ಸ್ಯಾನ್ ಡಿಸ್ಕ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲಿರುವ ವೆಸ್ಟರ್ನ್ ಡಿಜಿಟಲ್ ಸಂಸ್ಥೆ

ಟೀಮ್​​ ವೈ.ಎಸ್​​.

0

ಹಣ ಮತ್ತು ಷೇರುಗಳ ರೂಪದಲ್ಲಿ ಸ್ಯಾನ್‌ ಡಿಸ್ಕ್ ಸಂಸ್ಥೆಯನ್ನು ಶೀಘ್ರದಲ್ಲೇ ಸ್ವಾಧೀನ ಪಡಿಸಿಕೊಳ್ಳುವುದಾಗಿ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ಘೋಷಿಸಿದೆ. ಸ್ಯಾನ್‌ ಡಿಸ್ಕ್ ನ ಸಾಮಾನ್ಯ ಷೇರುಗಳ ಒಟ್ಟು ಮೌಲ್ಯ ಸುಮಾರು 19 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ಸಮನಾಗುತ್ತದೆ. ವೆಸ್ಟರ್ನ್ ಡಿಜಿಟಲ್ ಸಂಸ್ಥೆಯ ಬ್ಲಾಗ್ ಪ್ರಕಾರ, ಜಾಗತಿಕ ಮಟ್ಟದಲ್ಲಿ ಸ್ಟೋರೇಜ್ ಸೊಲ್ಯೂಷನ್‌ಗಳ ಸಂಸ್ಥೆಯಾಗಿ ಪರಿವರ್ತನೆಯಾಗುವಲ್ಲಿ ಇದು ಅವರ ಮುಂದಿನ ಹೆಜ್ಜೆಯಾಗಿದೆ. ವಿಸ್ತಾರವಾದ ಉತ್ಪನ್ನ ಮತ್ತು ತಂತ್ರಜ್ಞಾನ ಸ್ವತ್ತುಗಳು ಮತ್ತು ಅಭದ್ರ ಸ್ಮೃತಿಕೋಶಗಳ(ಎನ್‌ವಿಎಂ) ವಿಚಾರದಲ್ಲಿ ಆಳವಾದ ಪರಿಣಿತಿ ಹೊಂದುವುದು ಸಂಸ್ಥೆಯ ಉದ್ದೇಶ.

ಈ ವ್ಯವಹಾರದ ಮೂಲಕ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ಮಾರುಕಟ್ಟೆಯಲ್ಲಿ ದ್ವಿಗುಣವಾಗಿ ಬೆಳೆಯುವ ಮತ್ತು ಉನ್ನತ ಬೆಳವಣಿಗೆ ಹೊಂದುವ ಉದ್ಯಮವಾಗಿ ಬದಲಾಗುವ ಕಡೆ ಗಮನಹರಿಸುತ್ತಿದೆ. ಎನ್‌ವಿಎಂ, ಸಿಸ್ಟಮ್ ಸೊಲ್ಯುಷನ್, ಉತ್ಪಾದನೆ ವಿಚಾರದಲ್ಲಿ ಸ್ಯಾನ್‌ಡಿಸ್ಕ್ ಸಂಸ್ಥೆಗೆ 27 ವರ್ಷಗಳ ಪರಿಣಿತಿಯ ಇತಿಹಾಸ ಹೊಂದಿದೆ. ಎನ್‌ಎಂಡ್ ವಿಚಾರದಲ್ಲಿ ಸಶಕ್ತ ಬೆಳವಣಿಗೆ ಹೊಂದಲೂ ಸಹ ವೆಸ್ಟರ್ನ್ ಡಿಜಿಟಲ್ ಸಂಸ್ಥೆಗೆ ಇದು ನೆರವಾಗಲಿದೆ. ಕಡಿಮೆ ವೆಚ್ಚದಲ್ಲಿ ಸುಭದ್ರ ತಂತ್ರಜ್ಞಾನವನ್ನು ದೀರ್ಘಕಾಲಿಕವಾಗಿರಿಸಲು ಇದು ಸಹಾಯಕ.

ಬೆಳವಣಿಗೆಯ ಹಾದಿ

ಈ ಸಂಯೋಜನೆಯಿಂದ ಸ್ಯಾನ್‌ಡಿಸ್ಕ್ ಮತ್ತು ವೆಸ್ಟರ್ನ್ ಡಿಜಿಟಲ್ ಸಂಸ್ಥೆಯ ಷೇರುದಾರರ ಮೌಲ್ಯ ಹೆಚ್ಚಲಿದೆ. ಕಳೆದ ಕೆಲ ವರ್ಷಗಳಿಂದ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ವಿಲೀನ ಮತ್ತು ಸ್ವಾಧೀನ ವಿಚಾರದಲ್ಲಿ ಯಶಸ್ವಿ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಇದು ಸಂಸ್ಥೆಯ ಉನ್ನತ ಬೆಳವಣಿಗೆಗೆ ಸಹಕಾರಿಯಾಗುವ ಅನೇಕ ಅವಕಾಶಗಳನ್ನು ಒದಗಿಸಿದೆ. ಜೊತೆಗೆ ಚೀನಾದ ವಾಣಿಜ್ಯ ಸಚಿವಾಲಯದೊಂದಿಗೆ ಸೇರಿ ಡಬ್ಲ್ಯುಡಿ ಮತ್ತು ಹಿತಾಚಿ ಗ್ಲೋಬಲ್ ಸ್ಟೋರೇಜ್ ಟೆಕ್ನಾಲಜೀಸ್ ಉದ್ಯಮಕ್ಕಾಗಿ ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಕಾರ್ಯದಲ್ಲಿ ಭಾಗಿಯಾಗುವ ನಿರ್ಧಾರವನ್ನೂ ಸಹ ಸಂಸ್ಥೆ ಕೈಗೊಂಡಿದೆ. ಇದಲ್ಲದೇ ಹೆಚ್ಚುವರಿ ಒಪ್ಪಂದಗಳೂ ಸಹ ನಡೆಯುವ ಸಾಧ್ಯತೆ ಇದೆ.

ಸ್ಟೋರೇಜ್ ಇಂಡಸ್ಟ್ರಿಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ದೀರ್ಘಕಾಲಿಕ ನಾಯಕತ್ವ ಸಾಧಿಸಲು ಈ ಸ್ವಾಧೀನ ಪ್ರಕ್ರಿಯೆ ಶಕ್ತವಾಗಿದೆ. ವಿಲೀನಗೊಂಡಿರುವ ಸಂಸ್ಥೆಗಳು ಈಗಾಗಲೇ ಬೆಳವಣಿಗೆ ಸಾಧಿಸಿರುವುದರಿಂದ ಉದ್ಯಮದಲ್ಲಿ ಬೆಳವಣಿಗೆ ಸಾಧಿಸಲು ಅವಕಾಶ ಒದಗಿಸಿದೆ ಎಂದು ವಿವರಿಸಿದ್ದಾರೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆಯ ಸಿಇಓ ಸ್ಟೀವ್ ಮಿಲಿಗನ್.

ಪೂರಕ ಉತ್ಪನ್ನಗಳ ಸಾಲಿನಲ್ಲಿ ವೆಸ್ಟರ್ನ್ ಡಿಜಿಟಲ್ ಮತ್ತು ಸ್ಯಾನ್‌ಡಿಸ್ಕ್ ಸಂಸ್ಥೆಗಳು ಹಾರ್ಡ್ ಡಿಸ್ಕ್ ಡ್ರೈವ್‌ಗಳು, ಸಾಲಿಡ್ ಸ್ಟೇಟ್ ಡ್ರೈವ್‌ಗಳು, ಕ್ಲೌಡ್ ಡೇಟಾ ಸೆಂಟರ್ ಸ್ಟೋರೇಜ್ ಸೊಲ್ಯೂಷನ್‌ ಮತ್ತು ಫ್ಲ್ಯಾಶ್ ಸ್ಟೋರೇಜ್ ಸೊಲ್ಯುಷನ್ ವಿಚಾರದಲ್ಲಿ ವಿಸ್ತಾರವಾದ ಉತ್ಪನ್ನ ಶ್ರೇಣಿ ಮತ್ತು ಗ್ರಾಹಕರಿಗೆ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವ ಡೇಟಾಸೆಂಟರ್‌ಗಳನ್ನು ನಿರ್ಮಿಸಿವೆ. ಎರಡೂ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿಯ ಸುಭದ್ರ ನೆಲೆಗಳು ಮತ್ತು ಎಂಜನಿಯರಿಂಗ್ ಸಾಮರ್ಥ್ಯ ಮತ್ತು 15,000 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ.

1970ರಲ್ಲಿ ಆರಂಭವಾದ ಸಂಸ್ಥೆ ವೆಸ್ಟರ್ನ್‌ ಡಿಜಿಟಲ್ ಸಂಸ್ಥೆ ಆರಂಭವಾಯಿತು. ಇದು ಮುಂಚೂಣಿಯಲ್ಲಿರುವ ಅಭಿವೃದ್ಧಿ ಮತ್ತು ಉತ್ಪಾದನಾ ಸ್ಟೋರೇಜ್ ಸೊಲ್ಯುಷನ್‌ ಆಗಿದ್ದು ನಿರ್ವಹಣೆ, ರಚನಾತ್ಮಕ ಅನುಭವ ಮತ್ತು ಡಿಜಿಟಲ್ ವಿಚಾರಗಳನ್ನು ಸಂಗ್ರಹಿಸಲು ಸಹಾಯಕವಾಗಿದೆ. ಇನ್ನು ಸ್ಯಾನ್ ಡಿಸ್ಕ್ ಸಂಸ್ಥೆ ಫಾರ್ಚೂನ್ 500, ಎಸ್‌&ಪಿ 500 ಕಂಪನಿ ಆಗಿದೆ ಮತ್ತು ಫ್ಲ್ಯಾಶ್ ಸ್ಟೋರೇಜ್ ಸೊಲ್ಯುಷನ್ ನಲ್ಲಿ ಜಾಗತಿಕವಾಗಿ ಮುಂಚೂಣಿ ಸಾಧಿಸಿದೆ.

ವೆಸ್ಟರ್ನ್ ಡಿಜಿಟಲ್ ಸಂಸ್ಥೆ ಮುಂಚೂಣಿಯಲ್ಲಿರುವ ಸ್ಟೋರೇಜ್ ಸೊಲ್ಯುಷನ್‌ನಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. 45 ವರ್ಷಗಳ ಅಭಿವೃದ್ಧಿ ಪರಂಪರೆ ಮತ್ತು ಉತ್ಪಾದನಾ ಪರಿಹಾರವಾಗಿದೆ. ಹೀಗಾಗಿ ಸ್ಯಾನ್‌ಡಿಸ್ಕ್ ಸಂಸ್ಥೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಲು ಸಂತೋಷಿಸುತ್ತದೆ. ಮುಖ್ಯವಾಗಿ ಈ ಸಂಯೋಜನೆ ಗ್ರಾಹಕರ ಮೇಲೆ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ ಸ್ಯಾನ್‌ಡಿಸ್ಕ್ ಸಂಸ್ಥೆಯ ಸಿಇಓ ಮತ್ತು ಅಧ್ಯಕ್ಷರಾಗಿರುವ ಸಂಜಯ್ ಮಲ್ಹೋತ್ರ.

ಮುಂದುವರೆಯುತ್ತಾ...

ಈ ಜಂಟಿ ಸಂಸ್ಥೆಯ ಸಿಇಓ ಆಗಿ ಸ್ಟೀವ್ ಮಿಲಿಗನ್ ಮುಂದುವರೆಯಲಿದ್ದಾರೆ. ಕ್ಯಾಲಿಫೋರ್ನಿಯಾದ ಇರ್ವಿನ್ ನಗರದಲ್ಲಿ ಸಂಸ್ಥೆಯ ಮುಖ್ಯ ಕಚೇರಿ ಇರಲಿದೆ. ವೆಸ್ಟರ್ನ್ ಡಿಜಿಟಲ್ ಸಂಸ್ಥೆಯ ನಿರ್ದೇಶಕರ ಮಂಡಳಿಯಲ್ಲಿ ಸಂಜಯ್ ಮಲ್ಹೋತ್ರಾ ಸಹ ಸೇರಿಕೊಳ್ಳುವ ಸಾಧ್ಯತೆ ಇದೆ. 18 ತಿಂಗಳೊಳಗೆ 500 ಮಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸದಾಗಿ 1.0 ಬಿಲಿಯನ್ ಯುಎಸ್ ಡಾಲರ್ ಕ್ರೆಡಿಟ್ ಫೆಸಿಲಿಟಿ ಒಳಗೊಂಡಂತೆ, 18.4 ಬಿಲಿಯನ್ ಡೆಬಿಟ್ ಫೆಸಿಲಿಟಿಯನ್ನು ವೆಸ್ಟರ್ನ್ ಡಿಜಿಟಲ್ ಪಡೆಯುವ ಸಾಧ್ಯತೆ ಇದೆ. ಈ ಹೊಸ ಸಾಲ ಸೌಲಭ್ಯಗಳನ್ನು ವೆಸ್ಟರ್ನ್ ಡಿಜಿಟಲ್ ಮತ್ತು ಸ್ಯಾನ್‌ಡಿಸ್ಕ್‌ ಸಂಸ್ಥೆಗಳು ಈಗಾಗಲೇ ಮಾಡಿರುವ ಸಾಲದ ಭಾಗಶಃ ಪಾವತಿ ಮತ್ತು ವ್ಯವಹಾರ ಸಂಬಂಧಿತ ಶುಲ್ಕಗಳು ಮತ್ತು ವೆಚ್ಚಗಳನ್ನು ಪಾವತಿಸಲು ಬಳಸಲು ನಿರ್ಧರಿಸಲಾಗಿದೆ. ಈ ಸಾಲಗಳನ್ನು 2016ರೊಳಗೆ ತೀರಿಸುವ ಗುರಿ ಹೊಂದಿಗೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ.

ಒಟ್ಟಾರೆಯಾಗಿ ಸ್ಯಾನ್ ಡಿಸ್ಕ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿರುವ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ಇನ್ನೂ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ, ಗ್ರಾಹಕರಿಗೆ ಅಭೂತಪೂರ್ವ ಸೇವೆ ಒದಗಿಸುವ ಭರವಸೆ ನೀಡಿದೆ.

Related Stories