ಇಂಡಸ್ಟ್ರಿಬೈಯಿಂಗ್‍ಗೆ ಬಂಡವಾಳದ ಹರಿವು - ಟ್ರಿಫೆಕ್ಟಾ ಕ್ಯಾಪಿಟಲ್‍ನಿಂದ 12 ಕೋಟಿ ನೆರವು

ಟೀಮ್​ ವೈ.ಎಸ್​. ಕನ್ನಡ

0

ದೆಹಲಿ ಮೂಲದ ಬಿ2ಬಿ ಇ-ಕಾಮರ್ಸ್ ಕಂಪನಿ `ಇಂಡಸ್ಟ್ರಿಬೈಯಿಂಗ್', 12 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಿದೆ. ಸಾಹಸೋದ್ಯಮಕ್ಕೆ ಸಾಲ ಒದಗಿಸುವ ಸಂಸ್ಥೆ ಟ್ರಿಫೆಕ್ಟಾ ಕ್ಯಾಪಿಟಲ್‍ನಿಂದ ಇಂಡಸ್ಟ್ರಿಬೈಯಿಂಗ್ ಹಣಕಾಸಿನ ನೆರವು ಪಡೆದಿದೆ. ಈ ಮೊತ್ತವನ್ನು ಇಂಡಸ್ಟ್ರಿಬೈಯಿಂಗ್ ವೇದಿಕೆ ಬಂಡವಾಳ ಹೂಡಿಕೆಗಾಗಿ ಬಳಸಿಕೊಳ್ಳಲಿದೆ. ಇದರ ಜೊತೆಜೊತೆಗೆ ಕಂಪನಿಯ ವಹಿವಾಟು ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ. `ದಿ ಎಂಟರ್‍ಪ್ರೈಸ್ ಆರ್ಮ್' ಇಂಡಸ್ಟ್ರಿಬೈಯಿಂಗ್ ಮತ್ತು ಉದ್ಯಮಗಳ ನಡುವಣ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಉತ್ಪನ್ನಗಳ ಸಂಗ್ರಹಣೆಗಾಗಿ ವಿಶೇಷ ದರಗಳನ್ನು ಇಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಎಂಟರ್‍ಪ್ರೈಸ್ ಪೋರ್ಟಲ್ ಮೂಲಕ ಈ ವಿಶೇಷ ದರಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಇಂಡಸ್ಟ್ರಿಬೈಯಿಂಗ್ ಡಾಟ್ ಕಾಮ್‍ನ ಸರಿ ಹೊಂದಬಹುದಾದ ಆವೃತ್ತಿ. ನಿರ್ದಿಷ್ಟ ಉದ್ಯಮಗಳಿಗಾಗಿಯೇ ಇದನ್ನು ವಿಶೇಷವಾಗಿ ಸೃಷ್ಟಿಸಲಾಗಿದೆ ಎನ್ನುತ್ತಾರೆ ಇಂಡಸ್ಟ್ರಿಬೈಯಿಂಗ್‍ನ ಸಹ ಸಂಸ್ಥಾಪಕಿ ಸ್ವಾತಿ ಗುಪ್ತಾ.

ಇಂಡಸ್ಟ್ರಿಬೈಯಿಂಗ್ ಡಾಟ್ ಕಾಮ್ ಒಂದು ಆನ್‍ಲೈನ್ ಮಾರುಕಟ್ಟೆ. ಎಸ್‍ಎಂಇಗಳು ಮತ್ತು ದೊಡ್ಡ ದೊಡ್ಡ ಉದ್ಯಮಗಳಿಗೆ ಇಲ್ಲಿ ಕೈಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. 2013ರಲ್ಲಿ ರಾಹುಲ್ ಗುಪ್ತಾ ಹಾಗೂ ಸ್ವಾತಿ ಗುಪ್ತಾ ಜೊತೆಯಾಗಿ ಇಂಡಸ್ಟ್ರಿಯಲ್ ಬೈಯಿಂಗ್ ಡಾಟ್ ಕಾಮ್ ಅನ್ನು ಆರಂಭಿಸಿದ್ದಾರೆ. ವಿಶೇಷ ಅಂದ್ರೆ ಇಂಡಸ್ಟ್ರಿಬೈಯಿಂಗ್ ಕಂಪನಿಯ ಪೋರ್ಟಲ್‍ನಲ್ಲಿ 30,000 ಎಸ್‍ಎಂಇಗಳು ಶಾಪಿಂಗ್‍ಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇಂಡಸ್ಟ್ರಿಬೈಯಿಂಗ್ ಕಂಪನಿ ಒಂದೇ ಸೂರಿನಡಿ ದೊಡ್ಡ ದೊಡ್ಡ ಉದ್ಯಮಗಳಿಗೆ ವಿವಿಧ ವಿಭಾಗಗಳಿಗೆ ಬೇಕಾದ ಕೈಗಾರಿಕಾ ಉತ್ಪನ್ನಗಳನ್ನು ಪೂರೈಸುತ್ತಿದೆ.

ಇದನ್ನು ಓದಿ:

ಡಾಗ್ಸಿಚೀವ್​​ನಲ್ಲಿದೆ ನಾಯಿಗಳಿಗಾಗಿ ಸ್ಪೆಷಲ್​ ಚಿಪ್ಸ್​​..!

ಇಂಡಸ್ಟ್ರಿಬೈಯಿಂಗ್ ಕಂಪನಿಯ ಆನ್‍ಲೈನ್ ಪೋರ್ಟಲ್‍ನಲ್ಲಿ ಖರೀದಿಸಬಹುದಾದ 300,000 ಉತ್ಪನ್ನಗಳು ಲಭ್ಯವಿವೆ. ಉತ್ಪಾದನೆ, ನಿರ್ಮಾಣ, ನಿರ್ವಹಣೆ, ಸೇವೆ, ವಾಣಿಜ್ಯ ಕಾರ್ಯಾಚರಣೆಗೆ ಬೇಕಾದ ಎಲ್ಲಾ ವಿಧದ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಇದು ಗ್ರಾಹಕರ ಎಫ್‍ಎಂಸಿಜಿ, ಆತಿಥ್ಯ, ಉತ್ಪಾದನೆ ನಿರ್ಮಾಣ, ದೊಡ್ಡ ಮತ್ತು ಸಣ್ಣ ಆಟೋ ಎಂಕ್ಸಿಲರಿ ಫಾರ್ಮಾ, ಸೇವೆಗಳು ಮತ್ತು ಆತಿಥ್ಯ, ನಿರ್ವಹಣಾ ಕಂಪನಿಗಳು ಎಲ್ಲದಕ್ಕೂ ಇಂಡಸ್ಟ್ರಿಬೈಯಿಂಗ್ ಪೂರಕವಾಗಿ ಕೆಲಸ ಮಾಡುತ್ತದೆ.

2015ರ ಆಗಸ್ಟ್‍ನಲ್ಲಿ ಇಂಡಸ್ಟ್ರಿಬೈಯಿಂಗ್ ಸಿರೀಸ್ ಬಿ ಸುತ್ತಿನ ಫಂಡಿಂಗ್‍ನಲ್ಲಿ 60 ಕೋಟಿ ರೂಪಾಯಿ ಹೆಚ್ಚಿಸಿಕೊಂಡಿತ್ತು. ಕಳಾರಿ ಕ್ಯಾಪಿಟಲ್, ಎಸ್‍ಎಐಎಫ್ ಪಾರ್ಟ್‍ನರ್ಸ್, ಸಿಂಗಾಪುರ ಮೂಲದ ಕಂಪನಿ ಬೀನೆಕ್ಸ್ಟ್ ಮತ್ತು ಖಾಸಗಿ ಹೂಡಿಕೆದಾರರು ಇದರ ನೇತೃತ್ವ ವಹಿಸಿದ್ದರು. ಟಿವಿಎಸ್ ಹಾಗೂ ಮುರುಗಪ್ಪ ಗ್ರೂಪ್ ಕೂಡ ಇಂಡಸ್ಟ್ರಿ ಬೈಯಿಂಗ್‍ನಲ್ಲಿ ಹೂಡಿಕೆ ಮಾಡಿವೆ. ಇಂಡಸ್ಟ್ರಿಬೈಯಿಂಗ್‍ನಲ್ಲಿ ಹೂಡಿಕೆ ಬಗ್ಗೆ ಟ್ರಿಫೆಕ್ಟಾ ಕ್ಯಾಪಿಟಲ್‍ನ ಸಹ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಪಾರ್ಟ್‍ನರ್ ನಿಲೇಶ್ ಕೊಠಾರಿ ಮಾತನಾಡಿದ್ದಾರೆ. ``ಭಾರತದಲ್ಲಿ ಬಿ2ಬಿ ಇ-ಕಾಮರ್ಸ್ ಅನ್ನು ಕಂಪನಿ ಆಳಲು ಹೊರಟಿದೆ ಎಂಬ ವಿಚಾರ ಅರಿವಿಗೆ ಬಂದಾಕ್ಷಣ ಇಂಡಸ್ಟ್ರಿಬೈಯಿಂಗ್‍ಗೆ ಬೆಂಬಲ ನೀಡಲು ನಾವು ಉತ್ಸುಕರಾಗಿದ್ದೆವು. ಅವಕಾಶದ ಗಾತ್ರವನ್ನು ನೋಡಿ ನಾವು ಆಕರ್ಷಿತರಾಗಿದ್ದೆವು, ಸಂಸ್ಥಾಪಕರ ಗುಣಮಟ್ಟ ಹಾಗೂ ವೆಂಚರ್ ಕ್ಯಾಪಿಟಲ್ ಫಂಡ್ ಕಂಪನಿಗೆ ಬೆಂಬಲವಾಗಿ ನಿಂತಿದೆ. ಸಾಹಸೋದ್ಯಮಕ್ಕೆ ಸಾಲ ಒದಗಿಸುವುದರ ಜೊತೆಗೆ ಇನ್ವೆಸ್ಟರ್‍ಗಳ ನೆಟ್‍ವರ್ಕ್ ಹತೋಟಿ ಮಾಡುವ ಭರವಸೆಯನ್ನೂ ನೀಡಿದ್ದೇವೆ. ಸ್ಥಳೀಯ ಸಂಸ್ಥೆಗಳು ಮತ್ತು ಕೈಗಾರಿಕಾ ಕುಟುಂಬ ಕಚೇರಿಗಳ ನೆರವಿನಿಂದ ಕಂಪನಿಯ ವಹಿವಾಟನ್ನು ವಿಸ್ತರಿಸಬಹುದು'' ಎನ್ನುತ್ತಾರೆ ನಿಲೇಶ್ ಕೊಠಾರಿ.

`ಯುವರ್‍ಸ್ಟೋರಿ' ಮಾಹಿತಿ

ಅಹಮದಾಬಾದ್ ಮೂಲದ ಇ-ಕಾಮರ್ಸ್ ಕನ್ಸಲ್ಟಂಟ್ ಕಂಪನಿ ಎಕ್ಯುಮೆನ್ ಪ್ರಕಾರ, ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬಿ2ಬಿ ಇ-ಕಾಮರ್ಸ್ ಉದ್ಯಮ ವಿಭಾಗ 2020ರ ವೇಳೆಗೆ 40 ಲಕ್ಷ ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆ ಇದೆ. ಈ ಅಂದಾಜು ಅಭಿವೃದ್ಧಿ ಹೊಂದುತ್ತಿರುವ ಉದ್ಯಮದ ಬಗ್ಗೆ ಬಹಳಷ್ಟು ವಿಚಾರಗಳನ್ನು ತೆರೆದಿಟ್ಟಿದೆ. ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವಾಲಯದ ಪ್ರಕಾರ ಭಾರತದಲ್ಲಿ 36 ಮಿಲಿಯನ್ ಸಣ್ಣ ಘಟಕಗಳಿವೆ. ಅವುಗಳಲ್ಲಿ ಹಲವು ಘಟಕಗಳು ಕೈಗಾರಿಕಾ ಸರಕುಗಳು ಖರೀದಿದಾರರು ಮತ್ತು ಮಾರಾಟಗಾರರಾಗಿವೆ. ಇಂಡಸ್ಟ್ರಿಬೈಯಿಂಗ್‍ನಂತಹ ಆನ್‍ಲೈನ್ ವೇದಿಕೆಗಳಿಗೆ ಇವುಗಳಿಂದ ಪ್ರಯೋಜನವಾಗುತ್ತಿದೆ. ಆನ್‍ಲೈನ್ ಚಿಲ್ಲರೆ ಮಾರಾಟಗಾರರು ಎದುರಿಸುವಂತಹ ಎಫ್‍ಡಿಐ ಸಮಸ್ಯೆಗಳನ್ನು ಕೂಡ ಈ ವಿಭಾಗ ಎದುರಿಸುವುದಿಲ್ಲ. ಭಾರತದಲ್ಲಿ ಸಗಟು ವ್ಯಾಪಾರಕ್ಕೆ ಮಾತ್ರ ಎಫ್‍ಡಿಐ ಸೌಲಭ್ಯ ಕಲ್ಪಿಸಲಾಗಿದೆ. ಆದ್ರೆ ಅಮೇಝಾನ್, ಟೊಲೆಕ್ಸೋ, ಪವರ್2ಎಸ್‍ಎಂಇ ಮತ್ತು ಬಿಝೊಂಗೋನಂತಹ ಕಂಪನಿಗಳಿಂದ ಇಂಡಸ್ಟ್ರಿ ಬೈಯಿಂಗ್‍ಗೆ ಪೈಪೋಟಿ ಎದುರಾಗುವುದಿಲ್ಲ. ತೈಲದಿಂದ ಹಿಡಿದು ಉಪಕರಣಗಳವರೆಗೆ ಎಲ್ಲ ಉತ್ಪನ್ನಗಳ ಮೇಲೂ ಇಂಡಸ್ಟ್ರಿಬೈಯಿಂಗ್ ಗಮನಹರಿಸುತ್ತಿದೆ. ಆದ್ರೆ ಈ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಾಗಣೆ ಮಾಡುವ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇಂಡಸ್ಟ್ರಿಬೈಯಿಂಗ್ ಸಂಪನ್ಮೂಲ ಕ್ರೋಢೀಕರಣ ಮತ್ತು ಪೂರೈಕೆ ಸರಪಳಿಯನ್ನು ಸರಿಯಾಗಿ ನಿರ್ವಹಿಸಿದ್ರೆ ಅವಕಾಶಗಳನ್ನು ಬಾಚಿಕೊಳ್ಳಬಹುದು.

ಲೇಖಕರು: ತೌಸಿಫ್​ ಆಲಂ
ಅನುವಾದಕರು: ಭಾರತಿ ಭಟ್​​

ಇದನ್ನು ಓದಿ:

ಶಾಪವನ್ನೇ ವರವಾಗಿ ಬದಲಿಸಿಕೊಂಡ ಗಟ್ಟಿಗಿತ್ತಿ..!

ಗುಬ್ಬಿಗಳು ಬಂದ್ವು.. ದಾರಿ ಬಿಡಿ.. !

ಖಾಲಿ ಬಾಟಲಿಯಲ್ಲಿ ಬೆಳಕು..! ಪವರ್​​ಕಟ್​​ನ ಭೀತಿ ಇದಕ್ಕಿಲ್ಲ..!

Related Stories