ಬಂದು ನೋಡಿ... ಎಂಜಾಯ್​ ಮಾಡಿ- ಇನ್ವೆಸ್ಟ್​ ಕರ್ನಾಟಕದ ವಸ್ತು ಪ್ರದರ್ಶದಲ್ಲಿವೆ ಹಲವು ಅಚ್ಚರಿಗಳು

JRM

0

ಬಂಡವಾಳ ಹೂಡಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಒಂದೆಡೆ ಉದ್ಯಮಿಗಳು ತಾವು ಯಾವ ಕ್ಷೇತ್ರದಲ್ಲಿ ಎಷ್ಟು ಬಂಡವಾಳ ಹೂಡುತ್ತಿದ್ದೇವೆ ಎಂದು ಘೋಷಿಸುತ್ತಿದ್ದರೆ, ಇನ್ನೊಂದೆಡೆ ಹೊಸ ಆವಿಷ್ಕಾರಗಳು ಜನರ ಗಮನ ಸೆಳೆಯುತ್ತಿದ್ದವು. ಸಮಾವೇಶದಲ್ಲಿ ಆಯೋಜಿಸಲಾಗಿರುವ ಎಕ್ಸಿಬಿಷನ್‍ನಲ್ಲಿ ಹತ್ತು ಹಲವು ಹೊಸ ಯಂತ್ರ, ತಂತ್ರಜ್ಞಾನ ಆವಿಷ್ಕಾರಗಳು ತೆರೆದುಕೊಂಡರು. ಸಮಾವೇಶದಲ್ಲಿ ಪಾಲ್ಗೊಂಡವರನ್ನು ಕ್ಷಣಕಾಲ ಅವಕ್ಕಾಗುವಂತಹ ತಂತ್ರಜ್ಞಾನಗಳು ಪ್ರದರ್ಶನಗೊಂಡವು.

ಪ್ರಮುಖವಾಗಿ ಅಮೆರಿಕದ ಶ್ವೇತಭವನ ಸೇರಿ ಹಲವು ಸ್ಥಳಗಳಲ್ಲಿ ಕಾಣಸಿಗುವ ಬೀಮ್ ಸಂಚಾರಿ ವಿಡಿಯೋ ಕಾನ್ಫರೆನ್ಸಿಂಗ್ ಉಪಕರಣ, ಸಂಚಾರಿ ಸೋಲಾರ್ ತಳ್ಳುವಗಾಡಿ, ಹೆಚ್ಚು ಬಾಳಿಕೆ ಬರುವ ಸೂಚನಾ ಫಲಕಗಳು ಹೀಗೆ ಅನೇಕ ನೂತನ ಅವಿಷ್ಕಾರಿ ಯಂತ್ರಗಳು ಪ್ರದರ್ಶನಗೊಂಡವು.

ಬೀಮ್ ಸಂಚಾರಿ ಕಾನ್ಫರೆನ್ಸ್

ಅಮೆರಿಕದ ಸೂಟೆಬಲ್ ಟೆಕ್ನಾಲಜೀಸ್ ಸಂಸ್ಥೆ ಆವಿಷ್ಕರಿಸಿರುವ ಈ ಬೀಮ್ ಸಂಚಾರಿ ಕಾನ್ಫರೆನ್ಸ್ ಯಂತ್ರ ಇನ್ವೆಸ್ಟ್ ಕರ್ನಾಟಕದ ಪ್ರದರ್ಶನ ಸ್ಥಳದಲ್ಲಿ ಪ್ರಮುಖ ಆಕರ್ಷಣೆ ಎನಿಸಿಕೊಂಡಿದೆ. ಈ ಯಂತ್ರ ಮೂಲಕ ನೀವು ಮನೆಯಲ್ಲಿದ್ದು ಕೊಂಡೇ ಕಾನ್ಫರೆನ್ಸ್ ಮೂಲಕ ತರಗತಿಯಲ್ಲಿ ನಡೆಯುವ ಪಾಠ, ಕಚೇರಿಯಲ್ಲಿನ ಕೆಲಸಗಳನ್ನು ಮಾಡಬಹುದು. ಅಮೆರಿಕಾದಲ್ಲಿ ಈಗಾಗಲೆ ಈ ಯಂತ್ರ ಬಳಕೆಯಾಗುತ್ತಿದ್ದು, ಒಂದು ಬೀಮ್‍ನ ಮೊತ್ತ 2 ಸಾವಿರ ಡಾಲರ್. ಈ ಯಂತ್ರವೀಗ ಭಾರತೀಯ ಮಾರುಕಟ್ಟೆಗೆ ತರಲು ಇನ್ವೆಸ್ಟ್ ಕರ್ನಾಟಕಕ್ಕೆ ಬಂದಿದೆ.

ಇನ್ನಷ್ಟು ಆವಿಷ್ಕಾರಗಳು

ಇದೇ ರೀತಿ ಬೆಂಗಳೂರಿನ ಶೋಭಾ ಗ್ಲೋಬ್ಸ್ ಸಂಸ್ಥೆ ತಳ್ಳುವ ಗಾಡಿ ವ್ಯಾಪಾರಿಗಳಿಗಾಗಿಯೇ ಸೋಲಾರ್ ತಳ್ಳುಗಾಡಿಯನ್ನು ಆವಿಷ್ಕರಿಸಿದೆ. ಅದರಂತೆ ಗಾಡಿಯ ಮೇಲ್ಭಾಗದಲ್ಲಿ ತಲಾ 250 ವ್ಯಾಟ್ಸ್ ಸಾಮಥ್ರ್ಯದ ಎರಡು ಸೋಲಾರ್ ಫಲಕ, ಗಾಡಿಯ ಕೆಳಭಾಗದಲ್ಲಿ 150 ಎಇಎಚ್‍ನ ಎರಡು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಗಾಡಿಯನ್ನು ಬಿಸಿಲಲ್ಲಿ ನಿಲ್ಲಿಸಿದರೆ ವಿದ್ಯುತ್ ವಿತ್ಪಾದನೆಯಾಗುತ್ತದೆ. ಅದರಿಂದ ವಿದ್ಯುತ್‍ನಿಂದ ಚಲಿಸುವ ಯಂತ್ರಗಳಿಗೆ ಬಳಸಬಹುದು.

ಅದೇ ರೀತಿ ಕರ್ನಾಟಕ ವೇರ್‍ಹೌಸಿಂಗ್ ಕಾರ್ಪೋರೇಷನ್ ಸಂಸ್ಥೆ ತನ್ನ ಎಲ್ಲ ಉಗ್ರಾಣಗಳಲ್ಲೂ ಸೋಲಾರ್ ಘಟಕ ಅಳವಡಿಸಿ ಪ್ರತಿ ಉಗ್ರಾಣದಿಂದ 150 ಮೆಗಾವ್ಯಾಟ್​ ಉತ್ಪಾದಿಸುತ್ತಿದೆ. ಅದನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ಇನ್ನು ಪೀಣ್ಯದಲ್ಲಿರುವ ಕಾವೇರಿ ಎನಾಮಲ್ ಆ್ಯಂಡ್ ಅಲೈಡ್ ಇಂಡಸ್ಟ್ರೀಸ್ ಸಂಸ್ಥೆ ಎನಾಮಲ್ ಕೋಟಿಂಗ್ ತಂತ್ರಜ್ಞಾನವನ್ನು ಬಳಸಿ ಫಲಕಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದೆ. ಅದರಿಂದ ಸೂಚನಾ ಫಲಕಗಳು ಹೆಚ್ಚುದಿನ ಬಾಳಿಕೆ ಬರುತ್ತದೆ. ಇವುಗಳೊಂದಿಗೆ ಇನ್ನು ಅನೇಕ ಹೊಸಹೊಸ ಆವಿಷ್ಕಾರಗಳಿದ್ದು ಎಲ್ಲರ ಗಮನ ಸೆಳೆಯುತ್ತಿವೆ.

ಸಂಸ್ಕೃತಿಗೂ ಒತ್ತು

ಪ್ರದರ್ಶನ ಮತ್ತು ಸಮಾವೇಶ ಕರ್ನಾಟಕ ಸಂಸ್ಕøತಿಯನ್ನು ಪ್ರತಿಬಿಂಬಿಸಿತು. ಪ್ರದರ್ಶನದಲ್ಲಿ ಕರ್ನಾಟಕ ಸರ್ಕಾರದಿಂದ ಹಾಕಲಾದ ಮಳಿಗೆಯಲ್ಲಿ ರಾಜ್ಯದ ಬೆಳೆಗಳ ಬಗ್ಗೆ ಸೂಕ್ಷ್ಮವಾಗಿ ಮತ್ತು ಸುಂದರವಾಗಿ ಬಿಂಬಿಸಲಾಗಿತ್ತು. ಸಮಾವೇಶದ ಸೆಮಿನಾರ್‍ಗಳನ್ನು ಆಯೋಜಿಸಲು ನೇಮಿಸಲಾಗಿದ್ದವರಲ್ಲಿ ಪುರುಷರು ಬಿಳಿ ಅಂಗಿ, ಪಂಚೆ, ಶಲ್ಯ, ಮಹಿಳೆಯರು ನೀಲಿ ಸೇರೆಯಲ್ಲಿ ಮಿಂಚುತ್ತಿದ್ದರು. ಹಾಗೆಯೇ, ನಮ್ಮತನವನ್ನು ಪ್ರತಿಬಿಂಬಿಸುವಂತಿತ್ತು.

ರೋಬೋಟ್ ಆಕರ್ಷಣೆ

ಸಮಾವಶದ ಆಯೋಜನೆಯಷ್ಟೇ ಅಲ್ಲದೆ ಉದ್ಘಾಟನೆಯನ್ನು ರಾಜ್ಯ ಸರ್ಕಾರ ಇನ್ನೋವೇಷನ್ನಾಗಿ ಮಾಡಿತ್ತು. ಕರ್ನಾಟಕ ಯಾವ ದಿಕ್ಕಿನತ್ತ ಸಾಗುತ್ತಿದೆ ಮತ್ತು ಇಲ್ಲಿನ ತಂತ್ರಜ್ಞಾನ ಎಷ್ಟು ಸದೃಢವಾಗಿದೆ ಎಂಬುದನ್ನು ಬಿಂಬಿಸಲು ರೋಬೋಟೊಂದನ್ನು ರೆಡಿ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದ ವೇಳೆ ರೋಬೋಟ್ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಳಿ ತನ್ನ ಹಸ್ತವನ್ನು ಅವರ ಮುಂದೆ ಚಾಚಿತ್ತು. ಜೇಟ್ಲಿ ರೋಬೋಟ್ ಕೈ ಮುಟ್ಟಿದ ಕೂಡಲೆ ಬೃಹತ್ ಸಮಾವೇಶಕ್ಕೆ ಚಾಲನೆ ದೊರೆತಿತ್ತು.

Related Stories