ನಾರಿಯರ ದಿಲ್ ಕದ್ದ ‘ಬಸವ’ನ ಬುಟಿಕ್

ನಿನಾದ

ನಾರಿಯರ ದಿಲ್ ಕದ್ದ ‘ಬಸವ’ನ ಬುಟಿಕ್

Sunday April 17, 2016,

2 min Read

ಇತ್ತೀಚಿನ ದಿನಗಳಲ್ಲಿ ಹಳೇ ಕಾಲದ ವಸ್ತುಗಳು, ಆಭರಣಗಳು, ಕರಕುಶಲ ಕಲೆಗಳು ಮೂಲೆ ಸೇರುತ್ತಿವೆ ಅನ್ನೋ ಆರೋಪವಿದೆ.ಆದ್ರೆ ಬಸವನಗುಡಿಯಲ್ಲಿರುವ ಬಸವಾಂಬರಕ್ಕೆ ಹೋದ್ರೆ ಈ ಮಾತು ನಿಜಾನಾ ಅಂತಾ ಅನ್ನಿಸುತ್ತೆ. ಬಸವಾಂಬರದಲ್ಲಿ ಹಳೆಯ ಕಾಲದ ಆಭರಣಗಳಿಂದ ಹಿಡಿದು ಅಲಂಕಾರಿಕ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳು ಎಲ್ಲವೂ ಸಿಗುತ್ತೆ.

image


2009ರಲ್ಲಿ ನಿರ್ಮಾಣವಾಗಿರುವ ಬಸವಾಂಬರವನ್ನು ಅರವಿಂದ್ ಕಶ್ಯಪ್ ಹಾಗೂ ವೆಂಕಟ್ರಾಮ್ ರೆಡ್ಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಹಳೇ ಕಾಲದ ವಸ್ತುಗಳ ಸಂಗ್ರಹದಲ್ಲಿ ತೊಡಗಿರುವ ವೆಂಕಟ್ರಾಮ್ ರೆಡ್ಡಿ ತಾವು ಸಂಗ್ರಹಿಸಿರುವ ಅಪರೂಪವಾದ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ. ಇದರಿಂದಾಗಿ ಬಸವಾಂಬರದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಹೊಸ ಲೋಕಕ್ಕೆ ಹೋದ ಅನುಭವವಾಗುತ್ತದೆ.

image


ಇದನ್ನು ಓದಿ: ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ

ಅಂದ್ಹಾಗೆ ಬಸವ ಬುಟಿಕ್ ನಲ್ಲಿ ಸಿಗೋ ಎಲ್ಲಾ ವಸ್ತುಗಳು ಪಕ್ಕಾ ದೇಸೀ ಉತ್ಪನ್ನಗಳು.ಹಳೇ ಕಾಲದ ಚಿನ್ನ ಹಾಗೇ ಬೆಳ್ಳಿಯ ಒಡವೆಗಳು, ರೇಷ್ಮೇ , ಕೈಮಗ್ಗದ ಸಾರಿಗಳು, ಕಾಟನ್ ಡ್ರೆಸ್ ಮೆಟಿರಿಯಲ್ ಗಳು, ದುಪ್ಪಟಗಳು, ಟೆರ್ರಾಕೋಟಾ ಆಭರಣಗಳು ಹೀಗೆ ನಾರಿಯರ ಮನಗೆಲ್ಲೋ ಆಭರಣಗಳು ಬಸವ ಬುಟಿಕ್ ನಲ್ಲಿವೆ.

ಬಸವ ಬುಟಿಕ್ ನಲ್ಲಿ ಲಭ್ಯವಿರುವ ವಸ್ತುಗಳನ್ನು ವೆಂಕಟ್ರಾಮ್ ರೆಡ್ಡಿ ಹಾಗೂ ಅಲ್ಲಿನ ಸಿಬ್ಬಂದಿ ಅಷ್ಟೇ ಸುಂದರವಾಗಿ ಜೋಡಿಸಿಟ್ಟಿದ್ದಾರೆ. ಬಸವ ಬುಟಿಕ್ ನ ವಿನ್ಯಾಸ ಎಂತಹವರನ್ನು ಸೆಳೆಯುವಂತಿದೆ. 10 ನಿಮಿಷ ಅಲ್ಲಿ ಕುಳಿತರೆ ವಿಭಿನ್ನ ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತೆ. ಹಾಗಾಗಿಯೇ ನಾನು ಹೆಚ್ಚಾಗಿ ಶಾಪಿಂಗ್ ಗೆ ಬಸವ ಬುಟಿಕ್ ಗೆ ಬರುತ್ತೇನೆ                      - ಮಾಲಾ, ಖಾಸಗಿ ಕಂಪನಿಯೊಂದರ ಉದ್ಯೋಗಿ 

ಬಸವ ಬುಟಿಕ್ ಹೆಚ್ಚಾಗಿ ಮಧ್ಯಮ ವಯಸ್ಸಿನ ಹಾಗೂ ಕಾಲೇಜು ವಿದ್ಯಾರ್ಥಿಗಳೇ ಜಾಸ್ತಿ ಭೇಟಿ ನೀಡ್ತಾರಂತೆ. ಅದರಲ್ಲೂ ನಟಿ ಸುಹಾಸಿನಿ ಆಗಾಗ್ಗೆ ಭೇಟಿ ನೀಡುತ್ತಾರಂತೆ. ಇನ್ನು ನೃತ್ಯಗಾರ್ತಿ ವಾಣಿ ಗಣಪತಿ ನಮ್ಮಲ್ಲಿ ಆಗಾಗ್ಗೆ ಬರುತ್ತಲೇ ಇರುತ್ತಾರೆ. ಅಲ್ಲದೇ ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಲ್ಲಿಗೆ ಬರುತ್ತಲೇ ಇರುತ್ತಾರೆ ಅಂತಾರೆ ಬಸವ ಬುಟಿಕ್ ನ ನಿರ್ದೇಶಕಿ ಸಿಂಥಿಯಾ.

image


ಅಲ್ಲದೇ ಅಳಿವಿನಂಚಿರುವ ದೇಶದ ಕೈ ಕುಸರಿ ವಸ್ತುಗಳನ್ನು ಹಾಗೇ ದೇಸಿ ಕಸುಬುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿ, ಪ್ರತಿ ತಿಂಗಳು ವಿವಿಧ ರೀತಿಯ ಎಕ್ಸಿಬಿಷನ್ ಗಳು ನಡೆಸೋ ಮೂಲಕ ದೇಸಿ ಸಂಸ್ಕೃತಿಯನ್ನು ವಿಶ್ವದಲ್ಲೆಡೆ ಪಸರಿಸುತ್ತಿದೆ. ಅಲ್ಲದೇ ಬಸವನ ಬುಟಿಕ್ ನ ಲ್ಲೇ ಬಸವಾಂಬರ ರೆಸ್ಟೋರೆಂಟ್ ಕೂಡ ಇದನ್ನು ಪಕ್ಕಾ ದೇಸಿ ಸೊಬಗಿನಲ್ಲೇ ನಿರ್ಮಿಸಲಾಗಿದೆ.

ಇದನ್ನು ಓದಿ:

1. ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

2. ರೈತನ ಸಮಸ್ಯೆಗೆ ಸ್ಪಂದಿಸುವ ಜಿಕೆವಿಕೆಯ ಆ್ಯಪ್

3. ಬ್ರೇಕ್ ನ ನಂತ್ರ ಮಹಿಳೆಯರ ಕೆರಿಯರ್ ರೀ ಲಾಂಚ್ ಮಾಡಿದ ಅಪರೂಪದ ಕಂಪನಿಗಳು... !