ಜೀವನದ ಪಾಠ ಕಲಿಸಿದ ಅನುಭವಗಳು

ಟೀಮ್​​ ವೈ.ಎಸ್​​.

ಜೀವನದ ಪಾಠ ಕಲಿಸಿದ ಅನುಭವಗಳು

Saturday November 07, 2015,

4 min Read

ನಮ್ಮ ದೇಶದಲ್ಲೊಂದು ಬದಲಾವಣೆ ನಡೆದು ಹೊಗಿತ್ತು. ಅದು ಎಲ್ಲರ ಗಮನ ಸೆಳೆಯಲು 2 ವರ್ಷಗೆಳೇ ಬೇಕಾಗಿತ್ತು. ಹಾಗೆ ಸದ್ದು ಮಾಡಿದ್ದೆ ಸಾಂಗ್ ಆಫ್ ಕೇರವನ್ ಎನ್ನುವ ಆಲ್ಬಮ್...! ದೇಶದ 5 ಪ್ರಾಂತ್ಯಗಳ 9 ಭಾಷೆಯ 13 ಹಾಡುಗಳು ಈ ಗೀತ ಗುಚ್ಛದಲ್ಲಿ ಇದೆ. ಈ ಅಲ್ಬಂ ಬೇರೆ ಅಲ್ಬಂನಂತಲ್ಲ. ಇದರ ನಿರ್ಮಾಣದ ಹಿಂದೆ ಸಮಾಜ ದೂರ ಮಾಡಿದ ಲೈಂಗಿಕ ಅಲ್ಪಸಂಖ್ಯಾತರೇ ಇದ್ದಾರೆ..!

image


9 ಲೈಂಗಿಕ ಅಲ್ಪಸಂಖ್ಯಾತರು 6 ಸಂಗೀತ ಸಂಯೋಜಕರಿಂದ ಸಂಯೋಜಿಸಲ್ಪಟ್ಟ ಸಂಗೀತ ಸೇರಿ 13 ಹಾಡುಗಳನ್ನು ರಚಿಸಿ ಸಂಯೋಜನೆ ಮಾಡಿ ಅಲ್ಬಂ ಸಿದ್ದಮಾಡಿದ್ದಾರೆ. ಇವರ ಯೋಜನೆಗೆ ಸಾಥ್​ ನೀಡಿದವರು ಅನುಭವ ಗುಪ್ತಾ ಅವರ `ಜೀವನ ಟ್ರಸ್ಟ್​' ಎನ್ನುವ ಸಂಘಟನೆ. ಆರಂಭದ ದಿನಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಅದಕ್ಕೆ 17 ತಿಂಗಳ ಶ್ರಮದ ಬಳಿಕ ಅಲ್ಬಂ ಬಿಡುಗಡೆ ಮಾಡಲಾಗಿದೆ. ಆದ್ರೆ ಇದ್ರಿಂದ ಲಾಭ ಕಾಣಲು ಬರೋಬ್ಬರಿ 24 ತಿಂಗಳು ಕಾಯಬೇಕಾಯಿತು. ಇಷ್ಟಕ್ಕೂ ನೆದರಲ್ಯಾಂಡ್‍ನ UNDP India & Plant Romero Foundation ಬೆಂಬಲಿಕ್ಕೆ ನಿಂತಿತ್ತು.

image


ವಡೋದರಾ ಮೂಲದ ಭರತ್​ ಪಾಟೀಲ್​ ಎನ್ನುವ ಮೂಲ ಹೆಸರಿನ ಲೈಂಗಿಕ ಅಲ್ಪಸಂಖ್ಯಾತೆ ಅಂಕುರಾ ಎಂದು ಗುರುತಿಸಿಕೊಂಡಿದ್ದಳು. ಪೃವ್ರತ್ತಿಯಲ್ಲಿ ಅಂಕುರಾ ಹಿಂದುಸ್ಥಾನಿ ಗಾಯಕಿ. ಇವರು ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಡಿಪ್ಲೋಮೊ ಮಾಡಿದ್ದರು. ಅಲ್ಬಂನಲ್ಲಿ ಅಂಕುರಾ ಹಾಡಿದ ತನ್ನ ಜೀವನಾನುಭವದ ಸಾಲುಗಳೇ `ಸಾಂಗ್ ಆಫ್ ಕಾರವಾನ್’ ಎಂದು ಪ್ರಚಲಿತವಾಗಿದೆ. ಇಂಥದೊಂದು ಪ್ರಯತ್ನ ಭಾರತದಲ್ಲೇ ಮೊದಲ ಬಾರಿ. ಬಿಡುಗಡೆ ತಡವಾದ್ರೂ ಭಾರತೀಯರು ಒಪ್ಪಿಕೊಂಡಿದ್ದಾರೆ. ಲೈಗಿಂಕ ಅಲ್ಪಸಂಖ್ಯಾತರಿಗೂ ಧ್ವನಿ ಇದೆ ಎಂದು ಗುರುತಿಸುವ ಹಾಗಾಗಿದೆ.

ಅಂಕುರಾ ಅವರು ಹೇಳುವಂತೆ "ತನ್ನಂತ ಜನರಿಗೂ ಸಮಾಜದ ಬಗ್ಗೆ ಕನಿಕರ ಇರುತ್ತದೆ. ಆದರೆ ನಮ್ಮ ನೋವು ಅರಿಯುವರು ಯಾರೂ ಇಲ್ಲ. ನಮ್ಮ ಅನುಭವಗಳನ್ನೇ ಇಲ್ಲಿ ಹಾಡಾಗಿಸುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದಿಂದ ನನಗೆ ನನ್ನಲ್ಲಿಯೂ ಪ್ರತಿಭೆ ಇದೆ ಎನ್ನುವ ಆತ್ಮವಿಶ್ವಾಸ ಬಂದಿದೆ”ಎನ್ನುತ್ತಾರೆ.

40 ವರ್ಷದ ಅಂಕುರಾ ತನ್ನ ಜೀವನದ ಕತ್ತಲೆ ಬೆಳಕಿನ ಪಯಣದ ಕಥೆಯನ್ನು ಹಾಡುಗಳ ರೂಪದಲ್ಲಿ ಬರೆದು ತಾನೇ ಸ್ವತಃ ಹಾಡಿದ್ದರು. ಇವರ ಹಾಡಿನ ಸಾಲುಗಳು ಮಾರ್ಮಿಕವಾಗಿದೆ. ಬಿನ್ನಲಿಂಗ ಕಾಮುಕತೆಯಲ್ಲಿ ನರಳಾಡಿ ಈ ನರಕದಿಂದ ಬಿಡುಗಡೆಯ ಕನಸು ಕಾಣುತ್ತಿದೆ ಎನ್ನುವ ತಾತ್ಪರ್ಯದಲ್ಲಿ ಹಾಡನ್ನು ರಚಿಸಿದ್ದಾರೆ. ಅದರಲ್ಲಿಯೂ ಭಾವ ತನ್ಮಯತೆಯಿಂದ ಹಾಡಿದ ಅಂಕರಾ ಅವರ ಧ್ವನಿ ಅವಳದ್ದೇ ಆಗಿರುವ ಲೋಕಕ್ಕೆ ಕರೆದುಕೊಂಡು ಹೊಗುತ್ತದೆ.

image


ಅಂಕುರಾ ಹಾಡಿನ ಸಾಲುಗಳು ಇಂತಿವೆ..

ನಾನು ಪಕ್ಷಿಯಂತೆ ಮುಕ್ತವಾಗಿ ಹಾರಲಿಚ್ಛಿಸುವೆ

ಸ್ವಾತಂತ್ರ್ಯದ ಬಣ್ಣದೊಳಗಿನ ಬಣ್ಣವಾಗುವೆ

ಬಾನಂಗಗಳದ ಬಾನಾಡಿಯಾಗ ಬಯಸುವೆ

ತನುವಿನ ಕಣಗಳೆಲ್ಲವೂ ಮುಕ್ತತೆಗೆ ಹೊರಾಡುತ್ತೀವೆ..

ಜೀವನ ಟ್ರಸ್ಟ್​​​ನ ಸ್ಥಾಪಕ ಅನುಭವ ಗುಪ್ತಾ ಅವರಿಗೆ ಚಿಕ್ಕಂದಿನಿಂದ ಕುತೋಹಲವೊಂದಿತ್ತು. ತನ್ನ ಕುಟುಂಬದ ಕಾರ್ಯಕ್ರಮಗಳಿಗೆ ಬರುವ ಮೂರನೇಯ ಪಂಕ್ತಿಯ ಈ ಜನಾಂಗದ ಬಗ್ಗೆ ತಿಳಿದುಕೊಂಡಿದ್ದರು. ಅವರದ್ದೆ ಪದ್ಧತಿಯ ಹಾಡುಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಮುಂದುವರೆಯುವ ಬಗ್ಗೆ ಆಶ್ಚರ್ಯ ಪಟ್ಟಿದ್ದರು. ಅವರ ಹಾಡುಗಳನ್ನು ರೆಕಾರ್ಡ್ ಮಾಡಿಸಿದ್ರು. ಅವುಗಳಲ್ಲಿ ಕೆಲವೊಂದು ಅದ್ಬುತವಾಗಿದ್ದವು. ಅಂಥವುಗಳನ್ನು ಕಾಯ್ದಿರಿಸಿಕೊಂಡಿದ್ದರು. ಲೈಂಗಿಕ ಅಲ್ಪಂಸಂಖ್ಯಾತರಲ್ಲಿ ಕೆಲವರ ಧ್ವನಿ ಮತ್ತು ಅವರ ಸಂಗೀತ ಸಾಧನೆ ಪ್ರದರ್ಶನಕ್ಕೆ ಯೋಗ್ಯವಾಗಿದ್ದವು. ಜೊತೆಗೆ ಸಂಗೀತವನ್ನು ಕಾಯಕವಾಗಿ ಇರಿಸಿಕೊಳ್ಳಲು ಸಮರ್ಥರಾಗಿದ್ದರು. ಇಂಥಹ ಹಲವು ವಿಚಾರಗಳಿಂದ ಈ ಆಲ್ಬ್‍ಂ ಬರುವುದಕ್ಕೆ ಕಾರಣವಾಗಿತ್ತು.

ಮುಕ್ತಾಯವೇ ಆರಂಭ:

32 ವರ್ಷದ ಅಂಕುಶ್​ ಗುಪ್ತಾ ಮಾಧ್ಯದ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀದ್ದರು. ಸಮಾಜದಲ್ಲಿ ಬದಲಾವಣೆಯ ತರಬೇಕು ಎನ್ನುವ ಮನೋಭಾವದವರು. ಪಿವಿಆರ್ ನೆಸ್ಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಸಿಎಸ್‍ಆರ್ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಶಾಲಾ ಪರಿಸರ ಅಭಿವೃದ್ಧಿ ಕಾರ್ಯಕ್ರಮದ ಜೊತೆ ಏಡ್ಸ್ ಜಾಗೃತಿಯನ್ನು ಮಾಡುತ್ತಾ ಬಂದಿದ್ದರು.

ಅಂಕುಶ್​ ಈ ಎರಡೂ ಯೋಜನೆಗಳನ್ನು ಅತೀ ಉತ್ಸಾಹದಿಂದಲೇ ಮಾಡುತ್ತಾ ಬಂದಿದ್ದರು. ಮಾಧ್ಯಮ ಮತ್ತು ಸಾಮಾಜಿಕ ಜೀವನವನ್ನು ಒಂದೇ ಸೂರಿನ ಅಡಿಯಲ್ಲಿ ತರಬೇಕೆಂದು 2010ರಲ್ಲಿ ಜೀವನ ಟ್ರಸ್ಟ್ ಎನ್ನುವುದನ್ನು ಆರಂಭಿಸಿದ್ದರು. ಟ್ರಸ್ಟ್​​ನ ಗುರಿ ಸಾಮಾನ್ಯಾಗಿತ್ತು. ಮಾಧ್ಯಮ ಮತ್ತು ಸಾಮಾಜಿಕ ವಿವಾದಗಳ ಮಧ್ಯ ಇರುವ ಬಿರುಕಗಳನ್ನು ಸರಿಪಡಿಸುವುದಾಗಿತ್ತು. ಈ ಮೂಲಕ ಹಣ ಸಂಗ್ರಹ ಮಾಡಿ ಜಾಗೃತಿ ಮೂಡಿಸುವ ಉದ್ದೇಶವಿತ್ತು.

ಜೀವನ ಟ್ರಸ್ಟ್ ಮೊದಲು ಕೈಗೆ ತೆಗೆದುಕೊಂಡ ಯೋಜನೆ ತೊನ್ನುರೋಗಿಗಳ ಕುರಿತು ಜಾಗೃತಿ ಮೂಡಿಸುವುದು. ಎರಡನೇಯದು ಲೈಂಗಿಕ ಅಲ್ಪಸಂಖ್ಯಾತರ ಮನದ ಧ್ವನಿಯಾದ ಆಲ್ಬಂ ದೇಶವ್ಯಾಪಿಗೊಳಿಸುವುದು.

ಎಚ್ಚರ.. ತೊನ್ನು ಕುಷ್ಟರೋಗವಲ್ಲ..!

ಬಹುತೇಕರಿಗೆ ಚರ್ಮಕ್ಕೆ ಬರುವ ಬಿಳಿ ತೊನ್ನನ್ನು ಕುಷ್ಟರೋಗ ಎನ್ನು ಮೂಢತ್ವ ಇದೆ. ಇದು ತೀರಾ ಕಡಿಮೇ ಜನರಲ್ಲಿ ಕಾಣಿಸಿಕೊಳ್ಳುವ ಚರ್ಮ ರೋಗ. ಇಂಥವರಿಗೆ ಸಮಾಜದಲ್ಲಿ ವಿಚಿತ್ರವಾಗಿ ಕಾಣುವ ಸ್ಥಿತಿ ನಿರ್ಮಾಣ ಮಾಡಲಾಗುತ್ತದೆ. ಇನ್ನೂ ಕೆಲವರಂತು ಇದೊಂದು ಸಾಂಕ್ರಾಮಿಕ ರೋಗ ಎಂದು ಇಂತಹವರನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಈ ಮಾರಕ ಪಿಡುಗನ್ನು ಹೊಗಲಾಡಿಸಲು ಸಂಸ್ಥೆ ಮುಂದಾಯಿತು.

image


ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜೀವನ ಟ್ರಸ್ಟ್ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿತ್ತು. ತೊನ್ನು ಅಂಟು ರೋಗವಲ್ಲ.. ಅಂಥವರಿಗೆ ದೂರ ಇಡಬೇಡಿ ಎಂದು ತಿಳಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಂಡಿತ್ತು. ಸಂಸ್ಥೆಯ ಕಾರ್ಯಕ್ರಮಕ್ಕೆ ಮಾಧ್ಯಗಳು ಸಾಥ್ ನಿಡಿದ್ದವು. ಜನರನ್ನು ಒಟ್ಟುಗೂಡಿಸುವುದು, ತೊನ್ನಿನ ಬಗ್ಗೆ ಮಾಹಿತಿ ನೀಡುವುದು, ಮಕ್ಕಳ ಚರ್ಮವನ್ನು ಪರೀಕ್ಷೆ ನಡೆಸುವುದು, ಸರಕಾರದ ವಿವಿಧ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಪೋಷಕರಿಗೆ ಸಾಮಾನ್ಯ ಮಾಹಿತಿಗಳನ್ನು ನೀಡುವುದು ಮಾಡುತ್ತಾ ಬಂದರು. ತೊನ್ನು ರೋಗಿಗಳನ್ನು ಕಂಡು ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿ ಅವರನ್ನ ಮುಖ್ಯ ವಾಹಿನಿಗೆ ತರುವಲ್ಲಿ ಟ್ರಸ್ಟ್ ಗೆದ್ದಿತ್ತು. ಪರಿಣಾಮ ಭಕ್ತಿ ತಲತಿ ಎನ್ನವ ಯುವತಿ ತನಗೆ ಬಂದಿದ್ದ ತೊನನ್ನು ಲೆಕ್ಕಿಸದೆ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಮಾಧ್ಯಮದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಕ್ರೀಡಾಸಕ್ತಿ ಹೊಂದಿದ್ದ ಭಕ್ತಿ ಈಗ ಮಾಧ್ಯಮದಲ್ಲಿ ಕ್ರೀಡಾ ವಿಶೇಷಗಳ ಕುರಿತು ಅಂಕಣಗಳನ್ನು ಬರೆಯುತ್ತಿದ್ದಾಳೆ.

ಪ್ರಸ್ತುತ ಜೀವನ ಟ್ರಸ್ಟ್ 300ಕ್ಕೂ ಹೆಚ್ಚು ತೊನ್ನು ರೋಗಿಗಳೊಂದಿಗೆ ಕೆಲಸ ಮಾಡುತ್ತಿದೆ. ಈ ರೋಗದ ಬಗ್ಗೆ ಜನ ಜಾಗೃತಿ ಮೂಡಿಸುವ ಕೈಪಿಡಿಯನ್ನು ಪ್ರಕಟಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.

ಯೋಜನೆ ಮತ್ತು ಸವಾಲುಗಳು:

ಹಣ ಸಂಗ್ರಹಣೆ ಮಾಡುವುದೇ ಟ್ರಸ್ಟ್​​ಗೆ ದೊಡ್ಡ ಸವಾಲಾಗಿತ್ತು. ಆಲ್ಬಂ ಬಿಡುಗಡೆ ಮಾಡಿದ ನಂತರವೂ ಹಣ ಬಂದಿರಲಿಲ್ಲ. ಅನುಭವನ್ನು ಬೇಟಿ ಮಾಡಿದ ಎಲ್ಲರೂ ಅಭಿನಂದಿಸುತ್ತಿದ್ದರು ಹೊರತು ಧನ ಸಹಾಯ ಮಾಡುತ್ತಿರಲಿಲ್ಲ. ಸಾಮಾಜಿಕ ಹಿಂದುಳಿದವರ ಬಗ್ಗೆ ಕೆಲಸ ಮಾಡುವ ನೆದರ್‍ಲೆಂಡ್‍ನ ಪ್ಲಾನೆಟ್ ರೋಮಿಯೋ ಸಂಸ್ಥೆ 5000 ಯೂರೊ ಸಾಹಾಯ ಮಾಡಿತ್ತು. ನಂತರ ಯುಎನ್‍ಡಿಪಿ ಇಂಡಿಯಾದವರು ಧನ ಸಹಾಯ ಮಾಡಿದ್ರು. ಸಮುದಾಯದ ಬಳಿ ತೆರಳಿ 26 ಸಾವಿರ ರೂ ಸಂಗ್ರಹ ಮಾಡಿದ್ದರು. ಅನುಭವ ಹೆಳುವಂತೆ ``ತನ್ನ ತಂದೆಯ ಸಹಾಯ ಇಲ್ಲದಿದ್ದರೆ ಈ ಟ್ರಸ್ಟ್ ಕಟ್ಟುವುದು ಅಸಾಧ್ಯವಾಗಿತ್ತು. ಇನಷ್ಟು ಆರ್ಥಿಕ ಬೆಂಬಲ ಇದ್ದಿದ್ದರೆ ಮತ್ತಷ್ಟು ಕೆಲಸ ಮಾಡಬಹುದಾಗಿತ್ತು ಎನ್ನುವುದು” ಅನುಭವ ಅವರ ಅಭಿಪ್ರಾಯ.

ಸಂಸ್ಥೆಯ ಇನ್ನೊರ್ವ ಜವಾಬ್ದಾರಿ ವ್ಯಕ್ತಿ ಸಮೀರ ಗರ್ಗ. ಮಾಲ್ ಒಂದರಲ್ಲಿ ಅಚಾನಕ್ ಆಗಿ ಸಿಕ್ಕ ಸಮೀರ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಸಂಸ್ಥೆಯ ಉಪಾಧ್ಯಕ್ಷರಾಗಿ ಹೆಗಲಿಗೆ ಹೆಗಲು ಕೊಟ್ಟು ಸಂಘಟಣೆ ಕಟ್ಟುತ್ತಿದ್ದಾರೆ. ಸಂಸ್ಥೆಯ ತೊನ್ನು ರೋಗಿಗಳ ಕುರಿತು ಮಾಡುತ್ತೀರಾ ಕೆಲಸಕ್ಕೆ ಸಮೀರ ಸಾಕಷ್ಟು ಸಾಥ್​ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಅತೀ ಅಪರೂಪದದ ರೋಗಗಳಾಗಿರುವ ಸ್ನಾಯು ಕ್ಷಯ, ಅಸ್ಪರಗ್ಸ್ ಸೇರಿದಂತೆ ಇತರ ರೋಗಗಳ ಜಾಗೃತಿ ಮೂಡಿಸಲು ಯೋಜನೆ ತಯಾರಿಸಿದ್ದಾರೆ. ದೇಶದಲ್ಲಿ ಜಾಗೃತಿಯ ಕೊರೆತೆ ಉಂಟಾಗದಿರಲು ಬೇಕಾದ ಎಲ್ಲಾ ಕಾರ್ಯತ್ರಂತ್ರಗಳನ್ನು ಮಾಡುವು ಕನಸು ಕಂಡಿದ್ದಾರೆ. ತಾವು ಮಾಡುವ ಕೆಲಸ ಸಮಾಜದ ಮತ್ತು ಸರಕಾರದ ಮನಸ್ಥಿತಿಯನ್ನು ಬದಲಾಯಿಸುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ.