60 ವರ್ಷದ ಟೂ-ಪೀಸ್ ಮಾಡೆಲ್..! ಬಿಕಿನಿ ಧರಿಸೋ ಬಿಂದಾಸ್ ಅಜ್ಜಿ...

ವಿಶಾಂತ್​

0

ಸಾಮಾನ್ಯವಾಗಿ ಹೆಣ್ಣುಮಕ್ಕಳು 18ನೇ ವಯಸ್ಸಿನಲ್ಲಿ ಮಾಡೆಲಿಂಗ್ ಆರಂಭಿಸಿದರೆ 30ರ ಹೊತ್ತಿಗೆ ಮುಕ್ತಾಯವಾಗಿ ಬಿಡುತ್ತದೆ. ಮದುವೆ, ಮಕ್ಕಳು ಅಂತ ಸಂಸಾರದ ಜಂಜಾಟಕ್ಕೆ ಜಾರಿದ ಬಳಿಕ, ಅವರ ಮಾಡೆಲಿಂಗ್ ಕೆರಿಯರ್ ಕೂಡ ಜಾರಿ ಪಾತಾಳ ಸೇರೋದುಂಟು. ಅದಾದ ನಂತರವೂ ಅವರು ಮಾಡೆಲಿಂಗ್ ಲೋಕದಲ್ಲಿದ್ದರೆ ಅದು ದೊಡ್ಡ ಸಾಧನೆಯೇ ಸರಿ. ನಿಯಮಿತವಾಗಿ ವರ್ಕೌಟ್ ಮಾಡಬೇಕು, ಹೊಟ್ಟೆ - ಬಾಯಿ ಕಟ್ಟಿ ಡಯಟ್ ಮಾಡಬೇಕು, ಝೀರೋ ಫಿಗರ್ ಮೈಂಟೇನ್ ಮಾಡಬೇಕು. ಅಬ್ಬಬ್ಬಾ, ವಯಸ್ಸಾಗುತ್ತಾ ಸಾಗಿದಂತೆ ಹಾಗಿರುವುದು ತುಂಬಾ ಕಷ್ಟ. ಆದರೆ 60ರ ಯಾಸ್ಮಿನಾ ರೋಸಿ ಗ್ಲಾಮರ್ ಲೋಕದ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದಾರೆ. ಇಬ್ಬರು ಮೊಮ್ಮಕ್ಕಳಿರುವ ಈ ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಚೆಲುವೆ ಈ ಹಿರಿ ವಯಸ್ಸಿನಲ್ಲೂ ಟೂ ಪೀಸ್ ಬಿಕಿನಿಗಳನ್ನು ಧರಿಸಿ ಮಾಡೆಲಿಂಗ್ ಮಾಡುತ್ತಿದ್ದಾರೆ!

ಯಾರು ಈ ಯಾಸ್ಮಿನಾ ರೋಸಿ?

ಹೌದು, ಫ್ರಾನ್ಸ್ ಮೂಲದ ಸದ್ಯ ಮಾಲಿಬುನಲ್ಲಿ ವಾಸವಿರುವ ಯಾಸ್ಮಿನಾ ರೋಸಿ ಸದ್ಯ ಮಾಡೆಲಿಂಗ್ ಲೋಕದ ಧೃವತಾರೆ. ಸಾಮಾನ್ಯವಾಗಿ ವಯಸ್ಸು 30 ಸಮೀಪಿಸುತ್ತಿದ್ದಂತೆ ಮಾಡೆಲಿಂಗ್ ಸುಂದರಿಯರು ನಿವೃತ್ತಿ ಪಡೆಯುತ್ತಾರೆ. ಆದರೆ ವಿಶೇಷ ಅಂದರೆ ಯಾಸ್ಮಿನ್ 30ರ ಹೊಸ್ತಿಲಲ್ಲಿರುವಾಗ ರ್ಯಾಂಪ್ ಏರಿದರಂತೆ. 40ರ ವಯಸ್ಸಿನವರೆಗೂ ಅಂತಹ ಹೇಳಿಕೊಳ್ಳುವಂತಹ ಸಾಧನೆಗಳನ್ನೇನೂ ಮಾಡಿರಲಿಲ್ಲ. ಆದರೆ 45 ವರ್ಷವಾಗಿದ್ದಾಗ ವಯಸ್ಸಾದ ಮಾಡೆಲ್‍ಗಳಿಗೆ ನ್ಯೂಯಾರ್ಕ್​ನಲ್ಲಿ ಬೇಡಿಕೆಯಿರುವ ಕುರಿತು ತಿಳಿದು ಅಲ್ಲಿಗೆ ಹೋದರಂತೆ. ಅಲ್ಲೂ ಹಲವು ವರ್ಷಗಳ ಹೋರಾಟದ ಬಳಿಕ 2012ರಲ್ಲಿ ಅವರಿಗೆ ಬಿಗ್ ಬ್ರೇಕ್ ದೊರೆಯಿತಂತೆ. ಅದೇ ಅಂತಾರಾಷ್ಟ್ರೀಯ ಮಟ್ಟದ ಮಾರ್ಕ್ಸ್​​ ಆ್ಯಂಡ್ ಸ್ಪೆನ್ಸರ್ ಕಂಪನಿಗೆ ಮಾಡೆಲಿಂಗ್ ಮಾಡುವ ಅವಕಾಶ. ನಂತರ ಅವರೆಂದೂ ಹಿಂದಿರುಗಿ ನೋಡಿಲ್ಲ. ಇತ್ತೀಚೆಗಷ್ಟೇ ಈ `ಸಿಕ್ಸ್ಟಿ ಸುಂದರಿ' ಒಳುಡುಪುಗಳ ಬ್ರಾಂಡ್ ಆದ ಲ್ಯಾಂಡ್ ಆಫ್ ವಿಮೆನ್‍ಗಾಗಿ ಬಿಕಿನಿಯಲ್ಲಿ ಮಿಂಚಿದ್ದಾರೆ. ಅಲ್ಲದೇ ಟೂಪೀಸ್‍ಗಳನ್ನೂ ಧರಿಸಿ ಯಾವ ಸುಮದರಿಗೂ ನಾನೇನೂ ಕಡಿಮೆ ಇಲ್ಲ ಅಂತ ಸವಾಲು ಹಾಕಿದ್ದಾರೆ!

ಸೌಂದರ್ಯದ ಗುಟ್ಟು!

ಹೆಚ್ಚು ವರ್ಕೌಟ್ ಮಾಡದೇ ಕೇವಲ ಡಯಟ್ ಮೂಲಕ ತಮ್ಮ ಬಾಡಿ ಮೈಂಟೇನ್ ಮಾಡುವ ಯಾಸ್ಮಿನಾ ಸಾವಯವ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ಮಸಾಲೆ ಭರಿತ, ಜಂಕ್‍ಫುಡ್ ಹಾಗೂ ಕೆಮಿಕಲ್ ಯುಕ್ತ ತಂಪು ಪಾನೀಯಗಳಿಂದ ಅವರು ದೂರಾತಿದೂರ.

ಯಾಸ್ಮಿನ್ ವಾರಕ್ಕೊಮ್ಮೆ ಸಕ್ಕರೆ ಮಿಶ್ರಿತ ಆಲಿವ್ ಎಣ್ಣೆಯಲ್ಲಿ ಮುಖ ಮಸಾಜ್ ಮಾಡಿಕೊಳ್ಳುತ್ತಾರಂತೆ. ಅದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೇ, ಚರ್ಮ ಸುಕ್ಕುಗಟ್ಟುವುದು ಹಾಗೂ ಬಾಡುವುದಿಲ್ಲವಂತೆ.

ಇದನ್ನು ಓದಿ: ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

ಹುಷಾರಿಲ್ಲದಿದ್ದಾಗ ಅವರು ತಕ್ಷಣ ಮಾತ್ರೆ, ಇಂಜೆಕ್ಷನ್ ಅಥವಾ ಟಾನಿಕ್‍ಗಳ ಮೊರೆ ಹೋಗುವುದಿಲ್ಲ. ಬದಲಾಗಿ ನೈಸರ್ಗಿಕವಾಗಿಯೇ ಜ್ವರ ವಾಸಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರಂತೆ.

ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್‍ನಲ್ಲಿ ಇಂಟರ್‍ನ್ಯಾಶನಲ್ ಫ್ಯಾಶನ್ ಮಾಡೆಲ್ ಎಂದು ಬರೆದುಕೊಂಡಿರುವ ಯಾಸ್ಮಿನ್ ಪ್ರತಿದಿನ ಒಂದೊಂದು ಬೆಣ್ಣೆ ಹಣ್ಣನ್ನು ಸೇವಿಸುತ್ತಾರಂತೆ. ಜೊತೆಗೆ ಸಾವಯವ ಮೀನು ಹಾಗೂ ಮಾಂಸಾಹಾರವನ್ನೂ ಮಾಡುತ್ತಾರಂತೆ.

ಮುಂದೆ?

ವಿಶೇಷ ಅಂದರೆ ತಾನು 20 ವರ್ಷಗಳ ಹಿಂದಿಗಿಂತ ಇಂದು ತುಂಬಾ ಖುಷಿಯಾಗಿರುವುದಾಗಿ ಹೇಳಿಕೊಳ್ಳುವ ಯಾಸ್ಮಿನ್, ಕೊನೆಯ ಉಸಿರು ಇರುವವರೆಗೂ ಮಾಡೆಲಿಂಗ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇಬ್ಬರು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳಿರುವ ಈ ಅಜ್ಜಿ 60ರ ಹೊಸ್ತಿಲಲ್ಲೂ ಬೀಚ್‍ಗಳಲ್ಲಿ ಬಿಕಿನಿ ಧರಿಸಿ ಫೋಟೋಶೂಟ್‍ಗೆ ಫೋಸ್ ಕೊಡುವ ಮೂಲಕ ಲಕ್ಷಾಂತರ ಹೆಣ್ಣುಮಕ್ಕಳಿಗೆ (ಪುರುಷರಿಗೂ) ಮಾದರಿಯಾಗಿದ್ದಾರೆ.

ಇದನ್ನು ಓದಿ:

1.‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ.... 

2. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'

3. ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!

Related Stories