ಉದ್ಯಮ ಆರಂಭಿಸಲು ಹಣ ಮುಖ್ಯವಲ್ಲ- ತಂತ್ರಜ್ಞಾನದಿಂದ ಯಶಸ್ಸು ಸಾಧ್ಯ..!

ಟೀಮ್​ ವೈ.ಎಸ್​. ಕನ್ನಡ

0

ಶಾಪ್​ಕ್ಲೂಸ್​​.. ಭಾರತದ ಈ ಇ- ಕಾಮರ್ಸ್ ಪೋರ್ಟಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅಮೆಜಾನ್, ಫ್ಲಿಪ್​ಕಾರ್ಟ್, ಸ್ನ್ಯಾಪ್ ಡೀಲ್​ಗಳಂತ ಮಹಾನ್ ಇ- ಕಾಮರ್ಸ್ ಉದ್ಯಮದ ನಡುವೆ ಹೋರಾಡಿ ಗೆದ್ದ ಹಿರಿಮೆ ಶಾಪ್ ಕ್ಲೂಸ್​ಗೆ ಸಲ್ಲುತ್ತದೆ. ಭಾರತ ಟೈರ್ 2 ಮತ್ತು ಟೈರ್ 3 ಸಿಟಿಗಳ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿ ಇ- ಕಾಮರ್ಸ್ ದೈತ್ಯರಿಗೆ ಸವಾಲೊಡ್ಡಿದೆ. ಇವತ್ತು ಶಾಪ್ ಕ್ಲೂಸ್ ಭಾರತೀಯ ಮಾರುಕಟ್ಟೆಯಲ್ಲಿ ವಿಭಿನ್ನ ಹೆಸರು ಮತ್ತು ಗ್ರಾಹಕರ ಮನ ಗೆದ್ದಿದೆ.

“ ನಮ್ಮ ಫ್ಲಾಟ್​​ಫಾರ್ಮ್ ಮೂಲಕ ಲಕ್ಷಾಂತರ ಮಾರಾಟಗಾರರು ಆನ್​ಲೈನ್​ಗೆ ಬಂದು ಪ್ರಾಡಕ್ಟ್​ಗಳನ್ನು ಪರಿಚಯಿಸುತ್ತಾರೆ. ಈ ಮೂಲಕ ಲಕ್ಷಾಂತರ ಗ್ರಾಹಕರಿಗೆ ಪ್ರಾಡಕ್ಟ್​ಗಳನ್ನು ಖರೀದಿಸಲು ಸಹಾಯ ಮಾಡುತ್ತಿದೆ.”
- ಸಂಜಯ್ ಸೇಥಿ, ಶಾಪ್ ಕ್ಲೂಸ್ ಸಹ ಸಂಸ್ಥಾಪಕ ಮತ್ತು ಸಿಇಒ

ಯುವರ್ ಸ್ಟೋರಿಯ ಮೊಬೈಲ್ ಸ್ಪಾರ್ಕ್​ನಲ್ಲಿ ಸಂಜಯ್ ಸೇಥಿ ಮಾತುಕತೆಗೆ ಇಳಿದ್ರು. ಇ- ಕಾಮರ್ಸ್​ನಲ್ಲಿರುವ ಚಾಲೆಂಜ್ ಮತ್ತು ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ ಬಗ್ಗೆ ಮನದ ಮಾತನ್ನು ಹಂಚಿಕೊಂಡ್ರು. ಭಾರತ ಮತ್ತು ಅಮೆರಿಕದ ಬ್ಯುಸಿನೆಸ್ ಮಾಡೆಲ್​ಗಳ ವಿಭಿನ್ನತೆ ಮತ್ತು ಅದಕ್ಕಿರುವ ಕಾರಣಗಳನ್ನು ವಿವರಿಸಿದ್ರು.

“ ಕೆಲವೊಮ್ಮೆ ನಾವು ಯೋಚಿಸುವ ರೀತಿ ಒಂದೇ ಆಗಿರುತ್ತದೆ. ನಾವು ತಪ್ಪು ಎಲ್ಲಾಯಿತು ಅನ್ನುವುದನ್ನು ಹುಡುಕುವ ಬದಲು, ಅದನ್ನು ಉತ್ಪ್ರೇಕ್ಷೆ ಮಾಡಲು ಆರಂಭಿಸುತ್ತೇವೆ. ಹಿಂದೆ ಯಾರು ಏನು ಮಾಡಿದ್ದರು ಅನ್ನೋದನ್ನ ಯೋಚಿಸಲು ಆರಂಭಿಸುತ್ತೇವೆ. ಹೊಸತನ್ನು ಮಾಡ ಹೊರಟಾಗ ವೈಫಲ್ಯಗಳು ಸಹಜ ಮತ್ತು ಯಶಸ್ಸು ಕೂಡ ಸಹಜ. ಆದ್ರೆ ಹಳೆಯದನ್ನು ಮೆಲುಕು ಹಾಕುವುದು ಮತ್ತು ನಮಗೆ ನಾವೇ ಒಂದು ನಿರ್ಧಾರಕ್ಕೆ ಬರುವುದು ಸರಿಯಲ್ಲ.”
- ಸಂಜಯ್ ಸೇಥಿ, ಶಾಪ್ ಕ್ಲೂಸ್ ಸಹ ಸಂಸ್ಥಾಪಕ ಮತ್ತು ಸಿಇಒ

ಪ್ರತಿಯೊಂದು ಮಾರುಕಟ್ಟೆ ಮತ್ತು ಉದ್ಯಮ ವಿಭಿನ್ನವಾಗಿರುತ್ತದೆ. ಒಂದು ಉದ್ಯಮ ಇರುವ ಹಾಗೇ ಮತ್ತೊಂದು ಇರುವುದಿಲ್ಲ. ಒಂದೇ ತರಹದ ಉದ್ಯಮ ಮತ್ತು ಅದರ ಮಾಡೆಲ್​ಗಳನ್ನು ಅನುಕರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಹೊಸ ಹೊಸ ಉದ್ಯಮಗಳು ಮತ್ತು ಐಡಿಯಾಗಳು ಹುಟ್ಟಿಕೊಳ್ಳುತ್ತಿವೆ. ಶಾಪ್ ಕ್ಲೂಸ್ ಕೂಡ ಅದೇ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಭಾರತದ ಟೈರ್2 ಮತ್ತು ಟೈರ್ 3 ಸಿಟಿಗಳ ಗ್ರಾಹಕರ ಮನ ಗೆಲ್ಲುವುದೇ ನಮ್ಮ ಗುರಿಯಾಗಿತ್ತು. ಹೀಗಾಗಿ ಶಾಪ್ ಕ್ಲೂಸ್ ಒಂದು ರೀತಿಯಲ್ಲಿ ವಿಭಿನ್ನ ಇ- ಕಾಮರ್ಸ್ ಉದ್ಯಮವಾಗಿ ಬೆಳೆಯಿತು.

“ ಕಳೆದ ಒಂದು ದಶಕದಿಂದ ಉದ್ಯಮದ ಬಗ್ಗೆ ಇದ್ದ ಅಭಿಪ್ರಾಯಗಳು ಬದಲಾಗುತ್ತಿದೆ. ಹಣ ಇದ್ದವರು ಅಥವಾ ದೊಡ್ಡ ಇಂಡಸ್ಟ್ರೀಯಲಿಸ್ಟ್​​ಗಳು ಮಾತ್ರ ಉದ್ಯಮ ಆರಂಭಿಸಬಹುದು ಅನ್ನುವ ಕಾಲ ಹೊರಟು ಹೋಗಿದೆ. ಈಗೇನಿದ್ರೂ ಉದ್ಯಮ ಆರಂಭಿಸಲು ದುಡ್ಡು ಬೇಡ. ಐಡಿಯಾ ಬೇಕು ಅನ್ನುವ ಕಾಲ ಬಂದಿದೆ. ಹೊಸ ಉದ್ಯಮಿಗಳು ಹಳೆಯ ದುಡ್ಡೇ ದೊಡ್ಡಪ್ಪ ಅನ್ನುವ ಕಾನ್ಸೆಪ್ಟ್ ಅನ್ನು ದೂರ ಮಾಡಿದ್ದಾರೆ. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಉದ್ಯಮವನ್ನು ಉನ್ನತಿಯ ಕಡೆಗೆ ಒಯ್ಯುತ್ತಿದ್ದಾರೆ.”
- ಸಂಜಯ್ ಸೇಥಿ, ಶಾಪ್ ಕ್ಲೂಸ್ ಸಹ ಸಂಸ್ಥಾಪಕ ಮತ್ತು ಸಿಇಒ

ಆಫ್​​ಲೈನ್ ಮತ್ತು ಆನ್​ಲೈನ್ ಸೇಲ್​ಗಳ ಬಗ್ಗೆಯೂ ಸಂಜಯ್ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ. ಜಿಎಸ್​ಟಿ ಮತ್ತು ಆನ್​ಲೈನ್ ಟ್ರಾನ್ಸ್ ಆ್ಯಕ್ಷನ್​ಗಳು ಇ-ಕಾಮರ್ಸ್ ಉದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ. ಇದು ಇ- ಕಾಮರ್ಸ್ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲಿದೆ.

ಭಾರತ ಡೆಸ್ಕ್​ಟಾಪ್ ತಂತ್ರಜ್ಞಾನದಿಂದ, ಲ್ಯಾಪ್​ಟಾಪ್ ತಂತ್ರಜ್ಞಾನಕ್ಕೆ ಬದಲಾಗಿದೆ. ಈಗ ಮೊಬೈಲ್ ತಂತ್ರಜ್ಞಾನದ ಕಾಲಕ್ಕೆ ಹೊಂದಿಕೊಳ್ಳುತ್ತಿದೆ. ಇವತ್ತು ಉದ್ಯಮಿಗಳು ತಂತ್ರಜ್ಞಾನಕ್ಕೆ ಹೆಚ್ಚು ಹೂಡಿಕೆ ಮಾಡಬೇಕಿದೆ. ಇದು ಉದ್ಯಮವನ್ನು ಮತ್ತಷ್ಟು ಬೆಳೆಸುತ್ತದೆ. ಹೊಸ ಉದ್ಯಮಿಗಳು ತಂತ್ರಜ್ಞಾನಕ್ಕೆ ಯಾಕೆ ಬೆಲೆ ಕೊಡಬೇಕು ಅನ್ನುವುದನ್ನು ಹೇಳುತ್ತಾ ಮಾತು ಮುಗಿಸಿದ್ರು ಶಾಪ್ ಕ್ಲೂಸ್ ಸಹಸಂಸ್ಥಾಪಕ ಮತ್ತು ಸಿಇಒ ಸಂಜಯ್ ಸೇಥಿ.

ಇದನ್ನು ಓದಿ:

1. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

2. ಭಾರತದ ಮೊಬೈಲ್​ ಮಾರುಕಟ್ಟೆಯ ಕಥೆ ಮತ್ತು ಅದರ ಬೆಳವಣಿಗೆ...

3. 'ಜನಸಾಮಾನ್ಯರಿಗಾಗಿ ಜನ್ಮತಳೆಯುವ ಉದ್ಯಮಗಳಿಗೆ ಸರ್ಕಾರದ ನೆರವು' - ರಾಜೀವ್ ಬನ್ಸಲ್ ಅಭಯ

Related Stories