‘ಮುಸಾಫಿರ್’ಗೆ ಜನಪ್ರಿಯತೆ ತಂದುಕೊಟ್ಟ ತೆಂಡೂಲ್ಕರ್

ಟೀಮ್​​ ವೈ.ಎಸ್​​. ಕನ್ನಡ

‘ಮುಸಾಫಿರ್’ಗೆ ಜನಪ್ರಿಯತೆ ತಂದುಕೊಟ್ಟ ತೆಂಡೂಲ್ಕರ್

Thursday November 19, 2015,

3 min Read

ಈಗೆಲ್ಲ ವಿವಿಧ ಬಗೆಯ ಹಾಲಿಡೇ ಪ್ಯಾಕೇಜ್ ಅಥವಾ ಫ್ಲೈಟ್, ಟ್ರೈನ್, ಬಸ್, ಹೋಟೆಲ್ ಯಾವುದೇ ಬುಕ್ಕಿಂಗ್ ಇರಲಿ ಮೊದಲಿನ ಹಾಗೆ ಕಷ್ಟಪಡಬೇಕಾಗಿಲ್ಲ. ಹೆಚ್ಚು ಖರ್ಚು ಮಾಡದೆ, ಶ್ರಮವಹಿಸದೆ ಆನ್‍ಲೈನ್ ಮೂಲಕವೇ ಬುಕ್ಕಿಂಗ್ ಮಾಡಬಹುದು. ಈ ನಿಟ್ಟಿನಲ್ಲಿ ಬಹಳಷ್ಟು ಕಂಪೆನಿಗಳು ತಮ್ಮ ಆನ್‍ಲೈನ್ ಟ್ರಾವೆಲ್ ಸೇವೆಗಳನ್ನು ಒದಗಿಸಲು ಮುಂದಾಗಿದ್ದು, ಈಗಾಗಲೇ ಸಾಕಷ್ಟು ದೈತ್ಯ ಆನ್‍ಲೈನ್ ಟ್ರಾವೆಲ್ ಕಂಪೆನಿಗಳು ಅಥವಾ ಏಜೆನ್ಸಿಗಳ ಮೂಲಕ ನಡೆಯುವ ಆನ್‍ಲೈನ್ ಬುಕ್ಕಿಂಗ್ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಪ್ರಗತಿ ಕಂಡಿರುವುದನ್ನು ನೀವೂ ಕಂಡಿರಬಹುದು. ಇದೀಗ ಇದೇ ಸಾಲಿಗೆ ಮತ್ತೊಂದು ಏಜೆನ್ಸಿ ಸೇರ್ಪಡೆಯಾಗುತ್ತಿದೆ. ಬಹುಶಃ ಈ ಏಜೆನ್ಸಿಯ ಹೆಸರು ಬಹುತೇಕ ಜನರಿಗೆ ಗೊತ್ತೇ ಇರುತ್ತದೆ. ಯಾಕೆಂದರೆ ಈ ಏಜೆನ್ಸಿಯ ರಾಯಭಾರಿ ಕ್ರಿಕೆಟ್ ಲೋಕದ ದಿಗ್ಗಜ, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

image


ಹೌದು, ಸಚಿನ್ ತೆಂಡೂಲ್ಕರ್ ರಾಯಭಾರಿಯಾಗಿರುವುದು ‘ಸ್ಟಾಪ್ ಡ್ರೀಮಿಂಗ್, ಸ್ಟಾರ್ಟ್ ಟ್ರಾವೆಲಿಂಗ್’ ಸ್ಟೇಟ್‍ಮೆಂಟ್ ಹೊಂದಿರುವ ಯುಎಇ ಮೂಲದ ಆನ್‍ಲೈನ್ ಟ್ರಾವೆಲ್ ಕಂಪೆನಿ ‘ಮುಸಾಫಿರ್ ಡಾಟ್ ಕಾಮ್ ಸಂಸ್ಥೆ’ಗೆ. ಅಂದಹಾಗೆ ‘ಎಕನಾಮಿಕ್ ಟೈಮ್’್ಸ ವರದಿಯ ಪ್ರಕಾರ ಈ ಸಂಸ್ಥೆಯಲ್ಲಿ ಸಚಿನ್ ರಾಯಭಾರಿ ಮಾತ್ರವಾಗಿಲ್ಲ, 7.5% ಷೇರನ್ನೂ ಹೊಂದಿದ್ದಾರೆ.

ಶೀಘ್ರಗತಿಯಲ್ಲಿ ಬೆಳೆದ ‘ಮುಸಾಫಿರ್’

ಹಾಗೆ ನೋಡಿದರೆ ‘ಮುಸಾಫಿರ್’ ಭಾರತಕ್ಕೆ ಕಾಲಿಟ್ಟು ಬಹಳ ವರ್ಷಗಳೇನಾಗಿಲ್ಲ. ಆದರೆ ಬೆಳೆದದ್ದು ಮಾತ್ರ ಅತಿ ವೇಗವಾಗಿ. ಆಗಸ್ಟ್ 2007, ಯುಎಇಯಲ್ಲಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಥಾನಿ, ಸಚಿನ್ ಗಡೊಯಾ ಮತ್ತು ಆಲ್ಬರ್ಟ್ ಡಯಾಸ್ ಎಂಬುವವರು ಈ ಕಂಪೆನಿಯನ್ನು ಸ್ಥಾಪಿಸಿದರು. ಆದರೆ ಇದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟದ್ದು 2013ರಲ್ಲಿ. ಇಲ್ಲಿ ಹೇಳಲೇಬೇಕಾದ ಮುಖ್ಯವಾದ ವಿಷಯವೆಂದರೆ ‘ಮುಸಾಫಿರ್’ಗಿಂತಲೂ ಮುಂಚೆ ಭಾರತದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಭದ್ರಪಡಿಸಿಕೊಂಡ ಆನ್‍ಲೈನ್ ಟ್ರಾವೆಲ್ ಕಂಪೆನಿಗಳೆಂದರೆ ‘ಮೇಕ್ ಮೈ ಟ್ರಿಪ್.ಕಾಂ’, ‘ಕ್ಲಿಯರ್ ಟ್ರಿಪ್.ಕಾಂ’ ಹಾಗೂ ಯಾತ್ರ.ಕಾಂಗಳು. ಅದೆಷ್ಟೇ ಆನ್‍ಲೈನ್ ಟ್ರಾವೆಲ್ ಕಂಪೆನಿಗಳು ಹುಟ್ಟಿಕೊಳ್ಳುತ್ತಲೇ ಇದ್ದರೂ ಈ ಕಂಪೆನಿಗಳು ಮಾತ್ರ ಇಂದಿಗೂ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಅನ್ನುವುದು ವಿಶೇಷ. ಆದರೂ ಇಂತಹವುಗಳ ನಡುವೆಯೇ ಹುಟ್ಟಿ ‘ಮುಸಾಫಿರ್’ ಭರ್ಜರಿ ಪೈಪೋಟಿ ಕೊಡುತ್ತಿದೆ ಎಂದರೆ ನೀವು ನಂಬಲೇಬೇಕು.

ಸೆಲೆಬ್ರಿಟಿಗಳ ಪ್ರಭಾವ

“ನಮ್ಮ ಆನ್‍ಲೈನ್ ಟ್ರಾವೆಲ್ ಕಂಪೆನಿಗಳು ಅತಿ ವೇಗದಲ್ಲಿ ಬೆಳೆದಿವೆ ಎಂದರೆ ಅದಕ್ಕೆ ಕಾರಣ ರಾಯಭಾರಿಗಳು” ಎನ್ನುತ್ತಾರೆ ಸ್ವತಃ ಕಂಪೆನಿಗಳ ಮಾಲೀಕರು. ಯಾತ್ರ.ಕಾಂ ಕಂಪೆನಿಯ ಅಧ್ಯಕ್ಷ ಶರತ್ ಧಲ್ ಹೇಳುವ ಪ್ರಕಾರ ಆರಂಭದ ದಿನಗಳಲ್ಲಿ ಕಂಪೆನಿಯ ಲಾಭ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಎಂದೂ ಸಲ್ಮಾನ್ ಖಾನ್ ರಾಯಭಾರಿ ಆಗಿ ನೇಮಕಗೊಳ್ಳುವುದರ ಜೊತೆಗೆ ಕಂಪೆನಿಗೆ ಹಣ ಹೂಡಿದರೋ ಅಂದಿನಿಂದ ಕಂಪೆನಿಯ ಲಾಭವೂ ಹೆಚ್ಚುತ್ತಾ ಹೋಯಿತು. ಮೊದಲಿಗೆ ಬುಕ್ಕಿಂಗ್‍ಗಳು ಭಾರತದ ಚಿಕ್ಕ ಚಿಕ್ಕ ನಗರಗಳಲ್ಲಿ ನಡೆದವು. ಆನಂತರ ಇಂಟರ್‍ನೆಟ್ ಎಲ್ಲಿ ಹೆಚ್ಚು ಬಳಕೆಯಾಗುತ್ತದೆಯೋ ಅಂತಹ ಮಹಾನಗರಗಳಿಗೆ ಕಾಲಿಟ್ಟೆವು ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಜೀಮ್ ಪ್ರೇಮ್ ಜೀ ಸಹ ಇ-ಕಾಮರ್ಸ್ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಸೆಲೆಬ್ರಿಟಿಗಳು ಆಗಮಿಸುತ್ತಿದ್ದರೆ ಈ ಕ್ಷೇತ್ರವು ಪ್ರಬಲವಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಟರ್‍ನೆಟ್ ಪಾತ್ರ

ಭಾರತೀಯ ಆನ್‍ಲೈನ್ ಟ್ರಾವೆಲ್ ಕಂಪೆನಿಗಳು ಜನಪ್ರಿಯತೆ ಹೊಂದಿರುತ್ತಿರುವುದೇನೋ ನಿಜ. ಆದರೆ ಇವುಗಳು ಚಾಲ್ತಿಯಲ್ಲಿರಬೇಕಾದರೆ ಇಂಟರ್‍ನೆಟ್ ಪಾತ್ರ ಬಹಳಷ್ಟಿರುತ್ತದೆ ಎಂಬುದನ್ನು ನಾವು ಗಮನಿಸಬೇಕು ಎನ್ನುತ್ತಾರೆ ಆನ್‍ಲೈನ್ ಮಾರ್ಕೆಟಿಂಗ್ ತಜ್ಞರು. ಭಾರತದಲ್ಲಿ ಪ್ರತಿದಿನ 50,000 ಇಂಟರ್‍ನ್ಯಾಶನಲ್ ಫ್ಲೈಟ್ ಬುಕ್ಕಿಂಗ್‍ಗಳು ನಡೆಯುತ್ತಿವೆ. ಇದರಲ್ಲಿ ಆನ್‍ಲೈನ್ ಟ್ರಾವೆಲ್ ಏಜೆನ್ಸಿಗಳ ಪಾತ್ರ ಶೇ.15ರಷ್ಟಿದ್ದು, ಬ್ರಿಕ್ ಅಂಡ್ ಮಾರ್ಟರ್ ಟ್ರಾವೆಲ್ ಏಜೆಂಟ್ಸ್‍ಗಳು ಇಂದಿಗೂ ಇದನ್ನು ನಿಭಾಯಿಸಿಕೊಂಡು ಬರುತ್ತಿದ್ದು, ಈ ವಿಚಾರದಲ್ಲಿ ಇವರು ಸದಾ ಮುಂದಿರುವ ಅಂಶ ತಿಳಿದು ಬಂದಿದೆ. 2013 ರ IಂಒಂI (Iಟಿಣeಡಿಟಿeಣ ಚಿಟಿಜ ಒobiಟe ಂssoಛಿiಚಿಣioಟಿ oಜಿ Iಟಿಜiಚಿ) ವರದಿಯ ಪ್ರಕಾರ ಭಾರತದಲ್ಲಿ ಇಂಟರ್‍ನೆಟ್ ಬಳಕೆದಾರರ ಸಂಖ್ಯೆ 200 ಮಿಲಿಯನ್ ತಲುಪಿತ್ತು. ಈ ಅಂಕಿಅಂಶ ನೋಡಿದರೆ ಭಾರತ ಅತಿ ಹೆಚ್ಚು ಇಂಟರ್‍ನೆಟ್ ಬಳಕೆದಾರರನ್ನು ಹೊಂದಿದೆ ಎಂದನಿಸಿದರೂ, ಆನ್‍ಲೈನ್ ಖರೀದಿದಾರರ ವಿಚಾರಕ್ಕೆ ಬಂದಾಗ ಈ ಸಂಖ್ಯೆ 10 ಮಿಲಿಯನ್‍ಗೆ ಇಳಿಯುತ್ತದೆ. ಅದರಲ್ಲೂ ಟ್ರಾವೆಲ್ ಕಡೆ ಗಮನಹರಿಸಿದರೆ ಕೇವಲ 3 ಮಿಲಿಯನ್‍ನಷ್ಟು ಜನ ಭಾಗಿಯಾಗಿರುವುದು ಗೊತ್ತಾಗುತ್ತದೆ. ಮತ್ತೆ ಇದನ್ನು ಹೊರತುಪಡಿಸಿ ತೀವ್ರಗತಿಯಲ್ಲಿ ಬದಲಾವಣೆಯಾಗಿರುವುದು ತಿಳಿದುಬಂದಿಲ್ಲ. ಭಾರತದಲ್ಲಿ ಇಂಟರ್‍ನೆಟ್ ಬಳಕೆದಾರರ ಸಂಖ್ಯೆ 200 ಮಿಲಿಯನ್‍ನಷ್ಟಿದ್ದರೂ ಅವರಲ್ಲಿ ಶೇ.60ರಷ್ಟು ಜನರು ಮೊಬೈಲ್ ಮೂಲಕ ಇಂಟರ್‍ನೆಟ್ ಅನ್ನು ಉಪಯೋಗಿಸುತ್ತಿದ್ದಾರೆ. ಹೀಗಿದ್ದಾಗ ಶೀಘ್ರಗತಿಯಲ್ಲಿ ಬದಲಾವಣೆ ಕಂಡುಕೊಳ್ಳುವುದು ಕಷ್ಟವಾಗುತ್ತದೆ.

ಇದನ್ನೆಲ್ಲಾ ನೋಡಿದಾಗ ಸಚಿನ್ ತೆಂಡೂಲ್ಕರ್, ಸಲ್ಮಾನ್ ಖಾನ್, ಮಲೈಕಾ ತರಹದ ದೊಡ್ಡ ಸೆಲೆಬ್ರಿಟಿಗಳು ಆನ್‍ಲೈನ್ ಟ್ರಾವೆಲ್ ಕಂಪೆನಿಗಳ ರಾಯಭಾರಿಗಳಾಗಿ, ಶೇರ್ ಹೋಲ್ಡರ್ಸ್‍ಗಳಾಗಿ ಪಾದಾರ್ಪಣೆ ಮಾಡದಿದ್ದರೆ ಕಂಪನಿಗಳು ಇಷ್ಟರಮಟ್ಟಿಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಅಷ್ಟೇ ಅತ್ಯ ಅನ್ನುತ್ತವೆ ಮೂಲಗಳು!

ಲೇಖಕರು: ಜುಬಿನ್​​ ಮೆಹ್ತಾ

ಅನುವಾದಕರು: ಅಶ್ವಿನಿ ಹೆಚ್​​.ಆರ್.​​