ಮೇಕರ್ ಫೇರ್‌ನಲ್ಲಿ ಬೆಂಗಳೂರನ್ನು ಪ್ರತಿನಿಧಿಸುತ್ತಿರುವ ೮ ಮೇಕರ್ಸ್ 

0

ನವಂಬರ್ ೧೭ , ೨೦೧೭ ಬೆಳಿಗ್ಗೆ ೯ ಗಂಟೆಗೆ ನಮ್ಮ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಮೇಕರ್ ಫೇರ್‌ಗೆ ಅಧಿಕೃತ ಚಾಲನೆ ಕೊಡುವದರ ಮೂಲಕ ಉದ್ಘಾಟನೆ ಮಾಡಿದರು. ಈ ವರ್ಷದ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ಈ ಸಮಾರಂಭವು ಚಿಕ್ಕ ಪುಟ್ಟ ಕುಶಲಕರ್ಮಿಗಳಿಂದ ಉನ್ನತ ಮಟ್ಟದ ಉದ್ಯಮಗಳಿಗೂ ಕೂಡ ಸದಾವಕಾಶದ ಭಂಡಾರವಾಗಿದೆ ಎಂದರೆ ಸುಳ್ಳಾಗಲಾರದು.


ಈ ಮೇಳದ "ಐಡಿಯೇಟ್, ಇನ್ನೋವೇಟ್ ಮತ್ತು ಇನ್ವೆಂಟ್" ಎಂಬ ಅಂಶಗಳನ್ನು ಬೆಂಬಲಿಸುತ್ತ ಬೆಂಗಳೂರಿನ ಮೇಕರ್ ಫೇರ್ ಟೀಮ್ ರಾಜ್ಯಾದ್ಯಂತ ೧೨ ರೋಡ್ ಶೋಗಳನ್ನು ಹಮ್ಮಿಕೊಂಡಿತ್ತು.

ಈ ಮೇಕರ್ ಫೇರ್‌ನಲ್ಲಿ ಯಾವದೇ ವಯಸ್ಸಿನ ನಿರ್ಬಂಧವಿಲ್ಲದೇ ೯ ರಿಂದ ೬೦ ವರ್ಷದವರೆಲ್ಲ ಭಗವಹಿಸುತ್ತಿದ್ದಾರೆ. ಈ ಫೇರ್‌ನ ಮುಖ್ಯ ಉದ್ದೇಶವೆಂದರೆ ಎಲ್ಲ ತರಹದ ಹವ್ಯಾಸಿಗಳು, ಕುಶಲಕರ್ಮಿಗಳಿಗೆ ಉತ್ತೇಜನ ಕೊಡುವದು ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುವದು. ಇಲ್ಲಿ ನಿಮಗೆ ಅನೇಕ ತರಹದ ಪ್ರಯೋಗಶೀಲರು, ಸಣ್ಣ-ದೊಡ್ಡ ಉದ್ಯಮಿಗಳು, ’ಕ್ರೇಜಿ’ ಎನ್ನಿಸಬಹುದಾದ ವಿಜ್ಞಾನಿಗಳು ಕೂಡ ಸಿಗುವರು.

ಈ ಫೇರ್‌ನ ಪ್ರಾಯೋಜಕರಾದ ಕಾರ್ನರ್‌ಸ್ಟೋನ್ ಪ್ರಾಪರ್ಟೀಸ್‌ನ

ನಿರ್ದೇಶಕರಾದ ಅಕ್ಷಯ್ ರೆಡ್ಡಿಯವರು "ನಮ್ಮೆಲ್ಲರಲ್ಲೂ ಒಂದಲ್ಲಾ ಒಂದು ಹವ್ಯಾಸ ಇದ್ದೇ ಇರುತ್ತದೆ, ಇಂತಹ ಅವಕಾಶಗಳನ್ನು ಬಳಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು" ಎಂದು ಅಭಿಪ್ರಾಯಪಟ್ಟರು.

ಈ ಫೇರ್‌ನಲ್ಲಿ ಭಾಗವಹಿಸುತ್ತಿರುವ ಕೆಲವು ಮೇಕರ್ಸ್ ಬಗ್ಗೆ ಓದಿ ನೋಡೋಣ ಬನ್ನಿ :

1. ಬೆಳಗಾವಿಯ ಸ್ಪಾಟರ್ ಸೈಕಲ್‌ಗಳು :

ಗಟ್ಟಿಮುಟ್ಟಾದ, ಟರ್ಮೈಟ್ ಪ್ರೂಫ್, ಜಲನಿರೋಧಕ ಮತ್ತು ದೀರ್ಘಕಾಲ ಬಾಳಿಕೆ ಬರುವ ಈ ಸೈಕಲ್‌ಗಳನ್ನು ಬಿದಿರಿನಿಂದ ಮಾಡಲಾಗಿದೆ.

"ಸೈಕಲ್‌ಗಳು ಕಾಲಕ್ಕೆ ತಕ್ಕಂತೆ ಸ್ಟೈಲಿಶ್ ಕೂಡ ಆಗಿದ್ದು, ಇದರಲ್ಲಿರುವ ಬಿದಿರು ವಾತವರಣದಲ್ಲಿನ ಕಾರ್ಬನ್ ಅಂಶವನ್ನು ಹೀರಿಕೊಂಡು ಗ್ಲೋಬಲ್ ವಾರ್ಮಿಂಗನ್ನು ಕೂಡ ಕಡಿಮೆಗೊಳಿಸಲು ಸಹಾಯ ಮಾಡುತ್ತವೆ"

2. ಸ್ವಯಂಚಾಲಿತ ಫೈರ್ ಎಕ್ಸ್ಟಿಂಗ್ವಿಶರ್

ಚೆಂಡಿನಾಕರದ ಈ ಫೈರ್ ಎಕ್ಸ್ಟಿಂಗ್ವಿಶರ್‌ನ್ನು ಬೆಂಕಿ ಹತ್ತಿರುವ ಇರುವ ಸ್ಥಳಕ್ಕೆ ಎಸೆದರೆ ಸಾಕು ೩ ಸೆಕೆಂಡುಗಳಲ್ಲಿ ತನ್ನಷ್ಟಕ್ಕೆ ತಾನೆ ಚಾಲನೆಗೊಂಡು ಬೆಂಕಿ ಆರಿಸುವದು. ಇದು ಇರುವಲ್ಲಿ ಬೆಂಕಿ ಹತ್ತಿಕೊಂದರೆ ಸ್ವಯಂಚಾಲನೆಗೊಂಡು ಅಲರಾಂ ಶಬ್ದ ಹೊರಹೊಮ್ಮಿಸುತ್ತದೆ.

3. ಸ್ವಯಂಚಾಲಿತ ಕ್ವಾಡ್‌ಕಾಪ್ಟರ್ ಮತ್ತು ಫ್ಲೈಟ್ ಕಂಟ್ರೋಲರ್

ಧಾರವಾಡ್‌ನಿಂದ ಬಂದಿರುವ ತಂಡವು ಕ್ಯಾಮೆರ ಇರುವ ಸ್ವಯಂಚಾಲಿತ ಕ್ವಾಡ್‌ಕಾಪ್ಟರ್‌ನ ವಿನ್ಯಾಸ ಮಾಡಿದ್ದಾರೆ. ಆರ್ಡಿನೋ ಬೇಸ್ಡ್ ಮತ್ತು ಆರ್ಮ್ ಬೇಸ್ಡ್ ಫ್ಲೈಟ್ ಕಂಟ್ರೊಲರ್‌ನ ವಿನ್ಯಾಸದಲ್ಲಿ ಕೂಡ ತೊಡಗಿದ್ದಾರೆ.

4. ರಿಮೋಟ್ ಕಂಟ್ರೋಲ್ಡ್ ಕೀಟನಾಶಕ ಸಿಂಪಡಿಸುವ ಯಂತ್ರ

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತನ ಆರೋಗ್ಯವನ್ನು ಕಾಪಾಡಲು ರಿಮೋಟ್ ಕಂಟ್ರೋಲ್ಡ್ ಕೀಟನಾಶಕ ಸಿಂಪಡಿಸುವ ಯಂತ್ರವನ್ನು ತಯಾರಿಸಿದ್ದಾರೆ.

ರಿಮೋಟ್ ಕಂಟ್ರೋಲ್ಡ್ ಡ್ರೋನ್ ಸ್ಪ್ರೇಯರಿನ ವಿನ್ಯಾಸ ಕೂಡ ಮಾಡಿದ್ದಾರೆ.

5. ಬೆಂಗಳೂರಿನ ಪ್ರಾಂಜಲ್ ಜೈನ್ ಮತ್ತು ಗೌತಮ್ ನಾಯಕ್

ಸ್ಪೇಸ್ ಸಾಂಡ್ ಆರ್ಟ್ ಮಾಡಿರುವ ಇವರು, ಅಂತರಿಕ್ಷದಲ್ಲಿರುವಾಗ ಗಗನಯಾತ್ರಿಗಳ ವಿವಿಧ ಚಿತ್ತಗಳ ಪ್ರದರ್ಶನವನ್ನು ತುಂಬಾ ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ.

6. ಗುರುಗ್ರಾಮದ ಮಯಾಂಕ್ ಗುಪ್ತ

ಇವರು ಆಕರ್ಷಕವಾದ ಮನುಷ್ಯರೂಪದ ರೋಬೋಟ್‌ನ್ನು ವಿನ್ಯಾಸಿಸಿದ್ದಾರೆ.

7. ಕೇರಳದ ಮ್ಯಾಥ್ಯುವ್ಸ್ ಪುಥುಸ್ಸೇರಿಲ್

೮ ವರ್ಷದ ಈ ಎಳೆಯ ಬಾಲಕ ತೆಂಗಿನ ಮರದ ಎಲೆಗಳಿಂದ ತಯಾರಿಸಿದ ಆಟಿಕೆಗಳ ಪ್ರದರ್ಶನವನ್ನಿಟ್ಟಿದ್ದಾನೆ.

8. ಸಂಜಯ: ಕಾಗದದಿಂದ ತಯಾರಿಸಿದ ವಿನ್ಯಾಸಗಳು ಮತ್ತು ರೋಬೊಟ್

ಕೇವಲ ಕಾಗದವನ್ನು ಉಪಯೋಗಿಸಿ ಸಂಜಯ ತಯಾರಿಸಿದ ವಿನ್ಯಾಸಗಳು ಮತ್ತು ರೋಬೊಟ್ ಅತ್ಯಂತ ಆಕರ್ಷಕವಾಗಿವೆ.

ಹೆಚ್ಚಿನ ಮಾಹಿತಿಗಾಗಿ "ವರ್ಕ್‌ಬೆಂಚ್‌ಪ್ರೊಜೆಕ್ಟ್ಸ್.ಕಾಮ್" ಗೆ ಭೇಟಿ ನೀಡಿ.