ಎಲ್ಲಾ ಕೆಲಸಗಳನ್ನು ಮುಗಿಸುತ್ತೆ ಒಂದೇ ಕರೆ- ಅಧಿಕಾರಿಗಳ ಜೊತೆ ಸಂವಹನಕ್ಕೆ ಆ್ಯಪ್ ಮೊರೆ

ಟೀಮ್​ ವೈ.ಎಸ್​. ಕನ್ನಡ

0

ಇವತ್ತು ಕ್ಷಣಮಾತ್ರದಲ್ಲಿ ಎಂತಹ ಬದಲಾವಣೆಗೆ ಬೇಕಾದ್ರೂ ನಾಂದಿ ಹಾಡಬಹುದು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಚ್ಚರಿಯನ್ನು ಕೂಡ ಸೃಷ್ಟಿಸಬಹುದು. ತಾಂತ್ರಿಕತೆ ಅಷ್ಟು ಮುಂದುವರೆದಿದೆ. ಆದ್ರೆ ಸರಕಾರಿ ಕೆಲಸಗಳು ಮಾತ್ರ ಇನ್ನೂ ಶತಮಾನಗಳ ಹಿಂದಿನ ಆಮೆವೇಗದಲ್ಲೇ ಇದೆ. ಸರಕಾರದ ಈ ನಡೆಯನ್ನು ಬದಲಿಸಲು ಕರ್ನಾಟಕ ಸರಕಾರ ಮುಂದಾಗಿದೆ. ಸರಕಾರಿ ಕೆಲಸಗಳಿಗೆ ವೇಗದ ಬಿಸಿ ಮುಟ್ಟಿಸಲು ಹೊಸ ಆ್ಯಪ್​ ಒಂದನ್ನು ತಯಾರು ಮಾಡುವಲ ಪ್ಲಾನ್​ ಮಾಡಿಕೊಂಡಿದೆ.

ಈಗ ಇಡೀ ಜಗತ್ತೇ ಡಿಜಿಟಲ್ ಮಯವಾಗಿ ಹೋಗಿದೆ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್​ಗಳದ್ದೇ ಹವಾ. ಪ್ರತಿಯೊಂದಕ್ಕೂ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಆಟೋ ಬುಕ್ ಮಾಡುವದರಿಂದ ಹಿಡಿದು, ತರಕಾರಿಗಳನ್ನು ಮನೆಗೆ ತರಿಸಿಕೊಳ್ಳುವ ತನಕವೂ ಆ್ಯಪ್​ಗಳನ್ನು ಬಳಸುತ್ತಿದ್ದೇವೆ. ಆದರೆ ನಮ್ಮ ಸರಕಾರದ ಮಟ್ಟದಲ್ಲಿ ಇನ್ನೂ ಈ ಆ್ಯಪ್​ಗಳು ಬಳಕೆಯಾಗುತ್ತಿಲ್ಲ. ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ ಎಂಬ ಅವಪವಾದ ಕೇಳಿ ಬರುತ್ತಿತ್ತು. ಅದಕ್ಕೆ ನಮ್ಮ ಸರ್ಕಾರ ಎಚ್ಚೆತ್ತುಕೊಂಡು ಈಗ ಸರಕಾರದ ಕೆಲಸಗಳಿಗೆ ಆ್ಯಪ್ ಬಳಕೆಗೆ ಮುಂದಾಗಿದೆ.

ಹೌದು ಸರಕಾರದ ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ರಾಜ್ಯದ ಉದ್ದಗಲದಲ್ಲಿರುವ ಕೆಳ ಹಂತದ ಅಧಿಕಾರಿಗಳಿಗೆ ತಲುಪಿಸಿ ಅವರಿಂದ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತಹ ಆ್ಯಪ್ ಒಂದನ್ನು ಪರಿಚಯಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದಾಗಿದ್ದಾರೆ.

ಈ ಆ್ಯಪ್​ನಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗುವ ನಿರ್ಧಾರಗಳನ್ನು ಸೂಚನೆ ನೀಡಿ ತುರ್ತು ಸಂದರ್ಭಗಳಲ್ಲಿ ಸಂಕ್ಷಿಪ್ತ ಮಾಹಿತಿಗಳ ಕ್ರೋಢೀಕರಣಗಳಿಸಲು ಅಭಿವೃದ್ಧಿಪಡಿಸುವ ಆ್ಯಪ್​ನ್ನು ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ.

ಈ ಹೊಸ ವ್ಯವಸ್ಥೆ ಜಾರಿಗೆ ಸಂಬಂಧ ಅಧೀನ ಕಾರ್ಯದರ್ಶಿ ದರ್ಜೆ ಮೇಲ್ಪಟ್ಟ ಎಲ್ಲ ಅಧಿಕಾರಿಗಳೂ ಸ್ವವಿವರ, ಸಂಪರ್ಕಗಳ ವಿಳಾಸವನ್ನು ಈಗಾಗಲೇ ನಿಗದಿತ ನಮೂನೆಯಲ್ಲಿ ನಮೂದಿಸಿ ಸಿಎಸ್ ಕಚೇರಿಗೆ ತಲುಪಿಸಿದ್ದಾರೆ.  ಕೆಲ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ಇದನ್ನು ಓದಿ: ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್

ಆ್ಯಪ್ ಬಳಕೆ ಏಕೆ..?

ರಾಜ್ಯ ಸರ್ಕಾರದಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಹಲವು ಕಾರಣಗಳಿಗೆ ಮಾಹಿತಿ ವಿನಿಮಯ ವಿಳಂಭವಾಗುತ್ತಿದೆ. ಇದಲ್ಲದೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಒಂದು ಪಕ್ಷ ಅಧಿಕಾರಿಗಳು ಫೀಲ್ಡ್ ವಿಸಿಟ್​ನಲ್ಲಿ ದ್ದರೆ ವಾಸ್ತವದ ಸ್ಥಿತಿಯನ್ನು ತಕ್ಷಣವೇ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಧಾನಿ ಹೊರಗಿನ ಜಿಲ್ಲೆಗಳಲ್ಲಿನ ವಿದ್ಯಮಾನಗಳ ಮೇಲೆ ಸರಿಯಾಗಿ ನಿಗಾ ಇಡಲು ಸರ್ಕಾರಕ್ಕೆ ಆಗುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಉದ್ದೇಶಿತ ಆ್ಯಪ್ ಸಹಾಯ ಮಾಡುತ್ತದೆ.

ಪೇಪರ್​ಲೆಸ್ ಆಡಳಿತಕ್ಕೆ ಒತ್ತು

ಕೇಂದ್ರ ಸರರ್ಕಾರದ ನಿಯಮದ ಪ್ರಕಾರ ಎಲ್ಲಡೆಯೂ ಇ- ಆಡಳಿತ ವ್ಯವಸ್ಥೆ ಜಾರಿಗೆ ತಂದು ವರ್ಷಗಳೇ ಕಳೆದಿವೆ. ಆದರೆ ಇದು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾತ್ರ ಸಾಧ್ಯವಾಗುತ್ತಿಲ್ಲ. ಅಲ್ಲದೇ ರಾಜಧಾನಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಬಳಕೆಗೆ ಸರಿಯಾದ ರೀತಿಯಲ್ಲಿ ಕೆಲ ಇಲಾಖೆಗಳು ಉತ್ಸಾಹ ತೋರುತ್ತಿಲ್ಲ. ಇದರಿಂದಾಗಿ ನಾಗರಿಕರಿಗೆ ಇ-ಆಡಳಿತ ಮೂಲಕ ಸರಕಾರದ ಸೌಲಭ್ಯ ತಲುಪಿಸಲು ಸಾಧ್ಯವಾಗಿಲ್ಲ. ಕೆಲ ಅಧಿಕಾರಿಗಳ ಪ್ರಯತ್ನದ ಫಲವಾಗಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಿತ ಕೆಲ ಇಲಾಖೆಗಳಲ್ಲಿ ಕಾಗದ ರಹಿತ ಕಚೇರಿಗಳಾಗಿ ಮಾರ್ಪಡಿಸುವ ಪ್ರಯತ್ನ ನಡೆದಿದೆ. ಇತರೆ ಇಲಾಖೆಗಳಲ್ಲೂ ತಂತ್ರಜ್ಞಾನದ ಪೂರ್ಣ ಲಾಭದಿಂದ ‘ಪೇಪರ್ ಲೆಸ್ ಆಫೀಸ್’ಗಳನ್ನಾಗಿ ಪರಿವರ್ತಿಸುವ ಚಿಂತನೆಗೆ ನೀರೆರೆಯಲಾಗಿದೆ. ಇದನ್ನು ಎಲ್ಲಾ ಹಂತಗಳಲ್ಲೂ ಜಾರಿಗೆ ತರಲು ಹೊಸದಾಗಿ ಅಭಿವೃದ್ಧಿಪಡಿಸಲು ಯೋಚಿಸಿರುವ ಆ್ಯಪ್ ಸಹಾಯಕಾರಿಯಾಗುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು ಇನ್ನು ಮುಂದೆ ಆ್ಯಪ್ ಮೂಲಕವೇ ಸಂಹವಹನ ನಡೆಸುತ್ತಾರೆ. ನಾನಾ ಇಲಾಖೆಗಳಿಗೆ ಸೇರಿದ ಅಧಿಕಾರಿಗಳೊಂದಿಗೆ ಸತತ ಸಂವಹನ ನಡೆಸುವ ಸಂಬಂಧ ಹೊಸ ಮಾದರಿಯ ಆ್ಯಪ್ ರೂಪಿಸಲಾಗುತ್ತಿದೆ.  ಒಟ್ಟಿನಲ್ಲಿ ಸದ್ಯದಲ್ಲೇ ಈ ಆ್ಯಪ್ ಅಭಿವೃದ್ಧಿಯಾಗಿ ಸುಲಭ ಆಡಳಿತ ಮತ್ತು ಸುಲಲಿತ ಆಡಳಿತಕ್ಕೆ ದಾರಿ ಆಗಲಿದೆ.

ಇದನ್ನು ಓದಿ:

1. ಕೌಟುಂಬಿಕ ಜವಾಬ್ಧಾರಿಯಲ್ಲಿ ಸಿಕ್ಕು ಮಹಿಳೆಯರ ಒದ್ದಾಟ : ಜಾಹೀರಾತುಗಳಲ್ಲೂ ಇದೆಂಥಾ ಸಂದೇಶ?

2. ತಾಯ್ತನದ ಹೊಸ್ತಿಲಲ್ಲಿದ್ದೀರಾ? ನಿಮಗಿದೆ ವರ್ಕ್ ಫ್ರಮ್ ಹೋಂ ಅವಕಾಶ..

3. ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್


Related Stories

Stories by YourStory Kannada