''ಕಲ್ಲು ತೂರಿದವರೆಲ್ಲ ಭಯೋತ್ಪಾದಕರಲ್ಲ'' 

ಆಶುತೋಷ್, ಎಎಪಿ ಮುಖಂಡ 

0

ಕಲ್ಲು ತೂರಾಟ ನಡೆಸಿದವರನ್ನು ಭಯೋತ್ಪಾದಕರೆಂದು ಪರಿಗಣಿಸಲಾಗುತ್ತದೆ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಎರಡು ರೀತಿಯಾಗಿ ನೋಡಬಹುದು. ಒಂದು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಶಸ್ತ್ರ ಪಡೆಯ ನೈತಿಕ ಸ್ಥೈರ್ಯ ಹೆಚ್ಚಿಸುವುದು, ಇನ್ನೊಂದು ರಣತಂತ್ರದಲ್ಲಿ ಬದಲಾವಣೆ. ಈಗ ಸೇನೆ ಮೃದು ಧೋರಣೆಯನ್ನು ಕೈಬಿಟ್ಟಿದೆ. ಯಾರು ಕಾನೂನನ್ನು ಕೈಗೆತ್ತಿಕೊಳ್ತಾರೋ ಅವರ ಬಗ್ಗೆ ಕರುಣೆ ತೋರುವುದಿಲ್ಲ ಎಂದರ್ಥ. ಆದ್ರೆ ರಾಷ್ಟ್ರೀಯತೆ ಹಾಗೂ ದೇಶಭಕ್ತಿ ಹೆಸರಲ್ಲಿ ರಾಜಕಾರಣಿಗಳು ಮತ್ತು ಟಿವಿ ವಾಹಿನಿಗಳು ಈ ಹೇಳಿಕೆಯ ವಿಷಯವನ್ನು ಇನ್ನಷ್ಟು ಕಠಿಣಗೊಳಿಸಿಬಿಡುತ್ತವೆ.

ನಮ್ಮ ಸೇನೆಯ ಬಗ್ಗೆ ನಮಗೆಲ್ಲಾ ಹೆಮ್ಮೆಯಿದೆ. ದೇಶಕ್ಕಾಗಿ ಯೋಧರು ನೀಡುತ್ತಿರುವ ಸೇವೆ ಎಂಥದ್ದು ಅನ್ನೋದರ ಅರಿವಿದೆ. ನಾವು ಶಾಂತಿಯಿಂದ ನಿದ್ರಿಸಿದ್ದೇವೆ ಅಂದ್ರೆ ಅದಕ್ಕೆ ಕಾರಣ ಅವರು ರಾತ್ರಿಪೂರಾ ಎಚ್ಚರವಾಗಿರುವುದು ಮತ್ತು ನಮಗಾಗಿ ಅವರು ಹೋರಾಡುತ್ತಿದ್ದಾರೆ ಎಂಬ ಖಚಿತತೆ ನಮಗಿರುವುದು. ಹಾಗಾಗಿ ಸೇನಾ ಮುಖ್ಯಸ್ಥರ ಪ್ರತಿ ಹೇಳಿಕೆಯೂ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಸೇನಾ ಮುಖ್ಯಸ್ಥರಿಗೆ ತಮಗನಿಸಿದ್ದನ್ನು ಹೇಳುವ ಹಕ್ಕಿದೆ. ಯಾಕಂದ್ರೆ ಅವರು ಉಗ್ರವಾದದ ವಿರುದ್ಧ ಹೋರಾಡುತ್ತಿದ್ದಾರೆ. ದೇಶಕ್ಕೆ ಯಾವುದರಿಂದ ಒಳಿತಾಗುತ್ತದೆ ಅನ್ನೋದನ್ನು ನಿರ್ಧರಿಸುವ ಸ್ಥಾನದಲ್ಲಿ ಅವರಿದ್ದಾರೆ. ಆದ್ರೆ ರಾಜಕಾರಣಿಗಳು ಮತ್ತು ಪತ್ರಕರ್ತರಿಗೆ ಕೂಡ ಸೇನೆಯಂತೆ ಬೇರೆಯದೇ ಕರ್ತವ್ಯವಿದೆ, ಜವಾಬ್ಧಾರಿಗಳಿದೆ.

ಕಾಶ್ಮೀರ ವಿವಾದವನ್ನು ತನ್ನದೇ ಆದ ರೀತಿಯಲ್ಲಿ ಸೇನೆ ನೋಡಬಹುದು. ಕಾಶ್ಮೀರ ವಿವಾದ ಕಪ್ಪು ಮತ್ತು ಬಿಳುಪಿನ ಕ್ಷೇತ್ರದಿಂದಲೂ ಹೊರತಾದದ್ದು. ಬಹಳಷ್ಟು ಸಂಕೀರ್ಣ ಮತ್ತು ಆಳವಾದದ್ದು. ಕಾಶ್ಮೀರ ವಿವಾದವನ್ನು ಅರ್ಥಮಾಡಿಕೊಳ್ಳಲು ಭೂತಕಾಲಕ್ಕೆ ಹೋಗಬೇಕು. 1947ರಲ್ಲಿ ದೇಶದ ಸ್ವಾತಂತ್ರ್ಯ ಘೋಷಣೆಯಾದಾಗ ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ. ಸಾರ್ವಭೌಮ ಗಣರಾಜ್ಯವಾಗುವ ಮಹತ್ವಾಕಾಂಕ್ಷೆ ಹೊಂದಿತ್ತು. ಮುಸಲ್ಮಾನರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಶ್ಮೀರವನ್ನು ಹಿಂದೂ ರಾಜ ರಾಜಾ ಹರಿ ಸಿಂಗ್ ಆಳುತ್ತಿದ್ದ.

ಕಾಶ್ಮೀರವನ್ನು ಒಳಗೊಳ್ಳದೆ ಪಾಕಿಸ್ತಾನದ ಮೂಲ ಪ್ರಬಂಧವೇ ಅಪೂರ್ಣ ಎಂಬ ಭಾವನೆ ಪಾಕಿಸ್ತಾನದ ಸೃಷ್ಟಿಕರ್ತರಲ್ಲಿತ್ತು. ಹಿಂದುತ್ವ ಮತ್ತು ಇಸ್ಲಾಂ ಎಂಬ ಎರಡು ರಾಷ್ಟ್ರ ಸಿದ್ಧಾಂತಗಳ ಆಧಾರದ ಮೇಲೆ ಸ್ವಾತಂತ್ರ್ಯ ಹೋರಾಟದ ವೇಳೆ ಪಾಕಿಸ್ತಾನ ಬೇಡಿಕೆ ಇಟ್ಟಿತ್ತು. ಎರಡು ವಿಭಿನ್ನ ನಾಗರೀಕತೆಗಳು ಜೊತೆಯಾಗಿ ಬದುಕಲು ಸಾಧ್ಯವಿಲ್ಲ ಎಂಬ ವಾದ ಅವರದ್ದು. ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳೆಲ್ಲ ಪಾಕಿಸ್ತಾನಕ್ಕೆ ಉಳಿದವೆಲ್ಲ ಭಾರತಕ್ಕೆ ಅನ್ನೋದು ಲೆಕ್ಕಾಚಾರ. ಹೀಗೆ ಬಾಂಗ್ಲಾದೇಶದೊಂದಿಗೆ ಪಾಕಿಸ್ತಾನದ ಉದಯವಾಗಿತ್ತು. ಆದ್ರೆ ಕಾಶ್ಮೀರ ಜಿನ್ನಾ ವಾದವನ್ನು ಬೆಂಬಲಿಸದೇ ಇರಲು ನಿರ್ಧರಿಸಿತ್ತು. ಪಾಕಿಸ್ತಾನದೊಂದಿಗೆ ಸೇರ್ಪಡೆಯಾಗಲು ಕಾಶ್ಮೀರ ಒಪ್ಪದೇ ಇದ್ದಿದ್ದು ಅಲ್ಲಿನ ನಾಯಕರನ್ನು ಕೆರಳಿಸಿತ್ತು.

ಇಬ್ಭಾಗದ ಬಳಿಕ ಪಾಕಿಸ್ತಾನ ದಂಗೆಕೋರರ ವೇಷದಲ್ಲಿ ಕಾಶ್ಮೀರದ ಮೇಲೆ ದಾಳಿ ಮಾಡಿತ್ತ. ಈ ಕೃತ್ಯಕ್ಕೆ ಪಾಕ್ ಸೇನೆಯ ಬೆಂಬಲ ಹಾಗೂ ಹಣಕಾಸು ನೆರವಿತ್ತು. ಪಾಕ್ ರೇಂಜರ್ ಗಳು ಶ್ರೀನಗರ ವಿಮಾನ ನಿಲ್ದಾಣ ತಲುಪಿದ್ರು ಮತ್ತು ಪಾಕಿಸ್ತಾನದ ಮಹಾಪಾತಕ ವಿನ್ಯಾಸಗಳೆದುರು ಕಾಶ್ಮೀರ ಸೇನೆ ಸೋಲುವ ಸಾಧ್ಯತೆಯಿತ್ತು. ಆಗ ಭಾರತವನ್ನು ಸಂಪರ್ಕಿಸಿದ ರಾಜಾ ಹರಿಸಿಂಗ್ ನೆರವು ಕೇಳಿದ್ರು. ಭಾರತದೊಂದಿಗೆ ವಿಲೀನಕ್ಕೆ ರಾಜಾ ಹರಿ ಸಿಂಗ್ ಒಪ್ಪಿಕೊಂಡ ಬಳಿಕ ಭಾರತದ ಸೇನೆ ಕಾಶ್ಮೀರವನ್ನು ಉಳಿಸಿಕೊಟ್ಟಿತ್ತು.

ಹಾಗಾಗಿ ಕಾಶ್ಮೀರ ಸಮಸ್ಯೆ ರಾಷ್ಟ್ರ ಚಳವಳಿ ಮತ್ತು ದೇಶಭಕ್ತಿಯ ಉಪ ಉತ್ಪನ್ನವಾಗಿದೆ. ಕಾಶ್ಮೀರ ತಮ್ಮದೇ ಅನ್ನೋದು ಪಾಕಿಸ್ತಾನದ ಭಾವನೆ, ಆದ್ರೆ ಅವರ ಪರಿಕಲ್ಪನೆ ಅಪೂರ್ಣ. ಪಾಕಿಸ್ತಾನಕ್ಕೆ ಕಾಶ್ಮೀರ ದೇಶಭಕ್ತಿಯ ಅಪೂರ್ಣ ಅಜೆಂಡಾ.

ನಂತರ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಶೇಕ್ ಅಬ್ದುಲ್ಲಾ ಹಾಘೂ ಭಾರತ ಸರ್ಕಾರದ ನಡುವೆ ಸಂಘರ್ಷ ಶುರುವಾಗಿತ್ತು, ಇದು ಬಗೆಹರಿದಿದ್ದು 70ರ ದಶಕದಲ್ಲಿ. ಅವರು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಿದ್ರು. ಅವರ ನಿಧನದ ಬಳಿಕ ಪುತ್ರ ಫಾರೂಖ್ ಅಬ್ದುಲ್ಲಾ ಅಧಿಕಾರಕ್ಕೆ ಬಂದ್ರು. ಆದ್ರೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅವರ ತಪ್ಪು ನಿರ್ಧಾರದಿಂದಾಗಿ ತೀವ್ರವಾದಿಗಳಿಗೆ ಅವಕಾಶ ಮಾಡಿಕೊಟ್ಟಂತಾಯ್ತು. 1987ರಲ್ಲಿ ವಿಧಾಸಭಾ ಚುನಾವಣೆ ಸನಿಹದಲ್ಲಿತ್ತು, MUFಗೆ ಸರ್ಕಾರ ರಚಿಸಲು ಅವಕಾಶ ನಿರಾಕರಿಸಲಾಯ್ತು. ಈ ತಪ್ಪಿನಿಂದಾಗಿ ಕಣಿವೆಯಲ್ಲಿ ಉಗ್ರವಾದ ಹುಟ್ಟಿಕೊಂಡ್ತು. ಜಗ್ಮೋಹನ್ ಅವರನ್ನು ರಾಜ್ಯಪಾಲರನ್ನಾಗಿ ಕಳುಹಿಸುವ ವಿ.ಪಿ.ಸಿಂಗ್ ಅವರ ನಿರ್ಧಾರ ಇನ್ನೊಂದು ಪ್ರಮಾದವಾಗಿತ್ತು. ಅವರ ತಪ್ಪು ಪಾಲಿಸಿಗಳು ಕಾಶ್ಮೀರ ವಿವಾದಕ್ಕೆ ಮತೀಯ ಬಣ್ಣ ತಂದುಕೊಟ್ಟಿತ್ತು. ಕಣಿವೆಯಿಂದ ಕಾಶ್ಮೀರ ಪಂಡಿತರ ವಲಸೆ ಮತ್ತೊಂದು ಯಾತನಾಮಯ ಅಧ್ಯಾಯ. ಅಂದಿನಿಂದ್ಲೂ ಕಾಶ್ಮೀರ ಕುದಿಯುತ್ತಲೇ ಇದೆ.

ಕಾಶ್ಮೀರ ವಿವಾದವನ್ನು ಅಂತರಾಷ್ಟ್ರೀಯಗೊಳಿಸಲು ಪಾಕಿಸ್ತಾನ ಇನ್ನಿಲ್ಲದ ಕಸರತ್ತು ಮಾಡಿದೆ. ಅಮೆರಿಕ ಕೂಡ ಕಾಶ್ಮೀರ ವಿವಾದವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಕಾಶ್ಮೀರವನ್ನು ಬಳಸಿಕೊಂಡು ಇಸ್ಲಾಮಿಕ್ ಉಗ್ರರು ಜಿಹಾದಿ ಅಜೆಂಡಾ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಪಾಲಿಗೆ ಕಾಶ್ಮೀರ ಮತೀಯ ಗೊಂದಲ ಮೂಡಿಸುವ ವಿಷಯ. ಇದ್ರಿಂದಾಗಿ ಕಾಶ್ಮೀರದ ಜನತೆ ಭರವಸೆ ಕಳೆದುಕೊಳ್ತಿದ್ದಾರೆ. ಸೇನೆ ಹಾಗೂ ಉಗ್ರರ ನಡುವೆ ಸಿಕ್ಕು ಕಾಶ್ಮೀರದ ಜನತೆ ಸ್ಯಾಂಡ್ ವಿಚ್ ಆಗ್ತಿದ್ದಾರೆ. ಸೇನೆಯ ಜೊತೆ ಗುರುತಿಸಿಕೊಂಡ್ರೆ ಅವರು ಕಾಶ್ಮೀರದ ನಂಬಿಕೆ ದ್ರೋಹ ಬಗೆಯುತ್ತಿದ್ದಾರೆಂಬ ಆರೋಪ, ಉಗ್ರರ ಪರವಾಗಿದ್ದರೆ ರಾಷ್ಟ್ರದ್ರೋಹಿಗಳೆಂಬ ಹಣೆಪಟ್ಟಿ ಅವರದಾಗುತ್ತದೆ.

ಸರ್ಕಾರ ರಚನೆಯಲ್ಲಿ ಬಿಜೆಪಿ, ಪಿಡಿಪಿ ಜೊತೆ ಸೇರಿದ ಮೇಲೆ ಈ ವಿವಾದ ಇನ್ನಷ್ಟು ಜಟಿಲವಾಗಿದೆ. ಬಿಜೆಪಿ ಆರ್ಟಿಕಲ್ 370ರ ಗರ್ಭಪಾತಕ್ಕೆ ಬೇಡಿಕೆ ಇಟ್ಟಿದೆ. ಈ ವಿಚಾರವೇ ಕಾಶ್ಮೀರದಲ್ಲಿ ಇನ್ನಷ್ಟು ಸಂಕಷ್ಟಗಳನ್ನು ಹುಟ್ಟುಹಾಕಿದೆ. ಕಣಿವೆಯಲ್ಲಿ ಶಾಂತಿ ಕಾಪಾಡಲು, ಭಯೋತ್ಪಾದನೆಯನ್ನು ನಿಗ್ರಹಿಸಲು ಸೇನೆ ಹಾಗೂ ಪ್ಯಾರಾ ಮಿಲಿಟರಿಯ ಅಗತ್ಯವಿದೆ. ಹಾಗಾಗಿ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕು. ಆದ್ರೆ ರಾಜಕಾರಣಿಗಳು ಮತ್ತು ಬೌದ್ಧಿಕ ವರ್ಗ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಮಾತ್ರ ಇದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಟಿವಿ ವಾಹಿನಿಗಳು, ಅರೆಬೆಂದ ತಜ್ಞರು ದೇಶಭಕ್ತಿಯ ಹಾಡು ಹಾಡುತ್ತಿದ್ದಾರೆ. ಕಾಶ್ಮೀರದ ಯಾವುದೇ ಸ್ವತಂತ್ರ ಧ್ವನಿಯನ್ನು ಭಾರತ ಮಾತೆಗೆ ಮಾಡುತ್ತಿರುವ ನಂಬಿಕೆ ದ್ರೋಹ ಎನ್ನುತ್ತಿದ್ದಾರೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಆದ್ರೆ ಇದು ಅತ್ಯಂತ ಸರಳ ವಿಚಾರವಲ್ಲ. ಎಲಲಾ ಕಾಶ್ಮೀರಿಗಳೂ ಭಯೋತ್ಪಾದಕರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಲ್ಲು ತೂರಾಟ ನಡೆಸಿದವರೆಲ್ಲರೂ ರಾಜ್ಯವಿರೋಧಿಗಳಲ್ಲ. ಅಲ್ಲಿ ಕೋಪವಿದೆ, ಅದಕ್ಕೆ ಕಾರಣವೂ ಇದೆ. ಅದನ್ನು ಪರಿಹರಿಸಿದ್ರೆ ಕಾಶ್ಮೀರ ಸಮಸ್ಯೆಯೂ ಬಗೆಹರಿಯುತ್ತದೆ. ಕಾಶ್ಮಿರ ಸಮಸ್ಯೆಯನ್ನು ಅತಿಯಾಗಿ ಸರಳೀಕರಣಗೊಳಿಸುವುದು ಕೂಡ ಅದಕ್ಕೆ ಪರಿಹಾರವಲ್ಲ. ದುರದೃಷ್ಟವಶಾತ್ ಟಿವಿ ವಾಹಿನಿಗಳು ಜನಪ್ರಿಯತೆಗಾಗಿ ಅದನ್ನೇ ಮಾಡುತ್ತಿವೆ. ಇದು ಭಾರತದ ರಾಷ್ಟ್ರೀಯತೆಗೆ ಧಕ್ಕೆ ತರುತ್ತಿದೆ.

ವಿ.ಸೂ: ಇದು ಲೇಖಕರ ಅಭಿಪ್ರಾಯ 

ಇದನ್ನೂ ಓದಿ...

ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ 

ಎಚ್ಐವಿ ಪೀಡಿತ ಮಕ್ಕಳಿಗೆ ಹೊಸ ಬದುಕು – 22 ಪುಟಾಣಿಗಳನ್ನು ಪಡೆದಿದ್ದಾರೆ ದತ್ತು