ಪ್ರವಾಸಿಗರಿಗೆ ಸಹಾಯ ಮಾಡುತ್ತಿರುವ ಜ಼ೋಸ್ಟೆಲ್

0

ನನ್ನ ತಾತ ಕೂಡ ಒಬ್ಬ ಉದ್ಯಮಿ ಎಂದು ಕೋಲ್ಕತ್ತಾದ IIM ವಿಧ್ಯಾರ್ಥಿ ಧರಮವೀರ್ ಚೌಹಾಣ್, ಫೋನ್ ಕಾಲ್ ನಲ್ಲಿ ಹೇಳಿದರು. ನಾನು ಎಂಬಿಎ ಪದವಿಯನ್ನು ಮಾಡಿದೆ ಕೆಲವು ಕಾರಣಗಳು ನಾನು ಆ ಕೋರ್ಸ್ ಆಯ್ಕೆ ಮಾಡುವಂತೆ ಮಾಡಿತು. ನನ್ನ ಸಹ ಸಂಸ್ಥಾಪಕರ ಜೊತೆ ಸೇರಿ ನಾನು ಜ಼ೋಸ್ಟೆಲ್ ನ್ನು ದೊಡ್ಡದು ಮಾಡಲು ಕೆಲಸ ಮಾಡುತ್ತಿದ್ದೇವೆ ಎಂದು ಚೌಹಾಣ್ ತಮ್ಮ ಮಾತನ್ನು ಮುಂದುವರೆಸುತ್ತಾರೆ. ಜ಼ೋಸ್ಟೆಲ್ ಪೆಡಿಗ್ರಿ ಯೂನಿವರ್ಸಿಟೀಯ ಪದವೀಧರರ ಗುಂಪಿನ ಒಂದು ಮಹತ್ವಾಕಾಂಕ್ಷೆಯ ಉದ್ಯಮ. ಚೌಹಾಣ್ ಯಾವಾಗ ಗೇಮ್ಸ್ ನ್ನು ಮಾಡಲು ನಿರ್ಧಾರ ಮಾಡಿದರು ಆರಂಭದಿಂದಲೂ ಒಬ್ಬ ಪ್ರೇರಣಾ ವ್ಯಕ್ತಿ. ಗೇಮಿಂಗ್ ಇಂಡಸ್ಟ್ರೀ ಗೆ ಪ್ರವೇಶ ಪಡೆಯಬೇಕು ಎಂಬುದು ನನ್ನ ಕನಸ್ಸು , ನಿಮಗೆ ಗೇಮಿಂಗ್ ನಲ್ಲಿ ಅಶಕ್ತಿ ಇದ್ದರೆ ಭಾರತ ನೀವು ಕೆಲಸ ಮಾಡಲು ಸರಿಯಾದ ಸ್ಥಳವಲ್ಲ ಎಂದು ಅವರು ಹೇಳುತ್ತಾರೆ.

ಅವರು ಭಾರತಕ್ಕೆ ಹಿಂತಿರುಗಿದ ನಂತರ ಅವರಿಗೆ ತಿಳಿದಿದ್ದು ಏನಂದರೆ ಟ್ರಾವೆಲ್ ಬಗ್ಗೆ ಯೋಜನೆ ಮಾಡಲು ಜನಗಳು ಸಿದ್ಧರಿದ್ದರು ಆದರೆ ಅದಕ್ಕೆ ಬೇಕಾದ ಅವಕಾಶಗಳು ಇರಲಿಲ್ಲ. ಸರಿಯಾದ ಮಾಹಿತಿ ಇಲ್ಲದ ಕಾರಣ ಪ್ರವಾಸಿಗರು ಉನ್ನತ ಅಥವಾ ಕಡಿಮೆ ಬೆಲೆಯ ಹೋಟೆಲ್ ಗಳಲ್ಲಿ ಇರಬೇಕಾಗಿತ್ತು. ಆದರೆ ಹಾಸ್ಟೆಲ್ ಕಾನ್ಸೆಪ್ಟ್ ಭಾರತದಲ್ಲಿ ಇಲ್ಲ ಇದರ ಪರಿಣಾಮ ಜ಼ೋಸ್ಟೆಲ್ ಕಲ್ಪನೆ ಹುಟ್ಟಿತ್ತು ಎಂದು ಧರಂವೀರ್ ಹೇಳುತ್ತಾರೆ.

ಧರಂವೀರ್ ಗೆ ಮೊದಲಿನಿಂದಲೂ ಗೇಮ್ಸ್ ಬಗ್ಗೆ ಅಶಕ್ತಿ ಇತ್ತು ಇದರಿಂದ ಅವನು ಗೇಮ್ಸ್ ಬಗ್ಗೆ ಹಲವು ಕೌಶಲಗಳನ್ನು ಕಲಿತುಕೊಂಡಿದ್ದ ಇದರ ಪರಿಣಾಮ ಒಂದು ಅದೃಷ್ಟದ ದಿನ ಅವನು ಜೂಜಿನಲ್ಲಿ 6 ಲಕ್ಷ ರೂಪಾಯಿಗಳನ್ನು ಗೆಲ್ಲುತ್ತಾನೆ ಅದನ್ನು ಇಟ್ಟುಕೊಂಡು ಅವನು ತನ್ನ ಯೋಜನೆಯನ್ನು ಆರಂಭಿಸಲು ನಿರ್ಧಾರ ಮಾಡುತ್ತೇನೆ. ಅವನು ತನ್ನ ಕಲ್ಪನೆಯ ಬಗ್ಗೆ ತನ್ನ ಹಲವು ಗೆಳೆಯರ ಬಳಿ ಹೇಳಿಕೊಳ್ಳುತ್ತಾನೆ ಯಾರು ಅವನ ಜ಼ೋಸ್ಟೆಲ್ ಯೋಜನೆಯಲ್ಲಿ ಸಹ ಸಂಸ್ಥಾಪಕರಾದ ಪಾವನ ನಂದ, ಅಖಿಲ್ ಮಲಿಕ್, ತರುಣ ತಿವಾರಿ, ಚೇತನ ಸಿಂಘ್ ಚೌಹಾಣ್, ಅಭಿಷೇಕ್ ಭೂತ್ರ ಮತ್ತು ಸಿದ್ಧಾರ್ಥ್ ಜಂಘು ಅವರ ಬಳಿ ಹೇಳಿಕೊಳ್ಳುತ್ತಾರೆ. ಆತಿಥ್ಯ ಜಾಗದಲ್ಲಿ ನಾವು ಖಂಡಿತ ನಮ್ಮ ಗುರಿಯನ್ನು ಮುಟ್ಟುತ್ತೇವೆ ಅನ್ನುವ ಭರವಸೆ ನನಗಿದೆ ಎಂದು ಧರಂವೀರ್ ಹೇಳುತ್ತಾರೆ.

ಧರಂವೀರ್ ಮೂಲತಃ ಜೋಧಪುರ್ ದವರು ಆದುದರಿಂದ ಮೊದಲ ಹಾಸ್ಟೆಲ್ ನ್ನು ಅಲ್ಲೇ ಆರಂಭಿಸಿದರು ಮತ್ತು ಎರಡನೆಯದು ಜೈಪುರ್ನಲ್ಲಿ . ಈ ಒಂದು ಕಲ್ಪನೆಯ ಮುಖ್ಯ ಉದ್ದೇಶ ಪ್ರವಾಸಿಗರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಅಗ್ಗದ ವಾಸಸ್ಥಾನಗಳನ್ನು ದೊರಕಿಸಿಕೊಡುವುದು. ಪ್ರತಿ ಹಾಸ್ಟೆಲ್ 26 ಬೆಡ್ ಗಳನ್ನು ಒಳಗೊಂಡಿದೆ. ನಾವು ನಮ್ಮ ಕೈಲಾದಷ್ಟು ಹೂಡಿಕೆ ಮಾಡಿದೆವು ಮತ್ತು ಅದನ್ನು ಯಶಸ್ವಿಕೂಡ ಮಾಡಿದೆವು ಎಂದು ಧರಂವೀರ್ ಹೇಳುತ್ತಾರೆ. ಜ಼ೋಸ್ಟೆಲ್ ಉನ್ನತ ದರ್ಜೆಯ ವ್ಯಾಪಾರ ಯೋಜನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಕೂಡ ಪಡೆದಿದೆ. ಇದೊಂದು ದೊಡ್ಡ ಮತ್ತು ಶ್ಲಾಘನೀಯ ಪ್ರಯತ್ನ.