ಅಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಅನುಸರಿಸಬೇಕಾದ ಮಹತ್ವದ ಅಂಶಗಳು

ಟೀಮ್​​ ವೈ.ಎಸ್​. ಕನ್ನಡ

ಅಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಅನುಸರಿಸಬೇಕಾದ ಮಹತ್ವದ ಅಂಶಗಳು

Tuesday December 15, 2015,

3 min Read

ಭಾರತದಲ್ಲಿ ಅನೌಪಚಾರಿಕ ಉದ್ಯಮ ವಲಯ ಸಾಕಷ್ಟು ವಿರೋಧಾಭಾಸಗಳನ್ನು ಎದುರಿಸುತ್ತಿದೆ. ಈ ವಲಯದಲ್ಲಿ ಶೇ.90ರಷ್ಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಔಪಚಾರಿಕ ವಲಯಗಳಿಗೆ ಹೋಲಿಸಿದರೆ ಅನೌಪಚಾರಿಕ ಉದ್ಯಮ ವಲಯ ಎರಡರಷ್ಟು ಬೆಳವಣಿಗೆ ಸಾಧಿಸುತ್ತಿದೆ. ಆದರೆ ಇದರಲ್ಲಿ ಇದಕ್ಕೆ ಅತೀ ಹೆಚ್ಚು ಕೌಶಲ್ಯರಹಿತ ನೌಕರರ ಸಂಖ್ಯೆ ಅಗತ್ಯವಿದೆ. ಆದರೆ ಇದಕ್ಕೆ ಇದರದ್ದೇ ಆದ ವಿವಿಧ ಸ್ವರೂಪದ ಕೌಶಲ್ಯ ಅವಶ್ಯಕತೆಗಳಿದ್ದು ಇದು ಸೃಷ್ಟೀಕರಿಸದ ಕೆಲಸ ಮತ್ತು ವಿದ್ಯುಕ್ತವಲ್ಲದ ಪ್ರತಿಸ್ಪರ್ಧಿಯಿಂದ ಇದರ ವ್ಯಾಪ್ತಿ ಸ್ವಲ್ಪ ಕಂಗೆಡಿಸುತ್ತದೆ.

ಕೆಲವರು ಅನಿವಾರ್ಯವಾಗಿ ಅಂದರೆ ನಿರುದ್ಯೋಗದ ಸಮಸ್ಯೆಯನ್ನು ಎದುರಿಸಲಾರದೇ ಅನೌಪಚಾರಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇದೇ ಪರಿಸ್ಥಿತಿ ಕಟ್ಟಡ ನಿರ್ಮಾಣ, ಕೃಷಿ ಮತ್ತು ಉತ್ಪಾದನಾ ವಲಯ ಮತ್ತು ಬೀದಿಬದಿಯ ವ್ಯಾಪಾರಿಗಳಿಗೂ ಇರುತ್ತದೆ.

ಅನೌಪಚಾರಿಕ ವಲಯ, ಸಣ್ಣ ಉದ್ಯಮಗಳು, ಕಾಟೇಜ್ ಉದ್ಯಮಗಳು ಮತ್ತು ಗೃಹೋಪಯೋಗಿ ವಸ್ತುಗಳ ಉದ್ಯಮ ಇವೆಲ್ಲವನ್ನೂ ಒಳಗೊಂಡಿದೆ. ಈ ವಲಯದಲ್ಲಿ ನೌಕರರು ಹಲವು ಕೆಲಸಗಳನ್ನು ನಿರ್ವಹಿಸಬೇಕಾಗಿರುತ್ತದೆ. ಸಮರ್ಪಕ ಕೌಶಲ್ಯ, ಹಣಕಾಸಿನ ಬೆಂಬಲ ಮತ್ತು ಉದ್ಯಮಿಯಾಗುವ ತರಬೇತಿಯೊಂದಿಗೆ ರಸ್ತೆ ಬದಿಯ ಫಾಸ್ಟ್ ಫುಡ್ ಉದ್ಯಮಿಗಳೂ ಸಹ ತಮ್ಮದೇ ಆದ ಸಣ್ಣ ಉಪಾಹಾರ ಗೃಹವೊಂದನ್ನು ನಿರ್ಮಿಸಿಕೊಳ್ಳಬಹುದು ಮತ್ತು ಕೃಷಿಕರು ತಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಅದಕ್ಕೆ ಪ್ಯಾಕೇಜ್ ಮಾಡಿ ಅದನ್ನು ಸೂಕ್ತ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ ಉದ್ಯಮದಲ್ಲಿ ತೊಡಗಿಕೊಳ್ಳಬಹುದು. ಹಾಗಾದರೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಶಿಬಿರಗಳು ಮತ್ತು ರಾಷ್ಟ್ರಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಶಿಬಿರಗಳಿಂದ ಮತ್ತು ಉದ್ಯಮಶೀಲತೆಯ ಪರಿಣಾಮಗಳು ಜನರ ಜೀವನಶೈಲಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಲ್ಲವು?

image


ಸ್ಕಿಲ್ ಇಂಡಿಯಾದಂತಹ ಕಾರ್ಯಾಗಾರಗಳ ಸತತ ಪ್ರಯತ್ನದಿಂದ ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ ಅಂತರವನ್ನು ಕಡಿಮೆಗೊಳಿಸುವಲ್ಲಿ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತದೆ. ಇದರಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಂಡು ಉತ್ತಮ ಉತ್ಪಾದಕತೆಯನ್ನು ಹೆಚ್ಚಿಸುವ, ಆ ಮೂಲಕ ಉತ್ತಮ ಆದಾಯ ಪಡೆಯುವ ಮತ್ತು ಸರಿಯಾದ ಟೂಲ್‌ಗಳು ಮತ್ತು ತಂತ್ರಜ್ಞಾನವನ್ನು ಸಾಮಾಜಿಕ ಭದ್ರತಾ ವಾತಾವರಣ ನಿರ್ಮಿಸುವ ಮೂಲಕ ಸಬಲೀಕರಣದತ್ತ ಹೆಜ್ಜೆಹಾಕುವ ಅಂಶಗಳೂ ಸಹ ಒಳಗೊಂಡಿರುತ್ತವೆ. ವಾಸ್ತವವಾಗಿ ಹೇಳುವುದಾದರೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಿಂದ ಮಾತ್ರ ಇಂತಹ ಬದಲಾವಣೆಗಳು ಬರುವುದು ಸಾಧ್ಯವಿಲ್ಲ. ಸರ್ಕಾರ, ಉದ್ಯಮಗಳು ಮತ್ತು ತರಬೇತುದಾರರ ಸಕಟ ಸಹಯೋಗದಿಂದ ಸರಿಯಾದ ರೀತಿಯಲ್ಲಿ ಪ್ರಯತ್ನಗಳು ನಡೆದಾಗ ಮಾತ್ರ ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ ಮಧ್ಯದ ಅಂತರ ಕಡಿಮೆಯಾಗಲು ಸಾಧ್ಯ.

ಆರಂಭದಿಂದಲೇ ಜನಸಾಮಾನ್ಯರನ್ನು ಭಾಗವಹಿಸುವಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದರ ಮೂಲಕ ಈ ಯೋಜನೆಗಳ ಮಾಲೀಕತ್ವವನ್ನು ಪಡೆಯುವುದು ಅನೌಪಚಾರಿಕ ಉದ್ಯಮ ವಲಯದಲ್ಲಿ ಕೌಶಲ್ಯದ ಗುರಿಗಳನ್ನು ತಲುಪಲು ಅತ್ಯುತ್ತಮ ಮಾರ್ಗ. ಮುಖ್ಯವಾಗಿ ಇದರಿಂದ ನಿಧಾನವಾಗಿ ಸಿನಿಕತನ ಮತ್ತು ಪ್ರತಿರೋಧಗಳಿಂದ ಹೊರಬರಲು ಸಾಧ್ಯವಾಗುತ್ತದೆ. ನಿಗದಿತ ಗುರಿಯನ್ನು ತಲುಪಲು ಅಗತ್ಯವಿರುವ ಕೆಲವು ಅಂಶಗಳು ಇಲ್ಲಿವೆ.

ಕೌಶಲ್ಯಗಳನ್ನೂ ಮೀರಿ ನಡೆಯಬೇಕು: ಅನೌಪಚಾರಿಕ ವಲಯದ ನೌಕರರು ತರಬೇತಿ ಮತ್ತು ಕೌಶಲ್ಯಗಳನ್ನು ಪಡೆಯುವುದರಲ್ಲಿ ಅಷ್ಟೇನೂ ಆಸಕ್ತಿ ತೋರುವುದಿಲ್ಲ. ಅವರಿಗೆ ಕೆಲಸವನ್ನು ಹೇಗೆ ಮಾಡಬೇಕು ಎಂಬುದಕ್ಕಿಂತ ಕೆಲಸ ಮಾಡುವುದೇ ಜೀವನಾವಶ್ಯಕವಾದ ಅಂಶವಾಗಿರುತ್ತದೆ. ಈ ಧೋರಣೆ ಬದಲಾಗಬೇಕು. ತರಬೇತಿಯ ಪರಿಣಾಮದಿಂದ ಉತ್ಪಾದಕತೆ ಮತ್ತು ಗುಣಮಟ್ಟದ ಮೇಲೆ ಆಗುವ ಪರಿಣಾಮದ ಕುರಿತು ಮೊದಲು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಕೌಶಲ್ಯಗಳ ಮಹತ್ವದ ಕುರಿತು ಅವರಿಗೆ ಅರಿವಾಗುವಂತೆ ಮಾಡಬೇಕು. ಅದರಿಂದ ಸಾಮಾಜಿಕ ಸ್ಥಾನಮಾನಗಳಲ್ಲಿ ಬರುವ ಬದಲಾವಣೆಗಳ ಬಗ್ಗೆ ತಿಳಿಸಬೇಕು. ಅದಕ್ಕಾಗಿ ಇನ್ಸೂರೆನ್ಸ್, ಉದ್ಯೋಗ ಭದ್ರತೆಗಳ ಒಂದು ಕಾಂಬೋ ಪ್ಯಾಕೇಜ್ ನೀಡಬೇಕು.

ಕೌಶಲ್ಯ ಅಭಿವೃದ್ಧಿಯಲ್ಲಿ ಸ್ಥಳೀಯ ನಾಯಕರ ಪಾತ್ರ: ಕೌಶಲ್ಯಗಳ ಬಗ್ಗೆ ಅರಿವು ಮೂಡಿಸಲು ಸ್ಥಳೀಯ ನಾಯಕತ್ವಕ್ಕಿಂತ ಉತ್ತಮ ಅವಕಾಶಗಳು ಸಿಗುವುದೇ ಇಲ್ಲ. ಇದರಿಂದ ಜನರ ಜೀವನ ವಿಧಾನದಲ್ಲಿ ದೀರ್ಘಕಾಲಿಕ ಪರಿಣಾಮ ಸಾಧ್ಯವಾಗುತ್ತದೆ. ಜನರನ್ನು ಕೌಶಲ್ಯಪೂರ್ಣ ಉದ್ಯೋಗಗಳತ್ತ ಸೆಳೆಯಲು, ಅವರನ್ನು ಸಂಘಟಿಸಲು ಮತ್ತು ಆರ್ಥಿಕತೆಯಲ್ಲಿ ಅವರ ಪಾತ್ರ ಏನೆಂದು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡುವಲ್ಲಿ ಸ್ಥಳೀಯ ನಾಯಕರುಗಳು ಯಶಸ್ವಿಯಾಗುತ್ತಾರೆ. ನಿಗದಿತ ಗುರಿಗಳನ್ನು ತಲುಪಲು ಮತ್ತು ಕೆಳಮಟ್ಟದಿಂದಲೇ ಸಂಘಟನಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಲ್ಲಿ ಸ್ಥಳೀಯ ನಾಯಕರುಗಳು ಮಹತ್ವದ ಪಾತ್ರ ವಹಿಸುತ್ತಾರೆ.

ಸಮರ್ಪಕ ಹಣಕಾಸು ಬೆಂಬಲದ ಭರವಸೆ ನೀಡಬೇಕು: ಅನೌಪಚಾರಿಕ ವಲಯದವರಿಗೆ ತರಬೇತಿ ನೀಡುವವರಿಗೆ ಕೆಲ ಅಗತ್ಯವಿರುವ ಹಣಕಾಸು ಸೌಲಭ್ಯ ನೀಡುವುದು ಬಹಳ ಅಗತ್ಯ. ವಿನ್ಯಾಸ ಮತ್ತು ತರಬೇತಿ ಯೋಜನೆಗಳನ್ನು ಜಾರಿಗೊಳಿಸಲು ಅವರಿಗೆ ಹಣಕಾಸಿನ ಅಗತ್ಯವಿರುತ್ತದೆ. ನೌಕರರಿಗೆ ಹಣಕಾಸಿನ ಪ್ರೇರಣೆಯ ಹೊರತಾಗಿ ತರಬೇತಿಯಲ್ಲಿ ಭಾಗಿಯಾಗಲು ಮತ್ತು ಮತ್ತು ಇದರಿಂದ ಅವರ ಜೀವನಾವಶ್ಯಕವಾದ ಉದ್ಯೋಗಕ್ಕೆ ಯಾವುದೇ ತೊಂದರೆಯಾಗದಿರುವಂತೆ ಭರವಸೆ ನೀಡುವುದು ಬಹಳ ಅಗತ್ಯವಾಗಿರುತ್ತದೆ. ಕೌಶಲ್ಯಪೂರ್ಣ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಜೀವನಮಟ್ಟ ಹೆಚ್ಚುವುದು ಮತ್ತು ಬಡತನ ಕಡಿಮೆಯಾಗುವುದೆಂಬ ಭರವಸೆ ನೀಡಬೇಕಲ್ಲದೇ ಅವರಿಗಾಗಿ ಒಂದು ಸಮರ್ಪಕ ಜೀವನವನ್ನು ನೀಡುವತ್ತ ಗಮನಹರಿಸಬೇಕು.

ಔಪಚಾರಿಕ ಕಲಿಕೆಯ ಗುರುತಿಸುವಿಕೆ: ಇರುವ ಕೌಶಲ್ಯಗಳಿಂದ ಬಯಸಿದ ಫಲಿತಾಂಶಗಳನ್ನು ಪಡೆಯಲು ಈ ಔಪಚಾರಿಕ ಕಲಿಕೆಯ ಗುರುತಿಸುವಿಕೆ ಒಂದು ಸಾಧನ ಮಾತ್ರ. ಕೌಶಲ್ಯಗಳ ಅಂತರ ಕಡಿಮೆ ಮಾಡಲು ಮತ್ತು ಅನೌಪಚಾರಿಕ ವಲಯವನ್ನು ಔಪಚಾರಿಕ ಮತ್ತು ಸಂಘಟಿತ ವಲಯವನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಅನೌಪಚಾರಿಕ ವಲಯದಲ್ಲಿ ನಿರ್ಣಯ, ಅರ್ಹತಾ ಮತ್ತು ಪ್ರಮಾಣೀಕರಿಸುವ ಕೌಶಲ್ಯಗಳನ್ನು ಮೂಡಿಸಲು ಹಾಗೂ ಶೈಕ್ಷಣಿಕ ಗುರುತಿಸುವಿಕೆಯಲ್ಲೂ ಇದು ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ. ಅನೌಪಚಾರಿಕ ವಲಯದ ದೊಡ್ಡ ಕಾರ್ಯಕ್ಷೇತ್ರವನ್ನು ಔಪಚಾರಿಕ ಉದ್ಯೋಗಗಳತ್ತ ಸೆಳೆಯಲು ಇದು ಸಹಾಯಕವಾಗಿದೆ.

ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು: ಐಸಿಟಿಗಳಲ್ಲಿ ಕೌಶಲ್ಯಗಳು ಕಡ್ಡಾಯವಾಗಿರುತ್ತವೆ. ವಿಶೇಷವಾಗಿ ಮೊಬೈಲ್ ಮತ್ತು ಕ್ಲೌಡ್ ತಂತ್ರಜ್ಞಾನವನ್ನು ಬಳಸಿಕೊಂಡು ಅಡ್ಮಿನಿಸ್ಟ್ರರ್ ತರಬೇತಿಯನ್ನು ನೀಡಬೇಕು. ರಾಷ್ಟ್ರಮಟ್ಟದಲ್ಲಿ ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳಿಂದ ನಾವು ಸದ್ಯದ ಟ್ರೆಂಡ್‌ಗಳು ಮತ್ತು ಟಾರ್ಗೆಟ್‌ಗಳನ್ನು ತಿಳಿದುಕೊಳ್ಳಲು ಮೊಬೈಲ್ ಆ್ಯಪ್‌ಗಳು ಮತ್ತು ವೀಡಿಯೋಗಳ ಸಹಕಾರದಿಂದ ಎಲ್ಲಿಬೇಕಾದರೂ ಯಾವಾಗ ಬೇಕಾದರೂ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಮಾಡಬಹುದು. ಅನೌಪಚಾರಿಕ ವಲಯ ಕಾರ್ಯಕ್ಷೇತ್ರಕ್ಕೆ ಹೊಂದುವಂತೆ ಚಿತ್ರಾತ್ಮಕ ಫ್ಲ್ಯಾಶ್ ಕಾರ್ಡ್‌ಗಳು, ಭಾಷಾ ವೀಡಿಯೋ ಬೈಟ್‌ಗಳು ಮತ್ತು ಕೌಶಲ್ಯಗಳ ಕಲಿಕೆಗೆ ಅನೇಕ ನೆರವು ಸಾಧನಗಳಿವೆ. ಇದರ ಮೂಲಕ ಶಾಲಾ ಕಲಿಕೆಯನ್ನು ಮೊಟಕುಗಳಿಸಿರುವವರು ಮತ್ತು ಶೈಕ್ಷಣಿಕವಾಗಿ ಹಿಂದಿರುವವರೂ ಸಹ ಮುಂದೆ ಬರಲು ಸಾಧ್ಯವಿದೆ.

ಮೇಲೆ ಹೇಳಿದ ಅಂಶಗಳ ಹೊರತಾಗಿ ಹೇಳುವುದಾದರೆ ಮುಖ್ಯವಾಗಿ ಇದರಲ್ಲಿ ಯಶಸ್ಸು ಗಳಿಸಿದವರ ಕುರಿತು ಪ್ರಚಾರ ಮಾಡುವ ಅವಶ್ಯಕತೆ ಇದೆ. ಈ ಮೂಲಕ ಕಟ್ಟಡ ಕೆಲಸಗಾರರು, ಚರ್ಮದಿಂದ ವಸ್ತುಗಳನ್ನು ಮಾಡುವವರು, ಬೀದಿಬದಿಯ ವ್ಯಾಪಾರಿಗಳು ಮತ್ತು ಕಾರ್ಪೆಂಟರ್‌ ಗಳಲ್ಲಿ ಸಕಾರಾತ್ಮಕ ಅಭಿಪ್ರಾಯ ಮೂಡಿಸಬೇಕಿದೆ. ಅವರಲ್ಲಿ ಅವರು ಬೆಳೆದೇ ಬೆಳೆಯುತ್ತಾರೆ, ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂಬ ಭರವಸೆ ಮೂಡಿಸಬೇಕಿದೆ.

ಅನುವಾದಕರು: ವಿಶ್ವಾಸ್​​