ಅಭಿರುಚಿಗಳನ್ನ ಹಂಚಿಕೊಳ್ಳುತ್ತಾ ಸಂಬಂಧ ಬೆಸೆಯುವ ಅಫಿಮಿಟಿ ಸೋಶಿಯಲ್ ನೆಟ್ ವರ್ಕ್..

ಟೀಮ್​ ವೈ.ಎಸ್​. ಕನ್ನಡ

ಅಭಿರುಚಿಗಳನ್ನ ಹಂಚಿಕೊಳ್ಳುತ್ತಾ ಸಂಬಂಧ ಬೆಸೆಯುವ ಅಫಿಮಿಟಿ ಸೋಶಿಯಲ್ ನೆಟ್ ವರ್ಕ್..

Sunday February 21, 2016,

3 min Read

ನೆಟ್ ವರ್ಕಿಂಗ್ ಇತ್ತೀಚಿನ ದಿನಗಳಲ್ಲಿ ಮನೆಮಾತಾಗುತ್ತಿದೆ. ಅದ್ರಲ್ಲೂ ಸೋಷಿಯಲ್ ನೆಟ್ ವರ್ಕ್ ಗಳು ಜನರ ನಡುವೆ ಹುಟ್ಟಿಕೊಂಡು ಅವರಿಂದಲೇ ಬೆಳೆಯುತ್ತಾ ಇದೀಗ ಗ್ರೂಪ್ ಕಮ್ಯುನಿಕೇಶನ್ ಆಗಿ ಬೆಳೆಯುತ್ತಿದೆ. ಈ ಮೂಲಕ ಜನರು ತಮ್ಮ ಹತ್ತಿರದವರ ಹಾಗೂ ತಾವು ಬಯಸಿದವರ ಇಚ್ಛೆಗಳು, ಅವರ ಹವ್ಯಾಸಗಳ ಜೊತೆಗೆ ಅವರೊಂದಿಗೆ ಭಾವನಾತ್ಮಕ ಸಂಬಂಧಗಳನ್ನ ಬೆಳೆಸಿಕೊಳ್ಳಲು ಈ ಸೋಷಿಯಲ್ ನೆಟ್ ವರ್ಕ್ ಗಳಿಂದ ಸಾಧ್ಯವಾಗುತ್ತಿದೆ. ಇಂತಹ ಗ್ರೂಪ್ ಗಳ ಸಾಲಿಗೆ ಬೆಂಗಳೂರು ಮೂಲದ ಅಫಿಮಿಟಿ ಮೊಬೈಲ್ ಆಪ್ ಸೇರಿಕೊಂಡಿದೆ. ಈ ಮೊಬೈಲ್ ಪ್ಲಾಟ್ ಫಾರ್ಮ್ ನಿಂದಾಗಿ ಒಂದೇ ರೀತಿ ಅಭಿರುಚಿ ಉಳ್ಳವರು, ಒಂದೇ ರೀತಿ ಅಭಿಪ್ರಾಯ ಇದ್ದವರು ಒಂದೆಡೆ ಸೇರುವಂತಾಗಿದೆ. ಅಲ್ಲದೆ ಇಲ್ಲಿ ಅರ್ಥಪೂರ್ಣ ಸಂಭಾಷಣೆಗಳಿಗೆ ಆದ್ಯತೆ ನೀಡುತ್ತಿರುವುದು ವಿಶೇಷ.

“ ಇಂದಿನ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಪ್ರಮುಖವಾಗಿರುವ ಫೇಸ್ ಬುಕ್, ಟ್ವಿಟ್ಟರ್ ಗಳು ಫ್ರೆಂಡ್ಸ್ ಮೇಕಿಂಗ್ ಹಾಗೂ ಫಾಲೋವರ್ ಗಳನ್ನ ಹೊಂದಿರುವುದು ಪ್ರಮುಖ ಹೈಲೈಟ್ಸ್ . ಅಲ್ಲದೆ ಇವುಗಳ ಸರ್ಕಲ್ ಇಲ್ಲಿರುವ ವ್ಯಕ್ತಿಗಳು ಪರಸ್ಪರ ಆಸಕ್ತಿಗಳು ಹಾಗೂ ಇಚ್ಛೆಗಳ ಮೂಲಕ ಹತ್ತಿರವಾಗಿರುತ್ತಾರೆ. ” ಪ್ರವೀಣ್ ಮಿತ್ತಲ್, ಅಫಿಮಿಟಿ ಸಂಸ್ಥಾಪಕ ಹಾಗೂ ಸಿಇಒ

ಅಫಿಮಿಟಿ ಗ್ರೂಪ್ ಚಾಟ್ ನಲ್ಲಿ ಪ್ರಸ್ತುತ ಸಂಬಂಧಗಳು, ಫುಡ್ ಬ್ಲಾಗರ್ಸ್ ಗಳು, ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಪುಸ್ತಕದ ಬರಹಗಳು, ಮೂಸಿಕ್ ಕವರ್ ಆರ್ಟಿಸ್ಟ್ ಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. ಇನ್ನು ಅಫಿಮಿಟಿಯಂತಹ ಗ್ರೂಪ್ ಕಮ್ಯುನಿಕೇಶನ್ ಸಿಸ್ಟಮ್ ಆರಂಭಿಸುವ ಕನಸನ್ನ ಬೆಳೆಸಿದ್ದು ಬೆಂಗಳೂರು ವೆಂಕಟರಮಣ..

ಸಂಭಾಷಣೆಯ ಮೂಲಕ್ಕೇ ಹೊಸ ರೂಪ..

ವೆಂಕಟರಮಣ ಎಂಬುವವರು ಒಂದು ಉಪಯುಕ್ತ ಮಾಹಿತಿಗಳನ್ನ ನೀಡಲು ಸಾಧ್ಯವಾಗುವಂತಹ ಗ್ರೂಪ್ ನ ನಿರೀಕ್ಷೆಯಲ್ಲಿದ್ರು. ಆದ್ರೆ ಅವರ ಲೆಕ್ಕಾಚಾರಗಳನ್ನ ಆಗಲೇ ಫೇಸ್ ಬುಕ್ ತಲುಪುವ ಮೂಲಕ ಜನರಿಗೆ ಸಾಕಷ್ಟು ಹತ್ತಿರವಾಗಿತ್ತು. ಆದ್ರೆ ಫೇಸ್ ಬುಕ್ ನಲ್ಲಿರುವ ಪ್ರೈವೆಟ್ ಪಾಲಿಸಿಗಳು ಹಾಗೂ ಕೆಲವು ಸೂಚನೆಗಳು ಬಳಕೆದಾರರ ದಿಕ್ಕು ತಪ್ಪಿಸುವಂತದ್ದು ಅನ್ನೋದನ್ನ ವೆಂಕಟ್ ಅರಿತುಕೊಂಡ್ರು. ಅಲ್ಲದೆ ಇದ್ರ ಬಗ್ಗೆ ತಮ್ಮ ಕೆಲವು ಗೆಳೆಯರೊಂದಿಗೆ ಚರ್ಚೆಯನ್ನೂನಡೆಸಿದ್ರು. ಅವರಲ್ಲಿ ಹಲವು ಮಂದಿ ಅಸಮಧಾನ ಹೊಂದಿದ್ದು ಇತರೆ ಕ್ಷೇತ್ರಗಳಾದ ಸ್ಪೋರ್ಟ್ಸ್, ಟೆಕ್ನಾಲಜಿ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸಾಹ ಹೊಂದಿರುವದನ್ನ ಅವರು ಗುರುತಿಸಿದ್ರು.

image


ಬಳಕೆದಾರರ ಆಶೋತ್ತರ ಹಾಗೂ ಲಭ್ಯವಿರುವ ಅವಕಾಶಗಳ ನಡುವೆ ಇದ್ದ ಅಂತರವನ್ನ ಬಳಸಿಕೊಳ್ಳಲು ವೆಂಕಟರಮಣ ಅವರು ಯೋಚಿಸಿದ್ರು. ಅಲ್ಲದೆ ಇದ್ರ ಬಗ್ಗೆ ಅಮರ್ ಜೆ ಹಾಗೂ ಪ್ರವೀಮ್ ಜೊತೆಗೂ ಸಾಕಷ್ಟು ಬಾರಿ ಚರ್ಚಿಸಿದ್ರು. ಅಲ್ಲದೆ ನೆಟ್ ವರ್ಕಿಂಗ್ ನಲ್ಲಿ ಇರುವ ಲಿಮಿಟೆಡ್ ನೆಟ್ ವರ್ಕಿಂಗ್ ಬಗ್ಗೆ ಅಭ್ಯಾಸ ನಡೆಸಿದ್ರು. ಅಲ್ಲದೆ ಲಭ್ಯವಿರೋ ಸೋಷಿಯಲ್ ನೆಟ್ ವರ್ಕ್ ಗಳಿಗೆ ಪರ್ಯಾಯವಾಗಿ ಮತ್ತೊಂದು ವೇದಿಕೆಯನ್ನ ಸೃಷ್ಠಿಸಲು ತಕ್ಷಣವೇ ಕಾರ್ಯಪ್ರವೃತ್ತರಾದ್ರು. ಚೆನ್ನೈನ ಐಐಟಿ ಹಾಗೂ ಸ್ಟಾನ್ಫೋರ್ಡ್ ಅಲ್ಯುಮ್ಸ್ ಕಂಪನಿಗಳನ್ನ ಸಂಪರ್ಕಿಸಿದ್ರು. ಅಲ್ಲದೆ ಡಾಟಾ ರಿಕವರಿಗಳ ಬಗ್ಗೆ ಟೆಕ್ನಿಕ್ ಗಳನ್ನ ಅರಿತುಕೊಂಡ್ರು. ಮತ್ತೊಂದೆಡೆ ಪ್ರವೀಣ್ ಐಐಟಿ ಬಾಂಬೇ ಹಾಗೂ ಐಐಎಮ್ –ಎ ಗಳನ್ನ ಸಂಪರ್ಕಿಸಿದ್ರು. ಅಲ್ಲಿ ಐಟಿ ಆಪರೇಟೀವ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ರು. ಇದರೊಂದಿಗೆ ಅಫಿಮಿಟಿ ಬೆಳೆಯಲು ವೇದಿಕೆ ಸಜ್ಜಾಯ್ತು.

ಕೇವಲ ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಅಲ್ಲ..

ಅಫಿಮಿಟಿ ಕೇವಲ ಇದೊಂದು ಸೋಷಿಯಲ್ ನೆಟ್ ವರ್ಕ್ ಸೈಟ್ ಅಲ್ಲ. ಬದಲಾಗಿ ಆನ್ ಲೈನ್ ನಲ್ಲಿ ಅದ್ಭುತ ಅನುಭಗಳನ್ನ ತಂದುಕೊಡಬಲ್ಲ ನೆಟ್ ವರ್ಕ್. ಇನ್ನು ಈ ನೆಟ್ ವರ್ಕ್ ಬದುಕು ಹಾಗೂ ವಾಸ್ತವದಲ್ಲಿನ ಅನುಭೂತಿಯನ್ನ ಪಡೆಯಲು ಸಹಕಾರ ನೀಡುವಂತಿದೆ. ಅಲ್ಲದೆ ನಮ್ಮ ಪ್ಯಾಶನ್, ಪ್ರೈವಸಿ ಗಳನ್ನ ತಿಳಿದುಕೊಳ್ಳಲು ಇದು ನೆರವು ನೀಡುತ್ತದೆ ಅಂತಾರೆ ಪ್ರವೀಣ್ .. ಅತ್ಯುತ್ತಮವಾದ ಕನೆಕ್ಟಿವಿಟಿ ಹಾಗೂ ಪ್ಯಾಶನ್ ಗಳ ಆಳವಾದ ಅರಿತುಕೊಳ್ಳುವಿಕೆಗೆ ಇದು ಹತ್ತಿರವಾಗಿದೆ.

ಮೂಲ ಮತ್ತು ಭವಿಷ್ಯ..

ಅಫಿಮಿಟಿ ಆಪ್ ಲಾಂಚ್ ಆದ ಆರು ತಿಂಗಳಿನಲ್ಲೇ ಸಾವಿರಾರು ಮಂದಿ ಈ ಆಪನ್ನ ಡೌನ್ ಲೌಡ್ ಮಾಡಿದ್ದಾರೆ. ಅಲ್ಲದೆ ವೆಬ್ ಸೈಟ್ ನ ಒಟ್ಟು ಸ್ಥಳಾವಕಾಶದಲ್ಲಿ ಶೇಕಡಾ ಹತ್ತರಷ್ಟನ್ನ ಬಳಕೆದಾರರಿಗಾಗೇ ಮೀಸಲಿಟ್ಟಿದೆ. ಇನ್ನು ಅಫಿಮಿಟಿಯನ್ನ ಬಳಸುತ್ತಿರುವ ಅರ್ಧದಷ್ಟು ಜನ ಭಾರತ ಹಾಗೂ ಅಮೆರಿಕಾದಲ್ಲಿ ಕೇಂದ್ರಕೃತವಾಗಿದ್ರೆ ಉಳಿದ ಗ್ರಾಹಕರು ಜಗತ್ತಿನ ವಿವಿಧ ಭಾಗಗಳಿಂದ ಚಂದಾದಾರರಾಗಿದ್ದಾರೆ. ಇನ್ನು ಈ ಸೈಟ್ ನಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಮಟ್ಟದ ಪೋಸ್ಟ್ ಗಳು, ಕಮೆಂಟ್ಸ್ ಗಳು ಹಾಗೂ ಫ್ರೆಂಡ್ ರಿಕ್ವೆಸ್ಟ್ ಗಳು ಬರುತ್ತಿರುವುದು ಗಮನಾರ್ಹ. ಇನ್ನು ಅಫಿಮಿಟಿಯಲ್ಲಿ ತಮ್ಮ ಅಭಿಪ್ರಾಯಗಳನ್ನ ಹಾಗೂ ಯೋಚನೆಗಳನ್ನ ಹಂಚಿಕೊಳ್ಳುವುದಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಸಿಕ್ಕಿದೆ.

ನೆಟ್ ವರ್ಕ್ ನ ಸುಧಾರಣೆ ಹಾಗೂ ನಿರ್ವಹಣೆಗಾಗಿ $ 1.2 ಮಿಲಿಯನ್ ನಷ್ಟು ಫಂಡ್ ಬಂದಿದ್ದು ಭಾರತದಲ್ಲಿ ಹಾಗೂ ಜಗತ್ತಿನ ಇತರೆಡೆಗೆ ಸರ್ವೀಸ್ ವಿಸ್ತರಿಸಲು ನಿರ್ಧರಿಸಲಾಗಿದೆ. ವಿಶೇಷ ಅಂದ್ರೆ ಇತರೆ ನೆಟ್ ವರ್ಕ್ ಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿರುವ ಅಫಿಮಿಟಿ ಈ ವರ್ಷದ 1.6 ಬಿಲಿಯನ್ ಬಳಕೆದಾರರನ್ನ ಹೊಂದುವ ಗುರಿಹೊಂದಿದ್ದು, 2017ಕ್ಕೆ ಇದರ ಟಾರ್ಗೆಟ್ 2.5 ಬಿಲಿಯನ್ ಅನ್ನೋದು ವಿಶೇಷ.

ಅನುವಾದ – ಸಿಂಧು ಕಶ್ಯಪ್

ಲೇಖನ – ಸ್ವಾತಿ ಉಜಿರೆ