ವಡೋದರಾದಲ್ಲಿ ಸಿಬ್ಬಂದಿ ಸಾರಿಗೆಯನ್ನುಸುಗಮಗೊಳಿಸಲು ಮೂವ್​​​ ಇನ್​​​ ಸಿಂಕ್​​​ನ ಸೇವೆಗಳು ಆರಂಭ

ಟೀಮ್​​ ವೈ.ಎಸ್​​. ಕನ್ನಡ

0

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೂವ್ ಇನ್ ಸಿಂಕ್ ಸಂಸ್ಥೆಯು ತನ್ನ ಸಿಬ್ಬಂದಿ ಸಾರಿಗೆ ಸೇವೆಯನ್ನು ಗುಜರಾತ್ ನ ವಡೋದರಾದಲ್ಲಿ ಆರಂಭಿಸಲಿದೆ ಎಂದು ಘೋಷಿಸಿದೆ.

“ನೂರು ಸ್ಮಾರ್ಟ್ ಸಿಟಿಗಳಲ್ಲಿ ಒಂದು ಎಂದು ಘೋಷಣೆಯಾಗಿರುವ ವಡೋದರಾದಲ್ಲಿ ನಾವು ನಮ್ಮ ಸಾರಿಗೆ ಸೇವೆಯನ್ನು ಆರಂಭಿಸುತ್ತಿದ್ದೇವೆ ಎಂದು ಹೇಳಲು ಹರ್ಷಿಸುತ್ತೇವೆ. ಸರ್ಕಾರ ಮತ್ತು ವಡೋದರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಸಹಕಾರದಿಂದ, ವಡೋದರಾ ಭವಿಷ್ಯದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ನಗರಿಯಾಗಿ ಪರಿವರ್ತನೆಹೊಂದಲಿದೆ” ಎಂದು ಮೂವ್ ಇನ್ ಸಿಂಕ್ ನ ಸಹ-ಸ್ಥಾಪಕರಾದ ದೀಪೇಶ್ ಅಗರ್ವಾಲ್ ಹೇಳಿದರು.

“ನಮ್ಮ ಪುಣೆಯ ಗ್ರಾಹಕರೊಬ್ಬರು ವಡೋದರಾ ಹಾಗೂ ಅದರ ಸುತ್ತಮುತ್ತ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿ ನಮ್ಮ ಸೇವೆಯನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು. ಹೀಗಾಗಿ, ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ಅಗರ್ವಾಲ್ ಹೇಳಿದರು. ಹಾಗೆಯೇ, ಕಂಪನಿಯು ಪ್ರಸ್ತುತ 15 ನಗರಗಳಲ್ಲಿ ತನ್ನ ಸೇವೆಯನ್ನು ಹೊಂದಿದೆ ಎಂದು ತಿಳಿಸಿದರು.

ಗೂಗಲ್, ಮೈಕ್ರೋಸಾಫ್ಟ್, ಎಚ್ ಎಸ್ ಬಿ ಸಿ, ಅಡೋಬಿ, ಒರಾಕಲ್ ಹಾಗೂ ವಿಪ್ರೋದಂತಹ ಕಂಪನಿಗಳಿಗೆ ಮೂವ್ ಇನ್ ಸಿಂಕ್ ತನ್ನ ಸೇವೆಯನ್ನು ಒದಗಿಸುತ್ತಿದೆ. ಅಗರ್ವಾಲ್ ಅವರ ಪ್ರಕಾರ, ಅವರ ಸೇವೆಯನ್ನು ಬಳಸಿದರೆ, ಸಿಬ್ಬಂದಿಯ ಒಟ್ಟು ಪ್ರಯಾಣದ ಐದನೇ ಒಂದು ಭಾಗದಷ್ಟು ಸಮಯವನ್ನು ಉಳಿಸಬಹುದು. ಈ ಸಮಯವನ್ನು ಕಚೇರಿಯ ಕೆಲಸಕ್ಕಾಗಿ ಬಳಸಬಹುದು.

“ಈ ತಂತ್ರಜ್ಞಾನವನ್ನು ಬಳಸಿದ ಬಳಿಕ, ಕಂಪನಿಯ ಗ್ರಾಹಕ ಸಂಸ್ಥೆಯೊಂದು ಶೇ. 27 ರಿಂದ 28 ರಷ್ಟು ಉಳಿತಾಯವನ್ನು ಸಾಧಿಸಿದೆ” ಎಂದು ಅವರು ಮಾಹಿತಿ ನೀಡಿದರು. ಪ್ರಸ್ತುತ, ಕಂಪನಿಯು ತನ್ನ 10 ಸಾವಿರ ಕ್ಯಾಬ್ ಗಳ ಮೂಲಕ 1 ಲಕ್ಷ ಸಿಬ್ಬಂದಿಗೆ ಸೇವೆಯನ್ನು ಒದಗಿಸುತ್ತಿದೆ.

ಅನುವಾದಕರು: ಸುಘೋಷ್​​​

Related Stories