ಮರುಸ್ಥಳಾಂತರ ಉದ್ಯಮಕ್ಕೆ ಹೊಸ ವ್ಯಾಖ್ಯಾನ ನೀಡಿದ 29 ವರ್ಷದ ಮಹಿಳೆ

ಟೀಮ್​ ವೈ.ಎಸ್​​.

ಮರುಸ್ಥಳಾಂತರ ಉದ್ಯಮಕ್ಕೆ ಹೊಸ ವ್ಯಾಖ್ಯಾನ ನೀಡಿದ 29 ವರ್ಷದ ಮಹಿಳೆ

Saturday November 07, 2015,

4 min Read

ಮನೆ ಸ್ಥಳಾಂತರಿಸುವಾಗ ನಿಮ್ಮ ಗ್ಲಾಸ್ ಒಡೆದಿರುವುದು ನೆನಪಿದೆಯಾ? ನಿಮ್ಮ ಇಷ್ಟದ ಪೇಂಟಿಂಗ್ ಹಾಳಾಗಿತ್ತು ಎಂಬ ನೋವು ಇನ್ನು ಇದೆಯಾ?

ಮನೆ ಬದಲಾಯಿಸುವುದು ಒಬ್ಬ ವ್ಯಕ್ತಿ ಅಥವಾ ಕುಟುಂಬ ಯಾರೇ ಇರಲಿ ಎಲ್ಲರಿಗೂ ತಲೆ ನೋವಿನ ಕೆಲಸ. ಮೆಟ್ರೋ ನಗರಗಳಲ್ಲಿ ಮನೆ ಸ್ಥಳಾಂತರ ಮಾಡಲು ಬಹಳಷ್ಟು ಸಮಯ ನೀಡಬೇಕು. ಅದು ಮತ್ತಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಈಗೀಗ ಈ ತಲೆಬಿಸಿ ಕಡಿಮೆಯಾಗುತ್ತಿದೆ. ಪ್ಯಾಕಿಂಗ್ ಹಾಗೂ ಸಾಗಣೆ ಒಂದು ಕ್ರಿಯಾತ್ಮಕ ವ್ಯಾಪಾರವಾಗಿದೆ. ವೃತ್ತಿಪರ ಸಾಗಣೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಗರ್ವಾಲ್ ಪ್ಯಾಕಿಂಗ್ ಎಂಡ್ ಮೂವಿಂಗ್, EzMove ಮತ್ತು DTDC ಪ್ಯಾಕಿಂಗ್ ಹಾಗೂ ಮೂವಿಂಗ್ ಕಂಪನಿಗಳು ಮನೆಮಾತಾಗಿವೆ. ಬಹುಮಟ್ಟಿಗೆ ಮರುಸ್ಥಳಾಂತರ ಉದ್ಯಮ ರಚನಾ ರಹಿತವಾಗಿವೆ. ಇಲ್ಲಿ ಕೆಲಸ ಮಾಡುವವರಿಗೆ ಸರಿಯಾದ ತರಬೇತಿ ಹಾಗೂ ಹೇಗೆ ಕೆಲಸ ಮಾಡಬೇಕೆನ್ನುವ ಬಗ್ಗೆ ಅರಿವು ಇರುವುದಿಲ್ಲ.

image


ಸುಮಾರು ಮೂರು ದಶಕಗಳಿಂದ ಮರುಸ್ಥಳಾಂತರ ಸೇವೆಯಲ್ಲಿ ನಿರತವಾಗಿರುವ ಪಿಎಂಆರ್ ಸಂಸ್ಥೆ ಮಾತ್ರ ಭಿನ್ನವಾಗಿ ನಿಲ್ಲುತ್ತದೆ. ಗ್ರಾಹಕ ಸ್ನೇಹಿ ಹಾಗೂ ಪ್ರಾಮಾಣಿಕತೆಗೆ ಹೆಸರು ಮತ್ತು ಮನೆ ಮಾತಾಗಿದೆ. 30 ಕೋಟಿ ವಹಿವಾಟು ಹೊಂದಿರುವ ಈ ಕಂಪನಿ 29 ವರ್ಷದ ಉತ್ಸಾಹಿ, ಕ್ರಿಯಾತ್ಮಕ ಮಹಿಳೆ ಆಕಾಂಕ್ಷಾ ಭಾರ್ಗವ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಪಿಎಂಆರ್ ಹಾಗೂ ಮರುಸ್ಥಳಾಂತರ ಉದ್ಯಮದ ರಚನೆ ಮತ್ತು ಅಂತರಾಷ್ಟ್ರೀಕರಣದ ಬಗ್ಗೆ YourStory ಜೊತೆ ಮಾತನಾಡಿದ್ದಾರೆ ಆಕಾಂಕ್ಷಾ

ಪಿಎಂ ಮರುಸ್ಥಳಾಂತರ ಅಂದರೆ?

ಭಾರತದ ಒಳಗೆ ಹಾಗೂ ಸಮುದ್ರದಾಚೆಗೆ ಮರುಸ್ಥಳಾಂತರ ಮಾಡಲು ಇರುವ ಒಂದು ಪರಿಹಾರ ಪಿಎಂಆರ್. ಮನೆಯ ಸಾಮಗ್ರಿಗಳ ಪ್ಯಾಕಿಂಗ್ ಮತ್ತು ಸಾಗಣೆ, ಕಚೇರಿ ಸ್ಥಳಾಂತರ,ಕರಕುಶಲ ವಸ್ತುಗಳ ಸ್ಥಳಾಂತರ, ಸಾಂಸ್ಕೃತಿಕ ತರಬೇತಿ, ಮನೆ ಹುಡುಕಾಟ, ಶಾಲೆಯ ಹುಡುಕಾಟ ಸೇರಿದಂತೆ ಗ್ರಾಹಕರ ಇಚ್ಛೆಯ ಪ್ರಕಾರ ಸೇವೆಗಳನ್ನು ಪಿಎಂಆರ್ ಒದಗಿಸುತ್ತದೆ. ದೇಶದ 13 ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದ್ದು, ತನ್ನ ಜಾಲವನ್ನು ಜಾಗತಿಕವಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಕಂಪನಿ ದೇಶಿಯ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡುತ್ತಿದೆ.

ಪಿಎಂಆರ್ ಯುಎಸ್​​ಪಿ

ಪಿಎಂಆರ್ ಕೇವಲ ಪ್ಯಾಕಿಂಗ್ ಹಾಗೂ ಸಾಗಣೆಕೆಯಲ್ಲಿ ಮಾತ್ರ ಹೆಸರು ಮಾಡಿಲ್ಲ, ಬದಲಾಗಿ ಗ್ರಾಹಕರ ಎಲ್ಲ ಅವಶ್ಯಕತೆಗಳನ್ನು ನಿಭಾಯಿಸುತ್ತಿದೆ. ಸಬ್ ಕಾಂಟ್ರೆಕ್ಟ್ ಅಥವಾ ಪ್ಯಾಕಿಂಗ್ ಹಾಗೂ ಮೂವಿಂಗ್ ಹೊರಗುತ್ತಿಗೆ ಕೆಲಸವನ್ನು ಪಿಎಂಆರ್ ಮಾಡುತ್ತಿಲ್ಲ. ಮನೆಯೊಳಗಿನ ಸಾಮಾನುಗಳ ಪ್ಯಾಕರ್ಸ್ ಮತ್ತು ಮೇಲ್ವಿಚಾರಕರನ್ನೂ ಇದು ಹೊಂದಿದೆ.

image


ಯುಪಿಎಸ್ ತನ್ನದೆ ಆತ ತರಬೇತಿ ತಂಡ, ಸಿಬ್ಬಂದಿಯನ್ನು ಹೊಂದಿದೆ. ಎರಡು ದಶಕಗಳಿಂದ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ. ನಮ್ಮ ಶ್ರೇಷ್ಠ ಗ್ರಾಹಕರಲ್ಲಿ ಕೆಲವು - ಶೆಲ್, ಅಮೆರಿಕನ್ ಎಂಬಸಿ, ಅಮೆರಿಕನ್ ಸ್ಕೂಲ್, AMDOCS, ಎಚ್​​ಪಿ , ಬ್ರಿಟಾನಿಯಾ, ಸ್ಯಾಪ್, ಬಾಷ್, ಐಟಿಸಿ, ಸಿಟಿಬ್ಯಾಂಕ್, ಎಚ್ಎಸ್​​ಬಿಸಿ, ನೋಕಿಯಾ ಸೀಮೆನ್ಸ್, Baarclays, BhartiAirtel, ಮತ್ತು ಎಲ್​​ಜಿ .

ಮರುಸ್ಥಳಾಂತರ ಉದ್ಯಮದ ವಿಕಾಸ

ಭಾರತದಲ್ಲಿ ಈ ಉದ್ಯಮವು ಅಸಂಘಟಿತವಾಗಿದೆ. ಲಾರಿ ಅಥವಾ ಟೆಂಪೋ ಮೂಲಕ ಕಾರ್ಮಿಕರು ಮರುಸ್ಥಳಾಂತರ ಮತ್ತು ಸಾಗಣೆ ಮಾಡುತ್ತಾರೆಂದು ತಿಳಿಯಲಾಗಿದೆ. ಇದನ್ನು ಸೂಕ್ಷ್ಮ ಪರಿಶೋಧನೆಗೆ ಒಳಪಡಿಸಿಲ್ಲ ಮತ್ತು ಇದೊಂದು ವೃತ್ತಿ ಆಯ್ಕೆ ಎಂದು ಪರಿಗಣಿಸಿಲ್ಲ.

ಪ್ಯಾಕಿಂಗ್ ಸೇವೆಯ ಗುಣಮಟ್ಟ ಕಡಿಮೆ ಇರುವುದರಿಂದ ಈ ಉದ್ಯಮದಲ್ಲಿ ಸಾಕಷ್ಟು ಸಣ್ಣ ಮತ್ತು ವೃತ್ತಿಗೆ ಯೋಗ್ಯವಲ್ಲದ ಕೆಲಸಗಾರರಿದ್ದಾರೆ. ಇದೊಂದು ಸಾಗಣೆ ಹಾಗೂ ಅಶಿಕ್ಷಿತರ ಕಾರ್ಖಾನೆ ಎಂದು ಗ್ರಾಹಕರು ಗ್ರಹಿಸಿದ್ದಾರೆ.

ಜನರ ದೃಷ್ಟಿಕೋನವನ್ನು ಬದಲಾಯಿಸುವುದು ಆಕಾಂಕ್ಷಾ ಗುರಿ. ಹೊರಗುತ್ತಿಗೆ ಆಧಾರದ ಮೇಲೆ ಈ ಉದ್ಯಮ ನಡೆಯುವುದರಿಂದ ಮರುಸ್ಥಳಾಂತರ ಉದ್ಯಮ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎನ್ನುತ್ತಾರೆ ಆಕಾಂಕ್ಷಾ.

ದೊಡ್ಡ ಅವಕಾಶ

ವೃತ್ತಿಪರ ಮರುಸ್ಥಳಾಂತರ ಕಂಪನಿಗಳು ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿಸಿಕೊಡುವುದು ಕಷ್ಟದ ಕೆಲಸ. ಅವರ ಪ್ರಕಾರ ` ಅಂತ್ಯವಿಲ್ಲದ ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ಒಂದು ಕಂಪನಿ ಭಾರತದಲ್ಲಿ ಹೆಸರು ಮಾಡಿಲ್ಲ. ಪಿಎಂಆರ್ ಈ ಹೆಗ್ಗಳಿಕೆಗೆ ಪಾತ್ರವಾಗುವ ದಾರಿಯಲ್ಲಿ ನಡೆಯುತ್ತಿದೆ. ಭವಿಷ್ಯದಲ್ಲಿ ಮರುಸ್ಥಳಾಂತರದ ಅರ್ಥವನ್ನು ಬದಲಾಯಿಸುವ ಅಗತ್ಯವಿದೆ.’’

FIDI ಮಾನ್ಯತೆ ಪಡೆದ ಅರ್ನ್ಸ್ಟ್ ಯಂಗ್ ಕಂಪನಿಯ ಅಂತಾರಾಷ್ಟ್ರೀಯ ಮಾನದಂಡದ ಮೇಲೆ ಪಿಎಂಆರ್ ಪ್ರಮಾಣೀಕರಿಸಲ್ಪಟ್ಟಿದೆ. ಐಎಸ್ಓ ಹಾಗೂ WE ಯಿಂದ ದೃಢೀಕೃತಗೊಂಡಿದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಕಂಪನಿಗಳ ಜೊತೆ ಪಾಲುದಾರಿಕೆಯನ್ನು ಹೊಂದಿದೆ.

21 ವರ್ಷದ ಮಗಳು ಕುಟುಂಬ ವ್ಯಾಪಾರ ಸೇರಲು ಕಾರಣ?

ಆಕಾಂಕ್ಷಾ ಎಸ್ ಪಿ ಜೈನ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಎಂಬಿಎ ಮುಗಿಸಿದ್ದಾರೆ. ಇದು ಕುಟುಂಬ ವ್ಯಾಪಾರ. ನಾನು ಯಾವಾಗಲೂ ಮುಂದಿನ ಹಂತಕ್ಕೆ ಹೋಗುವ ಬಗ್ಗೆ ಮಾತನಾಡುತ್ತಿದ್ದೆ. ಸಾಮಾನು ಉದ್ಯಮಕ್ಕೆ ನಾನು ಆಕರ್ಷಿತನಾಗಿದ್ದೆ. 2007ರಿಂದ ಇಲ್ಲಿಯವರೆಗೆ ಈ ಉದ್ಯಮ ತುಂಬಾ ಅನುಭವ ನೀಡಿದೆ ಎನ್ನುತ್ತಾರೆ ಆಕಾಂಕ್ಷಾ.

ಪಿಎಂಆರ್ ವ್ಯಾಪ್ತಿಯನ್ನು ವಿಸ್ತರಿಸಲು ಆಕಾಂಕ್ಷಾ ಅನೇಕ ನಗರಗಳಲ್ಲಿ ಸುಮಾರು ಆರು ತಿಂಗಳವರೆಗೆ ವಾಸ್ತವ್ಯ ಹೂಡಿದ್ದಿದೆ. ಆಗ 40 ಇದ್ದ ತಂಡದ ಸಂಖ್ಯೆ ಈಗ 370 ದಾಟಿದೆ.

image


ಸಂಖ್ಯೆಯಲ್ಲಿ ಪಿಎಂಆರ್

ಪಿಎಂಆರ್ ಐದು ವರ್ಷಗಳ ಅವಧಿಯಲ್ಲಿ ಎರಡು ಕೋಟಿಯಿಂದ 30 ಕೋಟಿಯವರೆಗೆ ಬೆಳೆದು ನಿಂತಿದೆ. ಕಂಪನಿಯಲ್ಲಿ 370 ಕೆಲಸಗಾರರಿದ್ದಾರೆ. 130 ಮಂದಿ ವೈಟ್ ಕಾಲರ್ (ಖರೀದಿ, ಮಾರಾಟ, ಮಾರುಕಟ್ಟೆ, ಕಾರ್ಯಾಚರಣೆ ಮತ್ತು ಗ್ರಾಹಕರ ರಕ್ಷಣೆ) ಕೆಲಸ ಮಾಡುತ್ತಿದ್ದಾರೆ.ಉಳಿದವರು ಬ್ಲೂ ಕಾಲರ್ ಕೆಲಸ ನಿರ್ವಹಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸಮಾಡಲು ಅರ್ಹರಿರುವ ಕೆಲಸಗಾರರನ್ನು ಇದು ಹೊಂದಿರುವುದರಿಂದ ಸಾಮಾನ್ಯ ಮರುಸ್ಥಳಾಂತರ ಕಂಪನಿಗಳಿಗಿಂತ ಇದರ ಬೆಲೆ 1.3 ಪಟ್ಟು ಜಾಸ್ತಿ ಇದೆ.

ಪುರುಷ ಪ್ರಾಬಲ್ಯ ಉದ್ಯಮದಲ್ಲಿ ಸಾಹಸ

ಪುರುಷ ಪ್ರಧಾನ ಈ ಉದ್ಯಮಕ್ಕೆ ಆಕಾಂಕ್ಷಾ ತಮ್ಮ 21ನೇ ವಯಸ್ಸಿನಲ್ಲಿ ಕಾಲಿಟ್ಟರು. ಮರುಸ್ಥಳಾಂತರ ಉದ್ಯಮದಲ್ಲಿ ಅದರಲ್ಲೂ 30 ಕೋಟಿ ವ್ಯವಹಾರದ ನೇತೃತ್ವ ವಹಿಸಿರುವ ಭಾರತದ ಏಕೈಕ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಆಕಾಂಕ್ಷಾ. ಮಹಿಳೆಯರಿಗೆ ಸೂಕ್ತ ಸ್ಥಳ ಅಲ್ಲ ಎಂಬ ಮಾತಿಗೆ ವಿರುದ್ಧವಾಗಿ ನಿಂತು ಸಾಧಿಸಿ ತೋರಿಸಿದ್ದಾರೆ.

ಪೂರೈಕೆ,ಪ್ಯಾಕಿಂಗ್,ಗ್ರಾಹಕರ ನಿರ್ವಹಣೆ ಸೇರಿದಂತೆ ಇದು ಪುರುಷರಿಗೆ ಯೋಗ್ಯ ಕೆಲಸ ಎಂದು ಪರಿಗಣಿಸಲಾಗಿತ್ತು. ಖಂಡಿತವಾಗಿಯೂ ಇದೊಂದು ಸವಾಲು. ಉನ್ನತ ಮಟ್ಟದ ಬದ್ಧತೆ, ಪ್ರಯಾಣ, ಮ್ಯಾನೇಜ್ ಮೆಂಟ್ ಸಮಸ್ಯೆ, ಯೂನಿಯನ್ ಸಮಸ್ಯೆಗಳನ್ನು ಬಗೆಹರಿಸುವುದು,ಕಾನೂನು ಮತ್ತು ರಾಜಕೀಯ ವ್ಯವಹಾರಗಳನ್ನು ನಿಭಾಯಿಸುವು ಕಷ್ಟ. ಮುಖ್ಯವಾಗಿ ಯುವತಿ ಎಂಬ ಕಾರಣಕ್ಕೆ ಜನರು ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಂಡದೊಂದಿಗೆ ಬೆರೆತು, ನಮ್ಮ ಉದ್ದೇಶ,ಗುರಿಯನ್ನು ಜನರಿಗೆ ಅರ್ಥ ಮಾಡಿಸುವುದು ಬಹಳ ಮುಖ್ಯ.ಎನ್ನುತ್ತಾರೆ ಇವರು.

ಉದ್ಯಮಿ ಎಂಬ ಸಂತೋಷ

ವಾಣಿಜ್ಯೋದ್ಯಮಿಯಾಗಿರುವ ಆಕಾಂಕ್ಷಾ, ಪಿಎಂಆರ್ ಕಂಪನಿ 350 ಕುಟುಂಬಗಳಿಗೆ ಆಸರೆಯಾಗಿದೆ ಎಂಬುದನ್ನು ಅರಿತಿದ್ದಾರೆ.

ಪ್ರತಿದಿನ ಬೆಳಿಗ್ಗೆ ನಾನು ನನ್ನ ಜವಾಬ್ದಾರಿಯನ್ನು ನೆನೆಯುತ್ತೇನೆ. ಈ ಸ್ಥಾನದಲ್ಲಿರುವ ನನ್ನನ್ನು ಅನೇಕರು ಆಶೀರ್ವದಿಸಿದ್ದಾರೆ. ನನ್ನ ನೌಕರರು ವೃತ್ತಿಪರವಾಗಿ ಹಾಗೂ ವೈಯಕ್ತಿಕವಾಗಿ ಬೆಳೆಯಬೇಕೆನ್ನುವುದು ನನ್ನ ಕನಸು ಎನ್ನುತ್ತಾರೆ ಆಕಾಂಕ್ಷಾ.

ಆಕಾಂಕ್ಷಾಗೆ ಅವರ ತಂದೆಯೆ ಪ್ರೇರಣೆ.

ನನ್ನ ತಂದೆ ದೊಡ್ಡ ಸ್ಫೂರ್ತಿ. ನನಗೆ ಶಿಕ್ಷಕ, ಗುರು ಮತ್ತು ಸ್ನೇಹಿತರು. ನನ್ನ ಸಾಮರ್ಥ್ಯದ ಮೇಲೆ ಅವರಿಗೆ ನಂಬಿಕೆ ಇದೆ. ನನ್ನ ಕೆಲಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಖ್ಯವಾಗಿ ನನ್ನ ತಂಡ ನನ್ನ ದೊಡ್ಡ ಶಕ್ತಿ ಎಂಬುದನ್ನು ಅವರು ನಂಬಿದ್ದಾರೆ ಆಕಾಂಕ್ಷಾ.

ಭವಿಷ್ಯದಲ್ಲಿ ಪಿಎಂಆರ್

ಕಂಪನಿ movetodelhi.com, movetobumbay.com ವೆಬ್​ಸೈಟ್ ಬಿಡುಗಡೆ ಮಾಡಲು ಮುಂದಾಗಿದೆ.ಸರಳ ಹಾಗೂ ಸುಲಭವಾಗಿ ಹೇಗೆ ಮರುಸ್ಥಳಾಂತರ ಮಾಡಲಾಗುವುದು ಎನ್ನುವ ಬಗ್ಗೆ ಮಾಹಿತಿ ಇದರಲ್ಲಿರುತ್ತದೆ. ಸದ್ಯದಲ್ಲೇ ಮೂರು ಹೊಸ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಉತ್ತಮ ಸೇವೆ ನೀಡುವುದು ಕಂಪನಿಯ ಮುಖ್ಯ ಉದ್ದೇಶವಾಗಿದೆ.