'ಡಯಲ್ ಕಾಶ್ಮೀರ್':​ ಕಣಿವೆ ರಾಜ್ಯಕ್ಕೊಂದು ಸೂಪರ್​​ ಆ್ಯಪ್​..!

ಟೀಮ್​ ವೈ.ಎಸ್​​. ಕನ್ನಡ

0

ಮಹಿಳೆ ಮನಸ್ಸು ಮಾಡಿದ್ರೆಏನ್ ಬೇಕಾದ್ರೂ ಸಾಧಿಸಬಹುದು. ಸೌಟು ಹಿಡಿಯೋ ಕೈ ಇಡೀ ದೇಶವನ್ನೇ ಆಳಬಹುದು ಅಂತರಾರಲ್ಲ ಹಾಗೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡ್ತಿದ್ದಾರೆ. ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಪಟ್ಟಿಯೇ ಇದೆ. ಇಂತಹ ಸಾಲಿಗೆ ಸೇರುತ್ತಾರೆ 23ರ ಹರೆಯದ ಕಾಶ್ಮೀರದ ಹುಡುಗಿಮೆವ್ಹಿಷ್ ಮುಸ್ತಾಕ್.

ದೇಶದ ಮುಕುಟಮಣಿ ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ. ಪ್ರವಾಸೋದ್ಯಮವೇ ಇಲ್ಲಿನ ಜನರ ಮುಖ್ಯ ಆದಾಯ. ಹಿಮಾಲಯದಿಂದ ಆವೃತ್ತವಾದ ಈ ಕಣಿವೆ ರಾಜ್ಯ ಪ್ರಕೃತಿ ಸೌಂದರ್ಯದ ಕಣಜ. ಇಂತಹ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಾನೆ ಇರುತ್ತಾರೆ. ಇಲ್ಲಿಗೆ ಬರೋಜನರಿಗೆ ಸರಿಯಾಗಿ ಮಾರ್ಗದರ್ಶನ ಮಾಡಿ ಎಲ್ಲಾ ಸ್ಥಳಗಳ ಬಗ್ಗೆ ಮತ್ತು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಹೇಳೋಕೆ ಸರಿಯಾದ ವ್ಯವಸ್ಥೆಇಲ್ಲ. ಇದನ್ನೆಲ್ಲಾ ಗಮನಿಸುತ್ತಿದ್ದ ಮೆವ್ಹಿಷ್‍ಗೆ ಕಾಶ್ಮೀರಕ್ಕೆ ಬರೋ ಪ್ರವಾಸಿಗರಿಗೆ ಮತ್ತು ತನ್ನ ರಾಜ್ಯದ ಜನತೆಗೆ ಉಪಯೋಗವಾಗಲು ಏನಾದರೂ ಮಾಡಬೇಕು, ಕಾಶ್ಮೀರದಲ್ಲಿ ಅಂತಹ ತಂತ್ರಜ್ಞಾನ ಕಂಡು ಹಿಡಿದ ಮೊದಲಿಗಳು ತಾನೇ ಆಗಬೇಕೆಂಬ ಹೆಬ್ಬಯಕೆ ಇತ್ತು. ತನ್ನ ಆಲೋಚನೆಗೆ ತಕ್ಕಂತೆ ಮೆವ್ಹಿಷ್ ಮುಸ್ತಾಕ್ ಕ್ಯಾಶ್ಮೀರ ವ್ಯಾಲಿಯ ಚಿತ್ರಸದೃಶ್ಯ ಮಾಹಿತಿ ಇರೋ ಆ್ಯಪ್‍ನ್ನ 2013ರಲ್ಲಿ ಕಂಡು ಹಿಡಿದರು. ಮೆವ್ಹಿಷ್‍ ತನ್ನ ಆಪ್‍ಗೆ ಇಟ್ಟ ಹೆಸರು 'ಡಯಲ್ ಕಾಶ್ಮೀರ್'.

ಮೇವ್ಹಿಷ್ ಮುಸ್ತಾಕ್ ಹುಟ್ಟಿದ್ದು, ಬೆಳೆದಿದ್ದು ಶ್ರೀನಗರದಲ್ಲಿ.ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಈಕೆ ಕಂಪ್ಯೂಟರ್‍ ಸೈನ್ಸ್​​​ನಲ್ಲಿ ಪದವಿ ಪಡೆದರು.ಮೆವ್ಹಿಷ್‍ ತಂದೆ ಅರಣ್ಯಾಧಿಕಾರಿಯಾಗಿ ನಿವೃತ್ತಿಹೊಂದಿದ್ದರು. ತಾಯಿ ಗೃಹಿಣಿಯಾಗಿದ್ದಾರೆ.ಇನ್ನು ಹಿರಿಯ ಸಹೋದರ ಕೂಡಾ ಎಂಜಿನಿಯರಿಂಗ್ ಮುಗಿಸಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆಯ ಕಿರಿಯ ಮಗಳಾಗಿರೋ ಮೆವ್ಹಿಷ್ ಸಾಧನೆಗೆ ಇಡೀ ಕುಟುಂಬದ ಬೆಂಬಲವಿತ್ತು.

`ಡಯಲ್ ಕಾಶ್ಮೀರ್' ಆ್ಯಪ್‍ನಲ್ಲಿ ಏನಿದೆ?

ಕಣಿವೆ ರಾಜ್ಯದ ಜನರಿಗೆ ಮತ್ತು ಅಲ್ಲಿಗೆ ಬರೋ ಪ್ರವಾಸಿಗರಿಗೆ ಅನಿವಾರ್ಯತೆ ಇದ್ದಾಗ ಬೇಕಾದ ಸೇವಾ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ಪಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಮೇವ್ಹಿಷ್ ಈ ಸಮಸ್ಯೆ ಪರಿಹರಿಸಲೇ ಬೇಕೆಂದು ಪಟ್ಟುಹಿಡಿದರು. ತಾನು ಸೋದರ ಸಂಬಂದಿಗೆ ಮಹತ್ವದ ಸುದ್ದಿಯೊಂದನ್ನು ನೀಡಬೇಕಿತ್ತು. ಹೀಗಾಗಿ ಅವರು ಕಲಿಯುತ್ತಿದ್ದ ಶಾಲೆಗೆ ಕರೆಮಾಡಲು ಪ್ರಯತ್ನಿಸಿದೆ. ಆದ್ರೆ ಆ ಶಾಲೆಯ ಕಾಂಟೆಕ್ಟ್ ನಂಬರ್ ಸಿಗಲೇ ಇಲ್ಲ. ಆಗ ತನ್ನಂತೆಯೇ ಅದೆಷ್ಟು ಜನ ಇಂತಹ ಸಮಸ್ಯೆ ಅನುಭವಿಸುತ್ತಿದ್ದಾರೆ ಅಂದುಕೊಂಡೆ, ಇದಕ್ಕೆನಾದರೂ ಪರಿಹಾರ ಕಂಡುಹಿಡಿಯಬೇಕೆಂದಾಗ ನನಗೆ ತಟ್ಟನೆ ನೆನಪಾದದ್ದು ಆಂಡ್ರಾಯ್ಡ್​​​​ ಆ್ಯಪ್​​​ ಅಂತಾರೆ ಮೆವ್ಹಿಷ್.

2013ರ ಚಳಿಗಾಲದ ಸಮಯ.ಆಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿಗೊಳಿಸುವ ಆಲ್‍ಲೈನ್‍ ಕೋರ್ಸ್‍ಗೆ ಮೆವ್ಹಿಷ್ ಸೇರಿಕೊಂಡ್ರು. ಈ ಕೋರ್ಸ್‍ನ ಭಾಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮದೇ ಆದ ಆ್ಯಪ್‍ನ್ನಅಭಿವೃದ್ಧಿಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಹುಟ್ಟಿದ್ದು `ಡಯಲ್ ಕಾಶ್ಮೀರ್' ಆ್ಯಪ್. ಇದು ಮೆವಿಷ್ ಮಾಡ್ತಿದ್ದ ಪಾಜೆಕ್ಟ್​​​ನ ಒಂದು ಭಾಗವಾಗಿತ್ತು. ಎರಡು ವಾರದಲ್ಲಿ ಮೆವ್ಹಿಷ್​​ರ ಈ ಆ್ಯಪ್‍ನ ಮೊದಲ ವರ್ಷನ್‍ನನ್ನು ಸಿದ್ದಪಡಿಸಿದ್ರು.

ಮೆವ್ಹಿಷ್‍ ಅವರಡ ಯಲ್ ಕಾಶ್ಮೀರ್ ಆಪ್‍ ಕಾರ್ಯನಿರ್ವಹಿಸಲಾರಂಭಿಸಿತು. ಈ ಆಪ್‍ನಲ್ಲಿಅಗತ್ಯವಾದ ಪೋನ್ ನಂಬರ್, ಇ ಮೇಲ್‍ಐಡಿ ಮತ್ತು ವಾಣಿಜ್ಯ ಸೇವೆಗಳ ವಿಳಾಸಗಳು ಲಭ್ಯವಾಗ್ತಿತ್ತು. ಇದಲ್ಲದೆ ಕಾಶ್ಮೀರದ ವಿವಿಧ ಭಾಗಗಳ ಪಿನ್ ಕೋಡ್ ನಂಬರ್, ರೈಲ್ವೇ ಟೈಮಿಂಗ್ಸ್, ರಜಾದಿನಗಳ ವಿವರ, ಮುಸ್ಲಿಮರು ಪ್ರಾರ್ಥನೆ ಮಾಡೋ ಅವಧಿಯನ್ನುಕೂಡಾ ಡಯಲ್ ಕಾಶ್ಮೀರ್ ಆ್ಯಪ್‍ನಲ್ಲಿ ಪಡೆಯಬಹುದಾಗಿದೆ.

ಕಾಶ್ಮೀರ್ ಡಯಲ್‍ ಆ್ಯಪ್ ಲಾಂಚ್‍ ಆಗ್ತಿದ್ದಂತೆ, ಹಲವು ಜನರಿಗೆ ಇದರ ಉಪಯೋಗ ತಿಳಿಯಿತು. ಅಲ್ಲದೆ ಅವರು ಇದ್ರಿಂದ ತುಂಬಾ ಪ್ರಯೋಜನ ಕೂಡಾ ಪಡೆದ್ರು. ಇದಕ್ಕೆ ಉದಾಹರಣೆಯಂಬಂತೆ ಮೆವ್ಹಿಷ್ ಪರಿಚಯದವರ ಮನೆ ಪಕ್ಕ ಪ್ರಾಣಿಯೊಂದು ಸತ್ತು ಬಿದ್ದಿತ್ತು.ಇದನ್ನ ಗಮನಿಸಿದ ಆ ಮನೆಯವರು ಡಯಲ್ ಕಾಶ್ಮೀರ್ ಆ್ಯಪ್ ಸಹಾಯದಿಂದ ಅಲ್ಲಿನ ಕಾರ್ಪೋರೇಷನ್‍ಗೆ ಕರೆ ಮಾಡಿ ಪ್ರಾಣಿ ಸತ್ತಿರುವ ಬಗ್ಗೆ ಮಾಹಿತಿ ನೀಡಿದ್ರು. ಈ ಮೂಲಕ ತಮ್ಮಆ್ಯಪ್ ಪ್ರಯೋಜನವಾದುದ್ದರ ಬಗ್ಗೆ ಮೆವ್ಹಿಷ್ ಸಂತಸ ಪಟ್ಟಿದ್ರು.

ಇಷ್ಟೇ ಅಲ್ಲ ಈ ಆ್ಯಪ್‍ನ ಸಹಾಯದಿಂದ ಜನರು ಟ್ರೈನ್‍ ಟೈಮಿಂಗ್ಸ್​​ನ್ನ ಜೊತೆಗೆ ಮುಸ್ಲಿಂರ ಪ್ರಾರ್ಥನೆ ಸಮಯವನ್ನ ತಿಳಿದುಕೊಳ್ತಿದ್ದಾರೆ. ಕಾಶ್ಮೀರ ಜನತೆಗೆ ತನ್ನಿಂದಾದ ಪುಟ್ಟ ಸಹಾಯ ಮೆವ್ಹಿಷ್‍ಗೆ ಖುಷಿ ತಂದಿದೆ.

ಸದಾ ಸಂಘರ್ಷ, ಒತ್ತಡದಿಂದ ಕೂಡಿರೋ ಕಾಶ್ಮಿರದ ಜನರಿಗೆ ನೆಮ್ಮದಿಯ ಜೀವನ ಬೇಕಿದೆ. ದಿನದಿಂದ ದಿನಕ್ಕೆ ತಂತ್ರಜ್ಞಾನದಲ್ಲಿ ಆಗ್ತಿರೋ ಆವಿಷ್ಕಾರ, ಮತ್ತು ಅಭಿವೃದ್ಧಿಯಿಂದ ಬದಲಾವಣೆ ಬಯಸಿದ ಜನರು ಉತ್ತಮ ಭವಿಷ್ಯದ ಕಡೆ ಹೆಜ್ಜೆ ಹಾಕ್ತಿದ್ದಾರೆ ಅಂತಾರೆ ಈ ಯುವ ಉದ್ಯಮಿ.

ಈ 23ರ ಹರೆಯದ ಯುವತಿಗೆ ತನ್ನ ಕಾಶ್ಮೀರಕ್ಕೆ ಅಲ್ಲಿನ ಜನತೆಗೆ ಇನ್ನೂ ಏನಾದ್ರೂ ಮಾಡಬೇಕೆಂಬ ಹಂಬಲ,ತುಡಿತವಿದೆ. ಮೆವಿಷ್‍ ಮುಂದಿನ ಆಲೋಚನೆಯಂತೆ ಡಯಲ್ ಕಾಶ್ಮೀರ್ ಆ್ಯಪ್‍ಗೆ ಹೊಸ ಸೇವೆಗಳನ್ನ ಸೇರಿಸಬೇಕು. ಈ ಆ್ಯಪ್‍ನಲ್ಲಿ ಜನರು ಸಿನೆಮಾ ನೋಡಬೇಕು, ತಮ್ಮ ಹವ್ಯಾಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೇರಿಸಬೇಕೆಂಬುದು ಮೆವಿಷ್ ಕನಸು. ಈ ಯುವತಿಯ ಕನಸು ನನಸಾಗಲಿ, ಕಾಶ್ಮೀರ ಜನತೆಗೆಉಪಯೋಗವಾಗುವಂತಹ ಮತ್ತಷ್ಟು ಆ್ಯಪ್‍ಗಳನ್ನ ಕಂಡು ಹಿಡಿಯಲಿ ಎಂದು ಹಾರೈಸೋಣ.

ಲೇಖಕರು: ಸಾಸ್ವತಿ ಮುಖರ್ಜಿ

ಅನುವಾದಕರು: ಟಿಎಎ

Related Stories