ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಬೆಳಕು : ಪ್ರಾಪರ್ಟಿ ಖರೀದಿದಾರರ ಮಾರ್ಗದರ್ಶಕ ಹೋಮ್ಸ್ ಫೈ..

ಟೀಮ್​​ ವೈ.ಎಸ್​. ಕನ್ನಡ

0

ಸ್ವಂತದ್ದೊಂದು ನಿವೇಶನ ಕೊಂಡುಕೊಳ್ಳಬೇಕು, ಕನಸಿನ ಮನೆ ಕಟ್ಟಿಕೊಳ್ಳಬೇಕು ಅಂತ ಅದೆಷ್ಟೋ ಮಂದಿ ಅಂದುಕೊಳ್ಳುತ್ತಾರೆ. ಆದರೆ ಈಗಿನ ರಿಯಲ್ ಎಸ್ಟೇಟ್ ಸ್ಪರ್ಧೆಯಲ್ಲಿ ಅಂದುಕೊಂಡಿದ್ದನ್ನ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇನ್ನು ಮನೆ ಹಾಗೂ ಸೈಟ್ ಬಗ್ಗೆ ಗೊಂದಲ ಇದ್ದವರ ನೆರವಿಗಾಗಿ ಈಗಾಗಲೇ ಹಲವು ಕಂಪನೆಗಳು ಹುಟ್ಟಿಕೊಂಡಿವೆ. ಮಲ್ಟಿ ಬಿಲಿಯನ್ ಡಾಲರ್ ಮಾರ್ಕೆಟ್ ವ್ಯಾಲ್ಯೂ ಹೊಂದಿರುವ ರಿಯಲ್ ಎಸ್ಟೇಟ್ ನಲ್ಲಿ ಅದೆಷ್ಟೋ ಡೆವಲಪರ್ ಗಳು, ಬ್ರೋಕರ್ ಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದ್ರಲ್ಲೂ ಕೆಲವು ಕಂಪನಿಗಳು ಕಾಮನ್ ಫ್ಲೋರ್ ಮನೆಗಳ ಮೇಲೆ ಪ್ರತೀ ವರ್ಷ ಕನಿಷ್ಠ 100 ಮಿಲಿಯನ್ ಹೂಡಿಕೆ ಮಾಡುತ್ತಲೇ ಇರುತ್ತವೆ. ಜೊತೆಗೆ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಸ್ಟಾರ್ಟಅಪ್ ಗಳಾದ ಗ್ರ್ಯಾಬ್ ಹೌಸ್, ರಿಯಾಲ್ಟಿ ಕ್ಯಾಂಪಸ್ ಹಾಗೂ ಘರ್ ಫೌಂಡರ್ ನಂತಹ ಕಂಪನಿಗಳು ಮನೆ ಖರೀದಿ ಮಾಡಲು ಬಯಸುವವರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿವೆ. ಆದ್ರೆ ರಿಯಲ್ ಎಸ್ಟೇಟ್ ಮಾರ್ಕೇಟ್ ನಲ್ಲಿ ಸಮಸ್ಯೆಗಳು ಎಂದಿಗೂ ಮುಗಿಯೋದಿಲ್ಲ. ಹೀಗಿರುವಾಗ ರಿಯಲ್ ಎಸ್ಟೇಟ್ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಿ, ಗ್ರಾಹಕರಿಗೆ ನೆರವಾಗಲು ನಿಂತಿರುವ ಕಂಪನಿ ಹೋಮ್ಸ್ ಫೈ...

“ ಮುಂಬೈನಂತಹ ನಗರಗಳಲ್ಲಿ ಮನೆಹೊಂದಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ನನ್ನನ್ನೂ ಸೇರಿಸಿ ಅದೆಷ್ಟೋ ಜನ ಇನ್ನಿಲ್ಲದ ಸಮಸ್ಯೆಗಳನ್ನ ಎದುರಿಸುತ್ತಿರುತ್ತಾರೆ. ಅಲ್ಲದೆ ಲಭ್ಯವಿರುವ ಪ್ರಾಪರ್ಟಿಗಳು ಹಾಗೂ ಖರೀದಿದಾರರ ನಡುವೆ ದೊಡ್ಡ ಅಂತರವೇ ಇದೆ. ಇದಕ್ಕೊಂದು ಪರಿಹಾರ ಕಂಡುಕೊಡಬೇಕು ಹಾಗೂ ಪರಿಸ್ಥಿತಿಯ ಲಾಭ ಪಡೆದು ರಿಯಲ್ ಎಸ್ಟೇಟ್ ಏಜೆನ್ಸಿಯೊಂದನ್ನ ಶುರುಮಾಡಬೇಕು ಅಂತ ಯೋಜನೆ ರೂಪಿದೆ. ಇದಕ್ಕಾಗಿ ಹಲವರನ್ನ ಭೇಟಿಯಾಗಿ ಮಾತುಕತೆ ನಡೆಸಿದೆ. ಬ್ರೇಕರ್ ಹಾಗೂ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು ಸರ್ವೇ ನಡೆಸಿದೆ. ಈ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು ನನ್ನ ಕಂಪನಿ ಈಗ ಗ್ರಾಹಕರಿಗೆ ನೆರವು ನೀಡುವುದರಲ್ಲಿ ಯಶಸ್ಸು ಕಂಡಿದೆ ” – ಆಶೀಶ್ ಕುಕ್ರೇಜಾ, ಹೋಮ್ ಫೈ ಸಂಸ್ಥಾಪಕ

ಪ್ರಾಪರ್ಟಿ ಸರ್ವೀಸ್ ನಲ್ಲಿ ಡಿಫರೆಂಟ್ ಆಗಿ ಗುರುತಿಸಿಕೊಂಡಿರುವ ಹೋಮ್ಸ್​​ ಫೈ ಸುಲಭವಾಗಿರುವ ಮಾರ್ಗೋಪಾಯಗಳನ್ನ ಗ್ರಾಹಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಾಪರ್ಟಿ ಹುಡುಕಾಟ, ರಿಯಲ್ ಎಸ್ಟೇಟ್ ಸರ್ವೀಸ್ ನಲ್ಲಿ ಬೆಳೆಯುತ್ತಿರುವ ದೊಡ್ಡ ಕಂಪನಿಯಾಗಿ ಗುರುತಿಕೊಂಡಿದೆ. ಈ ಮೂಲಕ ಖರೀದಿದಾರರು ಹಾಗೂ ಪ್ರಾಪರ್ಟಿ ನಡುವಿನ ದೊಡ್ಡ ಕೊಂಡಿಯಾಗಿದೆ ಹೋಮ್ಸ್ ಫೈ.

ಗ್ರಾಹಕರ ಸಮಸ್ಯೆಗಳು – ರಿಯಲ್ ಎಸ್ಟೇಟ್ ಉದ್ಯಮ ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಇಲ್ಲಿ ದೊಡ್ಡ ಸಮಸ್ಯೆಗಳ ಆಗರವೇ ಇದೆ. ಅದ್ರಲ್ಲೂ ಖರೀದಿದಾರರು ಇನ್ನಿಲ್ಲದ ರೀತಿಯ ಕನ್ ಫ್ಯೂಸನ್ ಗಳನ್ನು ಹೊಂದಿರುತ್ತಾರೆ. ಅಲ್ಲದೆ ತಮ್ಮ ಕನಸಿನ ಮನೆಯನ್ನ ತಮ್ಮದಾಗಿಸಿಕೊಳ್ಳಲು ಲೆಕ್ಕವಿಲ್ಲದಷ್ಟು ಮಧ್ಯವರ್ತಿಗಳನ್ನ ಹಾಗೂ ಬ್ರೋಕರ್ ಗಳನ್ನ ಸಂಪರ್ಕಿಸಬೇಕಾಗುತ್ತದೆ. ಅದ್ರಲ್ಲೂ ಲೀಗಲ್ ಡಾಕ್ಯುಮೆಂಟೇಶನ್ ಗಳು, ಸುಸಜ್ಜಿತ ಫರ್ನಿಶಿಂಗ್, ಪ್ಯಾಕರ್ಸ್ ಮತ್ತು ಮೂವರ್ಸ್ ಗಳ ಬಗ್ಗೆ ಅತೀ ದೊಡ್ಡ ಸಮಸ್ಯೆಗಳನ್ನ ಎದುರಿಸುತ್ತಾರೆ. ಅದೆಷ್ಟೋ ಜನರಿಗೆ ಇವುಗಳು ಕಠಿಣವಾಗಿ ಗೋಚರಿಸಿ ಮಾನಸಿಕವಾಗಿ, ಆರ್ಥಿಕವಾಗಿ ಕುಸಿಯುತ್ತಾರೆ. ಭಾರೀ ಖರ್ಚು ಮಾಡಿದ್ರೂ, ತಾವು ಬಯಸಿದ್ದನ್ನ ಬಯಸಿದ ಹಾಗೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಬ್ರೋಕರ್ಸ್ ಮತ್ತು ಡೆವಲಪರ್ಸ್ ಸಮಸ್ಯೆಗಳು – ಗ್ರಾಹಕರ ಸಮಸ್ಯೆಗಳು ಒಂದು ರೀತಿಯದ್ದಾದ್ರೆ, ಬ್ರೋಕರ್ಸ್ ಹಾಗೂ ಡೆವಲಪರ್ಸ್ ಗಳೇ ವಿಭಿನ್ನವಾದ ಸವಾಲುಗಳನ್ನ ಹೊಂದಿರುತ್ತಾರೆ. ಅದೆಷ್ಟೋ ಬಾರಿ ಪ್ರಾಪರ್ಟಿಗಳನ್ನ ಲಿಸ್ಟ್ ಮಾಡುವುದಕ್ಕೆ ಹಾಗೂ ಗ್ಯಾರಂಟಿಯೇ ಇಲ್ಲದ ಮಾತುಕತೆಗಳಿಗಾಗಿ ಹಣವನ್ನ ವ್ಯಯಿಸಬೇಕಾಗುತ್ತದೆ. ಉಪಯೋಗವಿಲ್ಲದ ನೂರಾರು ಫೋನ್ ಕಾಲ್ ಗಳು, ಮೀಟಿಂಗ್ ಗಳಲ್ಲಿ ಭಾಗವಹಿಸಿ ಸಮಯ ವ್ಯರ್ಥಮಾಡಬೇಕಾಗುತ್ತದೆ. ಕೆಲವು ಟೈಂಪಾಸ್ ಗ್ರಾಹಕರನ್ನ ನಿಭಾಯಿಸುವುದೇ ಬ್ರೋಕರ್ಸ್ ಮತ್ತು ಡೆವಲಪರ್ಸ್ ಮುಂದಿರುವ ದೊಡ್ಡ ಸಮಸ್ಯೆಗಳು. ಈ ಮಧ್ಯೆ ನಿಜವಾದ ಖರೀದಿದಾರರೊಂದಿಗೆ ವ್ಯವಹಾರ ನಡೆಸಿದ್ರೂ ಅವರ ಸಮಸ್ಯೆಗಳನ್ನ ಅಷ್ಟು ಸುಲಭವಾಗಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಬಹುತೇಕ ಎಲ್ಲರಿಗೂ ತಮ್ಮ ಬದುಕಿನಲ್ಲಿ ಕೇವಲ ಒಂದು ಬಾರಿ ಪಾಪರ್ಟಿ ಖದೀರಿಸಲು ಅವಕಾಶ ಸಿಗುತ್ತದೆ. ಆದ್ರೆ ಅದನ್ನ ತಮ್ಮ ಅಗತ್ಯ ಹಾಗೂ ಬಜೆಟ್ ಗೆ ತಕ್ಕಂತೆ ಕಡಿಮೆ ಕಾಲಾವಕಾಶದಲ್ಲಿ ಹೊಂದಿಸಿಕೊಳ್ಳಲು ಬಯಸುತ್ತಾರೆ.

ರಿಯಲ್ ಎಸ್ಟೇಟ್ ನಲ್ಲಿ ಗ್ರಾಹಕರ ನಾಡಿ ಮಿಡಿತವನ್ನ ಅರಿತಿರುವ ಹೋಮ್ಸ್​​ ಫೈ ಖರೀದಿದಾರರು ಹಾಗೂ ಮಾರಾಟಗಾರರಿಗೆ ನೆರವು ನೀಡುತ್ತಿದೆ. ಪ್ಯಾಕಿಂಗ್, ಶಿಫ್ಟಿಂಗ್, ಮನೆ ನವೀಕರಣ, ಲೀಗಲ್ ಡಾಕ್ಯುಮೆಂಟೇಶನ್ ಸೇರಿದಂತೆ ಹಲವು ರೀತಿಯ ಸರ್ವೀಸ್ ಗಳನ್ನ ನೀಡುತ್ತಿದೆ. ಬ್ರೋಕರ್ ಗಳೊಂದಿಗೂ ಉತ್ತಮ ಸಂಬಂಧ ಹೊಂದಿರುವ ಹೋಮ್ಸ್ ಫೈ ನಕಲಿ ಪ್ರಾಪರ್ಟಿಗಳನ್ನೂ ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾಗಿದೆ. ಪ್ರಾಪರ್ಟಿ ಹುಡುಕಾಟ ಯಾವತ್ತೂ ಸುಲಭ ಮತ್ತು ಸರಳವಾಗಿರಬೇಕು ಅನ್ನುವುದು ಹೋಮ್ಸ್ ಫೈ ಕಂಪನಿ ಮಾಲಿಕ ಆಶೀಶ್ ಅವರ ತತ್ವ. ಪ್ರಾಪರ್ಟಿ ಹುಡುಕಾಟದಲ್ಲಿ ತಾವು ಕಲಿತ ಅನುಭವದ ಪಾಠಗಳನ್ನೇ ತಮ್ಮ ಬ್ಯುಸಿನೆಸ್ ನಲ್ಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಸಂಪನ್ಮೂಲ ನಿರ್ವಹಣೆ ಸುಲಭವಾಗಿದ್ದು, ರಿಯಲ್ ಎಸ್ಟೇಟ್ ಉದ್ದಿಮೆಯನ್ನೂ ಸಮರ್ಪಕವಾಗಿ ನಿಭಾಯಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಹೋಮ್ ಫೈ ಕಂಪನೆಯ ಯಶಸ್ಸಿಗೆ ಕಾರಣವಾಗಿರುವ ಮತ್ತೊಬ್ಬ ವ್ಯಕ್ತಿ ಸಹ ಸಂಸ್ಥಾಪಕ ಮುಖೇಶ್ ಮಿಶ್ರಾ. ಕಂಪೆನಿಯ ಸೇಲ್ಸ್ ಪಾರ್ಟನರ್ ಆಗಿರುವ ಮಿಶ್ರಾ ಪ್ರಾಪರ್ಟ್ ಮಾರ್ಕೆಟ್ ಬಗ್ಗೆ ಅದ್ಭುತವಾದ ಹಿಡಿತ ಹೊಂದಿದ್ದಾರೆ. ದೇಶದ ಹಲವು ನಗರ ಪ್ರದೇಶಗಳಲ್ಲಿರುವ ಪ್ರಾಪರ್ಟಿ ಲೋಕೇಶನ್ ಗಳು ಮುಖೇಶ್ ಗೆ ತಿಳಿದಿವೆ. ಹೀಗಾಗಿ ಮಾರಾಟಗಾರರು, ಬ್ರೋಕರ್ಸ್ ಹಾಗೂ ಖರೀದಿದಾರರ ಸಂಪರ್ಕ ತುಂಬಾ ಸುಲಭವಾಗಿದೆ. “ ಮೊದಲ ಆರು ತಿಂಗಳು ನಾವು ಗ್ರಾಹಕರು ಬಯಸಿದ ಏರಿಯಾಗಳಲ್ಲಿ ಪ್ರಾಪರ್ಟಿ ಹುಡುಕಲು ನಮ್ಮ ಖರ್ಚಿನಲ್ಲೇ ಕರೆದುಕೊಂಡು ಹೋಗುತ್ತಿದ್ದೇವು. ಕೆಲವೊಮ್ಮೆ ದುಬೈಗೂ ಹೋಗಿದ್ದು ಇದೆ. ಮೊದಲು ಇವುಗಳ ನಿರ್ವಹಣೆ ಕಷ್ಟವೆನಿಸಿದ್ರೂ, ನಮ್ಮ ಕಂಪನಿಗೆ 110 ಡೀಲ್ ಗಳು ಸಿಕ್ಕಿದವು. ಇದು ಸಾಕಷ್ಟು ಲಾಭ ತಂದುಕೊಟ್ಟಿತ್ತು ” ಅಂತ ಮಿಶ್ರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹೋಮ್ಸ್ ಫೈ ರಿಯಲ್ ಎಸ್ಟೇಟ್ ಏಜೆನ್ಸಿ ಶುರುವಾಗಿದ್ದು ಕೇವಲ 15 ಲಕ್ಷ ರೂಪಾಯಿ ಬಂಡವಾಳದಲ್ಲಿ. ಆದ್ರೆ ಇವತ್ತು ಕಂಪನಿಯ ವ್ಯಾಲ್ಯೂ 15 ಕೋಟಿ ರೂಪಾಯಿ. ಮುಂಬೈನಲ್ಲಿ ಆರಂಭವಾದ ಈ ಕಂಪನಿ ಇದೀಗ ಬೆಂಗಳೂರು, ಪುಣೆ, ಹೈದ್ರಾಬಾದ್ ಹಾಗೂ ಚೆನ್ನೈಗೂ ವಿಸ್ತರಿಸಿಕೊಂಡಿದೆ. ಭವಿಷ್ಯದಲ್ಲಿ ಇನ್ನಷ್ಟು ನಗರಗಳನ್ನ ವ್ಯಾಪಿಸುವ ಲೆಕ್ಕಾಚಾರದಲ್ಲಿದೆ ಹೋಮ್ಸ್ ಫೈ. ಹೀಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಠಿಣ ಹಾದಿಯನ್ನ ಸವೆಸಿರುವ ಹೋಮ್ಸ್ ಫೈ ಸದ್ಯ ಪ್ರಾಪರ್ಟಿ ಖರೀದಿದಾರರಿಗೆ ನೆಚ್ಚಿನ ಮಾರ್ಗದರ್ಶಕ.

ಲೇಖಕರು – ಪ್ರದೀಪ್ ಗೋಯಲ್
ಅನುವಾದ – ಬಿ ಆರ್ ಪಿ ಉಜಿರೆ

Related Stories