖಾಸಗಿ ಬದುಕನ್ನ ಸರಿದೂಗಿಸಿಕೊಂಡು ಹೋಗುವುದು ರಶ್ಮಿ ಅವರಿಗೆ ಬಹು ದೊಡ್ಡ ಸವಾಲಾಗಿತ್ತು. ಆಕೆ ರಾತ್ರಿ ಹಗಲು ಎನ್ನದೆ ಕೆಲಸ ಮಾಡ್ತಾ ಇದ್ರು. ಅತ್ತ ಆಕೆಯ ಮಕ್ಕಳು ದೊಡ್ಡವರಾಗ್ತಾ ಇದ್ರೆ, ಇತ್ತ ಗ್ರಾಹಕರ ಅಗತ್ಯತೆಯನ್ನ ಪೂರೈಸುವುದೂ ಮುಖ್ಯವಾಗಿತ್ತು.‘ ಈ ಸಮಸ್ಯೆಯನ್ನ ಬಗೆಹರಿಸಲು ಎಲ್ಲಾ ಕಾಲದಲ್ಲೂ ನನ್ನೊಂದಿಗೆ ಹೆಗಲು ಕೊಟ್ಟಿದ್ದು, ನನ್ನ ಪತಿ. ಅವರು ನನ್ನ ಬೆನ್ನೆಲುಬಾಗಿದ್ದರು’.

ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಮಾಜದಲ್ಲಿ ಅವಕಾಶವಿದೆಯಾ? ‘ಖಂಡಿತವಾಗ್ಲೂ, ಅದ್ರಲ್ಲೂ ಮ್ಯಾಪ್‍ ಮೈ ಇಂಡಿಯಾದಲ್ಲಿ ಖಂಡಿತಾ ಇದೆ. ನಿಮಗೆ ನಿಜವಾಗಿಯೂ ವಿಚಾರಗಳ ಬಗ್ಗೆ ಒಳ್ಳೆಯ ಜ್ಞಾನ ಹಾಗೂ ನೈಪುಣ್ಯತೆ ಇದ್ರೆ ಉನ್ನತ ಮಟ್ಟಕ್ಕೇರಲು ಸಾದ್ಯವಿದೆ. ಯಾರಿಂದಲೂ ಸಾಧನೆಯನ್ನತಡೆಯಲು ಸಾಧ್ಯವಿಲ್ಲ.

ರಶ್ಮಿ ಅವರ ಮತ್ತೊಂದು ಮುಖ

ರಶ್ಮಿಒಬ್ಬಕಲಾವಿದೆಯೂ ಹೌದು. ನೃತ್ಯದಲ್ಲಿ ತರಬೇತಿ ಪಡೆದಿರವ ರಶ್ಮಿ ಶಾಲಾ ಕಾಲೇಜು ದಿನಗಳಲ್ಲಿ ಹಾಗೂ ಮದುವೆಯ ನಂತರವೂ ನೃತ್ಯ ಪ್ರದರ್ಶನ ನೀಡ್ತಾ ಇದ್ರು. ಶಾಸ್ತ್ರೀಯ ಸಂಗೀತದ ವಿಚಾರಕ್ಕೆ ಬಂದ್ರೂ ಅವರು ಕೆಲ ರಾಗಗಳನ್ನ ಹಾಡುತ್ತಾರೆ. ‘ಶಾಸ್ತ್ರೀಯ ಸಂಗೀತದಲ್ಲಿ ಪ್ರದರ್ಶನ ಕೊಡೋದಿಲ್ಲ ಅಂದ್ರೂ ಸಂಗೀತದೆಡೆಗೆ ಹೆಚ್ಚಿನ ಪೂಜ್ಯತಾ ಭಾವವಿದೆ. ಧ್ಯಾನಕ್ಕೂ ಮಿಗಿಲಾಗಿ ಶಾಂತಿ ನೀಡತ್ತೆ ಶಾಸ್ತ್ರೀಯ ಸಂಗೀತ’ ಅಂತಾ ಮುಗುಳ್ನಗುತ್ತಾರೆ ರಶ್ಮಿ.