ಕ್ಲಿಕ್ ಮಾಡಿ ಸ್ಟಿಚ್ ಮಾಡ್ಸಿ ..!

ಪೂರ್ವಿಕಾ

0

ಈಗಿನ ಬ್ಯೂಸಿ ಲೈಫ್ ನಲ್ಲಿ ಫ್ರೀ ಮಾಡಿಕೊಂಡು ಶಾಪಿಂಗ್ ಮಾಡಿ ಬಟ್ಟೆ ತಂದ್ರು ಕೂಡ ಫೈನಲೀ ಫಿಟ್ಟಿಂಗ್ ಪ್ರಾಬ್ಲಂ. ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳೊದು ಹೆಣ್ಣು ಮಕ್ಕಳಿಗೆ ಹೆಚ್ಚು. ಇನ್ನೂ ನಾವೇ ಸ್ಟಿಚ್ ಮಾಡಿಸಿ ಕೊಳ್ಳೋಣ ಅಂದ್ರೆ ಟೈಲರ್‍ ಅನ್ನ ಹುಡುಕಿಕೊಂಡು ಹೋಗೋಕೆ ಸಮಯ ಇರಲ್ಲ. ಇನ್ನೂ ಆನ್​​​ಲೈನ್‍ನಲ್ಲಿ ಬಟ್ಟೆ ತರಿಸಿಕೊಂಡರಂತೂ ಕತೆ ಮುಗಿದೇ ಹೋಯ್ತು. ಇಂತಹ ಸಮಸ್ಯೆಗಳಿಗೆಲ್ಲ ಫುಲ್ ಸ್ಟಾಪ್‍ ಇಡೋದಕ್ಕೆ ಅಂತಾನೆ ಹುಟ್ಟಿಕೊಂಡಿದೆ ಅರ್ಬನ್‍ಟೈಲರ್.

ಫೇಸ್ ಬುಕ್ ನಲ್ಲಿ ರಿಜಿಸ್ಟರ್ ಮಾಡಿದ್ರೆ ಸಾಕು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಬಟ್ಟೆ ಹಾಗೂ ಅಳತೆಯನ್ನ ತೆಗೆದುಕೊಂಡು ಹೋಗಿ ಬಟ್ಟೆಯನ್ನ ಹೊಲಿದುಕೊಂಡು ತಂದುಕೊಡುತ್ತಾರೆ. ಸುಮಾರು ಆರು ತಿಂಗಳ ಹಿಂದೆಯಿಂದ ಪ್ರಾರಂಭವಾಗಿರೋ ಅರ್ಬನ್‍ಟೈಲರ್‍ಗ್ರೂಪ್​​​ನಲ್ಲಿ ಸದ್ಯ20ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ನುರಿತ ಟೈಲರ್ಸ್ ಹಾಗೂ ಪಕ್ಕಾ ಪ್ರೋಫೆಷನಲ್‍ ಟೈಲರ್ಸ್ ಕೆಲಸ ಮಾಡ್ತಿದ್ದಾರೆ.

ಫೇಸ್ ಬುಕ್‍ ಅಥವಾ ವೆಬ್​​​ಸೈಟ್​​ನಿಂದಾನೂ ನೀವು ನಿಮ್ಮಆರ್ಡರ್‍ ಅನ್ನು ಬುಕ್ ಮಾಡಬಹುದು. ಅರ್ಬನ್​​​ ಟೈಲರ್.ಇನ್‍(urbantailor.in) ಅನ್ನೋ ವೆಬ್ ಸೈಟ್ ಗೆ ಒಮ್ಮೆಎಂಟ್ರ್ರಿಕೊಟ್ರೆ ಆಯ್ತು.. ಅಲ್ಲಿ ನಿಮಗೆ ಬೇಕಾದ ಎಲ್ಲಾ ಮಾಹಿತಿ ಮತ್ತು ಡಿಸೈನ್ಸ್​​ನ ಕಲೆಕ್ಷನ್ಸ್ ಸಿಗುತ್ತೆ. ಮಹಿಳೆಯರಿಗೆ ಅಂತಾನೆ ಇರೋ ಈ ವೆಬ್​​ಸೈಟ್​​ ನಲ್ಲಿ ಕುರ್ತಾ,ಚೂಡಿದಾರ್ ಪ್ಯಾಂಟ್ಸ್ ,ಬ್ಲೌಸ್ ,ಚೂಡಿದಾರ್ ಸೆಟ್‍ ಅನ್ನ ಹೊಲಿದುಕೊಡಲಾಗುತ್ತೆ. 400 ರೂಪಾಯಿಯಿಂದ ಪ್ರಾರಂಭವಾಗೋ ಬೆಲೆ ಡಿಸೈನ್ಸ್ ಮೇಲೆ ಬೆಲೆ ನಿಗದಿ ಆಗುತ್ತೆ. ಒಂದೊಂದು ಬಟ್ಟೆಗೂ ಒಂದೊಂದು ಬೆಲೆ ಇದೆ..ಅರ್ಬನ್‍ಟೈಲರ್ ಗೆ ಲಾಗ್‍ಇನ್‍ಆದ ನಂತ್ರ ಯಾವ ಬಟ್ಟೆ ಹೊಲಿಸಬೇಕು ಅನ್ನೋದನ್ನ ಸೆಲೆಕ್ಟ್ ಮಾಡಿಕೊಳ್ಳಬೇಕು ಅದಾದ ನಂತ್ರ ಬಟ್ಟೆಗೆ ಅಗತ್ಯವಿರೋ ಡಿಸೈನ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಇಲ್ಲಿ ನಿಮ್ಮ ಸ್ವಂತ ಡಿಸೈನ್ ಗೂ ಅವಕಾಶವಿರುತ್ತೆ. ನಿಮ್ಮದೇ ಆದ ಡಿಸೈನ್‍ ಇತ್ತು ಅಂದ್ರೆ ಅದನ್ನ ಸೆಲೆಕ್ಟ್ ಮಾಡಿಕೊಳ್ಳಬಹುದು.

ಇನ್ನೂ ಬ್ಯಾಕ್‍ಟೈಯಿಂಗ್ ,ಸ್ಲೀವ್ ಡಿಸೈನ್ಸ್ ಗೆ ಹೆಚ್ಚುವರಿ ಶುಲ್ಕವನ್ನಚಾರ್ಜ್ ಮಾಡಲಾಗುತ್ತೆ. ಇವುಗಳ ಜೊತೆಯಲ್ಲಿ ಸಾರಿ ಫಾಲ್ಸ್​​​ ಕೂಡ ಮಾಡಿಕೊಡಲಾಗುತ್ತೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್​​ಲೈನ್​​ನಲ್ಲಿ ಲಭ್ಯ ಅನ್ನೋದಕ್ಕೆ ಇದೂ ಕೂಡ ಒಂದು ಉತ್ತಮ ಉದಾಹರಣೆ. ಇನ್ನೂ ನಿಮ್ಮಿಂದ ಬಟ್ಟೆ ಹಾಗೂ ಅಳತೆ ಪಡೆದುಕೊಂಡು ಹೋದ ಹತ್ತು ದಿನಗಳಲ್ಲಿ ನಿಮ್ಮ ಬಟ್ಟೆ ನಿಮ್ಮ ಮನೆ ಬಾಗಿಲಿಗೆ ಬಂದುತಲುಪುತ್ತೆ. ಸುಮಾರು ಆರು ತಿಂಗಳಿಂದ ಈ ಕೆಲಸ ಮಾಡುತ್ತಾ ಬಂದಿರೋ ವಸುದೇವ್‍ ಅಂಡ್​​ ಟೀಮ್​​​ನಲ್ಲಿ ಲಾವಣ್ಯ ಹಾಗೂ ಅನೀಶ್‍ ಅನ್ನೋ ಇಬ್ಬರು ಸ್ನೇಹಿತರು ಕೂಡ ಜೊತೆಯಲ್ಲಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮಾತ್ರ ಸರ್ವೀಸ್​​​ ನೀಡೋ ಅರ್ಬನ್‍ ಟೈಲರ್ಸ್‍ ಕೆಲವೇ ದಿನಗಳಲ್ಲಿ ತಮ್ಮ ವ್ಯಾಪಾರವನ್ನ ರಾಜ್ಯದಾಧ್ಯಂತ ವಿಸ್ತರಿಸಲು ಮುಂದಾಗಿದ್ದಾರೆ.

ಇಲ್ಲಿತನಕ ಸಾಕಷ್ಟು ಕಸ್ಟಮರ್ಸ್ ಅರ್ಬನ್‍ಟೈಲರ್​​ನಲ್ಲಿ ಆರ್ಡರ್ ಬುಕ್ ಮಾಡಿ ಸ್ಟಿಚ್ ಮಾಡಿಸಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳನ್ನೇ ಟಾರ್ಗೆಟ್‍ ಇಟ್ಟುಕೊಂಡಿರೋ ಅರ್ಬನ್‍ಟೈಲರ್‍ ಒಂದು ದಿನದಲ್ಲಿ 20 ಸಾವಿರಆರ್ಡರ್ ಪಡೆಯೋ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ಮಿಂತ್ರಾ.ಕಾಂ ನಲ್ಲಿ ಕೆಲಸ ಮಾಡುತ್ತಿದ್ದ ವಸುದೇವ್‍ ತಮ್ಮದೇ ಆದ ಹೊಸದೊಂದು ಬ್ಯುಸಿನೆಸ್ ಮಾಡ್ಬೇಕು ಅಂತ ಈ ಹೊಸ ಯೋಜನೆಯನ್ನ ಸ್ಟಾರ್ಟ್ ಮಾಡಿದ್ದಾರೆ. 6 ತಿಂಗಳಲ್ಲೇ ಸಖತ್​​ ರೆಸ್ಫಾನ್ಸ್ ಸಿಕ್ಕಿರೋ ಅರ್ಬನ್‍ಟೈಲರ್‍ ಕೆಲವೇ ದಿನಗಳಲ್ಲಿ ಮತ್ತಷ್ಟು ಫೇಮಸ್‍ ಆಗೋದ್ರಲ್ಲಿ ಸಂದೇಹವೇ ಇಲ್ಲ.

Related Stories