ನಾನು ಉದ್ಯಮಿಯಾಗಿ ಮಾಡಿದಅತಿಘೋರ ತಪ್ಪುಗಳು

ಟೀಮ್​ ವೈ.ಎಸ್​. ಕನ್ನಡ

ನಾನು ಉದ್ಯಮಿಯಾಗಿ ಮಾಡಿದಅತಿಘೋರ ತಪ್ಪುಗಳು

Thursday December 24, 2015,

3 min Read

ಸಮಸ್ಯೆಗಳಿಗೆ ಕಠಿಣವಾಗಿರು ಮತ್ತುಜನರಿಗೆ ಮೃದುವಾಗಿರುಎಂದು ನನ್ನ ಗುರುಗಳು ಹೇಳಿಕೊಟ್ಟಿದ್ದರು. 15 ವರ್ಷವಾದ ನಂತ್ರವೂ ನಾನು ಇನ್ನೂಅದನ್ನೇಕಲಿಯತ್ತಿದ್ದೇನೆ. ಕಲಿಯುವುದಕ್ಕಿಂತ ಹೇಳುವುದು ತುಂಬಾ ಸುಲಭ.ಮೊದಲ ಬಾರಿಗೆ ಸಲಹೆ ಅರ್ಥಮಾಡಿಕೊಂಡಿದ್ದು 2001ರಲ್ಲಿ. ಕಾಲೇಜು ಮುಗಿದ ನಂತ್ರ ನಾನು ಮೊದಲ ಕಂಪನಿ ಪ್ರಾರಂಭಮಾಡಿದೆ.ಡಾಟ್‍ಕಾಂ ಗುಳ್ಳೆ ಒಡೆದ ನಂತ್ರ ಅದು ಮಾನ ಉಳಿಸಿಕೊಳ್ಳಲು ಸ್ವಾಧೀನಕ್ಕೆ ಒಳಗಾಯಿತು. ಆ ಸಮಯದಲ್ಲಿ ಸಹ ಸಂಸ್ಥಾಪಕರು ಮತ್ತು ನನ್ನ ಸಹೋದ್ಯೋಗಿಗಳೊಡನೆ ನಾನು ಸೊಕ್ಕಿನಿಂದಒರಟಾಗಿ ನಡೆದುಕೊಳ್ಳುತ್ತಿದ್ದೆ. ನನಗೆ ಮತ್ತು ನನ್ನ ಸ್ಟಾರ್ಟ್‍ಅಪ್‍ಗೆ ಹಲವು ವರ್ಷ ದುಡಿದವರೊಂದಿಗೆ ನಾನು ಜಿಪುಣನಾಗಿದ್ದೆ ಮತ್ತು ಕಠಿಣವಾಗಿದ್ದೆ. ನನ್ನ ತಂಡದೊಂದಿಗೆ ಸಂಬಂಧ ಹಾಳುಮಾಡಿಕೊಂಡಿದ್ದೆ ಮತ್ತು ಸ್ವಾಧೀನಪಡಿಸಿಕೊಂಡ ಕಂಪನಿಯೊಂದಿಗೆ ವಿಶ್ವಾಸಾರ್ಹತೆ ಕಳೆದುಕೊಂಡೆ.ಇದೆಲ್ಲವನ್ನೂ ಸರಿಪಡಿಸಿಕೊಳ್ಳೋಕೆ ನನಗೆ ಒಂದು ದಶಕಕ್ಕೂ ಹೆಚ್ಚು ಕಾಲ ಬೇಕಾಯಿತು. ಅವರೊಂದಿಗೆ ಕೂತು ನಗುತ್ತಾ ನನ್ನ ತಪ್ಪುಗಳನ್ನು ನೆನೆಸಿಕೊಂಡು ನನ್ನ ಆಶೀರ್ವಾದಗಳ ಎಣಿಕೆ ಮಾಡ್ತೀನಿ. ಆಗಿನಿಂದಲೂ ಬೇರೆ ತರಹದ ತಪ್ಪುಗಳನ್ನು ಮಾಡಿಕೊಂಡು ಬರ್ತಿದ್ದೀನಿ ಮತ್ತು ಭವಿಷ್ಯದಲ್ಲಿ ಹೊಸ ರೀತಿಯ ತಪ್ಪುಗಳನ್ನು ಮಾಡಬಹುದು. ಆದರೂ ಪ್ರತಿಯೊಬ್ಬರೂ ನನ್ನನ್ನುಉತ್ತಮ ಮನುಷ್ಯನನ್ನಾಗಿ ಮಾಡಿದರು. ಜತೆಗೆ ಸಾಗಲು ಬಹಳ ದೂರದದಾರಿಯಿದೆ. ಜನರೊಂದಿಗೆ ಕಠಿಣವಾಗಿದ್ದದ್ದು ಉದ್ಯಮಿಯಾಗಿ ನಾನು ಮಾಡಿದ ದೊಡ್ಡ ತಪ್ಪು.

image


ಸ್ಟಾರ್ಟ್‍ಅಪ್‍ನಲ್ಲಿ ಬದಲಾವಣೆಯೊಂದೇನಿರಂತರ.ದಿ ಲೀನ್ ಸ್ಟಾರ್ಟ್‍ಅಪ್ ನ ಲೇಖಕ ಎರಿಕ್‍ರೈಸ್‍ನ ವ್ಯಾಖ್ಯಾನದಲ್ಲಿ ಸ್ಟಾರ್ಟ್‍ಅಪ್‍ಅಂದ್ರೆಹೊಸ ಉತ್ಪನ್ನಅಥವಾ ಸೇವೆಯನ್ನುಅನಿಶ್ಚಿತತೆಯ ಸ್ಥಿತಿಯಲ್ಲಿ ಮಾನವ ಸಂಸ್ಥೆಯೊಂದು ವಿನ್ಯಾಸಗೊಳಿಸುವುದು.ಬದಲಾವಣೆಯನ್ನುತಡೆಯೋ ನೈಸರ್ಗಿಕಗುಣ ಮಾನವನಲ್ಲಿದೆ.ಅನಿಶ್ಚಿತತೆಯ ಸಂದರ್ಭದಲ್ಲಿ ಮುಂದೇನಾಗತ್ತದೆಂದುಗೊತ್ತಿಲ್ಲದ ಸಮಯದಲ್ಲಿಕೆಟ್ಟ ಫಲಿತಾಂಶನಿರೀಕ್ಷಿಸುವುದು ನನ್ನ ಪ್ರವೃತ್ತಿ.ಇಂತಹ ಪ್ರಕೃತಿಯುಳ್ಳವ ನಾನೊಬ್ಬನೇಅಲ್ಲ.ಅನಿಶ್ಚಿತತೆ ಭಯದ ಬದಲು ಸಾಹಸ, ಸೋಲುವ ಭಯಕ್ಕೆ ಬದಲಾಗಿಗೆಲ್ಲುವಅವಕಾಶವನ್ನು ನನ್ನ ಮೆದುಳಿಗೆ ತುಂಬಿಕೊಳ್ಳಲು ನನಗೆ ಹಲವು ವರ್ಷಗಳೇ ಹಿಡಿದವು.ಭಯಇದೆ, ಆದ್ರೆ ಆಳದಲ್ಲಿ ಗುಂಡಿತೋಡಿ ಮುಚ್ಚಿದ್ದೀನಿ.ಪ್ರತಿಕೂಲ ಪರಿಸ್ಥಿರಿಯಲ್ಲಿ ಮನುಷ್ಯರೊಂದಿಗೆ ಪರಸ್ಪರ ಸಂವಹನದಲ್ಲಿ ಭಯ ಅನ್ನೋದು ಪ್ರಚೋದಿಸಿದಂತೆ ಕಾಣುತ್ತದೆ.ನಾವು ಯಾರನ್ನುಎಣಿಕೆ ಮಾಡ್ತೀವೋ ಅಥವಾ ನಮ್ಮನ್ನುಯಾರುಎಣಿಕೆ ಮಾಡ್ತಾರೋ ಆ ಸಂದರ್ಭದಲ್ಲಿಬಾಹ್ಯ ಘಟನೆಗಳಿಂದ ಅದೇ ಶಾಶ್ವತವಾದ ಪ್ರಭಾವಜನರ ಪ್ರತಿಕ್ರಿಯೆಯಲ್ಲಿಇರುವುದಿಲ್ಲ.

ಸಂಪೂರ್ಣ ವಿಶ್ವದ ಮೇಲೆ ಪ್ರಾಬಲ್ಯ, ಮಾರ್ಗದ ಬದಲಾವಣೆ, ಪ್ರಪಂಚಕ್ಕೆ ಕಚ್ಚು ಮಾಡುವುದು ಹೀಗೆ ನಮ್ಮದೇಆದ ಭರವಸೆ ಮತ್ತು ಕನಸುಗಳನ್ನು ಇಟ್ಟುಕೊಂಡು1999ರಲ್ಲಿ ಕಂಪನಿಯೊಂದನ್ನು ಪ್ರಾರಂಬಿಸಿದೆವು.ಇಂಟರ್‍ನೆಟ್ ಎಂಬ ವಿಜೃಂಬಣೆಯ ಗುಳ್ಳೆ ಆ ರೀತಿಯೋಚಿಸುವಂತೆ ನಮ್ಮನ್ನು ಮಾಡಿಬಿಟ್ಟಿತ್ತು.ಅದನ್ನು ವಿಸ್ತರಣೆ ಮಾಡುವಧೈರ್ಯತೋರಿದ್ದರಿಂದ ಹೂಡಿಕೆದಾರರು ಮತ್ತು ಮಾಧ್ಯಮದವರು ನಮ್ಮನ್ನುಹೊಗಳಿದರು.ಅದೇ ಸಮಯಕ್ಕೆಡಾಟ್ ಕಾಂ ಗುಳ್ಳೆ ಒಡೆದಾಗ ನೂರಾರು ನಷ್ಟದ ಸಾರ್ವಜನಿ ಕಇಂಟರ್‍ನೆಟ್ ಕಂಪನಿಗಳು ನಾಸ್ಡಾಕ್ ಸ್ಟಾಕ್‍ಎಕ್ಸ್‍ಚೇಂಜ್‍ನಲ್ಲಿತಮ್ಮ ಮೌಲ್ಯ ಕಳೆದುಕೊಳ್ಳಲಾರಂಭಿಸಿದವು.ಎಲ್ಲರೂ ನೋಡುತ್ತಿದ್ದಂತೆ ಬದಲಾವಣೆಆಯಿತು.ತಮ್ಮ ಪ್ರತಿಸ್ಫರ್ಧಿಗಳೊಂದಿಗೆ ಸ್ಟಾರ್ಟ್‍ಅಪ್‍ಗಳು ವಿಲೀನವಾಗತೊಡಗಿತು. ಬಿ2ಸಿ ನಿಂದ ಬಿ2ಬಿಗೆ ಬದಲಾದವು.ಸಂಸ್ಥೆಯನ್ನುಚಿಕ್ಕದು ಮಾಡಿ ಲಾಭದತ್ತ ಗಮನ ಹರಿಸಿದರು. ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದಕೆಳಸುತ್ತು ಹೆಚ್ಚಿಸಲುಅಥವಾಕಂಪನಿ ಮೌಲ್ಯವನ್ನು ಮರುಬಂಡವಾಳೀಕರಣಗೊಳಿಸಲು ಚಿಂತಿಸಿದರು. ಇದರ ಅರ್ಥಸ್ಟಾರ್ಟ್‍ಅಪ್‍ನಲ್ಲಿದ್ದವರಿಗೆ ಪ್ರಚಂಡವೈಯಕ್ತಿಕ ಬದಲಾವಣೆಯೊಂದಿಗೆವ್ಯವಹರಿಸುವಾಗಭ್ರಮನಿರಸನ ಸ್ಥಿತಿಯ ಹಳೇ ವಾಸ್ತವಿಕತೆಯಿಂದ ಎಚ್ಚರಗೊಳ್ಳುವ ಸಮಯ.ಪೊವಾಯಿನಿಂದ ಬೆಂಗಳೂರಿಗೆ ಬದಲಾಗಲು ನಮ್ಮತಂಡದವರು ವ್ಯವಹರಿಸುತ್ತಿದ್ದರೆ, ಅದೇ ಸಮಯಕ್ಕೆಸ್ಥಾಪಕರುಸ್ವಾಧೀನಕೊಡಲುಸಿಲಿಕಾನ್ ವ್ಯಾಲಿ ಹೆಡ್‍ಕ್ವಾರ್ಟಸ್‍ಗೆ ಪ್ರಯಾಣ ಬೆಳೆಸಿದ್ದರು.ಸ್ವತಃ ಸ್ವಾಧೀüನಗಾರ, ವ್ಯಾಪಾರ ಮತ್ತು ನಿರ್ವಹಣೆಯ ಪರಿವರ್ತನೆಯ ಸಮಯದಲ್ಲಿದ್ದುದರಿಂದಅದು ಸಹಾಯಕ್ಕೆ ಬರಲಿಲ್ಲ.

ಯುವ ಹಾಗೂ ಮೂರ್ಖಉದ್ಯಮಿಯಾಗಿನನ್ನತಂಡದವರದೃಷ್ಟಿಯಲ್ಲಿ ಪ್ರಪಂಚ ನೋಡುವ ಬದಲು, ನಾನು ನೋಡುವಂತೆಯೇತನ್ನ ಸಹೋದ್ಯೋಗಿಗಳು ಪ್ರಪಂಚನೋಡಬೇಕೆಂದುಕ್ರೂರವಾಗಿ ನಿರೀಕ್ಷಿಸುತ್ತಿದ್ದೆ.ತಂಡದವರಮಾತು ಕೇಳಲು ನಾನು ಸಮಯ ಮೀಸಲಿಡಲಿಲ್ಲ, ಬದಲಾವಣೆ ಮತ್ತು ಅನಿಶ್ಚಿತತೆ ಬಗ್ಗೆ ಅವರೊಟ್ಟಿಗೆ ಮಾತನಾಡಲಿಲ್ಲ ಅಥವಾ ನನ್ನ ಕಂಪನಿಗೆ ಅವರನ್ನು ಸೇರಿಸಿಕೊಳ್ಳಬೇಕಾದ್ರೆ ನಾ ತೋರಿದಉತ್ಸಾಹವನ್ನುನಂತ್ರಉಳಿಸಿಕೊಂಡಿರಲಲ್ಲ. ಸ್ಥಾಪಕರು ನಮ್ಮನ್ನು ಮರೆತು ಸಿಲಿಕಾನ್ ವ್ಯಾಲಿಗೆ ಹೋಗಿದ್ದಾರೆಂದುಒಮ್ಮೆಅವರಲ್ಲೊಬ್ಬರುಆಪಾದನೆ ಮಾಡಿದ್ದ.ತವರಿನಲ್ಲಿರೋ ಕೆಲಸದವರ ಬಗ್ಗೆ ಯೋಚಿಸೋ ಬದಲುತಮ್ಮ ವೈಯಕ್ತಿಕ ವ್ಯವಹಾರ ಲಾಭಕ್ಕಾಗಿ ಸ್ಥಾಪಕರುಅವಿಶ್ರಾಂತರಾಗಿದ್ದಾರೆಂದುಅವರು ತಿಳಿದಿದ್ದರು.ನನಗೆ ನಾನೇ ಅದಕ್ಕೆ ಪ್ರತಿಕ್ರಿಯಿಸಿಕೊಂಡೆ.ನಾನದನ್ನುವೈಯಕ್ತಿಕವಾಗಿತೆಗೆದುಕೊಂಡುಆದೇಶಗಳನ್ನು ಅವರ ಮೇಲೆ ಹೇರುತ್ತಿದ್ದರೆತಂಡದ ಹೆಚ್ಚಿನವರು ಆಪಾದನೆಗಳನ್ನು ನಂಬುತ್ತಿದ್ದರು.ತಮ್ಮದಾರಿ ನೋಡಿಕೊಳ್ಳಬೇಕೆಂದು ಅವರಿಗೆಅರ್ಥವಾಗಿತ್ತು.

ಭಾರತದ ಸ್ಟಾರ್ಟ್‍ಅಪ್ ಪರಿಸರಅನಿಶ್ಚಿತತೆಯ ಆಳ-ಉದ್ದ ಪರಿವರ್ತನೆ ಮೂಲಕ ಹೋಗುತ್ತಿದೆ.2000ದಲ್ಲಿ ಡಾಟ್ ಕಾಂ ಗುಳ್ಳೆಒಡೆದಾಗ ಕೆಲವರು ಮಾತ್ರಪಾರಾದ್ರುಮತ್ತುಕೆಲವರು ಮಾತ್ರ 2008ರಲ್ಲಿ ತಂತ್ರಜ್ಞಾನ ಸ್ಟಾರ್ಟ್‍ಅಪ್‍ಗಳ ಮೇಲಿನಆರ್ಥಿಕಹಿಂಜರಿತಅನುಭವ ಪಡೆದರು.ಹೆಚ್ಚಿನ ಸ್ಟಾರ್ಟ್‍ಅಪ್, ಉದ್ಯಮಿಗಳು, ಕಾರ್ಮಿಕರು, ಗುತ್ತಿಗೆದಾರರು ಮತ್ತು ಪೂರೈಕೆದಾರರುಈ ಸಮಯದ ಬದಲಾವಣೆಗೆಒಳಗಾಗುತ್ತಿದ್ದಾರೆ. ಟೆಕ್ ಸ್ಟಾರ್ಟ್‍ಅಪ್‍ಗಳ ಭವಿಷ್ಯ ಭಾರತದಲ್ಲಿಉತ್ತಮವಾಗಿದೆ. ಆದ್ರೆ ಪ್ರತಿಯೊಬ್ಬರ ವೈಯಕ್ತಿಕ ಸ್ಟಾರ್ಟ್‍ಅಪ್ ಭವಿಷ್ಯ ಮಾತ್ರ ಅನಿಶ್ಚಿತತೆಯಿಂದ ಕೂಡಿದೆ.ಕಳೆದ 18-24 ತಿಂಗಳಲ್ಲಿ ನಾವು ಅಮಲೇರಿಸುವ ದಿನಗಳನ್ನು ಕಳೆದಿದ್ದೇವೆಮತ್ತುನಾವು ಭ್ರಮನಿರಸನ ಕಾಲಕ್ಕೆ ಹೋಗುತ್ತಿದ್ದೇವೆಂದುನಾನು ಉದ್ಯಮಿಗಳೊಂದಿಗೆ ನಡೆಸಿದ ಸ್ವತಃ ಮಾತುಕತೆಯಿಂದ ನಂಬುವಂತಾಗಿದೆ. ಪಾರ್ಟಿ ಮುಗಿಸಿದ ಮಾರನೇ ದಿನದಂತೆಇದು ಭಾಸವಾಗುತ್ತದೆ.ಜಡತ್ವ ಹೋಗಿದೆಆದ್ರೆ ನಿಮ್ಮತಾಯಿಯಿಂದಹಲವು ಮಿಸ್ಡ್‍ಕಾಲ್ಸ್ ನಿಮಗೆ ಬಂದಿದೆ. ಇದರಜತೆ ಮಲಗೋ ಮುನ್ನ ನಿಮ್ಮ ಫೋನ್‍ಚಾರ್ಜಿಂಗ್‍ಗೆ ಹಾಕಲು ಮರೆತಿರುತ್ತೀರಿ. ತಪ್ಪು ಯಾರದ್ದೆಂಬುದರ ಚರ್ಚೆಗೆ ಅಂತ್ಯವೇ ಇಲ್ಲ. ಏನೇ ಆದ್ರೂ ಬದಲಾವಣೆ ಆಗಲೇಬೇಕು ಮತ್ತು ನೀವು ಅದರೊಂದಿಗೆ ವ್ಯವಹರಿಸಲೇಬೇಕು. ಫೋನ್‍ನಲ್ಲಿಕಠಿಣವಾಗಿದ್ರೆ ವಿಷಯಕಷ್ಟವಾಗುತ್ತದೆಅನ್ನೋದು ನನ್ನ ಸ್ವಂತಅನುಭವ. ವಿಷಯದ ಬಗ್ಗೆ ಕಠಿಣವಾಗೋಎಲ್ಲ ಶಕ್ತಿಯನ್ನು ಕಾದಿಟ್ಟಿದ್ದರೆ ಅದರಿಂದ ಪರಿಹಾರ ಹುಡುಕಲು ಸುಲಭವಾಗುತ್ತದೆ.ಅದು ಸಾಧ್ಯವಾದರೆ ನೀವು ಎಲ್ಲರನ್ನೂತಬ್ಬಿಕೊಂಡುಅವರೊಟ್ಟಿಗೆ ಆನಂದಿಸಬಹುದು. ಅದು ಸಾಧ್ಯವಾಗದಿದ್ದರೆ, ಕೆಲ ವರ್ಷಗಳ ನಂತ್ರ ನೀವೆಲ್ಲರೂ ತಬ್ಬಿಕೊಂಡು ಪ್ರತಿಕೂಲ ಅಂತಃಸ್ಫೋಟಕ್ಕೆ ಮುಖ ಕೊಡಬಹುದು ಮತ್ತು ಈಗಲೂ ಜತೆಯಲ್ಲೇ ಕೆಲಸ ಮಾಡಬಹುದು. ಮಾಡುವಕ್ಕಿಂತ ಹೇಳುವುದು ಸುಲಭ. ವಿಷಯಗಳೊಂದಿಗೆ ಕಠಿಣವಾಗಿರಿ ಮತ್ತು ಮನಷ್ಯರೊಂದಿಗೆ ಮೃದುವಾಗಿರಿ.

ಲೇಖಕರು: ಕಶ್ಯಪ್​ ಡಿಯೊರಾ

ಅನುವಾದಕರು: ಆರ್‍ಪಿ